ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆರತಿ ಸೈಕಲ್ ತುಳಿದಳು..

ಎಚ್ ಎನ್ ಆರತಿ 

ಚಿತ್ರ : ಸಂಗಮೇಶ್ ಎಸ್ ಎಚ್ 

ನನ್ನ ಜೊತೆಯಿರುವವರು, ಆಫೀಸಿನ ತೋಟದ ಕೆಲಸ ಮಾಡುವವರ ಮಕ್ಕಳು. ದೂರದ ಯಾದಗೀರ್ ಕಡೆಯಿಂದ ಬಂದು ಬೆಂಗಳೂರೆಂಬ ಮಹಾಪಟ್ಟಣದಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವವರು.

ಆ ಹುಡುಗ ರಜವೆಂದು ಮಜವಾಗಿ ಸೈಕಲ್ ತುಳಿಯುತ್ತಿದ್ದ.

ಆಫೀಸೆಂಬುದನ್ನೂ ಮರೆತು ನಾನೂ, ಅವನ ಸೈಕಲ್ ತುಳಿಯುತ್ತಾ ಗತಕಾಲದ ನನ್ನ Burgundy colour, BSL Ladybird ಸೈಕಲ್ ನೆನಪಿಸಿಕೊಂಡೆ. ಪಿಯೂಸಿಯ ಎರಡು ವರ್ಷ ನಮ್ಮ ಮನೆಯಿಂದ 2 ಕಿಮೀ ದೂರದಲ್ಲಿದ್ದ ವಿದ್ಯಾವರ್ಧಕ ಕಾಲೇಜಿಗೆ ಅದರಲ್ಲೇ ಓಡಾಡುತ್ತಿದ್ದೆ.
NMKRVಲ್ಲಿ ಡಿಗ್ರಿ ಮಾಡುವಾಗ, ಎರಡನೇ ವರ್ಷಕ್ಕೆ ಲೂನಾ ಕೈ ಸೇರಿತ್ತಾದರೂ, ಸೈಕಲ್ ಎಂಬ ಮೋಹಕ ಮಾಯಾವಾಹನ, ಬೇರೊಂದಿಲ್ಲ!
ತಮ್ಮನ ಸೈಕಲ್ ತುಳಿಯುತ್ತಿದ್ದ ಈ ಆನೆಯನ್ನು ನೋಡಿ,

ಎಂಕಮ್ಮ, ಹಳದಿ ಉಡುಗೆಯಲ್ಲಿ ಸೇವಂತಿಗೆ ಹೂವಿನ ಥರ ಕುಳಿತು ನಗುತ್ತಿದ್ದಳು…!

 

‍ಲೇಖಕರು avadhi

21 May, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading