ಇವತ್ತು ಸಮ್ಮೇಳನದಲ್ಲಿ ಒಳ್ಳೆ ವ್ಯಾಪಾರ. ಹುಚ್ಚಿ ಮದುವೇಲಿ ಉಂಡವನೇ ಜಾಣ ಎಂಬಂತೆ ಹಸಿದು ಬಂದವರಿಗೆ ಊಟ ಸಿಗಲಿಲ್ಲ. ವಾಸುದೇವ ಅಡಿಗರ ಊಟದ ವ್ಯವಸ್ಥೆ ಅಧ್ವಾನ. ಹಣದ ಧ್ಯಾನ. ೮೦ ಲಕ್ಷದ ಊಟದ ವಿದ್ಯಮಾನ ನಾಳೆಯೂ ಮುಂದುವರೆಯಲಿದೆ.
ಕೋಟಿ ಕೋಟಿಗಳು ಕೂಟಗಳೊಳಗೆ ಜೂಟಾ(ಜಾ)ಟವಾಡುತ್ತಿವೆ. ಉಳಿದಂತೆ ಬೋರು(ಉರು) ಹೊಡೆದ ಭಾಷಣಗಳು, ಭೀಷಣ ಮುಖದ ರಾಜಕಾರಣಿಗಳು, ವೇಷ ಹಾಕಿದ ಸಾಹಿತಿಗಳು, ಪರಿಷೆ ಎಂದುಕೊಂಡು ಕಡ್ಲೆಕಾಯಿ, ಚುರುಮುರಿ ಮುಕ್ಕಿದ ಬಸವನಗುಡಿಯ ಜೀವಿಗಳು.
–ಅರೇಹಳ್ಳಿ ರವಿ







ಅಲ್ಲಾ ಕಣ್ರೀ,
‘ಹಸಿದು ಬಂದವರಿಗೆ ಊಟ ಸಿಗಲಿಲ್ಲ’ ಅನ್ನೋದು ನೀವೂ ಕಂಡಿದ್ದೀರಿ, ಅಂದ ಮೇಲೆ ಮಕ್ಕಳು-ಮರಿಯೊಂದಿಗೆ ಬಂದಿದ್ದ ಸಾವಿರಾರು ಸಾರ್ವಜನಿಕರು ಕಡ್ಲೆಕಾಯಿ ತಿಂದರೇನು? ಚುರುಮುರಿ ಮುಕ್ಕಿದರೇನು??
ಮುಖ್ಯವಾಗಿ ಸಮ್ಮೇಳನದಲ್ಲಿ ಏನು ನಡೆಯುತ್ತಿದೆ ನೋಡೋಣ ಅನ್ನೋ ಕುತೂಹಲಕ್ಕಾದರೂ ಅಂಥಾ ಜನಜಂಗುಳಿಯ ನಡುವೆಯೂ (ಸಂಸಾರ-ಸಮೇತರಾಗಿ) ಬಂದು, ಪುಸ್ತಕಗಳನ್ನೂ ಕೊಂಡು, ಕೆಲಕಾಲ ಇದ್ದು ಹೋದರಲ್ಲಾ, ಅಷ್ಟು ಸಾಕಲ್ಲವೇ