ಮಲ್ಲಿಕಾರ್ಜುನಸ್ವಾಮಿ ಮಹಾಮನೆ
**
ಬೆಂಗಳೂರು ಹಾಗೂ ಕರ್ನಾಟಕದ ಹಲವು ನಗರ ಹಾಗೂ ಪಟ್ಟಣಗಳಲ್ಲಿ ಕಲಾವಿದರ ಕನಸು, ಪರಿಶ್ರಮ ಮತ್ತು ಸ್ವಂತ ಹಣದಿಂದ ಹಿರಿದಾದ ರಂಗಮಂದಿರ ಹಾಗೂ ಆಪ್ತ ರಂಗಮಂದಿರಗಳು ನಿರ್ಮಿಸಲ್ಪಟ್ಟು ಆಯಾ ಪ್ರದೇಶಗಳಲ್ಲಿ ತಮ್ಮದೇ ಆದಂತೆ ರಂಗಭೂಮಿ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹರಡುತ್ತಿವೆ. ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ.
ಆದರೆ ಈ ರೀತಿ ರಂಗಮಂದಿರಗಳು ಬೇರೆ ಸಮುದಾಯ ಭವನಗಳ ತೆರಿಗೆ ಕ್ರಮದಂತೆ (ತೆರಿಗೆ, ವಿದ್ಯುತ್, ನೀರಿನ ಸೌಲಭ್ಯ) ತೆರಿಗೆ ಕಟ್ಟಬೇಕಾದ ಅನಿವಾರ್ಯತೆಯೂ ಇದೆ. ಆದರೂ ಸರ್ಕಾರ ಮಾಡಬಹುದಾದ ಅಥವಾ ಒಂದು ಸಮುದಾಯ ಮಾಡಬಹುದಾದ ಸಾಂಸ್ಕೃತಿಕ ಕೆಲಸಗಳನ್ನು ಈ ರಂಗಮಂದಿರಗಳು ನಿರ್ವಹಿಸುತ್ತಿವೆ ಎಂಬುದು ಎಲ್ಲರಿಗೂ ತಿಳಿದ ವಿಚಾರ.
ರಂಗಮಂದಿರಗಳ ನಿರ್ವಹಣೆ ಹಾಗೂ ಇಲ್ಲಿ ನಡೆಯುವ ಕಾರ್ಯಕ್ರಮಗಳ ಆಯೋಜನೆಗಳು ತ್ರಾಸದಾಯಕವಾಗುತ್ತಿದೆ. ಸರ್ಕಾರದಿಂದ ಯಾವ ಸಹಕಾರವೂ ಇಲ್ಲದೆ ರಂಗಮಂದಿರಗಳ ನಿರ್ವಹಣೆ ಕಷ್ಟವಾಗುತ್ತಿದೆ. ರಂಗಮಂದಿರಗಳಿಗಾಗಿಯೇ ಸರ್ಕಾರದಿಂದ ಪ್ರತ್ಯೇಕ ಅನುದಾನ ಹಾಗೂ ಇತರ ಅನುಕೂಲಗಳೂ ಇಲ್ಲ ಎಂಬುದು ತಿಳಿದ ವಿಷಯ. ಈ ವಿಷಯಗಳ ಕುರಿತು ಸರ್ಕಾರದಲ್ಲಿ ಮನವಿ ಸಲ್ಲಿಸೋಣ.
ಮೊದಲು ಆಗಬೇಕಾಗಿರುವ ಕೆಲಸ.
1) ಈ ರೀತಿಯ ರಂಗಮಂದಿರಗಳನ್ನು ಗುರುತಿಸಿಕೊಳ್ಳುವುದು
2) ರಂಗಮಂದಿರಗಳ ಹೆಸರು
3) ಸ್ಥಳ-ವಿಳಾಸ
4) ರಂಗಮಂದಿರದ ವಿಸ್ತೀರ್ಣ
5) ರಂಗಮಂದಿರದಲ್ಲಿ ಇರುವ ಅನುಕೂಲ
6) ಮತ್ತಿತರ ವಿಚಾರಗಳ ಕುರಿತು ಮಾಹಿತಿ ಹಂಚಿಕೊಳ್ಳುವುದು.
ಇಂತಹ ರಂಗಮಂದಿರಗಳನ್ನು ಗುರುತಿಸಲು ಕಲಾವಿದರು ಸಹಕರಿಸಿ. ನಿಮಗೆ ಗೊತ್ತಿರುವ ರಂಗಮಂದಿರಗಳನ್ನು ಹೆಸರಿಸಿ. ಈ ರೀತಿಯ ರಂಗಮಂದಿರಗಳ ಪಟ್ಟಿ ಸಿದ್ಧಪಡಿಸಿ. ನಾವೆಲ್ಲರೂ ಒಂದು ಅಥವಾ ಎರಡು ಭಾರಿ Zoom ಮೀಟಿಂಗ್ ಮಾಡಿ ಚರ್ಚಿಸೋಣ. ತದನಂತರ ಒಂದು ಸ್ಥಳದಲ್ಲಿ ಸೇರಿ ಒಂದು ತೀರ್ಮಾನಕ್ಕೆ ಬಂದು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸೋಣ. ಮಂತ್ರಿಗಳನ್ನೂ ಕಂಡು ಮಾತಾಡೋಣ.
ಈ ಕುರಿತು ತಮ್ಮ ಸಲಹೆ, ಅನಿಸಿಕೆಗಳು, ಅಭಿಪ್ರಾಯಗಳು ಇದ್ದರೆ ಹಂಚಿಕೊಳ್ಳಿ ಹಾಗೂ ಈ ಬರಹವನ್ನು ತಮ್ಮ ತಮ್ಮ ರಂಗ ಬಳಗಗಳ Whatsapp ಗಳಿಗೆ ಪೋಸ್ಟ್ ಮಾಡಬೇಕಾಗಿ ವಿನಂತಿ ‘ರವೀಂದ್ರ ಕಲಾಕ್ಷೇತ್ರ ನವೀಕರಣ’ ಮೀಟಿಂಗಿಗೆ ಸಚಿವರು ಬಂದಾಗ ಈ ಕುರಿತು ಈಗಾಗಲೇ ವಿಷಯ ಪ್ರಸ್ತಾಪ ಮಾಡಿರುವೆ. ಅವರೂ ಸಹ ‘ಬನ್ನಿ ಮಾತಾಡೋಣ’ ಎಂದಿದ್ದಾರೆ. ನಿಮ್ಮೆಲ್ಲರ ಸಹಕಾರವಿರಲಿ.
ಮಹಾಮನೆ: 94489 70731
0 Comments