ರಾಜಾರಾಂ ತಲ್ಲೂರು
ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಸೆಟಲ್ ಡೌನ್ ಆದಮೇಲೆ ಸಂಸತ್ತಿನಲ್ಲಿ, ಮಾಧ್ಯಮಗಳಲ್ಲಿ ಮತ್ತು ಜನಸಾಮಾನ್ಯರ ನಡುವೆ ಚರ್ಚೆ ನಡೆಯಬೇಕಾಗಿದ್ದದ್ದು ಕೇಂದ್ರ ಸರಕಾರದ ಕಾರ್ಯನಿರ್ವಹಣೆಯ ಬಗ್ಗೆ. ಆದರೆ, ಕಳೆದ ಎರಡು ವರ್ಷಗಳಿಂದ ಹಾಗಾಗುತ್ತಿಲ್ಲ. ಪ್ರತಿಯೊಂದು ಸಂಸತ್ ಸಮಾವೇಶದ ಆಸುಪಾಸಿನಲ್ಲಿ ಚರ್ಚೆಮಾಡಬೇಕಾದವರ ಗಮನ ಆಕಸ್ಮಿಕವೆನ್ನುವಂತೆ ಬೇರಿನ್ನೆಲ್ಲೋ ಹರಿಯುವ ಹಾಗೆ ಘಟನೆಗಳು ನಡೆದಿರುತ್ತವೆ.
ಸಣ್ಣದೊಂದು ಉದಾಹರಣೆ ಕೊಡಬೇಕಿದ್ದರೆ,
2015 ಚಳಿಗಾಲದ ಅಧಿವೇಶನ ನವೆಂಬರ್ 26ರಿಂದ ಡಿಸೆಂಬರ್ 23ರ ವರೆಗೆ ನಡೆಯುತ್ತದೆ. ಆದರೆ ಅದಕ್ಕಿಂತ ಸ್ವಲ್ಪವೇ ಮೊದಲು ಅಂದರೆ ಸೆಪ್ಟಂಬರ್ 28ರಂದು ‘ದಾದ್ರಿ ಪ್ರಕರಣ’ ನಡೆಯುತ್ತದೆ.
2016 ಬಜೆಟ್ ಅಧಿವೇಶನ ಫೆಬ್ರವರಿ 23ರಿಂದ ಮೇ 13ರ ತನಕ ನಡೆಯುತ್ತದೆ. ಅದಕ್ಕಿಂತ ಸ್ವಲ್ಪವೇ ಮೊದಲು ಅಂದರೆ, ಫೆಬ್ರವರಿ 9ರಂದು ಜೆ ಎನ್ ಯು ವಿಶ್ವವಿದ್ಯಾಲಯದಲ್ಲಿ ಕನ್ಹಯ್ಯಾ ಕುಮಾರ್ ಗದ್ದಲ ನಡೆಯುತ್ತದೆ.
ಈಗ 2016ರ ಮಾನ್ಸೂನ್ ಅಧಿವೇಶನ ಜುಲೈ 18ರಿಂದ ಆರಂಭಗೊಂಡು ಆಗಸ್ಟ್ 12ರ ತನಕ ನಡೆದಿದೆ. ಇದಕ್ಕಿಂತ ಸ್ವಲ್ಪವೇ ಮೊದಲು ಜುಲೈ 11, 2016ರಂದು ಗುಜರಾತಿನ ಉನಾದಲ್ಲಿ ದಲಿತರ ಮೇಲೆ ಹಲ್ಲೆ ಆಗುತ್ತದೆ.
ಈ ಅಧಿವೇಶನಗಳ ಹೊತ್ತಲ್ಲೆಲ್ಲ ಮಾಧ್ಯಮಗಳು, ಸೋಷಿಯಲ್ ಮೀಡಿಯಾ ಮತ್ತು ಜನ – ಸರ್ಕಾರದ ನೀತಿ ನಿರೂಪಣೆಗಳ ಬದಲು ಈ ಬಿಸಿಬಿಸಿ ಪ್ರಕರಣಗಳನ್ನು ಚರ್ಚಿಸುತ್ತಿರುತ್ತಾರೆ.
ಇಂತಹದೊಂದು ಪ್ಯಾಟರ್ನ್ ಆಧರಿತ ರಾಜಕೀಯ ಭಾರತಕ್ಕೀಗ ಹೊಸದೇನಲ್ಲ. ಪ್ರತೀ ಚುನಾವಣೆಗೆ ಮುನ್ನ ಕೋಮು ಸೌಹಾರ್ದ ಕದಡುವ ಪ್ರಯತ್ನ, ಬೆಲೆ ಏರಿಕೆ ವಿರೋಧಿಸುವ ಹೋರಾಟ, ಜಾತೀಯ ಸಂಘಟನೆ-ವಿಘಟನೆಗಳು ಈಗೀಗ ಬಹಳ ನಿರೀಕ್ಷಿತ ಎಂಬಷ್ಟು ಸಾಮಾನ್ಯ ಆಗಿಬಿಟ್ಟಿವೆ. ಅಜೆಂಡಾಗಳು ಮ್ಯಾಕ್ರೋ ಆಗಿರುವಾಗ ಇಂತಹ ಮೈಕ್ರೋ ಇಂಜಿನಿಯರಿಂಗ್ ಗಳು ಕೆಲಸ ಮಾಡುತ್ತವೆಂಬುದು ರಾಜಕೀಯ ತಂತ್ರಜ್ಞರೆಲ್ಲ ಈಗ ಚೆನ್ನಾಗಿ ತಿಳಿದಿರುವ ಸಂಗತಿ. ಹತ್ತಾರು ಪದರಗಳಲ್ಲಿ, ಹತ್ತಾರು ಕೋನಗಳಿಂದ ಈ ಕೆಲಸ ಲಯಬದ್ಧವಾಗಿ ನಡೆಯುತ್ತದೆ.
ಈಗ ನಡೆದಿರುವ ಅಧಿವೇಶನವನ್ನೇ ತೆಗೆದುಕೊಳ್ಳಿ. ದೇಶದಲ್ಲಿ ಮಹತ್ವದ ವ್ಯಾವಹಾರಿಕ ಬದಲಾವಣೆ ತರಲಿರುವ GST ತೆರಿಗೆ (ಸಂವಿಧಾನಕ್ಕೆ 122 ನೇತಿದ್ದುಪಡಿ) ವಿಧೇಯಕ ಮತ್ತು ವಿಸಿಲ್ ಬ್ಲೋವರ್ಸ್ ಪ್ರೊಟೆಕ್ಷನ್ (ತಿದ್ದುಪಡಿ) ಮಸೂದೆಗಳು ಈ ಅಧಿವೇಶನದ ಕಲಾಪ ಪಟ್ಟಿಯಲ್ಲಿವೆ. ದೇಶದ ಮೇಲೆ ಮುಂದಿನ ದಿನಗಳಲ್ಲಿ ಆಳವಾದ ಪರಿಣಾಮ ಮಾಡಬಲ್ಲ ಇವೆರಡೂ ಮಸೂದೆಗಳು ದೊಡ್ಡ ಚರ್ಚೆ ಇಲ್ಲದೆ ಲೋಕಸಭೆಯನ್ನು ದಾಟಿವೆ. ಅಲ್ಲಿ ಆಳುವ ಪಕ್ಷಕ್ಕೆ ಸ್ಪಷ್ಟ ಬಹುಮತ ಇದೆ. ಈ ಅಧಿವೇಶನದಲ್ಲಿ ಅವೆರಡೂ ಮಸೂದೆಗಳು ರಾಜ್ಯಸಭೆಯ ಎದುರು ಬರಲಿವೆ.
ಈಗ ಯುಪಿಎ 66, ಎನ್ ಡಿ ಎ 71 ಸ್ಥಾನಗಳನ್ನು ಹೊಂದಿದ್ದು, ಇತರರು 106ರಷ್ಟಿದ್ದಾರೆ. ಸದನದ ಬಲ 245. ಹಾಗಾಗಿ ಮಾತುಕತೆ-ಚರ್ಚೆ ಇಲ್ಲದೆ ಇವು ಶಾಸನಗಳಾಗುವುದು ಕಷ್ಟ. ಆದರೆ, ಈ ವರ್ಷಾಂತ್ಯಕ್ಕೆ ಈ ಬಲ ಯುಪಿಎ 93, ಎನ್ ಡಿ ಎ 74 ಆಗಲಿದೆಯಾದರೂ ಇತರರೊಳಗಿನ ಮಿತ್ರಪಕ್ಷಗಳೊಂದಿಗೆ ಸೇರಿದರೆ ಸರ್ಕಾರದ ಬಲ 128 ತಲುಪಲಿದೆ ಎಂದು ಪರಿಣತರು ಲೆಕ್ಕಾಚಾರ ನೀಡುತ್ತಾರೆ. ಅಂದರೆ, ಈ ಬಾರಿ ಅಲ್ಲದಿದ್ದರೂ ಮುಂದಿನ ಬಾರಿ ಈ ಮಸೂದೆಗಳು ಚರ್ಚೆ ಇಲ್ಲದಿದ್ದರೂ ಶಾಸನಗಳಾಗುವುದು ಖಚಿತ.
ಜಿ ಎಸ್ ಟಿ, ನಮಗೆ ಈವತ್ತು ನಾವು ತಲುಪಿರುವ ಗ್ಲೋಬಲೈಜೇಷನ್ ಹಂತಕ್ಕೆ ಅನಿವಾರ್ಯ ಮಸೂದೆ. ಆದರೆ, ವಿಸಿಲ್ ಬ್ಲೋವರ್ಸ್ ರಕ್ಷಣೆ ಮಸೂದೆಗೆ ತಿದ್ದುಪಡಿ ಆಗುತ್ತಿದೆಯೆಂದರೆ– ಆರ್ ಟಿ ಐ ಕಾರ್ಯಕರ್ತರಂತಹ ಸಾಮಾಜಿಕ ಎಚ್ಚರ ಮೂಡಿಸುವ ಹೋರಾಟಗಾರರಿಗೆ ಮೂಗುದಾರ ತೊಡಿಸುವ ಕೆಲಸ ನಡೆದಿದೆ ಎಂದೇ ಅರ್ಥ. 2002ರಲ್ಲಿ ಗೋಲ್ಡನ್ ಕ್ವಾಡ್ರಾಂಗಲ್ ರಸ್ತೆ ಹಗರಣ ಬೆಳಕಿಗೆ ತಂದ ಸತ್ಯೇಂದ್ರ ದುಬೆ ನಿಗೂಢವಾಗಿ ಕೊಲೆಯಾದದ್ದು, ಆ ಮೇಲೆ 2008ರಲ್ಲಿ ನಾರೆಗಾ ಯೋಜನೆಯಲ್ಲಿ ಅವ್ಯವಹಾರ ಬೆಳಕಿಗೆ ತಂದ ಲಲಿತ್ ಮೆಹ್ತಾ ಕೊಲೆ ಆದದ್ದು, ಮೊನ್ನೆ ಮಂಗಳೂರಿನಲ್ಲಿ ಬಾಳಿಗ ಕೊಲೆ… ಇವನ್ನೆಲ್ಲ ಗಮನಿಸುತ್ತಾ ಹೋದರೆ, ಆತಂಕವಾಗುತ್ತದೆ.
ಇಂತಹ ಶಾಸನಗಳಿಗೆ ಚರ್ಚೆ ನಡೆಯದಿದ್ದರೆ – ಅದಕ್ಕೇನೇ ಕಾರಣ ಇದ್ದರೂ – ಅದರ ಪರಿಣಾಮ ನಾಳೆ ನೇರವಾಗಿ ನಮ್ಮ ಅನ್ನದ ಬಟ್ಟಲ ಮೇಲೇ.




the problems lies in the 8% additional vote Modi able gain in 2014 and decimated Congress , hence the Drama before every session , if you know who won more LS seats in SC and ST reserved seats in the whole Country we will know what agenda Congress is being played , People are not blind to accept everything propagated in the media and its portals by leftist liberals . people are noticing the Changes happening in Railways , Roads , power .
ನಾನು ಅರ್ಥ ಮಾಡಿಕೊಂಡಿರುವಂತೆ, ಅಭಿವ್ರದ್ಧಿ ಎಂಬುದು 80% ಮನುಷ್ಯರು ಸಹನೀಯ ಸ್ಥಿತಿಯಲ್ಲಿ ಬದುಕಲು ದಾರಿಯೇ ಹೊರತು ಉಳಿದ 20% ಮನುಷ್ಯರು ಆರಾಮವಾಗಿ ಬದುಕಲು ಬೇಕಾಗುವ ರೈಲು, ರಸ್ತೆ, ವಿದ್ಯುತ್, ಕೈಗಾರಿಕೆಗಳು ಅಲ್ಲ. ಕ್ಷಮಿಸಿ.
Nope , even Ambedkar said that industries and education are the tools to remove discrimination from the society , 1990s Economic revolution has made life easy for so many depressed class , please ask the people who are getting power connection after 69 years of independence regarding the importance of it .
I honestly believe it is the opposition parties that should set the path for a smooth sailing of discussions in parliament, they have a choice. They can either push the incidents to the backstage and choose to debate on the performance of the government OR just make lots of noise and make sure nothing is discussed/debated in parliament and go outside and tell everyone the govt is not working, all the opposition parties are choosing to do the latter misled by Cong.
Remember when the top (mis)leaders of UPA were issued court notices in National Herald case, how they made noise and how they had to be forcibly thrown out.
So, in effect it is the opposition that controls the proceedings and they are the ones sabotaging every meaningful debate there, but they have a point too. Who is capable of debating from their end? They don’t have good leaders who can articulate anything…
ಎರಡೂ ಪ್ರಮುಖ ಪಕ್ಷಗಳು ಪ್ರತಿಪಕ್ಷಗಳಾಗಿ ಕುಳಿತಾಗ ಹೇಗೆ ವರ್ತಿಸಿವೆ ಎಂಬುದನ್ನು ಲೋಕ ಕಂಡಿದೆ. ಈ ಮೈಕ್ರೋ ಇಂಜಿನಿಯರಿಂಗ್ ಕೂಡ ಯಾವುದೋ ಒಂದು ಪಕ್ಷದ್ದಲ್ಲ. ಎಲ್ಲರೂ ಇದರಲ್ಲಿ ಈಗ ನಿಷ್ಣಾತರೇ. ಮೂಲ ಉದ್ದೇಶ ಮರೆತ ಈ ರೀತಿಯ ರಾಜಕೀಯದ ಹೊಡೆತ ನೇರವಾಗಿ ಬೀಳುವುದು ನಮ್ಮ ನಿಮ್ಮಂತಹ ಸಾಮಾನ್ಯರ ಬದುಕಿನ ಮೇಲೆ ಎಂಬ ಆತಂಕವೇ ಈ ಬರೆಹದ ಮೂಲಬಿಂದು. ಥ್ಯಾಂಕ್ಯೂ.