ಹನುಮಂತ ಅನಂತ ಪಾಟೀಲ
ನನ್ನ ಆಯ್ಕೆಯ ಹತ್ತು ಕನ್ನಡ ಪುಸ್ತಕಗಳು
1. ಮಲೆಗಳಲ್ಲಿ ಮದುಮಗಳು ( ಕುವೆಂಪು ) :-
ಇದು ಸ್ವಾತಂತ್ರ ಪೂರ್ವ ಕಾಲದ ಮಲೆನಾಡಿನ ಗ್ರಾಮೀಣ ಪರಿಸರದ ಸಾಮಾಜಿಕ ಬದುಕನ್ನು ಬಹಳ ಅರ್ಥಪೂರ್ಣವಾಗಿ ಬಿಂಬಿಸುವ ಸಮರ್ಥ ಬೃಹತ್ ಕಾದಂಬರಿ. ಇದು ಬರಿ ಕಾದಂಬರಿಯಲ್ಲ ಇದನ್ನು ಕಾವ್ಯ ಒಂದು ಕಾವ್ಯ ಕಾದಂಬರಿ ಎನ್ನಬಹುದು.
2. ಚಿಕ್ಕವೀರ ರಾಜೇಂದ್ರ ( ಮಾಸ್ತಿ ವೆಂಕಟೇಶ ಅಯ್ಯಂಗಾರ ) :-

ಇದು ಕೊಡಗಿನ ದೊರೆ ಚಿಕವೀರ ರಾಜೇಂದ್ರನ ಆಡಳಿತ ವೈಖರಿ ಮತ್ತು ಆತನ ಬದುಕಿನ ಅಧಃಪತನ ವನ್ನ ಮನಮಿಡಿವ ರೀತಿಯಲ್ಲಿ ನಿರೂಪಿಸಿದ ಕೃತಿ.
3. ಹುಚ್ಚು ಮನಸಿನ ಹತ್ತು ಮುಖಗಳು ( ಶಿವರಾಮ ಕಾರಂತ ) :-
ಇದು ಕಾರಂತರ ಆತ್ಮ ಚರಿತ್ರೆ, ಇದು ಅವರ ಸಾಹಿತ್ಯದ ಜೊತೆಗೆ ಅವರ ವೈಯಕ್ತಿಕ ಬದುಕಿನ ಕುರಿತು ಒಳನೋಟಗಳನ್ನು ಬೀರುವ ಕೃತಿ.
4. ಸಮರಸವೆ ಜೀವನ ( ವಿನಾಯಕ ಕೃಷ್ಣ ಗೋಕಾಕ ) :-
ಇದು ಉತ್ತರ ಕರ್ನಾಟಕದ ಸ್ವಾತಂತ್ರ ಪೂರ್ವ ಮತ್ತು ಸ್ವಾತಂತ್ರೋತ್ತರ ಕಾಲಘಟ್ಟದ ಒಂದು ಕುಟುಂಬದ ಮೂರು ತಲೆಮಾರುಗಳ ಕೌಟುಂಬಿಕ ಮತ್ತು ಸಾಮಾಜಿಕ ಬದುಕನ್ನು ಬಿಬಿಸುವ ಒಂದು ಬೃಹತ್ತ ಕಾದಂಬರಿ
5. ಗ್ರಾಮಾಯಣ ( ರಾವ ಬಹದ್ದೂರ ) :-
ಇದು ಸ್ವಾತಂತ್ರ್ಬಪೂರ್ವ ಕಾಲದ ಬ್ರಿಟೀಶರು ಗ್ರಾಮೀಣ ಆಡಳಿತಶಾಹಿಯ ದಬ್ಬಾಳಿಕೆಯನ್ನು ಅಲ್ಲಿನ ಜನಸಾಮಾನ್ಯರ ಸಂವೇದನಾಶೀಲ ಬದುಕನ್ನು ಸಮರ್ಥವಾಗಿ ಮನಮಿಡಿವ ರೀತಿಯಲ್ಲಿ ನಿರೂಪಿತಗೊಂಡ ಕಥಾನಕ
6. ಭಿತ್ತಿ( ಎಸ್.ಎಲ್.ಭೈರಪ್ಪ ) :-
ಇದು ಭೈರಪ್ಪನವರ ಆತ್ಮ ಚರಿತ್ರೆ. ಇದು ಕಡುಬಡತನದ ಜೀವನ, ಓದಿನೆಡೆಗಿನ ಅವರ ತುಡಿತ ಅವರು ತಮ್ಮ ಜೀವನವನ್ನು ರೂಪಿಸಿ ಕೊಳ್ಳುವಲ್ಲಿ ಪಟ್ಟ ಪಾಡು ಮತ್ತು ಯಾತನೆಗಳನ್ನು ಬಿಂಬಿಸುವ ಕೃತಿ.
7. ಸಂಸ್ಕಾರ ( ಯು.ಆರ್.ಅನಂತಮೂರ್ತಿ ) :-
ಇದು ಸ್ವಾತಂತ್ರ ಹೋರಾಟದ ಕಾಲಘಟ್ಟದ ಬ್ರಾಹ್ಮಣ ಸಮುದಾಯದ ಮೌಢ್ಯ ಮತ್ತು ಜಡ್ಡುಗಟ್ಟಿದ ಜಾತಿ ಪದ್ಧತಿಯ ಕೊಳಕುತನ ಮತ್ತು ಕೆಡಕುಗಳನ್ನು ಸಮರ್ಥವಾಗಿ ನಿರೂಪಿಸಿದ ಕೃತಿ.
8. ಹುಳಿ ಮಾವಿನ ಮರ ( ಪಿ.ಲಂಕೇಶ ) :-
ಇದೊಂದು ವಿಭಿನ್ನ ರೀತಿಯ ಆತ್ಮಚಿರಿತ್ರೆ, ಇದರಲ್ಲಿ ಲಂಕೇಶರು ತಮ್ಮ ಬದುಕಿನ ಕುರಿತು ಯಾವುದನ್ನೂ ಮುಚ್ಚಿಡದೆ ನಿರ್ಮಮಕಾರದಿಂದ ತಮ್ಮ ಆತ್ಮಸಾಕ್ಷಿಗನುಗುಣವಾಗಿ ಬರೆದ ಕೃತಿ.
9. ಹಳ್ಳ ಬಂತು ಹಳ್ಳ ( ಶ್ರೀನಿವಾಸ ವೈದ್ಯ ) :-
ಇದು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಪರಿಸರದಲ್ಲಿ ಸ್ವಾತಂತ್ರ ಪೂರ್ವ ಮತ್ತು ಸ್ವಾತಂತ್ರೋತ್ತರ ಕಾಲ ಘಟ್ಟದ ಸಂ|ಧರ್ಭದಲ್ಲಿ ಮೂರು ತಲೆಮಾರುಗಳ ಸಾಮಾಜಿಕ, ದಾರ್ಮಿಕ ಮತ್ತು ಸಾಂಸ್ಕೃತಿಕ ಬದಲಾಗುವ ಕಾಲದ ಎಲ್ಲ ಸೂಕ್ಷ್ಮ ಪಲ್ಲಟಗಳನ್ನು ಬಂಬಿಸುವ ಸಮರ್ಥ ಕೃತಿ.
10. ಸ್ವಪ್ನ ಸಾರಸ್ವತ ( ಗೋಪಾಲಕೃಷ್ಣ ಪೈ ) :-

ಪೋರ್ತಗೀಜರ ಆಡಳಿತ ಕಾಲದಲ್ಲಿ ಗೋಮಾಂತಕ ಪ್ರದೇಶದಲ್ಲಿ ವಾಸವಾಗಿದ್ದ ಗೌಡ ಸಾರಸ್ವತ ಸಮಾಜ ಪೋರ್ತಗೀಜರ ದುರಾಡಳಿತ ಮತಾಂತರದ ಧಾರ್ಮಿಕ ದೌರ್ಜನ್ಯವನ್ನು ತಪ್ಪಿಸಿಕೊಳ್ಳಲು ಕರ್ನಾಟಕ ಮತ್ತು ಕೇರಳ ಕರಾವಳಿ ಪ್ರದೇಶಕ್ಕೆ ವಲಸೆ ಬಂದು ತಮ್ಮ ನೆಲೆ ಕಂಡುಕೊಂಡು ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡ ಬಗೆಯನ್ನು ಮೂರು ತಲೆಮಾರುಗಳ ಕಥಾನಕದ ಮೂಲಕ ಹೃದಯಂಗಮವಾಗಿ ಬಿಂಬಿಸುವ ಒಂದು ಸಮರ್ಥ ಕೃತಿ.






0 Comments