ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು.. ಭಾರತಿ ಬರಹ

        ಭಾರತಿ ಬಿ.ವಿ.   ಒಂದೂರಲ್ಲಿ ಒಬ್ಬಳು ಅಮ್ಮ ಮತ್ತು ಒಬ್ಬಳು ಮಗಳು …     ‘ನೆನ್ನೆ ಆ ದೇವಸ್ಥಾನಕ್ಕೆ ಹೋಗಿದ್ವಲ್ಲಾ ..ಅಲ್ಲಿ ಒಂದು ಕಲ್ಲಿನಲ್ಲಿ ಮೂರ್ತಿ ಉದ್ಭವ ಆಗಿದೆ ಕಣೇ! ವಿಚಿತ್ರ ಏನಪ್ಪಾ ಅಂದ್ರೆ ಒಂದೇ ಕಲ್ಲಿನ ಎರಡೂ ಕಡೆ ಒಂದೊಂದು ದೇವರ ಉದ್ಭವ ಆಗೋಗಿದೆ. ಅದಕ್ಕೆ ಪಾಪ ಏನ್ಮಾಡ್ತಾರೆ ಹೇಳು? ಜನರಿಗೆ ಎರಡನ್ನೂ ಕಾಣಿಸೋ ಹಾಗೆ ಹೇಗೆ ಮಾಡೋದು ಹೇಳು. ಅದಕ್ಕೇ ಒಂದು ಕಡೇದನ್ನ ಜನರಿಗೆ ಕಾಣೋ ಹಾಗೆ ಮತ್ತೆ ಹಿಂಭಾಗದಲ್ಲಿರೋದನ್ನ ಕಾಣೋ ಥರ ಹಿಂದಕ್ಕೆ ಒಂದು ಕನ್ನಡಿ ಇಟ್ಟು ಬಿಟ್ಟಿದಾರೆ. ಎಷ್ಟು ಚೆನ್ನಾಗಿದೆ ಗೊತ್ತೇನೇ? ….’ (ಅಮ್ಮನ ದೃಷ್ಟಿಯಲ್ಲಿ ಆ idea ಮಾಡಿದ ಅವನು newton mattu Einstein ಗಿಂತ ಹೆಚ್ಚಿನ ಬುದ್ದಿವಂತ ಮತ್ತು ವೈಜ್ಞಾನಿಕ ದೃಷ್ಟಿಕೋನವದವನಾಗಿಹೋಗಿದ್ದ!)   ‘ಅಮ್ಮಾ, ಆ ಉದ್ಭವ ಮಾಡಿಸಿದೋರು ಯಾಕೆ ಹೀಗೆ confuse ಮಾಡ್ಕೊಂಡ್ರು ಪಾಪ! ಮಾರ್ರ್ಕ್ ಮಾಡ್ಕೊಳ್ಳುವಾಗ ಒಂದೇ ಕಲ್ಲಿನ ಎರಡೂ ಕಡೆ ಉದ್ಭವ ಮಾಡ್ಸೋ ಅಂಥಾ ತಪ್ಪು ಮಾಡ್ಬಾರ್ದಿತ್ತು ಅಲ್ವಾ?!’   ‘ಥೂ ನಿಂದು ಬರೀ ತಲೆಹರಟೇನೇ ಆಯ್ತು. ಅದ್ಯಾವಾಗ ನೀನು ಉದ್ಧಾರ ಆಗ್ತೀಯೋ ಗೊತ್ತಿಲ್ಲ. ನಿಂಗೆ ಗೊತ್ತಿಲ್ಲ ಸುಮ್ನಿರು. ‘ಆ ಊರಿನಲ್ಲಿ’ ಒಂದು ಕಂಭದಲ್ಲಿ ಗಣಪತಿ ಉದ್ಭವ ಆಗಿದೆಯಲ್ಲ .. ಅದರ ಕಥೆ ಗೊತ್ತಾ ನಿಂಗೆ? ನಾವು ವರ್ಷಗಳ ಹಿಂದೆ ಹೋಗ್ತಿದ್ದಾಗ ಆ ಕಂಭದಲ್ಲಿ ಬರೀ ಗೀರುಗಳು ಮೂಡ್ತಿದ್ವು. ಅದನ್ನ ಅಲ್ಲಿ ಹೋದಾಗ ನಾವು ನೋಡ್ತಾ ಇದ್ವಿ. ಆಗ ಈ ಥರ ಬುದ್ಧಿ ಇಲ್ಲದ ನೀನು ಕೂಡಾ ಅದನ್ನ ಬಾಯಿ ಬಾಯಿ ಬಿಟ್ಕೊಂಡು ನೋಡ್ತಿದ್ದೆ. ಹಾಗೇಏಏಏಏಏಏ ವರ್ಷಗಳು ಕಳೀತಾ ಕಳೀತಾ ಅಲ್ಲಿ ಗಣಪತಿ ಆಕಾರ ಮೂಡಿದೆ ಗೊತ್ತಾ? ….’   ‘ಅಲ್ಲಿಯವರು ಬುದ್ಧಿವಂತರಿರಬೇಕು ಅಮ್ಮಾ .. ದಿನಾ ಚೂರು ಚೂರೇ ಏಟು ಹಾಕ್ರೋ .. ನಿಧಾನಕ್ಕೆ ಮೂಡಿಸಿ .. ಒಂದೇ ದಿನ ಕೆತ್ತಿಟ್ಟು ಬಿಡಬೇಡಿ ಅಂತ ಸರಿಯಾಗಿ instruction ಕೊಟ್ಟಿದಾರೆ ಅಂತ ಅನ್ಸತ್ತೆ!’   ‘ನೀನೋ, ನಿನ್ನ ವಿತಂಡ ವಾದವೋ! ಒಂದು ಕಥೆ ಗೊತ್ತಾ ನಿನ್ಗೆ? .. ಒಂದೂರಲ್ಲಿ ಒಬ್ಬ ಮನುಷ್ಯ ಒಂದು ಗಾಣ ಇಟ್ಟಿದ್ನಂತೆ. ಅದು ಸುತ್ತಕ್ಕೆ ಒಂದು ಎತ್ತು ಕಟ್ಟಿದ್ನಂತೆ. ಅದು ಸದಾ ಕಾಲ ಅದರ ಪಾಡಿಗೆ ಸುತ್ತುತ್ತಾ ಇರ್ತಿತ್ತಂತೆ. ಈ ಮನುಷ್ಯ ಅವನ ಪಾಡಿಗೆ ಅವನು ಒಳಗೆ ಇರ್ತಿದ್ನಂತೆ. ಒಬ್ಬ ದಾರಿಹೋಕ ಇದನ್ನ ನೋಡಿದವನು ‘ಎತ್ತು ತಿರುಗ್ತಾ ಇದೆ ಅನ್ನೋದು ನಿಮ್ಗೆ ಹೇಗೆ ಗೊತ್ತಾಗತ್ತೆ?’ ಅಂದ್ನಂತೆ. ಅದಕ್ಕೆ ಗಾಣದ ಒಡೆಯ ‘ಅದರ ಕುತ್ತಿಗೆಗೆ ಒಂದು ಘಂಟೆ ಕಟ್ಟಿದೀನಿ. ಅದರ ಸದ್ದು ಕಿವಿ ಮೇಲೆ ಬೀಳ್ತಾ ಇರತ್ತೆ. ಅದು ಸುಮ್ನೆ ನಿಂತ್ರೆ ನನಗೆ ಆ ಸದ್ದು ಕೇಳಿಸೋದಿಲ್ವಲ್ಲ ಹಾಗಾಗಿ ನನಗೆ ಅದು ಸುತ್ತುತಾ ಇದೆಯೋ, ಇಲ್ವೋ ಅಂತ ಗೊತ್ತಾಗತ್ತೆ’ ಅಂದ್ನಂತೆ. ಅದಕ್ಕೆ ಆ ದಾರಿಹೋಕ ‘ಅದು ನಿಂತ ಕಡೆಯೇ ಕುತ್ತಿಗೆ ಅಲ್ಲಾಡಿಸಿದ್ರೂ ಆ ಘಂಟೆ ಸದ್ದು ಕೇಳತ್ತಲ್ಲಾ !’ ಅಂದನಂತೆ. ಅದಕ್ಕೆ ಇವನು ‘ನನ್ನ ಎತ್ತಿಗೆ ನಿನ್ನ ಹಾಗೆ ದರಿದ್ರ, ಕುಟಿಲ ಬುದ್ದಿ ಇಲ್ಲ’ ಅಂದನಂತೆ! ನಿನ್ಗೂ ಈಗ ನಾನು ಇದನ್ನೇ ಹೇಳಬೇಕು ನಾನು .. ಎಲ್ಲದರಲ್ಲೂ ಈ ಕಿಡಿಗೇಡಿ ಬುದ್ಧಿ ತೋರಿಸ್ತೀಯಲ್ಲೇ … ಬರೀ ಇಂಥ ಅನುಮಾನಗಳು ನಿನ್ಗೆ ಮಾತ್ರ ಅದ್ಯಾಕೆ ಬರುತ್ವೋ .. ನಂಬ್ಕೊಂಡು ತೆಪ್ಪಗೆ ಇರಬಾರದಾ?! …..’   – ಇದು ನನ್ನ ಮತ್ತು ನನ್ನ ಅಮ್ಮನ ಮಧ್ಯೆ ನೆನ್ನೆ ನಡೆದ ಪ್ರೀತಿಯ ಒಂದು ಸಂಭಾಷಣೆ!! ನಾನು ಯಾಕೆ ಹೀಗೆ ಅನ್ನೋ ಪ್ರಶ್ನೇನ ಪಾಪ ಅದೆಷ್ಟೊಂದು ಸಲ ಕೇಳ್ಕೊಂಡು ಸುಸ್ತಾಗಿ ಮುಂದಿನ ಜನ್ಮದಲ್ಲಿ ನೀನು ನನ್ನ ಮಗಳಾಗಿ ಹುಟ್ಟಬೇಡ ಕಣೇ ಅಂದು ಬಿಟ್ಳು ಒಂದು ದಿನ … ಆ ಕ್ಷಣಕ್ಕೆ ನಗುವೂ ಬಂತು, ನೋವೂ ಆಯ್ತು ..      ]]>

‍ಲೇಖಕರು G

13 January, 2012

3 Comments

  1. santosh dharmraj

    awsm superrrrrrr 1 tq very much mam

  2. Ashok Shettar

    Aaltoo phaaltoo sahityada bagge doddadaagi koreyo amateurgaliginta inthadondu baraha saavira paalu melu.‘ನೀನೋ, ನಿನ್ನ ವಿತಂಡ ವಾದವೋ! ಒಂದು ಕಥೆ ಗೊತ್ತಾ ನಿನ್ಗೆ? .. ಒಂದೂರಲ್ಲಿ ಒಬ್ಬ ಮನುಷ್ಯ ಒಂದು ಗಾಣ ಇಟ್ಟಿದ್ನಂತೆ. ಅದು ಸುತ್ತಕ್ಕೆ ಒಂದು ಎತ್ತು ಕಟ್ಟಿದ್ನಂತೆ. ಅದು ಸದಾ ಕಾಲ ಅದರ ಪಾಡಿಗೆ ಸುತ್ತುತ್ತಾ ಇರ್ತಿತ್ತಂತೆ. ಈ ಮನುಷ್ಯ ಅವನ ಪಾಡಿಗೆ ಅವನು ಒಳಗೆ ಇರ್ತಿದ್ನಂತೆ. ಒಬ್ಬ ದಾರಿಹೋಕ ಇದನ್ನ ನೋಡಿದವನು ‘ಎತ್ತು ತಿರುಗ್ತಾ ಇದೆ ಅನ್ನೋದು ನಿಮ್ಗೆ ಹೇಗೆ ಗೊತ್ತಾಗತ್ತೆ?’ ಅಂದ್ನಂತೆ. ಅದಕ್ಕೆ ಗಾಣದ ಒಡೆಯ ‘ಅದರ ಕುತ್ತಿಗೆಗೆ ಒಂದು ಘಂಟೆ ಕಟ್ಟಿದೀನಿ. ಅದರ ಸದ್ದು ಕಿವಿ ಮೇಲೆ ಬೀಳ್ತಾ ಇರತ್ತೆ. ಅದು ಸುಮ್ನೆ ನಿಂತ್ರೆ ನನಗೆ ಆ ಸದ್ದು ಕೇಳಿಸೋದಿಲ್ವಲ್ಲ ಹಾಗಾಗಿ ನನಗೆ ಅದು ಸುತ್ತುತಾ ಇದೆಯೋ, ಇಲ್ವೋ ಅಂತ ಗೊತ್ತಾಗತ್ತೆ’ ಅಂದ್ನಂತೆ. ಅದಕ್ಕೆ ಆ ದಾರಿಹೋಕ ‘ಅದು ನಿಂತ ಕಡೆಯೇ ಕುತ್ತಿಗೆ ಅಲ್ಲಾಡಿಸಿದ್ರೂ ಆ ಘಂಟೆ ಸದ್ದು ಕೇಳತ್ತಲ್ಲಾ !’ ಅಂದನಂತೆ. ಅದಕ್ಕೆ ಇವನು ‘ನನ್ನ ಎತ್ತಿಗೆ ನಿನ್ನ ಹಾಗೆ ದರಿದ್ರ, ಕುಟಿಲ ಬುದ್ದಿ ಇಲ್ಲ’ ಅಂದನಂತೆ! ನಿನ್ಗೂ ಈಗ ನಾನು ಇದನ್ನೇ ಹೇಳಬೇಕು ನಾನು .. ಎಲ್ಲದರಲ್ಲೂ ಈ ಕಿಡಿಗೇಡಿ ಬುದ್ಧಿ ತೋರಿಸ್ತೀಯಲ್ಲೇ … ಬರೀ ಇಂಥ ಅನುಮಾನಗಳು ನಿನ್ಗೆ ಮಾತ್ರ ಅದ್ಯಾಕೆ ಬರುತ್ವೋ .. ನಂಬ್ಕೊಂಡು ತೆಪ್ಪಗೆ ಇರಬಾರದಾ?! …..’idantoo THE best.I agree with your mom:)

  3. lalitha siddabasavaiah

    ಸರಿಯಾಗಿ ಬರಿದಿದ್ದೀಯಮ್ಮ ಭಾರತಿ. ಏನೋ ನಮ್ಮ ಮಕ್ಕಳು ನಾವು ಹೇಳಿದ್ದನ್ನು ಕೇಳುತ್ತವೆ ಅಂತ ಅಮ್ಮಂದಿರು ಆಸೆಪಟ್ಟು ಏನಾದರು ಹೇಳಿದರೆ ತಲೆಗೊಂದು ಮಾತಾಡಿದರೆ ಏನ್ಮಾಡೋದು ಹೇಳು? ನಮ್ಮ ಅಮ್ಮ ನನ್ನ ಅಧಿಕಪ್ರಸಂಗಕ್ಕೆ ರೋಸಿ ” ತಲೆಗೆ ಜೋಡು ಕೇಳ್ತೀಯಲ್ಲೆ ನೀನು ಎಲ್ರು ಕಾಲಿಗೆ ಕೇಳಿದ್ರೆ” ಅನ್ನೋರು. ಈಗ ಮಗಳು ಅನಕ್ಷರಸ್ಥರಿಗೆ ಹೇಳೋ ಹಾಗೆ ಅದೆ ಬಿಳಿ ಬಣ್ಣದ ಮಾತ್ರೆ , ಕೆಂಪು ಬಣ್ಣದ ಕವರ್, ಡಿಪಾರ್ಚರ್ ಅಂದ್ರೆ ಹೊರಡೊದು , ಆ ಬೋರ್ಡ್ ಹತ್ರ ನಿಂತ್ಕೊ ಗೊತ್ತಾಯ್ತಾ ಅನ್ನೊವಾಗ ನಿಮ್ಮಮ್ಮನಿಗೆ ಮೈಯುರಿದ ಹಾಗೇ ನನಗೂ ಆಗುತ್ತೆ. ಎಲಾ ಇವಳಾ ಅಂದುಕೊಳ್ತೇನೆ. ನಮ್ಮಮ್ಮನ ಬೈಗುಳ ನೆನಪಿಸಿಕೊಳ್ತೇನೆ. ಭಾರತಿ , ಮುಂದೊಂದಿನ ನಿನ್ನ ಮಗಳಿಗೆ ಹೇಳೋಕ್ಕೆ ಈ ಕಥೆ ಬೇಕಾಗುತ್ತೆ ನೆನೆಪಿಟ್ಟುಕೊ.- ಲಲಿತಾ ಸಿದ್ಧಬಸವಯ್ಯ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading