ಇವತ್ತಿನ ಆಯ್ಕೆ- ನೀಲಿಗ್ಯಾನ
ತಮ್ಮ ಬ್ಲಾಗ್ ಅನ್ನು ‘ಬಿಕ್ಕುಗಳ ಬಣ್ಣದಂಗಡಿ’ ಎಂದು ಕರೆದುಕೊಂಡಿರುವವರು ಹುಲಿಕುಂಟೆ ಮೂರ್ತಿ. ‘ನೀಲಿಗ್ಯಾನ’ ಇವರ ಬ್ಲಾಗ್ ನ ಹೆಸರು. ಬ್ಲಾಗ್ ನಿಂದ ಆರಂಭಿಸಿ ಇದರ ಹೂರಣ, ಜ್ಞಾನ ಎಲ್ಲದರಲ್ಲೂ ಈ ಬ್ಲಾಗ್ ಭಿನ್ನವಾಗಿ ನಿಂತಿದೆ. ನೀಲಿ ಗಯಾನ ಎಂಬ ಹೆಸರಿಗೆ ತಕ್ಕಂತೆ ಬ್ಲಾಗ್ ನ ಬಣ್ಣವನ್ನೂ ನೀಲಿಯಾಗಿರಿಸಿದ್ದಾರೆ. ಇವತ್ತಿನ ಬ್ಲಾಗ್ ಲೋಕ ಹೊಮ್ಮಿಸುತ್ತಿರುವ ಏಕತಾನತೆಯ ದನಿಯ ನಡುವೆ ಹುಲಿಕುಂಟೆ ಮೂರ್ತಿ ಹಾಗೂ ಅವರಂತಹ ಗೆಳೆಯರು ಹೊಮ್ಮಿಸುತ್ತಿರುವ ನೋಟ ಸಮಾಜವನ್ನು ಒಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ಯುತ್ತದೆ. ಆ ಕಾರಣಕ್ಕಾಗಿಯೇ ಈ ಬ್ಲಾಗ್ ‘ಅವಧಿ’ಯ ಇಂದಿನ ಆಯ್ಕೆ.
ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿಯಲ್ಲಿ ಇಂಗ್ಲಿಶ್ ಉಪನ್ಯಾಸಕರಾಗಿರುವ ಹುಲಿಕುಂಟೆ ಮೂರ್ತಿ ಅವರ ಈ ಬ್ಲಾಗ್ ಹೊಕ್ಕರೆ ಇಲ್ಲಿ ನಿಮಗೆ ಅಬ್ದುಲ್ ರಶೀದ್, ಕೆ ರಾಮಯ್ಯ, ದೇವನೂರು ಮಹಾದೇವ, ಅಕ್ಕ ಮಹಾದೇವಿ, ಕೆ ವೈ ನಾರಾಯಣ ಸ್ವಾಮಿ, ಶಿವಸುಂದರ್ ಹೀಗೆ ಅನೇಕರ ಓದು, ಒಡನಾಟ ದಕ್ಕುತ್ತದೆ. ಹುಲಿಕುಂಟೆ ಮೂರ್ತಿ ಅವರು ತಮ್ಮ ಬರಹಗಳನ್ನು ಹಿಂದೆಯೇ ಇತ್ತು ತಮ್ಮ ವಿಚಾರಕ್ಕೆ ಹತ್ತಿರವಾಗುವ ಎಲ್ಲರಿಗೂ, ಎಲ್ಲಾ ವಿಚಾರಕ್ಕೂ ಇಲ್ಲಿ ಅಂಗಳ ಒದಗಿಸಿದ್ದಾರೆ. ರಾಮಯ್ಯ, ಲಕ್ಷ್ಮೀಪತಿ ಕೋಲಾರ ಅವರು ಓದಿರುವ ಕವಿತೆಗಳ ವಿಡಿಯೋ ತುಣುಕು ಇಲ್ಲಿನ ಆಸ್ತಿ. ದೇವನೂರು ಮಹಾದೇವ ತನಗೆ ನೃಪತುಂಗ ಪ್ರಶಸ್ತಿ ಯಾಕೆ ಬೇಡ ಎಂದು ಕನ್ನಡ ಸಾಹಿತ್ಯ ಪರಿಷತ್ ಗೆ ಬರೆದಿರುವ ಪತ್ರ, ಕೆ ವೈ ನಾರಾಯಣಸ್ವಾಮಿ ಬರೆದಿರುವ ಮುನ್ನುಡಿ, ಹಲವು ಕಾರ್ಯಕ್ರಮಗಳ ವರದಿ ಸೆಳೆಯುತ್ತದೆ
ಸಂಪರ್ಕ-ಹುಲಿಕುಂಟೆ ಮೂರ್ತಿ
ಕನ್ನಡ ಭಾಷಾ ಉಪನ್ಯಾಸಕ, ಸರ್ಕಾರಿ ಪದವಿ ಪೂರ್ವ ಕಾಲೇಜು, ಕನಸವಾಡಿ, ದೊಡ್ಡಬಳ್ಳಾಪುರ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ- 561203
ಮೊಬೈಲ್: 9945430119 ಇ ಮೇಲ್ hulimurthy@gmail.com
-‘ಅವಧಿ’ಗಾಗಿ ಜಿ ಎನ್ ಮೋಹನ್
ಇಲ್ಲಿ ಬ್ಲಾಗ್ ನಲ್ಲಿದ್ದ ಕೆ ರಾಮಯ್ಯ ಅವರ ಕವಿತಾ ವಾಚನವಿದೆ, ಕೇಳಿ-
http://youtu.be/NTrB8sEc8Ww





0 Comments