ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳೇ ಇಲ್ಲದ ಮನದಲ್ಲಿ ಅವೆಷ್ಟು ನೆನಪುಗಳು..

ಸಂಜೀವಕುಮಾರ ಕುನ್ನೂರ

ಅದು ವಿಪರಿತ ಕಷ್ಟಗಳ ಕಾಲ. ಒಂದಾದ ಮೇಲೊಂದರಂತೆ ಬಂದೆರಗುವ ಯಾತನೆಗಳ ಬರಸಿಡಿಲು. ಕೈ ಇಟ್ಟ ಕಡೆಗೆಲ್ಲ ಸೋಲುಗಳ ಸುರಿಮಳೆ. ಹೆಜ್ಜೆ ಹೆಜ್ಜೆಯಲ್ಲಿ ಹತಾಶಯ ಮುಳ್ಳುಗಳು. ಅಂತಹ ರಸ್ತೆಯಲ್ಲಿ ಪರಿಚಯವಾದವಳು ಆ ಹುಡುಗಿ. ಬದಿಕಿನ ಭರವಸೆಯನ್ನ ನನ್ನ ಗೈಗೆ ಕೊಟ್ಟು ಪತ್ರಕೋದ್ಯಮಕ್ಕೆ ತಂದು ನಲ್ಲಿಸಿ ಹೋದವಳು ಇವತ್ತಿಗೂ ಹೊಳ್ಳಿಬಂದಿಲ್ಲ. ಬದುಕಿನ ದಾರಿಯನ್ನಿಗ ಹಿಂತಿರುಗಿ ನೋಡಿದಾಗ ಆ ಕೊರಕಲಿನ ಅಪಾಯದಿಂದ ಸೆಳೆದು ತಂದ ಆಕೆಯ ಬಗ್ಗೆ ಅಚ್ಚರಿಯಾಗುತ್ತಿದೆ. ಇದು ಯಾವ ಜನ್ಮದ ಋಣವ ತಿರಿಸಿ ಹೋದೆ ಹುಡುಗಿ? ಅವತ್ತೂ ನಾನೂ ಇಂಟರ್ವಿಯ್ಯೂ ಮುಗಿಸಿ ಬರುತ್ತಿದ್ದಾಗ ಸಿಕ್ಕವಳು, ನನ್ನ ಕಷ್ಟ ಕೇಳಿ ಸಲುಹುತ್ತಾ ಬಂದವಳು ನಿನು. ನಿನ್ನ ಸಾಮೀಪ್ಯದಿಂದ ಇಂದು ಬದುಕಿನ ದಾರಿಯಲ್ಲಿ ಬೆಳಕನ್ನು ಕಂಡವನು ನಾನು.
ಬದುಕಿನ ಧಿಮಾಕುಗಳು ಹೆದರಿಸಿ ತಣ್ಣಗೆ ಮಾಡಿದಾಗಲೆಲ್ಲ. ಆಕೆ ನನ್ನೆಡಗೆ ಧಾವಿಸಿ ದಾರಿ ತೋರುತ್ತಿದ್ದಳು. ರಾಡಿಯಾದ ಮನ:ಸ್ಥಿತಿಯನ್ನು ಮೆಲ್ಲನೆ ಅಲ್ಲಾಡಿಸಿ ಗೆಲವು ಸಿಂಪಡಿಸುವ ಅವಳ ಕೈ ಚಳಕಕ್ಕೆ ಬೆಂಗಾಗಿದ್ದೆನೆ.ಹಠಾತ್ತನೆ ಬಂದೆರಗುವ ಹಣದ ಸಮಸ್ಯೆಗೆ ಕಾಮಸರ್್ ಹೆಳಿಕೊಟ್ಟವಳು. ಭಿಷ್ಯವನ್ನು ಭರವಸೆಯ ಮುಷ್ಠಿಯಲ್ಲಿ ಹಿಡಿದಿಟ್ಟುಕೊಳ್ಳುವಂತೆ ಮಾಡಿದ ಅವಳ ಪಾತ್ರ ದೊಡ್ಡದು. ಕಷ್ಟ ಕಳೆದು ಸುಖದೆಡೆಗೆ, ನೈಜದೆಡೆಗೆ ಕೈ ಹಿಡಿದು ನಡೆಸಿದವಳೂ ಅವಳೆ. ಯಾವುದೇ ಭೇದವೆಣಿಸದೆ ಮಕ್ಕಳಂತೆ ನನ್ನ ಜೊತೆ ಆಟವಾಡಿದೆ, ಕಥೆ ಹೇಳಿದೆ, ನಗಿಸಿದೆ, ಉಟ ಮಾಡಿಸಿದೆ, ಸ್ವಂತಿಕಿ ಹೇಳಿದೆ, ಅತ್ತೆ. ಇವೆಲ್ಲವೂ ಅವಳ ಯಾವ ಅಂತರಂಗದ ದಿವಿನಾದವೋ ನನಗಿವತ್ತಿಗೂ ತಿಳಿದಿಲ್ಲಾ. ಕನ್ನಡಿ ದೊಡ್ಡದಿರಲಿ, ಸಣ್ಣದಿರಲಿ ಅದರಲ್ಲಿ ಮೂಡುವ ಪ್ರತಿಬಿಂಬ ಮಾತ್ರ ಮೂಲ ಪರಿಚಯವನ್ನೆ ಸಮನಾಗಿ ಮಾಡಿಕೊಂಡಿದೆ. ಕಾಣಲು ಅಪರೊಪವಾದ ಇಂತಹ ಗುಣ ಆಕೆಯ ಹುಟ್ಟುಗುಣವಾಗಿರಬೇಕು. ನನ್ನ ಜೋತೆಗಿದ್ದಷ್ಟು ದಿನ ಬತ್ತದ ಜೀವನೋತ್ಸಾಹ, ಹಿತ ಕೆಡದೆ ರೀತಿ, ಸಾಹಸಕ್ಕಿಳಿಯುವ ಮನಸ್ಸು, ದಿನ ನಿತ್ಯದ ಶ್ರಮವನ್ನು ಸರಾಗವಾಗಿ ನಿಭಾಯಿಸುತ್ತಾ, ಸಿಟ್ಟು-ಸೆಡವುಗಳಿಲ್ಲದೆ, ನಮ್ಮ ದುಡುಕು-ದುಮ್ಮಾನಗಳನ್ನು ಶಾಂತವಾಗಿ ಪರಿಗ್ರಹಿಸುತ್ತಿದ್ದದ್ದು ಅವಳ ದೊಡ್ಡಸ್ತಿಕೆಯೇ ಸರಿ. ರಸ್ತೆಯೇ ಮನೆಯಂದು ನೌಕರಿಗಾಗಿ ಅಲಿಯುತ್ತಿದ್ದ ನನ್ನನ್ನು ಅವಳ ಮನೆಗೆ ಕರೆ ತಂದು ಸಾಕಿ ಪೊಷಿಸಿದ ಪುಟ್ಟ ಹೆಗ್ಗಡತಿ ಆಕೆ.

ಹಾಗಾದರೆ ಆಕೆಗೆ ನೋವೆಂಬುದು ಇರಲಿಲ್ಲವೆ? ಎಂದು ಕೇಳಿದರೆ ಖಂಡಿತ ಇತ್ತು ಸುಮ್ಮನೆ ನನಗೆ ಕಾಣಿಸದಂತೆ ಮರೆ ಮಾಚುದ್ದಿದ್ದಳು. ಅವಳ ನಗು, ಅದಮ್ಯ ಉತ್ಸಾಹಗಳಿಂದ ತನ್ನ ಒಳಗಿನ ನೋವು ತೊರ್ಪಡಿಸದೆ ಇದ್ದು ಬಿಡುತ್ತಿದ್ದಳು ಆ ಪುಣ್ಯವತಿ. ಒಳಗೆ ನೋವು ಹೆಪ್ಪುಗಟ್ಟಿದರು ಹೊರಗೆ ನಗು! ನಾನು ಬಹಿರಂಗವಾಗಿ ಯಶಸ್ಸನ್ನೆ ಶ್ರೇಷ್ಟತೆಯಂದು ಗುರುತಿಸಿದ್ದೆನೆ, ದುಡ್ಡು, ಮನೆ, ಒಡವೆ, ವಸ್ತ್ರ, ಆಳು-ಕಾಳುಗಳ ತಿರುಗುಣಿಯನ್ನು ಮೆಟ್ಟಿ ನಿಂತು ಅಂತರಂಗದ ಯಶಸ್ಸಿನೆಡೆಗೆ ಸಾಗುವ ದಾರಿಗೆ ಕೈಮರವಾದಳು. ಸ್ವಾಭಿಮಾನಿಯನ್ನಾಗಿಸಿ, ಸ್ವಂತದ ಬದುರು ಕಟ್ಟಿಕಪಳ್ಳಲು ಆಕೆ ಚಿಮ್ಮು ಹಲಗೆಯಾದಳು. ಜೀವನದ ಪಯಣದ ಎಲ್ಲಾ ಹಂತಗಳಲ್ಲಿ ನನ್ನ ನೋವು-ನಲಿವುಗಳಲ್ಲಿ, ಏಳು-ಬಿಳುಗಳಲ್ಲಿ, ಆಕೆಯ ಬೆಟ್ಟ್ದಷ್ಟು ಸಹ ಭಾಗಿತ್ವ ಇತ್ತು. ಆಕೆಯ ಕಣ್ಣಗಳಲ್ಲಿ ಸೋಲಿನ ಸವಾಲನ್ನು ಹಿಮ್ಮೆಟ್ಟಿಸುವ ಹೊಳಪೊಂದು ಬೆಳಗುವ ನಕ್ಷತ್ರದಂದೆ ಮಿನುಗುತ್ತತ್ತು. ಆಕೆ ಹೇಳುತ್ತಿದ್ದ ಮಾತು, ತುಂಬುಧೈರ್ಯದ ಮಾತುಗಳು ಕಲ್ಲಲ್ಲಿ ಕೆತ್ತಿದ ಶೀಲೆಯಂತೆ ನನ್ನಲ್ಲಿ ಇನ್ನೂ ಉಳಿದು ಬಿಟ್ಟಿದೆ. ಅದು ಮಾಣಿ, ನೀನು ದೊಡ್ಡಂವ ಅನ್ನಸಿಕೊಂಡರೆ ಸಾಳದು, ದೊಡ್ಡತನವನ್ನು ನಿಜವಾಗಿಯೂ ನಿನ್ನಲ್ಲಿ ಬೆಳೆಸಿಕೊಳ್ಳಬೇಕು, ಎನ್ನುವ ಮಾತು ಇಂದಿಗೂ ನನ್ನ ಮನಸ್ಸಲ್ಲಿಆಚ್ಚೊತ್ತಿದೆ.
ಅಂತಾ ಮಮತಾಯಿಮಯಿ ಗೆಳತಿಯ ಬಗ್ಗೆ ಹೇಳುತ್ತಾ ಹೋದರೆ ಮಾತಿಗೆ ಕೊನೆ ಎಂಬುದು ಸಾಲದು. ನೆನಪು ಒಮ್ಮೆ ಸುರುಳಿ ಬಿಚ್ಚಿ ಕೊಳ್ಳತೂಡಗಿದರೆ ಕೊನೆಯ ಹಂತ ಮುಟ್ಟುವವರೆಗೂ ನಿಲ್ಲುವುದಿಲ್ಲ. ಸಾಗರದ ಅಲೆಯಂತೆ ಪುಟಿದೇಳತ್ತಲೇ ಇರತ್ತದೆ. ಅವಳೂಂದು ನನ್ನ ಪಾಲಿಗೆ ಪ್ರೀತಿ. ಅದು ಬತ್ತದ ಸಮುದ್ರ ಕಿನಾರೆಯ ಮರಳು ತಂಪು; ನೆನಪು ಮಾಡಿಕೊಂಡಷ್ಟು ಸಂತೋಷ ನೀಡುತ್ತಿದೆ. ಆ ಪುಣ್ಯವತಿ ಇಂದು ನನ್ಣ ಜೊತೆಯಲ್ಲಿಲ್ಲ. ಆದರೆ ಆಕೆಯ ಮಾತು, ಬದುಕು, ತೋರಿದ ವಾತ್ಸಲ್ಯ, ಕರುಣೆಗಳನ್ನು ನಾನು ಕೊನೆ ಉಸಿರು ಇರುವವರೆಗೂ ಮರೆಯುವಂತಿಲ್ಲಾ ಆಕೆ ನನ್ನ ನರನಾಡಿಯಲ್ಲಿ ನಿರಂತರವಾಗಿ ತುಂಬಿ ಹರಿಯುತ್ತಲೇ ಇರುವ ಪಾವನ ಗಂಗೆ. ಒಬ್ಬನೆ ಕುಳಿತಾಗ ಆಗಾಗ ನೆನಪಿನಾಳದಿಂದ ಹೊರಬಂದು ಮನದೊಳಕ್ಕೆ ಜಾರುತ್ತಿದ್ದಂತೆ, ಎಂಥದೋ ಆದ್ರ್ರ ದ್ರವ ಅರಿವಿಲ್ಲದಂತೆ ಕೆನ್ನೆ ಮೇಲೆ ಜೀನುಗುತ್ತದೆ.
 

‍ಲೇಖಕರು G

10 December, 2014

2 Comments

  1. hema

    very nice sir…

    • Anonymous

      than Q.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading