ಭಾಗ್ಯಶ್ರೀ
ನನ್ನ ಪ್ರೀತಿಯ ಅಜ್ಜ ತೀರಿ ಹೋಗಿ ಕೆಲವು ದಿನಗಳಾಗಿದ್ದಷ್ಟೆ, ಬಹಳ ದುಃಖದಿಂದ ಇದ್ದ ನನ್ನ ಬಳಿ ನನ್ನ ಮಗ ಬಂದು ’ಯಾಕಮ್ಮ.. ನೀನು ಬೇಜಾರಲ್ಲಿ ಇದ್ದಿ’ ಅಂದಿತು . ಅದಕ್ಕೆ ನಾನು ’ನಿನ್ನ ಮುತ್ತಜ್ಜನ ನೆನಪು ಆಗ್ತಾ ಇತ್ತು ಮುದ್ದು’ ಅಂದೆ. ಅದಕ್ಕೆ ಅದು ’ಅವರೆಲ್ಲಿ ಇರ್ತಾರೆ ಈಗ?? ಮತ್ತೆ ಬರೋದು ಯಾವಾಗ ??’ ಅಂತ ಎಲ್ಲ ಪ್ರಶ್ನೆ ಮಾಡ್ತಾ ಹೋಯ್ತು. ಇನ್ನು ಎಲ್.ಕೆ.ಜಿ ಶುರುವಿನಲಿದ್ದ ಅದಕ್ಕೆ ಅದರ ಮನಸ್ಸಿಗೆ ತಿಳಿಯುವಂತೆ.. ಅವರು ಈಗ ನಮ್ಮ ಜೊತೆ ಇಲ್ಲ, ಆದರೆ ಅವರಿಗೆ ನಾವು ಕಾಣಿಸ್ತಾ ಇರ್ತೇವೆ, ನಮ್ಮನ್ನು ಅವರು ನೋಡ್ತಾ ಇರ್ತಾರೆ’ .. ಅಂದೆ. ಅದು ಹೇಗೆ ಹೇಳಮ್ಮ ಅಂದ ಮಗನನ್ನು ಹೊರಗೆ ಕರೆದುಕೊಂಡು ಹೋಗಿ ( ಆಗ ರಾತ್ರಿಯದುದ್ದರಿಂದ) ಆಕಾಶ ತೋರಿಸಿ ’ಅಲ್ಲಿ ನೋಡು ಮೇಲೆ , ಅಲ್ಲಿ ನಕ್ಷತ್ರವಾಗಿ ಅವರು ಇದಾರೆ ಅಲ್ಲಿಂದಾನೆ ನಮ್ಮನೆಲ್ಲ ನೋಡ್ತಾ ಇದಾರೆ’ ಅಂದೆ. ಸ್ವಲ್ಪ ಸಮಯದ ಬಳಿಕ ನನ್ನ ಮಗ, ’ಅಮ್ಮ ಅಲ್ಲಿ ನೋಡು ಮುತ್ತಜ್ಜ ನನ್ನ ನೋಡಿ ನಗ್ತಾ ಇದಾರೆ ನೋಡಲ್ಲಿ .. ಅದೇ .. ತುಂಬಾ ತುಂಬಾ ಹೊಳಿತಾ ಇದಿಯಲ್ಲ ಅದೇ ಮುತ್ತಜ್ಜ ಅವ್ರು ಯಾವಾಗ್ಲೂ ಬಿಳಿ ಶರ್ಟ್ , ಪಂಚೆ ಹಾಕ್ತಿದ್ರಲ್ಲ ಅದಕ್ಕೆ ಎಲ್ಲರಿಗಿಂತ ಫಳ ಫಳ ಹೊಳಿತಾ ಇದಾರೆ’ ಅಂದ. ನಾನು ಹ್ಮ್ಮ್ಅಂದು ನಕ್ಕೆ .. ಅವನೇ ಮತ್ತೆ ಮಾತು ಮುಂದುವರೆಸುತ್ತ .. ’ನೋಡು ..ಆಕಾಶದ ತುಂಬಾ ಎಲ್ಲರ ಮನೆ ಅಜ್ಜ ,ಅಜ್ಜಿ ,ಮುತ್ತಜ್ಜ ಇವರೇ ಇದಾರಲ್ಲಮ್ಮ’ ಅಂದ. ನಾನು ನಕ್ಕೆ ..

ಮತ್ತೆ ಸ್ವಲ್ಪ ಸಮಯದ ಬಳಿಕ ಅದೇ ಮಾತು ಮುಂದುವರೆಸುತ್ತ.. ’ ಆದರೆ ಪಾಪ ಅವರಿಗೆ ಎಷ್ಟು ಕಷ್ಟ ಅಲ್ವಾ ಅಮ್ಮ’ ಅಂತು, ನಾನು ಯಾಕೋ??! ಅಂದೇ. . ಅದಕ್ಕೆ ಅವನು ..’ನೋಡು ಅವ್ರು ನಮ್ಮ ನೋಡಲು ಆಕಾಶದಲ್ಲಿ ನಕ್ಷತ್ರವಾಗಿ ನಿಂತ್ಕೊಬೇಕು, ಅದೂ ಎರಡು ಕೈ ಅಗಲ ಮಾಡಿ ಮತ್ತು ಎರಡು ಕಾಲು ಅಗಲ ಮಾಡಿ ನಿಂತ್ಕೊಬೇಕು ಪಾಪ . ಹಾಗೆ ಇದ್ರೆ ಮಾತ್ರ ನಕ್ಷತ್ರದ ರೀತಿ ಅವರು ನಮಗೆ ಕಾಣಿಸ್ತಾರೆ .. ಪಾಪ ನಮ್ಮನ್ನು ನೋಡಲಿಕ್ಕೆ ಎಷ್ಟು ಕಷ್ಟ ಪಟ್ಟು ಹಾಗೆ ನಿಲ್ತಾರೆ ಅಲ್ಲಮ್ಮ’ .. ಅಂತ ಹೇಳಿದಾಗ …ಬಹಳ ಬೇಜಾರಲ್ಲಿದ್ದ ನನ್ನ ಮನಸ್ಸು ತಕ್ಷಣ ಅವನ ಯೋಚನಾ ಶಕ್ತಿಗೆ ಮೆಚ್ಹಿ ಮುಖದಲ್ಲಿ ನಗುವನ್ನು ಹೊರಸೂಸಿತು ..:-)






ಅಬ್ಬಾ. ಬಂಗಾರದಂತ ಕೂಸು.. ಯೋಚನಾಲಹರಿಗೆ ಕೊಡಬೇಕು…:))
makkala manasu eshtu kutuhala bharitha prashnegalannu keluttave…makkala manasu devara manassina haage..
nice thought:)