ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆನಂದತೀರ್ಥ ಪ್ಯಾಟಿ ಹೊಸ ಪುಸ್ತಕ

ಕೃಷಿಯಲಿ… ಖುಷಿಯಲಿ…

ಇದು ಅಚ್ಚರಿಯ ಕೃಷಿಕತೆಗಳ ಆಗರ

‘ಸಹಜ ಮೀಡಿಯಾ’ ಪ್ರಕಾಶನದ ಮೊದಲ ಕೃತಿ

ಹಿರಿಯ ಪತ್ರಕರ್ತ, ಪ್ರಜಾವಾಣಿಯ ಆನಂದತೀರ್ಥ ಪ್ಯಾಟಿ ಅವರ ಹೊಸ ಪುಸ್ತಕ ಸಧ್ಯದಲ್ಲಿಯೇ ಬಿಡುಗಡೆಯಾಗಲಿದೆ

cp

* ಅಮೆರಿಕದಲ್ಲಿ ಸಾಫ್ಟ್‌ವೇರ್ ತಂತ್ರಜ್ಞೆಯಾಗಿ ೧೧ ವರ್ಷ ಕೆಲಸ ಮಾಡಿದ ಪ್ರತಿಭಾ ಮರಳಿ ಮಣ್ಣಿಗೆ ಬಂದು ಹಾರೋಹಳ್ಳಿಯಲ್ಲಿ ನೇಗಿಲು ಹಿಡಿದಿದ್ದು;

* ಪತ್ರಕರ್ತನಾಗಿ ದೇಶಗಳನ್ನು ಸುತ್ತಿ, ಬಳಿಕ ಕೃಷಿಕನಾದ ಕೆನ್‌ಲವ್ ಹಣ್ಣುಗಳಿಗೆ ಹೊಸ ಜೀವ ಕೊಟ್ಟಿದ್ದು;

* ಕುಮಟಾದಲ್ಲಿ ಮೀನುಗಾರಿಕೆ ಅಧ್ಯಯನಕ್ಕೆ ಬಂದ ಬಂಗಾಳಿ ವಿಜ್ಞಾನಿ ಈಗ ಒಡಿಶಾದಲ್ಲಿ ಭತ್ತದ ಅತಿ ದೊಡ್ಡ ನಾಟಿ ತಳಿಬ್ರಹ್ಮನಾಗಿದ್ದು;

* ಆಂಧ್ರದ ಐಎಎಸ್ ಅಧಿಕಾರಿಯ ಮಗಳು ಒಡಿಶಾದಲ್ಲಿ ಹಳ್ಳಿಗರ ನೆರವಿನಿಂದ ಬಹುಮಹಡಿ ಕಾಡನ್ನು ನಿರ್ಮಿಸಿದ್ದು;

* ಕೃಷಿಯೇ ಗೊತ್ತಿಲ್ಲದ ಕುರಿಗಾರ ಮುತ್ತಣ್ಣ ಎಕರೆಗೆ 44 ಕ್ವಿಂಟಾಲ್ ಭತ್ತ ಬೆಳೆದು ನಿಜ ಜೀವನದ ’ಬಂಗಾರದ ಮನುಷ್ಯ’ನಾಗಿದ್ದು.

* ಪುಣೆಯಲ್ಲಿ ಪುರಾತತ್ವಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿದ ದೀಪಿಕಾ ಪರಾಗತಜ್ಞೆಯಾಗಿ ಪಾಂಡಿಚೇರಿಯ ಕೈದೋಟದಲ್ಲಿ ತಳಿ ಸಂರಕ್ಷಣೆಯ ದೀಕ್ಷೆ ತೊಟ್ಟಿದ್ದು.

* ಉರುಗ್ವೆ ದೇಶದ ರಾಷ್ಟ್ರಪತಿಯಾಗಿದ್ದರೂ ಕೃಷಿಯಲ್ಲೇ ತೊಡಗಿರುವುದು;

* ಬಹುರಾಷ್ಟ್ರೀಯ ಕಂಪನಿಗಳಿಗಾಗಿ ಐದು ದೇಶಗಳಲ್ಲಿ ಸೇವೆ ಸಲ್ಲಿಸಿದ ಶ್ರೀವತ್ಸ ಮಾಗಡಿಯ ಸಮೀಪ ಕುಬ್ಜತಳಿಯ ದನಗಳ ಸಂಗೋಪನೆಗೆ ತೊಡಗಿದ್ದು… …

ಹೊಸಯುಗದ ಮಣ್ಣಿನ ಮಕ್ಕಳ ತರಾವರಿ ಕತೆಗಳ ಒಂದು ಪುಟ್ಟ ಕಣಜ ಇಲ್ಲಿದೆ.

‍ಲೇಖಕರು Admin

9 January, 2016

1 Comment

  1. Gopaala Wajapeyi

    ಓದಲು ಕಾತರ. ಕಾಯುವೆ. ಒಳ್ಳೆಯದಾಗಲಿ ಆನಂದ… 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading