ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ recommends..

ಪೀಪ್ಲಿ (ಲೈವ್) ಸಿನೆಮಾ ನೋಡಿದೆ. ತುಂಬ ಪರಿಣಾಮಕಾರಿಯಾಗಿದೆ. ರೈತರ ಆತ್ಮಹತ್ಯೆಯನ್ನು ಕೇಂದ್ರವಾಗಿಟ್ಟುಕೊಂಡು ತೆಗೆದ ಚಿತ್ರವಿದು. ರೈತ ಸಮಸ್ಯೆಗೆ ಸಮಾಜ, ಮುಖ್ಯವಾಗಿ ರಾಜಕಾರಣಿಗಳು, ಆಡಳಿತ ವ್ಯವಸ್ಥೆ ಹಾಗೂ ಮಾಧ್ಯಮ ರಂಗ ಹೇಗೆ ಸ್ಪಂದಿಸುತ್ತಿವೆ ಎಂಬುದನ್ನು ತಾಜಾ ಎಂಬಂತೆ ಚಿತ್ರಿಸಿದ್ದಾರೆ. ನಿರ್ದೇಶಕ ಅನೂಷ ರಿಜ್ವಿ. ನಿರ್ಮಾಣ: ಆಮೀರ್ ಖಾನ್. ಥಿಯೇಟರ್ ಗಳಲ್ಲಿ ಈ ಚಿತ್ರ ತುಂಬ ದಿನ ಓಡಲಾರದು ಅಂತನ್ನಿಸುತ್ತದೆ. ಆದ್ದರಿಂದ ಬೇಗನೇ ನೋಡಿ. (ದೆಹಲಿಯಲ್ಲಿ ಚಿತ್ರ ಬಿಡುಗಡೆಯಾದ ಎರಡನೇ ದಿನವೇ ನಾನು ನೋಡಿದೆ. ಥಿಯೇಟರ್ ನಲ್ಲಿ ೩೦ಕ್ಕಿಂತ ಕಡಿಮೆ ಜನರಿದ್ದರು.) ನಿಮ್ಮ ಮಿತ್ರರಿಗೂ ಈ ಸಿನೆಮಾದ ಬಗ್ಗೆ ಹೇಳಿ, ನೋಡುವಂತೆ ಪ್ರೇರೇಪಿಸಿ. -ಶಿವರಾಮ ಪೈಲೂರು ]]>

‍ಲೇಖಕರು avadhi

15 August, 2010

1 Comment

  1. ksraghavendranavada

    ಇದೇ ವಿಪರ್ಯಾಸ ಅನ್ನೋದು!. ಪೀಪ್ಲಿ ಉತ್ತಮ ಚಿತ್ರವೆ೦ದು ಎಲ್ಲರೂ ಹೊಗಳುತ್ತಿದ್ದರೂ ಅದರಲ್ಲಿ ತೋರಿಸಲಾಗಿರುವ ವಿದರ್ಭ ಪ್ರದೇಶದ ರೈತರ ಆತ್ಮಹತ್ಯೆಯ ಸನ್ನಿವೇಶಗಳಿಗೆ ನೀಡಲಾಗಿರುವ ಕಾರಣಗಳು ಪೂರಕವಾಗಿಲ್ಲವೆ೦ಬ ಅಸಮಾಧಾನದಿ೦ದ ವಿದರ್ಭದಲ್ಲಿ ಆಚಿತ್ರವನ್ನು ನಿಷೇದಿಸಲಾಗುತ್ತಿದೆಯ೦ತೆ! ಹೇಗಿದೆ ನೋಡಿ ನೈಜವನ್ನೇ ತೋರಿಸಿದರೂ ಎದುರಿಸುವ ಸಮಸ್ಯೆಗಳ ಪರಿ!
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading