ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅರ್ಧ ಸತ್ಯ

ಶ್ರೀನಿಧಿ ಡಿ ಎಸ್

ತುಂತುರು ಹನಿಗಳು


ಟೌನ್ ಹಾಲ್ ಎದುರು

ಬಸ್ಸಲ್ಲಿ ಕೂತವಳ

ಕಣ್ಣಲ್ಲಿ ಕಿತ್ತೂರು ಚೆನ್ನಮ್ಮನ ಖಡ್ಗ

ಬೆನ್ನಲ್ಲಿ

ಸುಟ್ಟ ಸಿಗರೇಟಿನ ಉರಿ

ಸಾವಿರ ವಾಹನಗಳ

ಕೈ ಸನ್ನೆಯಲ್ಲೇ

ನಿಲ್ಲಿಸುವ ಟ್ರಾಫಿಕ್ ಪೇದೆ;

ವರ್ಷ ನಾಲ್ಕಾಯ್ತು

ಪ್ರಮೋಷನ್ ಸಿಗದೆ

“ಇಲ್ಲಿ ಲಿಂಗ ಪತ್ತೆ ಮಾಡಲಾಗುವುದಿಲ್ಲ”

ಹೇಳುತ್ತಿದೆ ಆಸ್ಪತ್ರೆಯ ಫಲಕ

ಹಿತ್ತಲ ಕಸದ ರಾಶಿಯ

ಒಳಗೆ

ಬೆಳಕೇ ಕಾಣದ ಮೊಳಕೆ

ಎಲ್ಲ ಸಮಸ್ಯೆಗೆ

ಪರಿಹಾರ ಹೇಳುವ ಜ್ಯೋತಿಷಿಯ

ಮಗಳು

ಅಚಾನಕ್ಕು ಓಡಿ ಹೋಗಿದ್ದಾಳೆ

ಇಂದು ಜ್ಯೋತಿಷ್ಯಾಲಯ ಬಂದು.

‍ಲೇಖಕರು avadhi

16 February, 2011

4 Comments

  1. chand

    ಚೆನ್ನಾಗಿದೆ ಕವನ…

  2. coffee

    belake kaanada molake …. tumbaa chennaagide.

  3. ravi

    annayavagi great agi betala guru

  4. ರಾಮ್

    ಪೇದೆಗೆ ಪ್ರಮೋಶನ್ ಸಿಗಲಿ…
    ನಿನ್ನ ಕವಿತೆ ಅವಧಿಯಲ್ಲಿ ಸದಾ ಮೊಳಕೆಯೊಡೆಯಲಿ….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading