-ಶೋಭಾ ದಿನೇಶ್
ಹೊರಗೆ ಸಂಜೆ ನಿಧಾನವಾಗಿ ಇಳಿಯುತ್ತಿದೆ..
ನಾ ಇಲ್ಲಿ ಕಾಣದ ರಾಗವನ್ನು ಧೇನಿಸುತ್ತಿದ್ದೇನೆ…
ಎಂದಿನಂತೆ ಅವನು ಎದೆಗಿಳಿಯುತ್ತಿದ್ದಾನೆ,
ಸಣ್ಣ ಹನಿಯೊಂದು ಒರತೆಯಾಗಿ, ನದಿಯಾಗಿ ಹರಿದಂತೆ…
ದನಿ ಗಂಧಗಳನ್ನು ಗಾಳಿಯಲ್ಲಿ ಇಷ್ಡಿಷ್ಟೇ ಸವರುತ್ತಿದ್ದಾನೆ..
ಜೀವದಲ್ಲೀಗ ಸಣ್ಣ ಬದಲಾವಣೆ..
ದಟ್ಟವಾಗಿಯೂ..ದೀರ್ಘವಾಗಿಯೂ ಪ್ರೇಮಿಸುವುದು ಹೇಗೆಂದು ಕಲಿಸಿದ್ದಾನೆ..
ಹಾಗಾಗಿ ಇಳಿ ಸಂಜೆಗಳು ತುಂಬು ಭರ್ತಿ…
ಪ್ರೀತಿಯ ಓಘ ಎಲ್ಲಿಂದಲೋ ಶುರುವಾಗಿ ಮತ್ತೆಲ್ಲಿಗೋ ಮುಟ್ಟುತ್ತಿದೆ…
ಅದುಮಿಟ್ಟಿದ್ದ ಒಲವು ಹೊರ ದಾರಿಯನ್ನು ಹುಡುಕುವಂತೆ…
ಅವನಿರುವ ಈ ಶಹರಿಗೆ ಅದೆಷ್ಟು ಬಣ್ಣ…






0 Comments