ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಳ್ವಾಸ್ ನುಡಿಸಿರಿ- ಪ್ರಶಸ್ತಿ ಪ್ರಕಟ…

ಹತ್ತು ಮಂದಿ ಹಿರಿಯರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ

ಡಾ.ಕೆ.ಎಸ್. ನಿಸಾರ್ ಅಹಮ್ಮದ್, ಡಾ.ಚಂದ್ರಶೇಖರ ಪಾಟೀಲ , ಡಾ.ಸಿ.ಎನ್ ರಾಮಚಂದ್ರನ್ ಸೇರಿದಂತೆ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಹತ್ತು ಮಂದಿಗೆ ಈ ಬಾರಿಯ ಆಳ್ವಾಸ್ ನುಡಿಸಿರಿ – 2011 ಪ್ರಶಸ್ತಿ ದೊರಕಿದೆ.

ಪ್ರಶಸ್ತಿಯು ಪ್ರಶಸ್ತಿ ಪತ್ರ, ಸ್ಮರಣಿಕೆ, ಹತ್ತು ಸಾವಿರ ನಗದು ಸೇರಿದಂತೆ ಸಾಂಪ್ರದಾಯಿಕ ಸನ್ಮಾನಗಳನ್ನೊಳಗೊಂಡಿರುತ್ತವೆ.ನವೆಂಬರ್ 13ರಂದು ನಡೆಯಲಿರುವ ಆಳ್ವಾಸ್ ನುಡಿಸಿರಿಯ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಹಿರಿಯರಾದ ಡಾ.ಕೆ.ಎಸ್ ನಿಸಾರ್ ಅಹಮದ್, ಡಾ.ಚಂದ್ರಶೇಖರ ಪಾಟೀಲ, ಡಾ.ಸಿ.ಎನ್ ರಾಮಚಂದ್ರನ್, ಡಾ.ಎಂ.ವಿ.ಕಾಮತ್, ಡಾ.ಬಿ.ಟಿ. ಲಲಿತಾ ನಾಯಕ್, ಶ್ರೀನಾಥ್, ಬಿ.ಕೆ.ಸುಮಿತ್ರಾ, ಚಿದಂಬರ ರಾವ್ ಜಂಬೆ, ಪಾಂಡವಪುರ ಅಂಕೇಗೌಡ ಹಾಗೂ ಮಾಚಾರ್ ಗೋಪಾಲ ನಾಯ್ಕ ಈ ಬಾರಿಯ ಪ್ರಶಸ್ತಿಗೆ ಭಾಜನರಾಗುವವರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಗುಣಕೇಂದ್ರಿತ ಶಿಕ್ಷಣದೊಂದಿಗೆ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ “ಆಳ್ವಾಸ್ ನುಡಿಸಿರಿ”ಯನ್ನು ಆಯೋಜಿಸುತ್ತಾ ಬಂದಿದೆ. ಈಗಾಗಲೇ ಏಳು ಸಮ್ಮೇಳನಗಳು ನಾಡಿನ ಸಾಹಿತ್ಯಾಸಕ್ತರ ಸಹಕಾರದೊಂದಿಗೆ ಅರ್ಥಪೂರ್ಣವಾಗಿ ನಡೆದಿದ್ದು ಇದೀಗ ಎಂಟನೇ ಸಮ್ಮೇಳನ ನವೆಂಬರ್ 11,12 ಮತ್ತು 13ರಂದು ಮೂಡಬಿದಿರೆಯ ವಿದ್ಯಾಗಿರಿಯಲ್ಲಿರುವ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ.
“ಕನ್ನಡ ಮನಸ್ಸು; ಸಂಘರ್ಷ ಮತ್ತು ಸಾಮರಸ್ಯ” ಎಂಬ ಪರಿಕಲ್ಪನೆಯಲ್ಲಿ ಈ ಬಾರಿಯ ಆಳ್ವಾಸ್ ನುಡಿಸಿರಿ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ಸವರ್ಾಧ್ಯಕ್ಷತೆಯನ್ನು ನಾಡೋಜ ಡಾ.ಎಂ.ಎಂ.ಕಲಬುಗರ್ಿ ವಹಿಸಲಿದ್ದಾರೆ. ಖ್ಯಾತ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಡಾ.ಚಂದ್ರಶೇಖರ ಕಂಬಾರರನ್ನು ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಗುವುದು. ಡಾ.ಸಿ.ಎನ್.ಆರ್ ಅವರು ಕಂಬಾರರ ಸಮಗ್ರ ಸಾಹಿತ್ಯದ ಕುರಿತು ವಿಶೇಷ ಉಪನ್ಯಾಸವನ್ನು ನಡೆಸಿಕೊಡಲಿದ್ದಾರೆ.
2012ರಲ್ಲಿ ನಡೆಯಲಿರುವ ಆಳ್ವಾಸ್ ನುಡಿಸಿರಿಯ ಹತ್ತನೇ ವರುಷದ ಸಮ್ಮೇಳನ ಜಾಗತಿಕ ಮಟ್ಟದ ಸಮ್ಮೇಳನವಾಗಿ ಮೂಡಿಬರಲಿದ್ದು ಇದಕ್ಕೆ ಈ ಸಮ್ಮೇಳನವು ಒಂದು ವೇದಿಕೆಯಾಗಲಿದೆ. ಕನಿಷ್ಟ 25ವಿವಿಧ ರಾಷ್ಟ್ರಗಳಿಂದ ಕನ್ನಡಾಸಕ್ತ ಮನಸ್ಸುಗಳು ಜಾಗತಿಕ ಸಮ್ಮೇಳನದಲ್ಲಿ ಭಾಗವಹಿಸುವ ಗುರಿಯನ್ನು ಹೊಂದಲಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದಾದ್ಯಂತ ಜಿಲ್ಲಾವಾರು ಆಳ್ವಾಸ್ ನುಡಿಸಿರಿ ಘಟಕಗಳನ್ನು ಸ್ಥಾಪಿಸಲಾಗುವುದು.
ಸಮ್ಮೇಳನದಲ್ಲಿ ಕನ್ನಡ ಸಂಸ್ಕೃತಿ-ಭಾಷೆ :ಸಂಘರ್ಷ ಮತ್ತು ಸಾಮರಸ್ಯ, ಪ್ರಾಚೀನ ಕನ್ನಡ ಸಾಹಿತ್ಯ : ಸಂಘರ್ಷ ಮತ್ತು ಸಾಮರಸ್ಯ,ಮಧ್ಯಕಾಲೀನ ಕನ್ನಡ ಸಾಹಿತ್ಯ : ಸಂಘರ್ಷ ಮತ್ತು ಸಾಮರಸ್ಯ , ಆಧುನಿಕ ಕನ್ನಡ ಸಾಹಿತ್ಯ : ಸಂಘರ್ಷ ಮತ್ತು ಸಾಮರಸ್ಯ ಎಂಬ ನಾಲ್ಕು ಪ್ರಮುಖ ಗೋಷ್ಠಿಗಳು  ನಡೆಯಲಿವೆ. ಪಂಡಿತ್ ಭೀಮ್ಸೇನ್ ಜೋಷಿ  ನೆನಪು ಮತ್ತು ಕೆ.ಕೆ.ಹೆಬ್ಬಾರ್ ನೆನಪು ಎಂಬ ಸಂಸ್ಮರಣಾ ಕಾರ್ಯಕ್ರಮ ನಡೆಯಲಿವೆ.ಮಾಧ್ಯಮ : ಸಂಘರ್ಷ ಮತ್ತು ಸಾಮರಸ್ಯ -ರವಿ ಬೆಳಗೆರೆ ಅವರಿಂದ, ಕನ್ನಡ ಜನಪರ  ಚಳುವಳಿಗಳು: ಎಸ್.ಜಿ.ಸಿದ್ಧರಾಮಯ್ಯ,ಕನ್ನಡ ಜನಪದ  :    ಪ್ರೊ. ವೀರಣ್ಣ ದಂಡೆ ಇವರಿಂದ ವಿಶೇಷೋಪನ್ಯಾಸ ನಡೆಯಲಿವೆ. ಕವಿಸಮಯ – ಕವಿನಮನ, ಕಥಾ ಸಮಯ ಕಾರ್ಯಕ್ರಮಗಳು ನಡೆಯಲಿವೆ.
ಸಂವಾದ: ಸಮ್ಮೇಳನದ ದ್ವಿತೀಯ ದಿನ ಆಳ್ವಾಸ್ ನುಡಿಸಿರಿ ರೂವಾರಿ ಡಾ.ಎಂ.ಮೋಹನ ಆಳ್ವ ಅವರೊಂದಿಗೆ ಸಂವಾದ, ಹಾಗೂ ಸಮ್ಮೇಳನದ ಮೂರನೇ ದಿನ ಬೆಳಗ್ಗೆ ಸಮ್ಮೇಳನದ ಸವರ್ಾಧ್ಯಕ್ಷತೆ ವಹಿಸಿರುವ ನಾಡೋಜ ಡಾ.ಎಂ.ಎಂ.ಕಲಬುಗರ್ಿ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿವೆ.
ಈ ಬಾರಿ ನುಡಿಸಿರಿ ನಡೆಯಲಿರುವ ಸಭಾಂಗಣಕ್ಕೆ ಪಂಡಿತ್ ಭೀಮ್ ಸೇನ್ ಜೋಷಿ ಸಭಾಂಗಣವೆಂದು ನಾಮಕರಣ ಮಾಡಲಾಗಿದೆ. ಎಂದಿನಂತೆ ನಾಲ್ಕು ವೇದಿಕೆಗಳಲ್ಲಿ ಸಾಂಸ್ಕೃತಿಕ ವೈವಿಧ್ಯಗಳು ನಡೆಯಲಿವೆ.
ನುಡಿಸಿರಿಯಲ್ಲಿ ವೈಶಿಷ್ಠ್ಯಗಳು* ನಾಡಿನ ಹೆಸರಾಂತ ಪುಸ್ತಕ ಪ್ರಕಾಶಕರು ಮಾರಾಟಗಾರರಿಂದ ಪುಸ್ತಕ ಪ್ರದರ್ಶನ ಮಾರಾಟ* ಕನ್ನಡ ಧ್ವಜಾರೋಹಣದ ಮೂಲಕ ಸಮ್ಮೇಳನಕ್ಕೆ ಚಾಲನೆ* ವೈವಿಧ್ಯಮಯ ಸಾಂಸ್ಕೃತಿಕ ಮೆರವಣಿಗೆ* ಸರಿಯಾದ ಸಮಯಕ್ಕೆ ಕಾರ್ಯಕ್ರಮ ಆರಂಭ* ಶಿಸ್ತು ಬದ್ಧ ಕಾರ್ಯಕ್ರಮ, ಸಮಯಪ್ರಜ್ಞೆಗೆ ಒತ್ತು.* ಕರಾವಳಿಯ ಸೊಗಡಿನ ಅನ್ನದಾಸೋಹ* ಸಮ್ಮೇಳನದ ಮೂರೂ ದಿನಗಳ ಕಾಲ ಏಕಕಾಲಕ್ಕೆ ನಾಲ್ಕುವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ* ಜಿಲ್ಲೆ ಜಿಲ್ಲೆಗಳಲ್ಲಿ ಆಳ್ವಾಸ್ ನುಡಿಸಿರಿ ಘಟಕ ಸ್ಥಾಪನೆ ಇತರ ವಿಶೇಷತೆಗಳು.

‍ಲೇಖಕರು avadhi

20 October, 2011

3 Comments

  1. balasubrahmanya.

    ಆತ್ಮೀಯ ಬ್ಲಾಗ್ /ಬಜ್ ಗೆಳೆಯರೇ , ಪುಸ್ತಕ ಪ್ರಿಯ , ಕರ್ನಾಟಕ ರಾಜ್ಯದಲ್ಲೇ ಅತೀ ಹೆಚ್ಚು ಪುಸ್ತಕಗಳನ್ನು ಸಂಗ್ರಹ ಮಾಡಿ ಗ್ರಾಮೀಣ ಪ್ರದೇಶದಲ್ಲಿ ಜ್ಞಾನ ಪಸರಿಸುವಿಕೆಗೆ ಶ್ರಮಿಸುತ್ತಿರುವ ಆತ್ಮೀಯ ಪುಸ್ತಕದ ಮನೆಯ ” ಅಂಕೆ ಗೌಡರಿಗೆ” ಪ್ರತಿಷ್ಟಿತ “ಆಳ್ವಾಸ್ ನುಡಿಸಿರಿ -೨೦೧೧ ” ರ ಪ್ರಶಸ್ತಿ ಅರಸಿಬಂದಿದೆ.ಇವರ ಬಗ್ಗೆ ನನ್ನ ಬ್ಲಾಗ್ ನಲ್ಲಿ ೧೬-೦೮-೨೦೧೦ ರಲ್ಲಿ ಮಾಹಿತಿ ನೀಡಿದ್ದೆ. ಆದರು ಈ ಸಂತಸದ ಸಮಯದಲ್ಲಿ ಮತ್ತೊಮ್ಮೆ ಲಿಂಕ್ ಅನುಸರಿಸಿ ಓದಿಬಿಡಿ , ಮತ್ತು ಅವರಿಗೆ ಶುಭ ಹಾರೈಸಿ , ಇಂತಹವರಿಂದ ಮತ್ತಷ್ಟು ಉತ್ತಮ ಕಾರ್ಯ ಆಗೆಂದು ಆಶಿಸೋಣ http://nimmolagobba.blogspot.com/2010/08/blog-post_16.html

  2. raju hegade

    namma saahitya parishattu, akadamigala aayke istu sariyaagi iruvudilla irudilla.ellariguu abhinandanegalu.–raju hegde

  3. ಪಂಡಿತಾರಾಧ್ಯ ಮೈಸೂರು

    ಶ್ರೀಕಂಠದತ್ತ ಒಡೆಯರ್ ನಿಧನರಾದಾಗ ಅವರ ಅಂತಿಮ ಯಾತ್ರಗೆ ಪಲ್ಲಕ್ಕಿಯ ಸದುಪಯೋಗವಾಯಿತು!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading