– ಪ್ರೇರಣಾ ಕುಬಲ್
ಜೀವನದ ರಸ
ದಟ್ಟ ಕಾಡಿನಲ್ಲಿ
ಮನದಾಳದಲ್ಲಿ
ಹುಟ್ಟಿದ ಜನುಮದ ಜೀವ
ನವ ತಿಂಗಳ ರಸದಲ್ಲಿ
ರಾಕ್ಷಸರ ವಿಪಕ್ಷದಲ್ಲಿ
ಹೋರಾಡುವ ರಕ್ಷಕರ ಭಾವ
ಕೀಳ ಗೋಸುಂಬೆಗಾಗಿ
ಬೇಡದ ಮೋಹಕ್ಕಾಗಿ
ಕುತಂತ್ರಕ್ಕೆ ಕಳೆಯುವ ತಾಳ
ನೀ ಅರಿಯುವ ಮನಕ್ಕಾಗಿ
ಹೋರಲಾರದ ಭಾರಕ್ಕಾಗಿ
ಹಿಂಡಬೇಡ ಅಮೂಲ್ಯ ಜೀವ
ಹೂವಿದೆ ಕಂಡಲ್ಲಿ
ಆರಿಸುವ ಮುಳ್ಳಿನಲ್ಲಿ
ಮನಸ್ಸಿನಿಂದ ಕಲಿವ ಮನ
ಕಣ್ಣಿಗೆ ಕಾಣುವ ದೈವದಲ್ಲಿ
ಕೈಹಿಡಿದ ನಕ್ಷತ್ರದಲ್ಲಿ
ಅರಳುತಿಹುದು ನನ್ನ ಜೀವ






0 Comments