ಮಗಳು ಅಮೇಯಗೆ ಈಗ ಎರಡು ವರ್ಷ ಆಯಿತು. ಅವಳು ಹುಟ್ಟಿದಾಗ , ಮೈಸೂರಿಗೆ ಅಮ್ಮನ ಮನೆಗೆ ಬಾಣಂತನಕ್ಕೆ ಹೋಗಿದ್ದೆ. ಅವಳ ಜೊತೆಗೆ ಹುಟ್ಟಿದ್ದು ನನ್ನ ಕನ್ನಡದಲ್ಲಿ ಗ್ರೀಟಿಂಗ್ ಕಾರ್ಡ್ ಕೂಸು. ಅಮೇಯಳಿಗೂ, ಕನಸಿನ ಕೂಸಿಗೂ, ಕೆಲವೇ ದಿನಗಳ ಅಂತರ. ಸಮಾನ ವಯಸಿನವರು ಅನ್ನಬಹುದು. ಆಗ maternity leave ನಲ್ಲಿದ್ದ ಕಾರಣ, ಬರವಣಿಗೆ ನಿಂತು ಹೋಗಿತ್ತು. ಮನಸ್ಸು ಬರೆಯುವುದಕ್ಕೆ ಹಂಬಲಿಸುತ್ತಿತ್ತು. ಆಗಲೇ ಈ ಕೂಸು ಹುಟ್ಟಿತು. ಕನ್ನಡ ಗ್ರೀಟಿಂಗ್ ಕಾರ್ಡ್ ಬಿಸಿನೆಸ್ ಅಲ್ಲ ಮತ್ತೆ ಯಾವುದೇ ಬಿಸಿನೆಸ್ ಮಾಡುವ ಕಲೆ ನನಗೆ ರಕ್ತದಿಂದ ಬಂದಿಲ್ಲ ಇದರ ಅ ಆ ಇ ಈ ಕೂಡ ಗೊತ್ತಿಲ್ಲ. ಆದರೆ ಕನಸು ಕಾಣಲು ಏನು, ಬಂಡವಾಳ ಬೇಕಿಲ್ಲ.
ಆದರೆ ರಜೆ ಮುಗಿದ ಬಳಿಕ, ವಾಪಸ್ ಆಫಿಸಿಗೆ ಬಂದಾಗ, ಅದರ ಜಂಜಾಟದಲ್ಲಿ ಕನಸ್ಸು ಕನವರಿಕೆ ಕೊಂಚ ಕಡಿಮೆ ಆಗಿದ್ದು ನಿಜ. ಆದರೆ ಮನಸಿನ ಮೂಲೆಯಲ್ಲಿ ಅದರ ಕೊರಗು ಇದ್ದೆ ಇತ್ತು. ಅದೊಂದು ದಿನ, gmail chat ನಲ್ಲಿ ಗೆಳತಿ ದೀಪ ಸಿಕ್ಕಿದಳು. ಅವಳು ನನ್ನೊಂದಿಗೆ ಎಕ್ಸ್ಪ್ರೆಸ್ ನಲ್ಲಿ ಸಹೋದ್ಯೋಗಿ ಕೂಡ ಆಗಿದ್ದವಳು ಮಾತಿಗೆ ಮಾತು ಬಂತು, ಕನಸಿನ ಬಗ್ಗೆ ಹೇಳಿದೆ ಅವಳಿಗೂ ತುಂಬಾ ಇಷ್ಟವಾಯಿತು.
ಅವತ್ತು ಭಾರತ್ ಬಂದ್ ಇತ್ತು. ಇಬ್ಬರ ಉತ್ಸಾಹ ಎಷ್ಟಿತ್ತೆಂದರೆ, ಸಂಜೆ ಹೊತ್ತಿಗೆ ಆಟೋ ಸಂಚಾರ ಆಗುತ್ತಿದ್ದಂತೆ, ದೀಪ ನನ್ನ ಕಚೇರಿ ಬಳಿ ಬಂದೆ ಬಿಟ್ಟಳು. ಹತ್ತಿರದ ಕಾಫಿ ಡೇ ಹೋಗಿ, ಸುಮಾರು ಹೊತ್ತು ಮಾತನಾಡಿ ಕೆಲವು ರೂಪ ರೇಷೆ ಹಾಕಿಕೊಂಡೆವು. ಸರಿ, ಅದಕೊಂದು ಹೆಸರಿರಬೇಕಲ್ಲ. ಆಗ ತಾನೇ “ಸುವರ್ಣ” ಸೌಧ ಉದ್ಘಾಟನೆಯಾಗುವುದರಲ್ಲಿತ್ತು. ಆದರೆ ನನಗೆ ದೀಪ ಇಬ್ಬರಿಗೂ ಬೆಳ್ಳಿ ಮೋಹ ! ಅಲ್ಲೇ ಸುರುವಾಗಿದ್ದು “ಬೆಳ್ಳಿಮನೆ ” ಕಟ್ಟುವ ಹಂಬಲ.

ನಮ್ಮ ಭೇಟಿ ಬಳಿಕ, ದೀಪ ನಾಗಾಲ್ಯಾಂಡ್ಗೆ ಹೋಗುವಳಿದ್ದಳು, ಅಲ್ಲಿ ಹೋದರು ಅವಳ ಮನಸ್ಸು ಇಲ್ಲೇ ಇತ್ತು. ಆಗೊಮ್ಮೆ ಈಗೊಮ್ಮೆ ಸಿಗುವ ಮೊಬೈಲ್ ಸಿಗ್ನಲ್ನಲ್ಲಿ ಅವಳ ಹಾಗು ನನ್ನ messages ರವಾನೆ ಯಾಗುತ್ತಿತ್ತು. ಅವಳು ಒಂದು ವಾರದ ನಂತರ ಬಂದಳು. ಆಗಿನ್ನೂ ಕನ್ನಡ ರಾಜ್ಯೋತ್ಸವಕ್ಕೆ ಇನ್ನೇನು ಕೆಲವೇ ದಿನಗಳಿದ್ದವು ಅಂದೇ ಯಾಕೆ ಕಾರ್ಡ್ ಬಿಡುಗಡೆ ಮಾಡಬಾರದು ಅನ್ನಿಸಿತು. ಈ ನಡುವೆ ನಾನು ಕೆಲವು ಸಾಲುಗಳನ್ನು ಗಿಚಿದ್ದು ಆಯಿತು, ದೀಪಾ ತುಂಬಾ ಚೆನ್ನಾಗಿ ಫೋಟೋ ತೆಗಿತಾಳೆ. ಸರಿ, ಎರಡು ಸೇರಿಸಿ, ಕಾರ್ಡ್ ಡಿಸೈನ್ ಮಾಡಿಸುವುದು ಅಂತ ಆಯಿತು. ಸರಿ, sulthanpet , cottonpet ಅಂತೆಲ್ಲ ಅವೆನ್ಯೂ ರೋಡ್ ತುಂಬಾ ಓಡಾಡಿ, ವಿಚಾರಿಸಿ, ಕಾರ್ಡ್ಗೆ ಅಂಟಿಸುವ ಕೆಲವು ಪರಿಕಾರ ಕೊಂಡುಕೊಂಡೆವು. ಇಬ್ಬರಿಗೂ ಹಸಿವಿರಲಿಲ್ಲ, ನಾಲ್ಕು ಗಂಟೆಗೆ ಊಟ ಮಾಡಿದೆವು.
ಕಾರ್ಡ್, ಬುಕ್ಮಾರ್ಕ್ ಅಂತೆಲ್ಲ ಅನ್ಕೊಂಡು, ಪದ ಫೋಟೋ ಎಲ್ಲವನ್ನು ಸಿದ್ದ ಮಾಡಿಕೊಂಡು, ಡಿಸೈನರ್ ಒಬ್ಬರಿಗೆ ಕೊಟ್ಟೆವು. ಲೋಗೋ ಮಾಡಿಸಿಕೊಂಡೆವು. ದೀಪಾವಳಿ ಬಂತು, ರಾಜ್ಯೋತ್ಸವ ಕೂಡ ಇತ್ತು, ಅದಕ್ಕೆ ತಕ್ಕಂತೆ ಕಾರ್ಡ್ ಸಿದ್ದವಾಗಿತ್ತು. ಅಂದೆಲ್ಲ ನಮಗೆ ಆರ್ಡರ್ ಸಿಕ್ಕಿದ್ದು, ನನ್ನ ಗಂಡನಿಂದ, ನನ್ನ ಅಕ್ಕನಿಂದ ಹಾಗು ದೀಪಾಳ ಅಮ್ಮನಿಂದ !!
ಮೊದಲು ಬರಿ ಕಾರ್ಡ್ ಅನ್ಕೊಂಡಿದ್ದೆವು, ಈಗ ಮಾಡುವೆ ಮುಂಜಿ ನಾಮಕರಣ ಹುಟ್ಟಿದಹಬ್ಬ ಗೃಹಪ್ರವೇಶ ಮತ್ತು ಇನ್ನಿತರ ಶುಭ ಸಮಾರಂಬಕ್ಕೆ personalised cards ಪ್ರಾರಂಭ ಮಾಡಬೇಕು ಅಂತ ಸೇರಿಸಿದೆವು. ನಂತರ ಜನರಲ್ ಕಾರ್ಡ್ಸ್ ಕೂಡ. ಒಂದು software ಕಂಪನಿಯಿಂದ ಕನ್ನಡ ರಾಜ್ಯೋತ್ಸವಕ್ಕೆ ಟೀ ಶರ್ಟ್ ಆರ್ಡರ್ ಬಂತು, ಆದರೆ ಅನಿವಾರ್ಯ ಕಾರಣಗಳಿಂದ ಅದು ನಾವು ಮಾಡಲಾಗಲಿಲ್ಲ. ಹಾಗೆ ಕನ್ನಡದ ಹೊಸ ವರ್ಷ ಕ್ಯಾಲೆಂಡರ್ ಕೂಡ ಹಂಗೆ ಆಯಿತು. ನಾವು personalised wordings ಇರುವ ಪೋರ್ಸಲಿನ್ ಕಪ್ ಕೂಡ ಮಾಡುವ ಯೋಚನೆ ಇದೆ. ಜೊತೆಗೆ ಒಂದಿಷ್ಟು ಕನ್ನಡದ ಕಿ ಚೈನ್, fridge magnet , bag , ಹೀಗೆ ಕನ್ನಡ ಪದಗಳನ್ನು ಎಲ್ಲಿ ಸಿಂಗರಿಸಬಹುದು, ಅಲ್ಲೆಲ್ಲ ಬೆಳ್ಳಿಮನೆ ಕಟ್ಟಬೇಕೆಂದು ಕೊಂಡಿದ್ದೇವೆ.
ಮನೆ ಕಟ್ಟಿ ನೋಡು, ಮನೆ ಕಟ್ಟಿ ನೋಡು, ಮಹಾನಗರದಲ್ಲಿ ಒಂದು ಮನೆ ಕಟ್ಟಿ ನೋಡು ಅಂತ ಚಿತ್ರ ಗೀತೆ, ಇತ್ತೀಚಿಗೆ ಯಾವಾಗಲು ಗುನುಗುತ್ತಿರುತ್ತೇವೆ.
ಮೊನ್ನೆ ಯಾರೋ ನಮ್ಮ ಈ ಮನೆ ಬಗ್ಗೆ ಹೇ ಳುತ್ತಿದ್ದೆ, ಆಗ ಅವರು ಅದರ website ಲಿಂಕ್ ಕೊಡಿ ಅಂದ್ರು, ಆಗಲೇ ನನಗೆ ಅರಿವಾಗಿದ್ದು, ನಾವು ಸೈಟ್ ಇಲ್ಲ ಮನೆ ಕಟ್ಟುವ ಕೈ ಹಾಕಿದ್ದೇವೆ. ಆದರೆ ಒಂದು ಸಮಾಧಾನ ಅಂದರೆ ಫೇಸ್ಬುಕ್ ಪೇಜ್ ಇದೆ. ಈಗಾಗಲೇ ಹೆಚ್ಚು ಕಡಿಮೆ ೧೫೦ ಮಂದಿ ಇದ್ದಾರೆ ( https://www.facebook.com/BellimaneCreations). ಕೈಯಲ್ಲಿ ಕೆಲಸವಿದೆ, ಜೊತೆಗೆ ಸಮಾಧಾನ ತರುವಸಂಬಳವಿದೆ, ಆದರು ಮನೆಸೇಕೋ ಖಾಲಿ. ಬೆಳ್ಳಿಮನೆಯಿಂದ ಖಾಲಿ ಮನಸ್ಸು ತುಂಬಬೇಕು ಅನ್ಕೊಂಡಿದ್ದೇವೆ, ನೋಡಬೇಕು !!!
ಈ ಚಂದದ ಕಾರ್ಡುಗಳು, ಈ ಚಂದದ ಕನಸುಗಳು ನಿಮ್ಮ ಕೈನಲ್ಲಿರಬೇಕಾದರೆ ಸಂಪರ್ಕಿಸಿ-
bellimanecreations@gmail.com









ಮನಸ್ಸಿನ ಭಾವನೆಗಳಿಗೆ ದನಿ ತುಂಬಲು ಮತ್ತೊಂದು ಮನಸ್ಸನ್ನು ಸೆಳೆಯಲು ತಾಯ್ನುಡಿಗಿಂತ ಸೊಗಸಾದ ಬೇರೆ ದನಿ ತರಂಗವುಂಟೇ ?
ನಿಮ್ಮ ‘ಬೆಳ್ಳಿ ಮನೆ ಸೊಗಯಿಸಲಿ.
Dear Ashwini,
I had a look at this , quite interesting and keep up the good work . Belli Mane yavagalu belakininda belagali, adikke thane belli athi shresta , devara deepakke hacchuvudu belli deeepa , ide nimma belli maneya kichhagali, nimmella kanasu nanasagali.
Thank you
ಅಶು .. ನಿಮ್ಮ “ಬೆಳ್ಳಿ ಮನೆ ” ನಮ್ಮೆಲ್ಲರ ಮನೆ ಮನದಲ್ಲಿ ಬೆಳಗಲಿ … ನಿಮ್ಮ ‘ಸೃಜನಶೀಲತೆ’ ಎಂಬ ತೈಲ ಎರೆದು ‘ಯೋಚನೆ’ ಎಂಬ ಬತ್ತಿ ಹಚ್ಚಿ… ‘ಬೆಳ್ಳಿ ಮನೆ’ ಸದಾ ಬೆಳಗಲಿ !!
ಮುದ ನೀಡುವ ಕೆಲಸ.ಶುಭವಾಗಲಿ.
ನಿಮ್ಮ ಬೆಳ್ಳಿ ಮನೆ ಬಗ್ಗೆ ಹೆಚ್ಚಿಗೆ ತಿಳಿಯುವ ಕುತೂಹಲ ನನಗಿತ್ತು.. ಈಗ ಕಾಲ ಕೂಡಿ ಬಂತು ನೋಡಿ! ಉತ್ತಮ ಪ್ರಯತ್ನ.. ಶುಭವಾಗಲಿ 🙂
Thank you ladies 🙂
ಅದೆಷ್ಟು ಚೆನ್ನಾಗಿ ಮಾಡಿದ್ದೀರಿ …ಬೆಳ್ಳಿ ಮನೆಗೆ ನಾನೂ ಬರ್ತೀನಿ …ಅಭಿನಂದನೆಗಳು ,ನನ್ನ ಮಗಳು ಕಾರ್ಡ್ಸ್ ಮಾಡ್ತಾಳೆ ..ಅವಳ ಬ್ಲಾಗ್ ನೋಡಿ ..ನಿಮ್ಮ ಪೇಜ್ ಲಿಂಕ್ ಅವಳಿಗೆ ಕಳಿಸುತ್ತೇನೆ …Stamp with passion by Banumathy Honnavara ..
‘ಬೆಳ್ಳಿಮನೆ ‘ಕನಸುಗಳ ನಡುವೆ ಒಂದು ಮೌನ ಮೆರವಣಿಗೆ .ಹೌದು ಇಂತಹದೊಂದು ಸಾಲು ‘ಬೆಳ್ಳಿಮನೆ’ಕಟ್ಟಿದ ನನ್ನ ಗೆಳತಿಗೆ ಸಲ್ಲಬೇಕು .ಒಮ್ಮೆ ‘ಬೆಳ್ಳಿಮನೆ ‘ ಗೆ ಹೋಗಿ ಬರಬೇಕು ನೀವು , ಇಡೀ ದಿನ ಮನಸು ಸಂಭ್ರಮಿಸುತ್ತದೆ ರೆಕ್ಕೆಬಿಚ್ಚಿದ ನವಿಲಿನಂತೆ. ಕಳೆದು ಹೋದ ಬಾಲ್ಯ, ಎಂದೋ ಮರೆತ ನೆನಪು ,ಬೆಳಗಿನ ಜಾವದಲ್ಲಿ ಕಂಡ ಮದುರ ಕನಸು, ಇಳಿಸಂಜೆಯ ತಂಗಾಳಿ,ನದಿದಂಡೆಯ ಸೂರ್ಯಾಸ್ತ , ಬರಗಾಲದಲ್ಲಿ ಬಿದ್ದ ಮಳೆ , ಅವ್ವನ ಕೈತುತ್ತು ,ಪ್ರೇಯಸಿಯಿಂದ ಕದ್ದುಮುಚ್ಚಿ ಪಡೆದ ಮುತ್ತು ,ಮಗಳ ಕಾಲಿಗೆ ಧರಿಸಿದ ಬೆಳ್ಳಿಗೆಜ್ಜೆ ,ಇಷ್ಟಪಟ್ಟು ಕೇಳಿದ ಹಾಡು, ಹೀಗೆ ಎಲ್ಲವೂ ಒಮ್ಮೇಲೆ ಮನದ ಗೂಡಲ್ಲಿ ಬಂದು ನಿಮ್ಮನ್ನು ಕಾಡದೆ ಇರಲಾರವು.
ಮೊಟ್ಟಮೊದಲ ಬಾರಿಗೆ ಮುಖಪುಟದಲ್ಲಿ ‘ಬೆಳ್ಳಿಮನೆ ‘ಕಂಡಾಗ ನನ್ನ ಗೆಳತಿಯ ಹೊಸತನ ನೋಡಿ ಸಂಭ್ರಮಿಸಿದೆ.ದೀಪಾವಳಿ ಹಬ್ಬ ಮತ್ತು ಕನ್ನಡದ ಹಬ್ಬ ರಾಜ್ಯೊತ್ಸವ ದಿನದಂದು ‘ಬೆಳಗುತ್ತಿರುವ ದೀಪ’ದೊಂದಿಗೆ ಉದಯಿಸಿದ ಗೆಳತಿಯ ಬೆಳ್ಳಿಮನೆ ನನ್ನದೆಯಲ್ಲಿ ಕಾಮನಬಿಲ್ಲೊಂದನ್ನು ಹುಟ್ಟುಹಾಕಿದ್ದು ಸುಳ್ಳಲ್ಲ. ಆಧುನಿಕ ಬದುಕಿನ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿರುವ ಪುಟ್ಟ ಪುಟ್ಟ ಕನಸುಗಳನ್ನು ಭಾವುಕತೆಯ ಬಲೆಯಲ್ಲಿ ಹಿಡಿದುಕೊಟ್ಟಿದ್ದಾಳೆ.ಬನ್ನಿ ನಾವು ಕೈ ಜೋಡಿಸೋಣ ಅವಳ ಚಂದದ ಕನಸಿಗೆ ನಾಳೆಯ ನೆನಪಿಗೆ…ಕೈಜೋಡಿಸುತ್ತಿರಲ್ಲಾ…..?
Good Initiative…All the best!!
ಮೇಡಮ್, ನಿಮ್ಮ ಕನಸುಗಳು ಬೇಗನೆ ಈಡೇರಲಿ….ಭವಿಷ್ಯದ ಬೆಳ್ಳಿಮನೆಯ ಕುರಿತು ನಿಮ್ಮ ಉತ್ಸಾಹದ ವಿಚಾರಗಳು ಬಲು ಬೇಗನೆ ಆಪ್ತವೆನಿಸಿದವು. ನಿಮಗೆ ಶುಭವಾಗಲಿ. ಬೆಳ್ಳಿಮನೆಯ ಸುಂದರ ಕನಸುಗಳನ್ನು ಹೊತ್ತ ಮನಸುಗಳು ಬೆಳ್ಳನೆ ಹೊಳೆಯಲಿ ಎಂದು ಹಾರೈಸುತ್ತೇನೆ. ಶುಭವಾಗಲಿ !
that’s a great Initiative. good luck girls. liked the wordings on the last card (birthday) very much
regards:
🙂
malathi S