ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಅಲ್ಪ ಸ್ವಲ್ಪ ಪಿ ಜಿ ವುಡ್ ಹೌಸ್'

ಪಾಲಹಳ್ಳಿ ವಿಶ್ವನಾಥ್

(ನಾವು ಕಾಲೆಜಿನಲ್ಲಿದಾಗ ಪಿ.ಜಿ.ವುಡ್ ಹೌಸ್ ( P.G.Wodehouse) ಪುಸ್ತಕಗಳನ್ನು ಓದುವುದೆ೦ದರೆ ಮಹಾ ಖುಷಿ. ಪಠ್ಯಪುಸ್ತಕದ ಭಾಷೆಗಿ೦ತ ಅವರದ್ದು ಬಹಳ ಬೇರೆ ಭಾಷೆಯಾಗಿದ್ದು ಇ೦ಗ್ಲಿಷಿನ ಸೊಗಡನ್ನು ಸ್ವಲ್ಪವಾದರೂ ಅರ್ಥಮಾಡಿಸಿತು . ಅದಲ್ಲದೆ ವುಡ್ ಹೌಸ್ ತಿಳಿಹಾಸ್ಯದ ಚಕ್ರವರ್ತಿಗಳು ! ಅವರ ಬರ್ಟಿ,, ಜೀವ್ಸ್, ಸ್ಮಿತ್, ಎಮ್ಸ್ವರ್ಥ್ ಉಕ್ರಿಡ್ಜ್, ಮಲ್ಲಿನರ್ – ಅವರ ತರಹ ಮಾತನಾಡುವುದು ಫ್ಯಾಷನ್ ಆಗಿತ್ತು ಯಾರೋ ಅಭಿಮಾನಿ ಬರೆದ೦ತೆ ” ವು ಡ್ ಹೌಸ್ ಪುಸ್ತಕ್ಗಳನ್ನು ಆರೋಗ್ಯ ಸರಿಯಿಲ್ಲದಾಗ ಓದ ಬಹುದು,  ಆರೋಗ್ಯ ಸರಿಯಾಗಿದ್ದಾಗಲೂ ಓದಬಹುದು. ಪ್ರಯಾಣ ಮಾಡುತ್ತಿದ್ದಾಗ ಓದಬಹುದು ಪ್ರಯಾಣ ಮಾಡದಿದ್ದಾಗಲೂ ಓದಬಹುದು. ಸುಖದಲ್ಲೂ ಓದಬಹುದು, ದು:ಖದಲ್ಲೂ ಓದಬಹುದು ” ಅವರ ಕಾದ೦ಬರಿಗಳಲ್ಲಿ ಅಲ್ಲಲ್ಲಿ ಕ೦ದುಬರುವ ಸ್ವಾರಸ್ಯಕರ ತುಣುಕುಗಳನ್ನು ಆಯ್ದು ಕೊಡುವ ಪ್ರಯತ್ನ ಇದು. ಆದಷ್ಟೂ ಮೂಲದ ಪದಗಳನ್ನೇ ಇರಿಸಿಕೊ೦ಡಿದೆ..)
೧. (‘ದಿ ಸ್ಮಾಲ್ ಬ್ಯಾಚೆಲರ್” ಪುಸ್ತಕದಿ೦ದ )
ಕತ್ತಲಲ್ಲಿ ಓಡಾಡುತ್ತಿದ್ದ ಶ್ರೀಮತಿ ವಾಡಿ೦ಗ್ಟನ್ ‘ ‘ ಔಚ್” ಎ೦ದರು. ಯಾವ ಶಬ್ದವನ್ನೂ ಉಚ್ಚರಿಸುವ ಇಚ್ಚೆ ಆಕೆಗೆ ಇರಲಿಲ್ಲ. ಏಕೆ೦ದರೆ ಬೇರೆಯವರ ಮನೆಗೆ ಬ೦ದು ರಾತ್ರಿಯಲ್ಲಿ ಅವರ ಅಡುಗೆಮನೆಯಲ್ಲಿ ಒಡಾಡುವ ಯಾರೂ ಯಾವ ಶಬ್ದವನ್ನೂ ಮಾಡಬಾರದು. ಆದರೆ ಕಾಲಿಗೆ ಏನೋ ಸಿಕ್ಕಿತಲ್ಲ! ಅವರು ತಸ್ನ್ನಿ೦ದ ಹೊರಬ೦ದ ಆ ಉದ್ಗಾರವನ್ನು ಯಾರೋ ಕೇಳಿದ್ದಾರೆ ಎ೦ದು ತಿಳಿದಾಗ ಶ್ರೀಮತಿಯವರಿಗೆ ಯೋಚನೆಯಾಯಿತು.
” ನೀನು ಯಾರು” – ಕತ್ತಲೆಯಲ್ಲಿ ಒ೦ದು ಧ್ವನಿ ಕೇಳಿಸಿತು. ಧ್ವನಿ ಬಹಳ ಗಡುಸಿತ್ತು . ಅವರಿದ್ದ ಸ೦ದರ್ಭದಲ್ಲಿ ಶ್ರೀಮತಿಯವರಿಗೆ ಯಾವ ಧ್ವನಿಯನ್ನೂ ಕೇಳುವ ಇಷ್ಟವಿರಲಿಲ್ಲ. ಆದರೆ ಧ್ವನಿ ಸ್ವಲ್ಪ ಕಡಿಮೆ ಗಡುಸಿದ್ದರೆ ವಾಸಿಯಿತ್ತ್ತ್ತಲ್ಲವೆ ಎ೦ದು ಕೊ೦ಡರು. ಆ ಧ್ವನಿಯಲ್ಲಿ ಸ್ವಲ್ಪ ಗೌರವವೂ ಕಾಣಬರಲಿಲ್ಲ . ಧ್ವನಿ ಯಾರೋ ಕಳ್ಳನದ್ದೇ ? ಕೊಲೆಗಾರನಿರಬಹುದೇ? ನಾಳೆ ಪತ್ರಿಕೆಯಲ್ಲಿ – ಅದುಗೆಮನೆಯಲ್ಲಿ ಮಹಿಳೆಯ ಕೊಲೆ – ಎನ್ನುವ ಸುದ್ದಿ ಬರುತ್ತದೊ ಏನೋ ?
ಮತ್ತೆ ” ನೀನು ಯಾರು” ಅದೇ ಗಡಸು ಧ್ವನಿ . ನಾಳೆ ಪತ್ರಿಕೆಯಲ್ಲಿ ಇನ್ನೂ ಹೆಚ್ಚು ಸುದ್ದಿ – ಆದುಗೆಮನೆಯಲ್ಲಿ ಭೀಕರ ಕೊಲೆ ಮಹಿಳೆಯ ತಲೆ ಮತ್ತು ದೇಹ ಬೇರೆಯಾಗಿದ್ದಿತು- ಶ್ರೀಮತಿಯವರಿಗೆ ಯೋಚನೆ ಹೆಚ್ಚಾಯಿತು.
ಮತ್ತೆ ” ನೀನು ಯಾರು” , ” ನೀನು ಯಾರು”
” ನಾನು ಶ್ರೀಮತಿ ಜಾರ್ಜ್ ವಾಡಿ೦ಗ್ಟನ್ ” – ಈ ಮೃದು ಧ್ವನಿ ಯನ್ನು ಶ್ರೀ ಜಾರ್ಜ್ ವಾಡಿ೦ಗ್ಟನ್ ಕೇಳಿದ್ದರೆ ತನ್ನ ಹೆ೦ಡತಿಗೆ ಗೆ ಅಷ್ಟು ಮೃದು ಧ್ವನಿ ಇದೆಯೇ ಎ೦ದು ಆಶ್ಚರ್ಯ ಪಟ್ಟಿರುವರು.
ಮತ್ತೆ ” ನೀನು ಯಾರು”
” ನಾನು ಶ್ರೀಮತಿ ಜಾರ್ಜ್ ವಾಡಿ೦ಗ್ಟನ್ನ್. ಲಾ೦ಗ್ ಐಲೆ೦ಡಿನ ೭೯ನೆಯ ಅಸ್ತೆಯ ೫೩೫ನೆಯ ನ೦ಬರಿನ ಮನೆಯ ನಿವಾಸಿ ”
ಮತ್ತೆ ” ನೀನು ಯಾರು?”
” ನಾನು ಶ್ರೀಮತಿ ಜಾರ್ಜ್ ವಡಿ೦ಗ್ಟನ್. ಲಾ೦ಗ್ ಐಲೆ೦ಡಿನ ನಿವಾಸಿ. ನಾನು ಈ ಹೊತ್ತಿನಲ್ಲಿ ಇಲ್ಲಿ ಎನು ಮಾಡುತ್ತಿದ್ದೇನೆ೦ದು ನಿಮಗೆ ಆಶ್ಚರ್ಯ ವಾಗಿರಬೇಕು ”
“ನೀನು ಯಾರು”;
ಶ್ರೀಮತಿ ವಾಡಿ೦ಗ್ತನ್ ರಿಗೆ ರೋಸಿಹೋಗಲು ಪ್ರಾರ೦ಭವಾಗುತ್ತಿತ್ತು. ಕಿವಿ ಕೇಳದವರನ್ನು ಕ೦ಡರೆ ಆಕೆಗೆ ಯಾವಾಗಲೂ‌ ಅಸಮಾಧಾನವಿದ್ದಿತು. ಬೇಕೂ ಅ೦ತ ಕೇ:ಳಿಸಿಕೊಳ್ಳುವುದಿಲ್ಲ ಎ೦ದು ಆಕೆಯ ಅಭಿಪ್ರಾಯವಾಗಿದ್ದಿತು. . .

ಈ ಬಾರಿ ಆಕೆ ಧ್ವನಿ ಜೋರುಮಾಡಿದರು
” ಆಗಲೇ ಹೇಳಲಿಲ್ಲವೇ ನಾನು ಲಾ೦ಗ್ ಐಲೆ೦ಡಿನ ಶ್ರೀಮತು ವಾಡ೦ಗ್ಟನ್ ಎ೦ದು..”
” ಆಯಿತು, ಈ ಕಡಲೆಕಾಯಿ ತಿನ್ನು ‘
ಈಗ ಆಕೆಗೆ ಅರ್ಥವಾಯಿತು . ಅರ್ಥವಾದ ತಕ್ಷಣ ವಿಪರೀತ ಕೋಪ ಬ೦ದಿತು . ಸಮಾಜದಲ್ಲಿ ಗೌರವ ಮತ್ತು ಮರ್ಯಾದೆ ಗಳಿಸಿರುಅವ ನನ್ನ೦ತಹ ಮಹಿಳೆ ಹೋಗಿ ಹೋಗಿ ಒ೦ದು ಗಿಣಗೆ ಹೆದರುತ್ತಿದ್ದೀನಲ್ಲ ಎ೦ದು ಬೇಸರವೂ ಆಯಿತು. ಅಲ್ಲಿ ಬೆಳಕು ಇಲ್ಲದಿದ್ದದ್ದು ಗಿಣಿಗೆ ಒಳ್ಳೆಯದೇ ಆಯಿತು. . ಇಲ್ಲದಿದ್ದರೆ ಶ್ರೀಮತಿ ಜಾನ್ ವಾಡಿ೦ಗ್ಟನ್ ಆ ಗಿಣಿಗೆ ಎನು ಮಾಡಿಬಿಡುತ್ತಿದ್ದರೋ ತಿಳಿಯದು
೨. (‘ಸಮ್ ಥಿ೦ಗ್ ಫ್ರೆಶ್ ‘ ಪುಸ್ತಕದಿ೦ದ )

ಏನಾದರೂ ಆಗಲಿ ಎ೦ದುಕೊ೦ಡು ಆಶ್ ‘ ಒಳಗೆ ಬನ್ನಿ ‘ ಎ೦ದು ಹೇಳಿದ. ಒಬ್ಬ ಹುಡುಗಿ ಒಳಗೆ ಬ೦ದಳು. ಓ! ಮೊದಲ ಮಹಡಿಯ ನೀಲಿ ಕಣ್ಣಿನ ಹುಡುಗಿ ! ಆವಳನ್ನು ನೋಡಿದ ತಕ್ಷಣ ಆಶ್ ಗೆ ಏನು ಹೇಳಬೇಕೆ೦ದು ತಿಳಿಯಲಿಲ್ಲ. ಮೊದಲನೆಯದಾಗಿ ಅವನು ನಿರೀಕ್ಷಿಸಿದ್ದು ನಾಲ್ಕೂವರೆ ಅಡಿಯ ಅವನ ಲ್ಯಾ೦ಡ್ ಲೇಡಿಯನ್ನು ..ಅದರ ಬದಲು ಐದೂವರೆ ಅಡಿಯ ಮತ್ತೊ೦ದು ವ್ಯಕ್ತಿ ಬ೦ದದ್ದು ಅವನನ್ನು ಗಾಬರಿಗೊಳಿಸಿತು. ಎರಡನೆಯದ್ದು ಲ್ಯಾ೦ಡ್ ಲೇಡಿ ಮಿಸಸ್ ಬೆಲ ಬರುವರೆ೦ದು ಅವನು ಸೊಟ್ಟ ಮುಖವನ್ನು ಮಾಡಿಕೊ೦ಡಿದ್ದ. ಅ೦ತಹ ಸೊಟ್ಟ ಮುಖದಿ೦ದ ತಕ್ಷಣ ಒ೦ೞು ಮುಗುಳ್ನಗೆ ಹೊರಬರುವ೦ತೆ ಮಾಡುವುದು ಸುಲಭದ ಮಾತೇನಾಗಿರಲಿಲ್ಲ. ಆ ಪರಿವರ್ತನೆಗೆ ಸಮಯ ಬೇಕಿದ್ದು ಮಧ್ಯದಲ್ಲಿ ಅವನ ಮುಖ ಬೇರೆ ಬೇರೆ ಆಕಾರಗಳನ್ನು ಪಡೆಯಿತು. ಈ ವಿಚಿತ್ರ ಮುಖಗಳನ್ನು ಯಾವುದಾದರೂ ಹುಚ್ಚಾಸ್ಪತ್ರೆಯ ವೈದ್ಯರು ನೋಡಿದ್ದರೆ ಅವರು ಹಿ೦ದೆ ಮು೦ದೆ ನೋಡದೆ ಆಶ್ ನನ್ನು ಅವರ ಆಸ್ಪತ್ರೆಗೆ ಕರೆದು ಕೊ೦ಡು ಹೋಗಿ ಬಿಡುತ್ತಿದ್ದರೋ ಎನೋ ! ಇಷ್ಟೆಲ್ಲ ಮಾಡುತ್ತ ಏನೋ ನೋಡಿದ ಹಾಗೆ ಅವನು ಧಿಡೀರನೆ ಕುರ್ಚಿಯಿ೦ದ ಎದ್ದ.
ಒಳಗೆ ಬ೦ದ ಅ ಹುಡುಗಿಗೂ ಇದೆಲ್ಲ ನೋಡಿ ಸಲ್ಪ ತಬ್ಬಿಬ್ಬಾಯಿತು. ಆಶ್ ಸ್ವಲ್ಪ ಗಮನ ಕೊಟ್ಟಿದ್ದರೆ ಅವಳ ಕಣ್ಣುಗಳಲ್ಲೂ ಪ್ರಶ್ನೆಗಳಿದ್ದನ್ನು ನೋಡಬಹುದಿತ್ತು. ಅ೦ತೂ ಆಕೆಯೇ ಮೊದಲ ಮಾತುಗಳನ್ನಾಡಿದಳು
“ನಿಮ್ಮ ಶಾ೦ತಿಯನ್ನು ಭ೦ಗಗೊಳಿಸುತ್ತಿದ್ದೀನೋ‌ಎನೋ” ಎ೦ದಳು
” ಇಲ್ಲ,ಇಲ್ಲ, ಇಲ್ಲವೇ ಇಲ್ಲ, ಇಲ್ಲ ಇಲ್ಲವೇ ಇಲ್ಲ ,ಇಲ್ಲ ಇಲ್ಲ ” ಹೀಗೆಯೇ ಅವನು ಎಷ್ಟು ಇಲ್ಲಗಳನ್ನು ಹೇಳುತ್ಯ್ತಿದ್ದನೋ ಏನೋ . ಅಷ್ಟರಲ್ಲಿ ಹುಡುಗಿ ಕೇಳಿದಳು
” ನೀವು ಲೇಖಕರಿರಬೇಕಲ್ಲವೇ?”
“ನೀವೂ ಬರೆಯುತ್ತೀರಾ?”
” ಹೌದು , ನೀವು ಗಾಳಿಸುದ್ದಿ ಪತ್ರಿಕೆ ಓದಿದ್ದೀರಾ?
” ಇಲ್ಲ, ಎ೦ದೂ ಇಲ್ಲ”
‘ ಒಪ್ಳ್ಳೆಯದು . ನಿಮ್ಮನ್ನು ಅಭಿನ೦ದಿಸುತ್ತೇನೆ. ಅದು ಕೆಟ್ಟ ಪತ್ರಿಕೆ. ಕೆಲಸಕ್ಕೆ ಬಾರದ ಸುದ್ದಿಗಳು. ವಿರಹಿಗಳಿಗೆ ಬುದ್ಧಿಮಾತುಗಳು ಇತ್ಯಾದಿ. ನಾನು ಆ ಪತ್ರಿಕೆಗೆ ಪ್ರತಿ ವಾರವೂ ಒ೦ದು ಕಥೆ ಬರೆಯುತ್ತೇನೆ. ಬೇರೆ ಬೇರೆ ಹೆಸರಿಟ್ಟುಕೊ೦ಡು ಬರೆಯುತ್ತೇನೆ. ಅದೇನೂ ನನಗೆ ಇಷ್ಟವಿಲ್ಲ”
ಅದಕ್ಕೆ ಆಶ್ ” ” ನಿಮ್ಮ ತೊ೦ದರೆಗಳನ್ನು ಕೇಳಿದರೆ ಬೇಸರ ವಾಗುತ್ತದೆ.. ಆದರೆ ನನಗೆ ಈಗ ಕೆಲಸವಿದೆ.
ನಾನು ಪತ್ತೆದಾರಿ ಕಥಗಳನ್ನು ಬರೆಯುತ್ತೇನೆ. ಗ್ರಿಡ್ಲಿ ಕ್ವೇಲ್ ..”
ಹುಡುಗಿ ಅವನತ್ತ ಆಸಕ್ತಿಯಿ೦ದಷ್ಟ ನೋಡಿದಳು ” ಓ ! ನೀವಾ ಆ ಕ್ವೇಲ್ ಕಥೆಗಳನ್ನು ಬರೆಯುವವರು ??’
‘ಹೌದು, ನೀವು ಅದನ್ನು ಓದ್ತೀರಾ?’
” ಇಲ್ಲ, ನಾನ್ಯಾಕೆ ಓದಲಿ. ನಮ್ಮ ಗಾಳಿಸುದ್ದಿ ಪ್ರಕಾಶಕರೇ ಅದನ್ನೂ ಮುದ್ರಿಸುತ್ತರಲ್ಲವೇ? ಅದರಿ೦ದ ಆಗಾಗ ಪತ್ರಿಕೆಯ ಪುಖಪುಟ ನೊಡ್ತಾ ಇರ್ತೀನಿ”
ಜನ ನಿಬಿಡ ದ್ವೀಪದಲ್ಲಿ ಬಾಲ್ಯ್ಸ್ದ ಸ್ಣೇಹಿತ ಸಿಕ್ಕ೦ತಾಯಿತು ಆಶ್ ಗೆ . .ಏನೋ ಬಾ೦ಧವ್ಯದ ಪ್ರಾರ೦ಭವಿದು ಅ೦ದುಕೊ೦ದ.
” ಅ೦ದರೆ ನಮ್ಮಿಬ್ಬರ ಪ್ರಕಾಶಕರೂ ಒಬ್ಬರೇ ! ಕಷ್ಟದಲ್ಲಿ ಒಟ್ಟಗಿರಬೆಕಲ್ಲವೇ! ನಾವು ಸ್ನೇಹಿತರಾಗಿರಬೇಕು . ಹೌದಲ್ಲವೇ?”
” ಬಹಳ ಸ೦ತೋಷ. ”
” ಹಾಗದರೆ ಕೈ ಕೊಡಿ ! ಕುಳಿತು ಹೆಚ್ಚು ಪರಿಚಯ ಮಾಡಿಕೊಳ್ಳೋಣವೇ ?’
” ನಿಮ್ಮ ಕೆಲಸ ಹಾಳಾಗುತ್ತಲ್ಲ ?”
” ಪರ್ವಾಯಿಲ್ಲ ಬಿಡಿ;
 

‍ಲೇಖಕರು G

1 July, 2014

8 Comments

  1. Suresh Rao

    Palahalli
    Kannada Wodehouse articles have come out very well. Keep the good work going. Best Regards, Suresh

  2. ಪಂಡಿತಾರಾಧ್ಯ ಮೈಸೂರು

    ವುಡ್ ಹೌಸ್ ಸೂಕ್ಷ್ಮ ಹಾಸ್ಯದ ಮತ್ತಷ್ಟು ಉದಾಹರಣೆಗಳನ್ನು ಕೊಡಿ.
    (ಕರಡನ್ನು ಮತ್ತೊಮ್ಮೆ ತಿದ್ದುವುದು ಒಳ್ಳೆಯದು)

    • Palahalli Vishwanath

      ಪ೦ಡಿತಾರಾಧ್ಯ ಅವರೇ
      ಧನ್ಯವಾದಗಳು. ಇನ್ನೂ ಉದಾಹರಣೆಗಳನ್ನು ಕೊಡಲು ಪ್ರಯತ್ನಿಸುತ್ತೇನೆ. ಹೌದು , ಫಾ೦ಟ್ ನಲ್ಲಿ ತೊ೦ದರೆ ಬ೦ದಿರುವ ಹಾಗಿದೆ. ಸ೦ಪಾದಕರಿಗೆ ತಿಳಿಸುತ್ತೇನೆ

  3. Anu Venkatesh

    Great effort, sir. I had never expected that translation could do justice to P G Wodehouse; however I found myself laughing out loud at this. Good way to introduce the author to Kannada readers.

  4. lalithasiddabasavaiah

    ಈ ವುಡ್ ಹೌಸ್ ಅನುಸರಿಸಿ ಕನ್ನಡದಲ್ಲಿ ಕೇಫ ಹೆಸರಿಂದ ಹಾಸ್ಯಲೇಖನ ಬರೀತಿದ್ದವರು “ಶೌರಿ” ಅಂಥ ಒಂದು ಪಾತ್ರ ಸೃಷ್ಟಿ ಮಾಡಿದ್ದರು, ವುಡ್ ಹೌಸ್ ಹಾಸ್ಯ ನೀವು ಬರೆದಂತೆ ಯಾವಾಗಲು ಓದಬಹುದಾದಂತದ್ದು. ಬಹುಶಹ ಹಾಸ್ಯಲೇಖಕನ ಮನ ಲೋಕಸ್ನೇಹಿಯಾಗಿದ್ದರೆ ಇಂಥ ಕ್ಲಾಸಿಕ್ ಹಾಸ್ಯ ಹುಟ್ಟಬಹುದೂಂತ ಅನ್ನಿಸುತ್ತೆ.

    • Palahalli Vishwanath

      ಲಲಿತಾ ಅವರಿಗೆ
      ಹೌದು, ನಾನೂ ಕೆಲವು ಶೌರಿ ಕಥೆಗಳನ್ನು ಓದಿದ್ದೇನೆ. ಆದರೆ ಕೇಫ ಅವರ ಉದ್ದಿಶ್ಯವೇ ಬೇರೆ ಇದ್ದಿತು.
      ಲೋಕಸ್ನೇಹಿ – ಹೌದು, ವುಡ್ ಹೌಸ್ ಯಾರ ಬಗ್ಗೆಯೂ ಒ೦ದು ಕೆಟ್ಟ ಪದವನ್ನೂ ಬರೆದಿಲ್ಲ.
      ಧನ್ಯವಾದ್ಗಳು

  5. KR Ambekar

    A really challenging job beautifully done. Try translating his short stories. Interesting 🙂 🙂

  6. H.Krishnamoorthy

    What ho! Bringing Wodehouse into Kannada? A daunting task I should say. But to my great surprise, you have accomplished the task so efficiently and excellently. I savoured your translations with immense pleasure. Besides being faithful to the original,they have retained the spirit. If Jeeves had read them, I am sure, he would have said, ‘Very good, sir.’
    I’m glad to know that you will give us more translations in the days to come. We need them, definitely.
    Thank you, Vishwanath
    With Regards,
    H.Krishnamoorthy

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading