ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳು ಅವರಿಸಿದಳು…

ಇದು ಮುಗ್ದ ಪ್ರೇಮಿಯ ಮನದ ಮಾತು…

ರಾಸುಮ ಭಟ್

“ಇಪ್ ಐ ಸಾ ಯು, ಐ ಪ್ಲೈ ಇನ್ ಸೈ.  

ಇಪ್ ಇಟ್ಸ್ ನಾಟ್, ಲೈಪ್ ಇಸ್ ವೈ”.

ಅವಳ ಹೆಸರು‌ “ರೈನಬೋ” ಹೆಸರು ಗೊತ್ತಿಲ್ಲದ ಕಾರಣ.

ಇದರ ಅರ್ಥ “ಅವಳನ್ನು ಕಂಡರೆ ಆಕಾಶದಲ್ಲಿ ಹಾರಾಡುವ ಅನುಭವವಾಗುತ್ತದೆ, ಅವಳನ್ನು ಕಾಣದೆ ಹೋದರೆ ಜೀವನವೆ ನಶ್ವರದಂತೆ” ಅವಳನ್ನು ಕಂಡ ಮೊದಲ ಕ್ಷಣ ನನ್ನ ಮನದಲ್ಲಿ ಉದ್ಘರಿಸಿದ ಮನಸಿನ ಮಾತು. ನೀಳಕಾಯದ, ಅವಳು ನಕ್ಕರೆ ಆಗಸದಲ್ಲಿ ಕಾಮನಬಿಲ್ಲು ಮೂಡಿದಂತೆ, ಅವಳು ನಿಶ್ದವಾಗಿದ್ದರೆ ನನ್ನ ಮನದಲ್ಲಿ ಕಡಲು ಭೂಮಿಯನ್ನು ಕೊರೆದಂತ ನೋವು ನನಗಾಗುತ್ತದೆ.

ಮೊಘಲ್ ದೊರೆ ಪಹಜಹಾನ್ ತನ್ನ ಕೊನೆಯ ಕಾಲದಲ್ಲಿ ಮಗ ಔರಂಗಜೇಬನಿಂದ ಕಾರಗೃಹದಲ್ಲಿ ಬಂಧಿಸಲ್ಪಟ್ಟಾಗ, ಮಗನ ಬಳಿ ತಾನು ಕುಳಿತರು, ನಿಂತರು, ಮಲಗಿದರು ತಾಜ್ ಮಹಲ್ ನೋಡುವ ಹಾಗೆ ವ್ಯವಸ್ಥೆ ಮಾಡಬೇಕೆಂದು ಕೇಳಿಕೊಳ್ಳುತ್ತಾನೆ. ತನ್ನ ಜೀವನದ ಸಂಧ್ಯಾ ಸಮಯದಲ್ಲು ಸಹ ತನ್ನನ್ನು ಅಗಲಿದ ಮಮ್ ತ್ತಾಜ್ ಮಹಲ್ ಳನ್ನು ನೆನಪಿಸಿಕೊಳ್ಳವ, ಪಹಜಹಾನ್ ನ ಪ್ರೀತಿಗೆ ಒಂದು ಸಲಾಂ‌.

ಪಹಜಹಾನ್ ಗೆ ಇಳಿಯ ವಯಸ್ಸಿನಲ್ಲಿ ಮಮತ್ತಾಜ್ ಮಹಳು ಕಾಡಿದಂತೆ , ನನ್ನ ಹೆಸರು ಗೊತ್ತಿಲ್ಲದ “ಕಾಮನಬಿಲ್ಲು” ನನ್ನನ್ನು ಪ್ರತಿಕ್ಷಣ ನನ್ನ ಯೌವನದಲ್ಲಿ ಕಾಡುತ್ತಿರುತ್ತಾಳೆ. ಅವಳ ಒಂದು ನೋಟಕ್ಕೆ, ಕ್ರಿಕೆಟ್ ನಲ್ಲಿ ಯಾರ್ಕರ್ ಎಸತಕ್ಕೆ ಬೌಲ್ಡ್ ಅಗುವಂತೆ ನಾನು ಅವಳ ಕುಡಿ ನೋಟಕ್ಕೆ ಕ್ಲೀನ್ ಬೌಲ್ಡ್ ಆಗಿರುವೆ.

ಈ ನನ್ನ ಪ್ರೀತಿಯಲ್ಲಿ ಶುದ್ದವಾದ ಮನದ ಭಾವನೆಗಳಿಗೆ ಮಾತ್ರ ಅವಕಾಶ , ಬೇರೆ ಬಾವನೆಗಳು ಇಲ್ಲಿ ನಿಷಿದ್ಧ. ಬ್ರಾಹ್ಮಣರಲ್ಲಿ ದಿನಕ್ಕೆ ಮೂರು ಬಾರಿ ಸಂಧ್ಯಾವಂದನೆ ಮಾಡುವ ಪದ್ದತಿಯಿದೆ ಅದು ಅವಳನ್ನು ನೋಡಿದರೆ ಅದು‌ ಪ್ರಾತ ಸಂಧ್ಯಾವಂದನೆ, ಅವಳು ಮುಗುಳ್ಳು ನಕ್ಕರೆ ಅದು ಮಾದ್ಯಾಹ್ನಿಕ ಸಂದ್ಯಾವಂದನೆ, ಅವಳು ಮಾತನಾಡಿದರೆ ಸಂಜೆಯ ತಂಗಾಳಿಯ ಸಾಯಂ ಸಂಧ್ಯಾವಂದನೆಯಿದ್ದಂತೆ.

ಅವಳನ್ನು ನೆನೆದರೆ ಅದು ಗಾಯತ್ರಿ ಮಂತ್ರದಂತೆ, ಅವಳನ್ನು ಜೀವನ ಸಂಗಾತಿ ಮಾಡಿಕೊಳ್ಳುವ ಬಯಕೆ ಸಂಕಲ್ಪವಿದಂತೆ. ಅವಳ ಧ್ಹಾನವೆ ಬೆಳಗಿನ ಸುಪ್ರಭಾತದಂತೆ , ಅವಳನ್ನು ಸ್ಮರಿಸುವುದೆ ವಿಷ್ಣು, ಲಲಿತ ಸಹಸ್ರಮಾನದಂತೆ ,ಅವಳನ್ನು ನೆನೆಯುತ್ತಾ ಮಾಡುವ ಸಾನ್ನ ಅಭಿಷೇಕದಂತೆ. ಅವಳ ಸುತ್ತಾ ಸುತ್ತುವುದೆ ದೇವರ ಮಂಗಳಾರತಿಯಂತೆ , ಅವಳಲ್ಲಿ ವ್ಯಕ್ತ ಪಡಿಸುವ ನನ್ನ ಪ್ರೀತಿ ಪ್ರವರದಂತೆ..

ಅವಳ‌ ವಿಳಾಸ, ಹೆಸರು, ದೂರವಾಣಿಯಿಲ್ಲದ ನನಗೆ, ಎಸ್ .ಎಂ.ಎಸ್, ವಾಯ್ಸ್ ಚಾಟ್, ವಿಡಿಯೋ ಕಾಲಿಂಗ್, ಇ – ಮೇಲ್  ಕಳುಹಿಸಲು ಸಾಧ್ಯವಿಲ್ಲದ ಕಾರಣ ಮತ್ತು ಹಿಂದಿನ ಸಮಯದಲ್ಲಿ ಪಾರಿವಾಳವನ್ನು ಸಂದೇಶ ಕಳುಹಿಸಲು ಬಳಸಲಾಗುತ್ತಿತ್ತು, ಅದರೆ ಪ್ರಸ್ತುತ ಮಾನವ ಹಕ್ಕುಗಳು ಸಂಘ ಸಂಸ್ಥೆಗಳು ಇಂತಹ ಚಟುವಟಿಕೆಗಳಿಗೆ ಅಸ್ಪದ ನೀಡದ ಕಾರಣ ಮತ್ತು ಸ್ವತಃ ನಾನು ಮಾನವ ಹಕ್ಕುಗಳ ಕುರಿತಾಗಿ ಭೋದಿಸುವ ಕಾರಣ ಇದು ನನಗೆ ನಿಷಿದ್ದ.

ಅದ್ದರಿಂದ  ಕಾಳಿದಾಸನ “ಮೇಘಸಂದೇಶ” ದಲ್ಲಿ ಮೇಘಗಳ ಮೂಲಕ ಸಂದೇಶ ಕಳಿಹಿಸಬೇಕೆಂಬ ಬಯಕೆ ಅದರೆ ಇದು ಬೇಸಿಗೆಕಾಲ ಮೋಡಗಳ ಅಲಭ್ಯತೆ ನನ್ನನ್ನು ಕಾಡುತ್ತದೆ. ಎಲೆಗಳು ಉದುರಿ ಬೋಳಾದ ಮರಗಳು, ನೆರಳು ಸಿಗದೇ ಪರಿತಪ್ಪಿಸುವ  ಪ್ರಾಣಿ, ಪಕ್ಷಿಗಳು, ಮನುಷ್ಯರು ಹೇಗೆ ವಸಂತ ಕಾಲ ಬಂದೂಡನೆ ನಲಿಯುತ್ತಾರೋ ಹಾಗೆ ಅವಳ ಅಗಮನ ನನ್ನನ್ನು ನಲಿಯುವಂತೆ ಮಾಡುತ್ತದೆ.

ಕಸ್ತೂರಿ ಮೃಗ ಕಾಡಿನಲ್ಲಿ ಎಲ್ಲೆ ಹೋದರು ತನ್ನ ಪರಿಮಳವನ್ನು‌ ಬೀರಿ ತನ್ನ ಉಪಸ್ಥಿತಿಯನ್ನು ಖಚಿತ ಪಡಿಸುವಂತೆ, ನನ್ನ ರೈನಬೋ ಬಂದೊಡನೆ ವಿಚಿತ್ರ, ರೋಮಾಂಚಕ ಕಂಪನಗಳು ಉಂಟಾಗುತ್ತದೆ. ವಾತಾವರಣದಲ್ಲಿ ಎಷ್ಟೆ ಉಷ್ಣತೆಯಿದ್ದರು, ಅವಳು ಬಂದೊಡನೆ ತಂಪಾದ ಗಾಳಿ ಬೀಸುವಂತಹ ಅನುಭವಾಗುತ್ತದೆ. ತಂಪಾದ ಗಾಳಿ ಬೀಸಿದರೆ ಎಲ್ಲೊ ಮಳೆಯಾಗುವುದು ತಿಳಿದಂತೆ, ತಂಪಾದ ಗಾಳಿಯ ಬೀಸುವಿಕೆ ಅವಳ ಅಗಮನದ ಮುನ್ಸೂಚನೆ ನನಗೆ ದೊರೆಯುತ್ತದೆ. 

ಲಿಯೊನಾರ್ಡೊ ಡಾ ವಿಂಚಿ ಯುರೋಪಿನ ಪುನರುಜ್ಜೀವನ ಕಾಲದ ಪ್ರಮುಖ ಚಿತ್ರಕಾರ ” ತನ್ನ ಮನೆಗೆ ದಿನವು ಬರುತ್ತಿದ್ದ ಮೊನಾಲಿಸಾ ಸೌಂದರ್ಯಕ್ಕೆ ಬೆರಗಾಗಿ ರಚಿಸಿದ ಮೊನಾಲಿಸಾಳ ಚಿತ್ರ ಇತಿಹಾಸದಲ್ಲಿ‌ ಮೊನಾಲಿಸಾ ಮತ್ತು ಲಿಯೊನಾರ್ಡೊ ಡ ವಿಂಚಿಯ ಹೆಸರು ಶಾಶ್ವತವಾಗಿ ದಾಖಲಾಯಿತು. ಇದೆ ಹಾದಿಯಲ್ಲಿ ಅವಳ ಚಿತ್ರವನ್ನು ಬಿಡಿಸಿ ನಾನು ಅವಳೊಂದಿಗೆ ಶಾಶ್ವತವಾಗಿ ಅನುರಕ್ತನಾಗುವ ಬಯಕೆ ಅದರೆ ಮನದಲ್ಲಿ ಅವಳ ಚಿತ್ರ ಬರಯುವ ನಾನು ಕುಂಚದಲ್ಲಿ ಬರಯುವಷ್ಟು ಕಲಾವಿದನಲ್ಲ.

ಮಹಾಭಾರತದಲ್ಲಿ ಬರುವ ಅರ್ಜುನ ಮತ್ತು ಸುಭದ್ರಾ ಪ್ರೀತಿಯಲ್ಲಿ  ಬಲರಾಮ ತನ್ಮ ತಂಗಿಯಾದ ಸುಭದ್ರೆಯನ್ನು ದುರ್ಯೋಧನನಿಗೆ ಕೊಟ್ಟು ವಿವಾಹ ಮಾಡಲು ಸಿದ್ದತೆ ಕೈಗೊಂಡಿರುತ್ತಾರೆ. ಅದರೆ ಶ್ರೀ ಕೃಷ್ಣ ನಿಗೆ ತನ್ನ ತಂಗಿಯಾದ ಸುಭದ್ರೆಯನ್ನು ಅರ್ಜುನನೊಂದಿಗೆ ವಿವಾಹ ಮಾಡುವ ಮನಸ್ಸಿರುತ್ತದೆ.

ಅರ್ಜನ‌ ಮತ್ತು ಸುಭದ್ರೆಯರ  ಪ್ರೇಮಕ್ಕೆ ಸಂಪೂರ್ಣ ಬೆಂಬಲ ನೀಡಿದ ಕೃಷ್ಣ, ತನ್ನ ಸೋದರ ಬಲರಾಮರನ ಇಚ್ಚೆಗೆ ವಿರುದ್ದವಾಗಿ ಮದುವೆ ಮಾಡಿಸುತ್ತಾನೆ. ನನಗು ಶ್ರೀ ಕೃಷ್ಣನಂತಹ ಗೆಳೆಯನಿದ್ದಿದರೆ ನನಗು ಮತ್ತು ನನ್ನ ರೈನಬೋ ನ ಪ್ರೀತಿಗೆ ಅನೆಬಲ ಸಿಕ್ಕಿದಂತಾಗುತ್ತಿತ್ತು. ಅದರೆ ಶ್ರೀ ಕೃಷ್ಣ ಪರಮಾತ್ಮನನ್ನು ಕಲಿಯುಗದಲ್ಲಿ ಹುಡುಕುವುದು ಸಾದ್ಯವೆ. ಶ್ರೀ ಕೃಷ್ಣನ‌ ಅಶಿರ್ವಾದ ಸಿಕ್ಕಬಹುದೆಂಬ ನಂಬಿಕೆ.

ನನ್ನ ಪ್ರೀತಿ ಸಲೀಂ – ಅರ್ನಾಕಲಿನ, ಪಾರ್ವತಿ – ದೇವದಾಸ್ ರಂತೆ ಭಗ್ನ ಪ್ರೇಮಿಗಳ ಸಾಲಿನಲ್ಲಿ ಸೇರದಿರಲಿ, ಸಲೀಂ ಮೊಘಲ್ ದೊರೆ ಅಕ್ಬರ್ ಚಕ್ರವರ್ತಿಯ ಮಗ ಸಲೀಂ ಜಹಾಂಗೀರ್ ಇವರ ಪೂರ್ಣ ಹೆಸರು, ಸಲೀಂ ಚಸ್ತಿ ಸಂತನಿಗೆ ಹರಕೆ ಹೊತ್ತ ನಂತರ ಜನಿಸಿದವನೆ ಈ ಸಲೀಂ ಜಹಾಂಗೀರ್. ಅರ್ನಾಕಲಿ ಮದ್ಯಮ  ವರ್ಗದ ಹೆಣ್ಣು ಸಲೀಂನನ್ನು ನೋಡಿದ ತಕ್ಷಣೆ ಇಬ್ಬರಲ್ಲು ಪ್ರೇಮಾಕುಂರವಾಯಿತು.ಅದರೆ ರಾಜ ಮತ್ತು‌ ಸೇವಕಿಯ ಪ್ರೀತಿಯನ್ನು ಅಂದಿನ ಸಮಾಜ‌ ಒಪ್ಪಲಿಲ್ಲ.

ಅದರೆ ಅಧುನಿಕ ಯುಗದಲ್ಲಿ ನನ್ನ‌‌ ಪ್ರೀತಿಯನ್ನು ರೈನಬೋ ಓಪ್ಪಿದರೆ ಸಾಕು. ಇನ್ನೂ ದೇವಾದಸ್ – ಪಾರ್ವತಿಯಂತೆ ವಿರಹವನ್ಮು‌ತಡೆಯಲು‌ ನನ್ನಿಂದ ಅಗದ ಕಾರಣ ಅವರ ಪ್ರೀತಿಯನ್ನು ಉದಾಹರಿಸಲಾರೆ. ಒಟ್ಟಿನಲ್ಲಿ ಪ್ರೀತಿಯೆಂಬ ಹೂಸ ಚಿಗುರು ಮನದಲ್ಲಿ ಮೂಡಿದ್ದು, ಪ್ರೇಮ ನೀವೆದನೆಯೆಂಬ ಬೀಜ ನೆಟ್ಟಿದ್ದು, ಅವಳು ಅಂದರೆ ನನ್ನ ರೈನಬೋ ಒಪ್ಪಿದರೆ ನಮ‌ ಪ್ರೀತಿ ದೊಡ್ಡ ಮರವಾಗಿ ನನ್ನ ಬಾಳಿಗೆ ನೆರಳಾಗುವ ಬಯಕೆ.

ಪ್ರೀತಿಯೆಂಬ ಕಾಗಧದ ಮೇಲೆ, ಪ್ರೇಮ ನೀವೆದನೆಯೆಂಬ ಪೆನಿನ್ನಲ್ಲಿ  ಅವಳ ಮನಸ್ಬೆಂಬ ಎಂದೂ ಮಾಸದ ಪುಸಕ್ತದಲ್ಲಿ ಒಂದು ಅಕ್ಷರದಂತೆ ಇರುವ ಹಂಬಲ.

ಈ ಲೇಖನವನ್ನು ಓದಿದ ಮೇಲೆ ನನ್ನ ರೈನಬೋ ನನ್ನನು ಒಪ್ಪುತ್ತಾಳೆಂಬ ಅಚಲ‌ ವಿಶ್ವಾಸ. ಇಂತಿ ನನ್ನ ಪ್ರೀತಿಯ ರೈನಬೋ. ಉತ್ತರಕ್ಕಾಗಿ ಕಾಯುತ್ತಿರುವ ಮುಗ್ದ ಪ್ರೇಮಿ.

‍ಲೇಖಕರು Admin

31 March, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading