ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳು ಎದ್ದಿದ್ದಳೋ ಏನೋ..

ಸುಷ್ಮಾ ರಾವ್ 

ಅವಳು ಎದ್ದಿದ್ದಳೋ ಏನೋ
ಅವನು ಬಿಟ್ಟು ನಡೆದ ಹೊತ್ತು
ಹೊರಟಾಗ ಕದ್ದು ನಿದ್ರಿಸಿದ್ದಳೋ ಏನೋ
ಅವನು ಎದ್ದು ಹೋಗಲೆಂದು
ಅವನು ಹೋದಾಗ ನಿಟ್ಟುಸಿರಿಟ್ಟಳೋ ಏನೋ
ಕಳೆದ ಗರತಿಯ ಸ್ಥಾನವ ನೆಂದು
ಜ್ಞಾನೋದಯವಾದಾಗ ನಕ್ಕಿದ್ದಳೇನೋ
ತನಗಂದೇ ಗೊತ್ತಿತ್ತೆಂದು
ಭಿಕ್ಷುವಾಗಿ ಎದುರು ನಿಂತಾಗ ಕನಿಕರವಿತ್ತೇನೋ
ಮತ್ತೆ ನನ್ನಲ್ಲಿಯೇ ಮುಡಿಯೊಡ್ಡಿದನೆಂದು
ಅವನು ‘ಬುದ್ಧ’ ನಾದಾಗ ಮುಗುಳ್ನಕ್ಕಿದ್ದಳೇನೋ
ಗಂಡಸಿಗೆ ಬೋಧಿ ವೃಕ್ಷವೇ ಬೇಕು
ಹೆಣ್ಣಿಗೆ …. ಹೆಣ್ಣಾಗಿ ಹುಟ್ಟಿದರೇ ಸಾಕು….
ಯಶೋಧರೆ ಮಲಗಿರಲ್ಲಿಲ್ಲವೇನೋ…. ಬುದ್ಧ ನಡೆದ ಹೊತ್ತು…..!

‍ಲೇಖಕರು avadhi

6 May, 2018

4 Comments

  1. Malati mudakavi

    ಸುಂದರವಾದ ಹೃದಯ ಸ್ಪರ್ಶಿ ಕವನ

  2. Suma

    Just toooooo good, what a brilliance, keep writing!

    hentanakkondu gaurava baruvudu nimmantha hennugalinda….nimma barahagalinda…

  3. SUDHA SHIVARAMA HEGDE

    ತುಂಬಾ ಚೆನ್ನಾಗಿದೆ

  4. ಭಾರತಿ ಬಿ ವಿ

    ತುಂಬ ಇಷ್ಟವಾಯ್ತು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading