ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ಕಥೆಗಳಲ್ಲಿ ನೀವಿದ್ದೀರಿ..

rakesh konaje

ರಾಕೇಶ್ ಕೊಣಾಜೆ

ನಮ್ಮದು ಮಿಡಲ್ ಕ್ಲಾಸ್ ಕುಟುಂಬ. ಎಲ್ಲಾ ಮಿಡಲ್ ಕ್ಲಾಸ್ ಕುಟುಂಬದ ಹಣೆಬರಹನೇ ಹೀಗಲ್ವಾ. ಸಾವಿರ ಕನಸು, ಎರಡು ಮನಸು… ನೂರು ಆಸೆ. ಸಾವಿರ ನಿರಾಸೆ. ಏನಾದರೂ ನೋಡಿದರೆ ಕೊಳ್ಳುವ ಹಂಬಲ. ಅಯ್ಯೋ ಇಷ್ಟು ರೇಟಾ? ಬೇಡಾ ಬೇಡಾ ಅಂತ ಮನಸ್ಸು ಆಗಲೇ ವಿಲವಿಲ.

ಇಲ್ಲ ತಗೊಳ್ಳೇಬೇಕು ಅಂತ ಮನಿಯನೆಲ್ಲಾ ಹನಿಗೂಡಿಸಿಕೊಂಡು ಅಂಗಡಿ ಮೆಟ್ಟಿಲು ಏರೋ ಹೊತ್ತಿಗೆ ಹೋಗಲಾ ಬೇಡವಾ ಅನ್ನೊ ಅರಳು ಮರಳು. ಹೋದ ಮೇಲೆ ತಗೊಳ್ಳಲಾ ಬೇಡವಾ ? ಅಂತ ಬಲೆ ಕಟ್ಟೋ ಬೇಕು ಬೇಡಗಳ ಜೇಡ.

ತಗೊಂಡ ಮೇಲೆ ಇವೆಲ್ಲಾ ಬೇಕಿತ್ತಾ ಕರ್ಮ? ಹಣ ವೇಸ್ಟ್ ಮಾಡಿದ್ನಲ್ಲಾ…..

luluಇವು ಇತ್ತೀಚೆಗೆ ಬಿಡುಗಡೆಗೊಂಡ ಮಿತ್ರ ಪ್ರಸಾದ್ ಶೆಣೈರವರ ಲೂಲು ಟ್ರಾವೆಲ್ಸ್ ಪುಸ್ತಕದೊಳಗಿರುವ ಕಥೆಯೊಂದರ ಸಾಲುಗಳು…..ಇವುಗಳನ್ನು ಓದಿದಾಗ ನನ್ನ ಕೆ.ಪಿ.ಟಿಯ ಡಿಪ್ಲೋಮದ ಮೂರು ವರ್ಷಗಳ ನೆನಪಾಯ್ತು….

ದಿನಾ ಬಸ್ಸಿಗಾಗಿ ಬೆಳಗ್ಗೆ ಹತ್ತು ರೂಪಾಯಿ ಜೋಬಲ್ಲಿರಿಸಿಕೊಂಡು ( 3 ರೂ. ಮನೆಯಿಂದ ಮಂಗಳೂರಿಗೆ ಅವಾಗ ಸಿ ಎಂದರೆ 3 ರೂನಲ್ಲಿ ಪ್ರಯಾಣಿಸಬಹುದಿತ್ತು. ಇವಾಗ ಗೊತ್ತಿಲ್ಲ…ಮಂಗಳೂರಿನಿಂದ ಕೆಪಿಟಿಗೆ 2 ರೂ. ಹೀಗೆ ಹೋಗೋಕೆ 5 ಬರೋಕೆ 5) ಮನೆಯಿಂದ 30 ಕಿ.ಮೀ. ದೂರದಲ್ಲಿರುವ ಕಾಲೇಜಿಗೆ ಹೋಗಲು ಬಸ್ಸು ಹತ್ತೋದು….

ಸ್ನೇಹಿತರೊಂದಿಗೆ ಸೇರಿರುವಾಗ ಏನಾದರೂ ತಗೊಳ್ಳುವ ಮನಸ್ಸಾದರೂ ಜೇಬು ನಮ್ಮ ಪರಿಸ್ಥಿತಿಯನ್ನು ನೆನಪಿಸಿ ಹಿಂಜರಿಯುವಂತೆ ಮಾಡುತ್ತಿತ್ತು….ಒಂದು ದಿನವಂತೂ ವಾಪಾಸು ಬರುವಾಗ ಜೇಬಲ್ಲಿದ್ದ 5 ರೂಪಾಯಿಯನ್ನು ಕಳಕೊಂಡು ಮಂಗಳೂರಿನ ಕಂಕನಾಡಿಯಿಂದ ಮನೆವರೆಗೆ 20ಕಿಮಿ ನಡೆದುಕೊಂಡು ಬಂದಿದ್ದು….ಹೀಗೆ ಸಾಲು ಸಾಲು ನೆನಪುಗಳು ಬಂದು ಹೋದವು….

ಕಥೆಗಳು ನನ್ನ ಕಥೆಯಂತೆಯೇ ಬಾಸವಾಗುತ್ತಿವೆ… ನೀವು ಸಾಧ್ಯವಾದರೆ ಲೂಲು ಟ್ರಾವೆಲ್ಸ್ ಹತ್ತಿ… ಖಂಡಿತ ನಿಮ್ಮಲ್ಲಿನ ವ್ಯಕ್ತಿ ಇಲ್ಲಿ ಕಥೆಯಾಗಿರುತ್ತಾನೆ…. ಪ್ರಸಾದ್ ಓದಿದ ಕಥೆಗಳು ಸೂಪರ್…. ಇನ್ನುಳಿದುದರ ಬಗ್ಗೆ ಮತ್ತೆ ಬರೆಯುತ್ತೇನೆ… ಲೂಲು ಟ್ರಾವೆಲ್ಸ್ ಹತ್ತಬೇಕಾದರೆ ಮಿತ್ರ Prasad Shenoy Rk ಅಥವಾ Manjunath Kamath ರನ್ನು ಸಂಪರ್ಕಿಸಿ…

‍ಲೇಖಕರು admin

27 December, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading