ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಕೆಯ ಸ್ಪರ್ಶದ ಫೀಲ್ ಇನ್ನೂ ಹಾಗೇ ಉಳಿದಿದೆ, ನನ್ನ ಕೆನ್ನೆ ಮೇಲೆ…

ರಶ್ಮಿ ತೆಂಡೂಲ್ಕರ್

ಇವತ್ತು ಬೆಳಗ್ಗೆ ಆಫೀಸಿಗೆ ಬರುವ ಹೊತ್ತು..ಅಂದ್ರೆ 7.45..ಇಂಡಿಯನ್ ಎಕ್ಸ್ಪ್ರೆಸ್ ಸರ್ಕಲ್ ಬಳಿ ರಸ್ತೆ ದಾಟಲು ನಿಂತಿದ್ದೆ.
ಆವಾಗಲೇ ನನ್ನ ಪಕ್ಕ ಅಂದಾಜು 50ರ ಹರೆಯದ ಹೆಂಗಸೊಬ್ಬರು ಬಂದು…ಬೇಟಾ ಜರಾ ಮೇರಿ ಹಾತ್ ಪಕಡ್ ಅಂದ್ರು…ಏನಾಯ್ತಪ್ಪಾ..ತಲೆ ಸುತ್ತುತ್ತಿದೆಯೇನೂ ಅಂತ ಭಯನೂ ಆಯ್ತು. ಕ್ಯಾ ಹುವಾ? ಅಂತ ಅವರ ಕೈ ಹಿಡಿದುಕೊಂಡೆ. ಕುಚ್ ನಹೀ ಬೇಟಾ ಅಜೀಬ್ ಸ ಡರ್ ಲಗ್ ರಹಾ ಹೈ…ಅಂದ್ರು…

ನಾ ಕೈ ಹಿಡಿದುಕೊಂಡೇ ನಿಂತೆ. ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ರು ಅವರು
3 ನಿಮಿಷ ನಂತರ ಆ ಅಮ್ಮ ಹೇಳಿದ್ರು…ಮುಜೇ ಹಾರ್ಟ್ ಕಾ ಪ್ರಾಬ್ಲಂ ಹೈ…ಕಭೀ ಕಭೀ ಐಸಾ ಡರ್ ಲಗ್ನೇ ಲಗ್ತಾ ಹೇ…
ಅವರ ಜತೆ ಯಾರೂ ಇರಲಿಲ್ಲ…
ಆಮೇಲೆ ಅಚ್ಚಾ ಬೇಟಾ ಮೇ ಚಲ್ ತೀ ಹೂ… ಭಗವಾನ್ ಬಲಾ ಕರೇ…ಅಂತ ನಗುತ್ತಾ ಕೆನ್ನೆ ಸವರಿದ್ರು…
ಅವರ ಕಣ್ಣಲ್ಲಿ ಪ್ರೀತಿಯ ಭಾವ ಕಂಡೆ.
ನಿಮಗೆಲ್ಲಿ ಹೋಗ್ಬೇಕು ಅಂತ ಕೇಳಿದಕ್ಕೆ ಮಲ್ಯ ಹಾಸ್ಪಿಟಲ್ ಹೋಗ್ಬೇಕು..ಆಟೋದಲ್ಲಿ ಹೋಗ್ತೀನಿ ಅಂತ ಅವರು ಆಟೋ ಹತ್ತಿದ್ರು…
ಆ ಅಮ್ಮ ಯಾರು ಅಂತ ನನಗೆ ಗೊತ್ತಿಲ್ಲ…ಆಟೋದಲ್ಲಿ ಕುಳಿತು ಟಾಟಾ ಮಾಡಿದ್ರು…
ನಾನೂ ಕೈ ಬೀಸಿದೆ..ಆ ಅಮ್ಮ ಹುಷಾರಾಗಿ ಮನೆ ಸೇರಲಿ…ಪ್ರಾರ್ಥಿಸುತ್ತಿದ್ದೇನೆ…
ಆಕೆಯ ಸ್ಪರ್ಶದ ಫೀಲ್ ಇನ್ನೂ ಹಾಗೇ ಉಳಿದಿದೆ.ನನ್ನ ಕೆನ್ನೆ ಮೇಲೆ..
 

‍ಲೇಖಕರು G

30 October, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading