ಚಂಪಕಾವತಿಯಲ್ಲೊಂದು ಮದ್ವೆಯಂತೆ!!
ಇವತ್ತಿನ ಆಯ್ಕೆ – ಚಂಪಕಾವತಿ
ಸುಧನ್ವ ದೇರಾಜೆ-
ಕೆಲವರ್ಷಗಳ ಹಿಂದೆ ಬ್ಲಾಗ್ ಜ್ವರ ಹೊಸದಾಗಿ ಎಲ್ಲರನ್ನೂ ಬೆನ್ನುಹತ್ತಿದ್ದಾಗ ಈ ಯುವ ಪತ್ರಕರ್ತ ತನ್ನ ಬ್ಲಾಗನ್ನೂ ಆರಂಭಿಸಿದರು. ಕೆಲವೇ ಕಾಲದಲ್ಲಿ ’ಚಂಪಕಾವತಿ’ ತನ್ನ ಹೆಸರಿಗೆ ತಕ್ಕಂತೆ ಅಪೂರ್ವ ಸುಗಂಧವನ್ನ ಎಲ್ಲೆಡೆ ಬೀರಲಾರಂಭಿಸಿತು. ಎಲ್ಲ ಬ್ಲಾಗುಗಳ ’ಮಸ್ಟ್ ರೀಡ್’ ಲಿಸ್ಟಿನಲ್ಲಿ ಸುಧನ್ವರ ಹೆಸರು ಇದ್ದೇ ಇರುತ್ತದೆ. ಈ ಬ್ಲಾಗಿನಲ್ಲಿ ದೊರಕುವ ಲೇಖನಗಳ ಸೊಗಸೇ ಬೇರೆ. ಇಲ್ಲಿ ಯಕ್ಷಗಾನ, ಕವಿತೆ, ಸಿನೆಮಾ, ಕಮೆಂಟರಿ, ಹರಟೆ.. ಏನುಂಟು, ಏನಿಲ್ಲ? ಪ್ರತಿಯೊಂದು ವಿಷಯದ ಬಗೆಗು ತನ್ನದೇ ಆದ ಪಕ್ಕಾ ಒಪೀನಿಯನ್ ಹೊಂದಿರುವ ಸುಧನ್ವ ಇಂದಿನ ಯುವಪೀಳಿಗೆಯನ್ನ ಬಹಳಷ್ಟು ರೀತಿಗಳಲ್ಲಿ ಅತ್ಯುತ್ತಮವಾಗಿ ಪ್ರತಿನಿಧಿಸುತ್ತಾರೆ. ’ಚಂಪಕಾವತಿ’ಯೂ ಆಗಾಗ ತನ್ನ ಅಲಂಕಾರ ಬದಲಾಯಿಸಿಕೊಂಡು ಓದುಗರನ್ನು ಆಕರ್ಷಿಸುತ್ತಲೆ ಇರುತ್ತದೆ. ತನ್ನ ಮನೆಗೆ ಕಾಲಿಟ್ಟವರನ್ನು ಸುಧನ್ವ ಸ್ವಾಗತಿಸುವ ಪರಿ ಕೂಡ ಆತ್ಮೀಯವಾಗಿದೆ:
ಮೌಸ್-ಕೀ ಬೋರ್ಡುಗಳ ಮೇಲಿಂದ ಕೈ ತೆಗೆದು ಓದಿಕೊಳ್ಳಿ! ನಾಟಕ-ಸಾಹಿತ್ಯ-ಸಿನಿಮಾ-ಯಕ್ಷಗಾನ ಇಲ್ಲಿ ಸಿಕ್ಕೇ ಸಿಗುತ್ತವೆ. ಇನ್ನು ಕೆಲವು ಸೀಸನ್ಗೆ ಸರಿಯಾಗಿ ಬರುತ್ತವೆ. ಕರಾವಳಿ ಮೂಲೆಯ ಹಳ್ಳಿಯೊಂದರಿಂದ ಬೆಂಗಳೂರಿಗೆ ಬಂದವನ ಗೂಡು ಇದು. ಸದ್ಯ ಸುದ್ದಿಮನೆಯಲ್ಲಿ ಕೆಲಸ, ಅಕ್ಷರಗಳ ಹೆಗಲ ಮೇಲೆ ಕೈಹಾಕಿ ಓಡಾಡುವುದಕ್ಕೆ ಇನ್ನೇನು ಪರಿಚಯ ಬೇಕು? ಓದಿ, ಇನ್ನೊಮ್ಮೆ ಬನ್ನಿ.
ಎಲ್ಲ ಸರಿ. ಆದರೆ ಈ ಸಾರೆಯ ನ್ಯೂಸೇ ಬೇರೆ.
ನಲ್ಮೊಗದ ಸುಧನ್ವ ಹೇಮಶ್ರೀಯವರೊಂದಿಗೆ ಕೈಜೋಡಿಸಿ ಹೊಸದೊಂದು ಪಯಣ ಆರಂಭಿಸಲಿದ್ದಾರೆ, ಅದೂ ಮುಂದಿನ ವಾರವೇ!!
ಸುಧನ್ವರ ಲೇಖನಿಯ ಛಾಪು ಹೊಂದಿರುವ ಮದುವೆಯ ಆಮಂತ್ರಣ ಪತ್ರಿಕೆ ಇಂತಿದೆ:
ಸುಧನ್ವನಿಗೆ ’ಅವಧಿ’ ಬಳಗದ ಅಭಿನಂದನೆಗಳ ಜತೆಗೇ ಶುಭಹಾರೈಕೆಗಳು.
-‘ಅವಧಿ’ಗಾಗಿ ಟೀನಾ ಶಶಿಕಾಂತ್

![sudhanva Invi 1[2]](https://i0.wp.com/avadhimag.in/wp-content/uploads/2011/04/sudhanva-Invi-12.jpg?fit=236%2C157&ssl=1)


![sudhanva Invi 1[2]](https://i0.wp.com/avadhimag.online/wp-content/uploads/2011/04/sudhanva-Invi-12.jpg?resize=236%2C157)
![sudhava invi[1]](https://i0.wp.com/avadhimag.online/wp-content/uploads/2011/04/sudhava-invi1.jpg?resize=303%2C441)
ಸುಧನ್ವ ಅವರಿಗೆ ಹಾರ್ದಿಕ ಅಭಿನಂದನೆಗಳು… All the Best 🙂
ಸುಂದರ ಆಕರ್ಷಕ ಆಮಂತ್ರಣ.
ಕಲ್ಯಾಣಮಸ್ತು
ನಿಮ್ಮ ಹಾಜರಿ “ಮಸ್ಟು”
ಓದಿದವ ಸಂತಸದಿಂದಲೇ “ಸುಸ್ತು”
ನಾವೂ ಸಹ
ಮದುವೆ ಆಗ್ತಿದೀವಿ
ಆಗಿ… ಆಗಿ…
ನಾವೂ ಆಗಿದ್ದೀವಿ… ನೀವೂ ಆಗಿ… ಸಂತಸವೇ!
ಗುನುಗುತ್ತಿದ್ದ ರಾಗ ಹಾಡಾಗಿದೆ
ಹಕ್ಕಿ ಹಾರುತ್ತಲೇ ಗೂಡಾಗಿದೆ
ಆ ಗೂಡಿನ ತುಂಬೆಲ್ಲಾ ಒಲವಿನ
ಸಂಗೀತವಿರಲಿ ಎಂಬ ಹಾರೈಕೆ ನಮ್ಮದಾಗಿದೆ!
sudhanva… all the best…!
ಹಕ್ಕಿ ಹಾರುತ್ತಲೇ ಗೂಡಾಗಿದೆ ಎನ್ನುವುದಕ್ಕಿಂತ ‘ಹಾರುವ ಹಕ್ಕಿಗಳಿಗೆ ಗೂಡಾಗಿದೆ’ಎನ್ನುವುದೇ ಛಂದ.