ಪ್ರತಿಯೊಬ್ಬರೂ ಜಾಗೃತರಾಗಿರಿ
ಯಾಕೋ ನನ್ನ ಮನವಿಂದು ವಿಚಿತ್ರ ರೀತಿಯಿಂದ ಚಡಪಡಿಸುತ್ತಿದೆ. ಒಂದೊಮ್ಮೆ ಆಕ್ರೋಶ, ಒಂದೊಮ್ಮೆ ಕೋಪ, ಮತ್ತೊಮ್ಮೆ ಕೆರಳಿದರೆ, ಇನ್ನೊಮ್ಮೆ ಯಾವುದೂ ಬೇಡವೆಂದು ಮುಡುಡಿಕೊಂಡು ಸ್ತಬ್ದವಾಗಿಬಿಡುತ್ತದೆ. ಮನಸ್ಸಿನಿ ಈ ತಳಮಳ, ಚಂಚಲತೆಗೆ ಕಾರಣವೇನೆಂದು ಹುಡುಕಲು ಮುಂದಾದರೆ, ಮಹಿಳೆಯರನ್ನು ಪೂಜಿಸುವ ಈ ಸಮಾಜದಲ್ಲಿ ಯಾಕಿಷ್ಟು ಮಹಿಳೆ ಶೋಷಿತಳಾಗುತ್ತಿದ್ದಾಳೆಂಬ ಗೊಂದಲ. ಪುರಾಣಗಳ ಕಾಲದಿಂದಲೂ ಹೆಣ್ಣನ್ನು ಪೂಜಿಸುತ್ತಾ, ಗೌರವಿಸುತ್ತಾ, ಗಂಡಿಗೆ ಸಮಾನಳೆಂಬ ವ್ಯಾಕ್ಯಾನು ನೀಡುತ್ತಲೇ, ಹೆಣ್ಣಗೆ ಒಂದು ಚೌಕಟ್ಟನ್ನು ಹಾಕಿ, ಅವಳ ಮೇಲೆ ದೌರ್ಜನ್ಯ, ಅತ್ಯಾಚಾರ, ವರದಕ್ಷಣೆ ಕಿರುಕೊಳ ನೀಡುತ್ತಲೇ ಬಂದಿದೆ ಈ ಪುರುಷ ಪ್ರಧಾನ ಸಮಾಜ, ನೀನು ಹೀಗೆ ಬಾಳಬೇಕೆಂಬ ಬೇಲಿಯನ್ನು ಹಾಕಿಬಿಡುತ್ತಿದೆ. ಹೆಣ್ಣು ಇದನ್ನು ದಾಟಿ ಬರುವಂತಿಲ್ಲ. ಆದರೂ ಅದೆಷ್ಟೋ ಮುಗ್ದ ಮನಗಳಿಲ್ಲಿ ಬಲಿಯಾಗಿ ನರುಳುತ್ತಿವೆ. ಈ ನರಳಾಟವಂತೂ ಯಾರ ಕಿವಿಗೂ ಕೇಳಿಸುತ್ತಿಲ್ಲ. ಕೇಳಿಸಿದರೂ ಕಿವುಡರಂತೆ ವತರ್ಿಸುತ್ತಿರುವರೇ? ಎಂಬ ಅನುಮಾನ ಹೆಣ್ಣು ಮಕ್ಕಳಲ್ಲಿ ನೋವನ್ನು ತಂದಿದೆ.
ಪುರುಷ ಪ್ರಧಾನ ಸಮಾಜದಲ್ಲಿ ಹೂವಿನಂತಹ ಮನಸ್ಸಿರುವ ಹೆಣ್ಣನ್ನು ಹೊಸಕಿ ಹಾಕುತ್ತಿದ್ದಾರೆ. ಅವಳಿಗೂ ಮನಸ್ಸಿದೆ, ಅವಳನ್ನು ನೋಯಿಸಬಾರದು ಎಂಬ ಅಲ್ಪ ಇಂಗಿತ ಜ್ಞಾನಕೊಡ ಇಲ್ಲದಾಗಿದೆ. ಅವಳನ್ನು ಸದಾ ಸೇವಕಿಯಂತೆಯೇ ನೋಡುತ್ತಾರೆ. ಹೆಣ್ಣು ತನ್ನ ಮೇಲಾಗುವ ದೌರ್ಜನ್ಯ, ಅನ್ಯಾಯವನ್ನು ಮೆಟ್ಟಿ ನಿಲ್ಲುವ ಒಂದು ಶಕ್ತಿಯಾಗಿ ನಿಲ್ಲಬೇಕು.
ಇದರ ನಡುವೆ ಅನ್ಯರಾಜ್ಯಗಳಿಂದ ಉನ್ನತ ಶಿಕ್ಷಣಕ್ಕೆ ಇಲ್ಲಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಲೇ ಇದೆ. ಹೀಗೆ ಬರುವ ವಿಧ್ಯಾರ್ಥಿಗಳು ಹೆಚ್ಚಾಗಿ ಶ್ರೀಮಂತ ಕುಟುಂಬದ ಮಕ್ಕಳೇ ಆಗಿರುವುದರಿಂದ, ಇಲ್ಲಿ ಹಲವಾರು ವಿದ್ಯಾರ್ಥಿಗಳು ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸಲು ಮುಂದಾಗುತ್ತಾರೆ. ಇಲ್ಲಿ ಹುಡುಗ ಹುಡುಗಿಯರಿಬ್ಬರೂ ಒಟ್ಟಿಗೆ ಇರುತ್ತಾರೆ. ಇದನ್ನು ಲಿವಿಂಗ್ ರಿಲೇಷನ್ಶಿಪ್ ಎಂಥಲೂ ಕರೆಯುತ್ತಾ, ಆ ಸಂಸ್ಕೃತಿಗೆ ಒಗ್ಗಿಕೊಂಡು ಬದಕಲು ಸಜ್ಜಾಗುತ್ತಾರೆ. ವಿದ್ಯಾಭ್ಯಾಸದ ಜತೆಗೆ ಇಂಥ ವಿದ್ಯಾರ್ಥಿಗಳು ಸ್ವೇಚ್ಛಾಚಾರದಿಂದ ಬದುಕನ್ನು ರೂಢಿಸಿಕೊಂಡು, ಹೇಳಲು ಕೇಲಲು ಯಾರು ಇಲ್ಲದಾಗ, ಈ ಇಬ್ಬರೂ ಒಟ್ಟಿಗೆ ರಾತ್ರಿ ವೇಳೆ ಕುಡಿಯುವುದು, ಅಸಭ್ಯವಾಗಿ ವರ್ತಿಸುತ್ತಾ ರಸ್ತೆಗಳಲ್ಲಿ ಓಡಾಡುವುದು, ಏನಾದರೂ ಕೇಳಿದರೆ ಕೇಳಿದರವರ ಮೈಮೇಲೆ ಬೀಳುವುದು, ಇಂದು ಈ ಮಾಯಾನಗರಿಯಲ್ಲಿ ಸಹಜವಾಗಿಬಿಟ್ಟಿದೆ. ಅಲ್ಲದೆ ಇಲ್ಲಿನ ಹೆಣ್ಣು ಮಕ್ಕಳಿಗೆ ಇದರಿಂದ ಮುಜುಗರವಾಗುತ್ತಿದೆ. ಇದರಿಂದಲೂ ಅನೇಕ ಅತ್ಯಾಚಾರಗಳು ನಡೆಯುವ ಸಂಬವಿದೆ. ಇದನ್ನು ಇಲ್ಲಿ ವಾಸಿಸುತ್ತಿರುವ ಹೆಣ್ಣು ಮಕ್ಕಳು ಅರ್ಥಮಾಡಿಕೊಂಡು ಬದಕಬೇಕಾಗಿದೆ. ಇದರಿಂದ ಮುಗ್ದ ಕಂದಮ್ಮಗಳೂ ಸಹ ದೃಷ್ಠರಿಗೆ ಬಲಿಯಾಗುತ್ತಿದ್ದಾರೆ. ಇಂತಹವರೇನಾದರೂ ನಿಮ್ಮ ಆಸುಪಾಸಿನಲ್ಲಿದ್ದರೆ ಅವರನ್ನು ಖಂಡಿಸಿ. ಅವರು ಹೇಗೆ ಬದುಕಬೇಕೆಂಬುದನ್ನೂ ತಿಳಿಹೇಳಿ.
ಈ ಸಮಾಜದಲ್ಲಿ ತಾಯಿಯ ಪಾತ್ರ ಬಹಳ ದೊಡ್ಡದು. ಇವಳು ತನ್ನ ಮಕ್ಕಳನ್ನು ಬಹಳ ಜಾಕರೂಕತೆಯಿಂದ ನೋಡಿಕೊಳ್ಳಬೇಕು. ಅವರಿಗೆ ಲೈಂಗಿಕ ಶಿಕ್ಷಣದ ಬಗ್ಗೆ ಹರಿವು ಮೂಡಿಸಬೇಕು. ಅದರಲ್ಲೂ ನಮ್ಮ ಪುಟಾಣಿ ಮಕ್ಕಳನ್ನು ತಾಯಂದಿರು ದಯಮಾಡಿ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಿ. ಎಲ್ಲದಕ್ಕೂ ಕಾನೂನು, ಪೊಲೀಸರನ್ನು ನಂಬಿ ಕೂತರೆ ಸಾಲದು. ನಮ್ಮ ಜಾಗ್ರತೆ ನಮ್ಮಲ್ಲಿ ಇರಲಿ. ಕಾನೂನು, ಪೊಲೀಸರು ಅವರ ಕರ್ತವ್ಯವನ್ನ ಅವರು ಸರಿಯಾದ ರೀತಿಯಲ್ಲಿ ನಿಭಾಯಿಸಬೇಕು. ಇದು ಇಂದು ಆಗುತ್ತಿಲ್ಲ ಅದೇ ನಮ್ಮ ಕೊರಗು. ಆದಷ್ಟು ಬೇಗ ಇದರ ಕೆಲಸ ಕಾರ್ಯಗಳು ಚುರುಕಗಾಗಿ ನಡೆಯಬೇಕಿದೆ. ಅದೇನೇ ಆಗಲಿ ನಮ್ಮ ಮಕ್ಕಳ ಜವಾಬ್ದಾರಿಯನ್ನು ನಾವು ಮೊದಲು ತೆಗೆದುಕೊಳ್ಳೋಣ. ಮನೆಯ ಅಕ್ಕ-ಪಕ್ಕದವರಾಗಲಿ, ಗೊತ್ತಿಲ್ಲದವರಾಗಲಿ ಚಾಕಲೇಟ್ ಕೊಡಿಸುವೆ ಬಾ ಎಂದಾಗ, ಹೋಗಬಾರದೆಂಬ ಅರಿವನ್ನು ನಿಮ್ಮ ಮಕ್ಕಳಲ್ಲಿ ಮೂಡಿಸಿ. ಯಾವದೇ ಪರ ಪುರುಷರು ಮಗುವಿನ ಮೇಲಾಗಲಿ, ಗುಪ್ತಾಂಗಗಳ ಮೇಲೆಗಾಲಿ ಕೈಯಾಡಿಸಲು ಮುಂದಾದರೆ ಅದನ್ನು ಖಂಡಿಸಲು ಹೇಳಿಕೊಡಿ. ಇದರಿಂದ ನಿನ್ನ ಜೀವಕ್ಕೆ ಅಪಾಯವೆಂದು ಮನವರಿಕೆ ಮಾಡಿಕೊಡಿ. ಎಲ್ಲಿಯೂ ಒಂಟಿಯಾಗಿ, ಯಾರನ್ನೋ ನಂಬಿ ನಿಮ್ಮ ಮಗಳನ್ನು ಬಿಟ್ಟು ಹೋಗಬೇಡಿ. ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳಾದರೆ ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಹೇಳಿಕೊಡಿ. ಮನೆಗೆ ತಡವಾಗಿ ಬರುಲು ಬಿಡಬೇಡಿ. ಏನಾದರೂ ತರಗತಿಗಳಿದ್ದರೆ ಅದಕ್ಕೆ ಅವರು ಹೋಗಲಿ.

ಇನ್ನು ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳಂತೂ ಇನ್ನೂ ಜಾಗೃತರಾಗಿರಬೇಕು. ಯಾವ ಹುಡುಗನ ಬಣ್ಣ ಬಣ್ಣದ ಮಾತಿಗೆ ಮರುಳಾಗಬೇಡಿ. ಅವನೆಷ್ಟೇ ನಿಮ್ಮನ್ನು ನಂಬಿಸಿ ಒಂಟಿಯಾಗಿ ಗುಪ್ತ ಸ್ಥಳಗಳಿಗೆ ಕರೆದರೆ ಹೋಗಬೇಡಿ. ನಿಮ್ಮ ಮನೆಯವರು ನಿಮಗೆ ಕೊಟ್ಟಿರುವ ಸ್ವಾಂತ್ರ್ಯವನ್ನು ದುರುಪಯೋಗ ಮಾಡಿಕೊಳ್ಳಬೇಡಿ. ನಿಮಗೆ ಬೇಕಾದ್ದನ್ನು ನಿಮ್ಮ ತಾಯಿ-ತಂದೆಯರ ಬಳಿ ಕೇಳಿ ಪಡೆಯಿರಿ. ಅಲ್ಲದೆ ಮೊಬೈಲ್ಗಳ ಬಳಸುವಿಕೆಯನ್ನು ಕಡಿಮೆ ಮಾಡಿ. ಇದರಿಂದ ಯಾರೋ ಅಪರಿಚಿತನ ಜೊತೆ, ಅಂತರ್ಜಾಲಗಳಲ್ಲಿ ಚಾಟ್ ಮಾಡುವುದು ಬೇಡ. ಇದರಿಂದಲೂ ಅದೆಷ್ಟೋ ಅನಾಹುತಗಳಾಗಿರುವುದನ್ನು ನೀವು ಕೇಳಿದ್ದೀರ, ದೃಶ್ಯ ಮಾಧ್ಯಮಗಳಲ್ಲಿ ನೋಡಿದ್ದೀರ ಕೂಡ. ಹಲವು ಕುಟುಂಬಳಲ್ಲಿ ನಾವು ಕಾಣುತ್ತಲಿದ್ದೇವೆ ತಾಯಿ ಅಥವ ತಂದೆಯ ಮಾತಿಗೆ ಬೆಲೆ ಕೊಡುವುದಿಲ್ಲ. ಅವರ ಮಾತನ್ನು ಕೇಳುವುದಿಲ್ಲ, ಅವರನ್ನು ಬಾಯಿಗೆ ಬಂದಂತೆ ಬೈಯುವ ಹೆಣ್ಣು ಮಕ್ಕಳನ್ನೂ ಸಹ ನಾವು ನೋಡಿದ್ದೇವೆ. ಯಾವ ತಂದೆ-ತಾಯಿಯೂ ಮಕ್ಕಳಿಗೆ ಕೆಷ್ಟದ್ದನ್ನು ಬಯಸುವುದಿಲ್ಲ. ಹಿರಯರನ್ನು ಗೌರವಿಸುವುದನ್ನು ಮೊದಲು ನೀವುಗಳ ಕಲಿಯಬೇಕು. ಅವರಿಗೆಷ್ಟೇ ತೊಂದರೆಗಳಿದ್ದರೂ ನಿಮ್ಮ ಕಾಲೇಜಿಗೆ ಕಳುಹಿಸುತ್ತಿರುತ್ತಾರೆ. ಈಗಿನ ಹೆಣ್ಣು ಮಕ್ಕಳು ಓದಿ ತಮ್ಮ ಕಾಲ ಮೇಲೆ ತಾವು ನಿಲ್ಲಬೇಕೆಂಬ ಹಂಬಲ ಹೆತ್ತವರಿಗಿರುತ್ತದೆ. ಕೆಲಮೊಮ್ಮೆ ಹಟ ಮಾಡಿ ಮೊಬೈಲ್ಗಳನ್ನು ತೆಗೆಸಿಕೊಳ್ಳುತ್ತೀರ. ತೆಗೆದುಕೊಟ್ಟ ತಂದೆ-ತಾಯಿಗಳೇ ಕರೆ ಮಾಡಿದರೂ ಕೆಲವೋಮ್ಮೆ ಅವರ ಕರೆಯನ್ನು ಸ್ವೀಕರಿಸುವುದಿಲ್ಲ. ನಿಮ್ಮ ಪ್ರಪಂಚದಲ್ಲಿ ನೀವು ಇರುತ್ತೀರ. ಯಾವುದೋ ಹುಡುಗನ ಕರೆ ಸ್ವೀಕರಿಸಿ ಗಂಟೆ ಗಟ್ಟಲೆ ಮಾತನಾಡುತ್ತೀರ. ಮೊದಲು ಹಿರಿಯರಿಗೆ, ಗುರುಗಳಿಗೆ ಗೌರವ ಕೊಡುವುದನ್ನು ಕಲಿತುಕೊಳ್ಳಿ.
ನೀವು ಸಹ ಈ ಸಮಾಜದಲ್ಲಿ ಪುಟ್ಟ ಪುಟ್ಟ ಕಂದಮ್ಮಗಳ ಮೇಲೆ ನಡೆಯುತ್ತಿರುವ ಅತ್ಯಾಚಾರವನ್ನು ಖಂಡಿಸಲು ಮುಂದಾಗಬೇಕು. ಪುಟ್ಟ ಮಕ್ಕಳು ಒಂಟಿಯಾಗಿ ಇದ್ದಾಗ ಅವರ ಮೇಲೆ ಸ್ವಲ್ಪ ನಿಗಾಯಿಡಿ, ಯಾರಾದರೂ ಬಂದು ಕರೆದರೆ ತಕ್ಷಣ ಅವರು ಯಾರೆಂದು ನೀವು ವಿಚಾರಿಸಿ, ಮಗುವನ್ನು ತಾಯಿಯ ಬಳಿ ಬಿಡಿ. ಈ ಸಮಾಜದಲ್ಲಿ ಪ್ರತಿಯೊಬ್ಬರೂ ಜಾಗರೂಕರಾಗಬೇಕಿದೆ. ಆಗ ಇಂತಹ ಘಟನೆಗಳನ್ನು ನಿಲ್ಲಿಸಬಹದು. ಅಲ್ಲದೆ ಕಾಲೇಜಿಗೆ ಹೋಗುವ ಹುಡುಗಿಯರಾಗಲಿ, ಕೆಲಸಗಳಿಗೆ ಹೋಗುವ ಹುಡುಗಿಯರಾಗಲಿ, ನಿಮ್ಮ ನಿಮ್ಮ ಉಡುಗೆ ತೊಡುಗೆಗೆಗಳ ಮೇಲೆ ಸ್ವಲ್ಪ ಗಮನ ಕೊಡಿ. ಐಟಿಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳು ಇನ್ನೂ ಬಹಳ ಹೆಚ್ಚರಿಕೆಯಿಂದ ಇರಬೇಕು. ಇಲ್ಲಿ ನಿಮಗೆ ಸಂಪೂರ್ಣ ಸ್ವಾತಂತ್ರ್ಯವಿರುತ್ತದೆ. ಆದ ಕಾರಣ ನೀವುಗಳು ಸಹ ಅಂತರ್ಜಾಲದಲ್ಲಿನ ಪರಿಚಯವಿಲ್ಲದ ಹುಡುಗರ ಜೊತೆ ಚಾಟ್ ಮಾಡಿ ಅವರೊಟ್ಟಿಗೆ ಎಲ್ಲಿಯೂ ಹೋಗಲು ಮುಂದಾಗಬೇಡಿ. ಅಥವ ನಿಮ್ಮ ಸಹಪಾಡಿಗಳೇ ಕೆಲವೊಮ್ಮೆ ನಿಮ್ಮನ್ನು ಮೋಸ ಮಾಡಲು ಮುಂದಾಗಬಹುದು. ಆಗ ನೀವು ಎಷ್ಟು ಬೇಗ ಸಾಧ್ಯವೋ, ಅಷ್ಟು ಬೇಗ ಜಾಗರೂಕರಾದಲ್ಲಿ ಮಾತ್ರ ನೀವು ತೊಂದರೆಯಿಂದ ಪಾರಾಗಬಹುದು. ನೀವು ಪ್ರೀತಿಸುವುದು ತಪ್ಪಲ್ಲ, ಆದರೆ ನಿಮ್ಮ ಆಯ್ಕೆ ಮಾತ್ರ ಸರಿಯಾಗಿರಲಿ. ಪ್ರೀತಿಯೆಂಬ ಹೆಸರಿನಲ್ಲಿಯೂ ಇಂದು ಮೋಸಗಳು ನಡಯುತ್ತಲಿವೆ, ಅತ್ಯಾಚಾರದಂತಹ ಘಟನೆಗಳು ನಡೆಯುತ್ತವೆ. ಎಲ್ಲವೂ ಹೆಣ್ಣು ಮಕ್ಕಳಾದ ನಮ್ಮ ಮೇಲೆ ತುಂಬಾ ಹೊಣೆ ಇದೆ. ಏನೇ ಆದರೂ ಕೊನೆಗೆ ನೋವು ಅನುಭವಿಸುವುದು ಮಾತ್ರ ಹೆಣ್ಣು ಮಕ್ಕಳೇ.
ಆದಷ್ಟು ಬೇಗ ಸರ್ಕಾರ, ಅತ್ಯಾಚಾರ ಮಾಡಿದ ವ್ಯಕ್ತಿ ಯಾವುದೇ ವಯಸ್ಸಿನವನಾಗಿರಲಿ ಅಂಥವರಿಗೆ ಕಠಿಣ ಶಿಕ್ಷೆ, ಇಲ್ಲವೆ ಜೀವಾವಧಿ ಶಿಕ್ಷೆಗಳಾಗುವಂತೆ ಮಾಡಬೇಕಿದೆ. ಅತ್ಯಾಚಾರಿವೇನಾದರೂ ನಿಮ್ಮ ಆಸುಪಾಸಿನಲ್ಲಿ ನಡೆದರೆ, ಕೈಕಟ್ಟಿ ಸುಮ್ಮನೇ ಕೂರಬೇಡಿ, ಅಂತಹ ಕ್ರೂರಿಗೆ ತಕ್ಕ ಶಿಕ್ಷೆಯನ್ನು ಕೊಡಲು ಮುಂದಾಗಿ.
ಇನ್ನೂ ಗಂಡು ಮಕ್ಕಳನ್ನೆತ್ತ ತಂದೆ-ತಾಯಿಗಳ ಜವಾಬ್ದಾರಿಯಂತೂ ಇಲ್ಲ ಬಹಳ ದೊಡ್ಡದು. ಅವರಿಗೆ ನಮ್ಮ ದೇಶದ ಆಚಾರ-ವಿಚಾರ, ನಮ್ಮ ಸಂಸ್ಕೃತಿಯ ಅರಿವನ್ನು ಮೂಡಿಸಿ. ಇವರನ್ನು ಹೆಣ್ಣು ಹೆತ್ತ ತಂದೆ-ತಾಯಿಯರಿಗಿಂತ, ಗಂಡು ಮಕ್ಕಳನ್ನು ಹೆತ್ತ ತಂದೆ-ತಾಯಿಗಳು ಅತ್ಯಂತ ಜಾಗ್ರತೆಯಿಂದ ನೋಡಿಕೊಂಡು, ನಮ್ಮ ಮೌಲ್ಯಗಳ ಅರಿವನ್ನು ಅರಲ್ಲಿ ಮೂಡಿಸಿ. ಅವರಿಗೂ ಮೊಬೈಲ್ಗಳನ್ನು ಕೊಡಿಸಬೇಡಿ, ಕೊಡಿಸಿದರೂ ಮಗ ಎಲ್ಲಿ ಹೋಗುತ್ತಾನೆ? ಯಾರ ಜೊತೆ ಮಾತನಾಡುತ್ತಾನೆ? ಅವನ ನಡುವಳಿಕೆಯ ಮೇಲೆ ಹೆತ್ತವರು ಕಣ್ಣಿಟ್ಟಿರಬೇಕು. ಕಾಲೇಜು ಮುಗಿದ ತಕ್ಷಣ ಮನೆಗೆ ಬರಲು ಹೇಳಿ, ಕೆಲವೊಮ್ಮೆ ಗಂಡು ಮಕ್ಕಳು ತಮ್ಮದಲ್ಲದ ತಪ್ಪಿಗೆ, ಶಿಕ್ಷೆಯನ್ನು ಅನುಭವಿಸುವ ಪ್ರಸಂಗಳನ್ನೂ ಸಹ ನಾವು ಈಗಾಗಲೇ ನೋಡಿರುವುದರಿಂದ, ಅವರಲ್ಲಿಯೂ ಹೆತ್ತವರು ಜಾಗೃತಿಯನ್ನು ಮೂಡಿಸಿ. ಅಲ್ಲದೆ ಯಾರಾದರು ಬೇರೆ ಗಂಡು ಮಕ್ಕಳಾಗಲಿ, ಪುರುಷರಾಗಲಿ ಹೆಣ್ನಿನ ಜೊತೆ ಅಸಭ್ಯವಾಗಿ ನಡದುಕೊಂಡರೆ, ನೀವೂ ಸಹ ಖಂಡಿಸಿ, ನೀವೂ ಸಹ ಈ ಸಮಾಜದ ಪ್ರಜೆ, ನಿಮಗೂ ತಪ್ಪನ್ನು ಖಂಡಿಸು ಹಕ್ಕು ಇದೆ, ಇಂಥ ಘಟನೆಗಳ ವಿರುದ್ಧ ಪ್ರತಿಭಟಿಸಿ, ಮುಂದೆ ನಡೆಯುವ ಅನಾಹುತವನ್ನು ತಪ್ಪಿಸಿ. ಎಲ್ಲರನ್ನು ನಿಮ್ಮ ಮನೆಯ ಹೆಣ್ಣು ಮಕ್ಕಳಂತೆ ಗೌರವದಿಂದ ಕಾಣಿರಿ.
ಅಲ್ಲದೆ ಶಾಲೆಗಳಲ್ಲಿ ಗುರುಗಳ ತಮ್ಮ ಜವಾಬ್ದರಿಗಳನ್ನು ಅರಿತು ನಡೆಯಬೇಕು. ‘ಎಲ್ಲಾ ದಾನಕ್ಕಿಂತ ವಿದ್ಯೆ ದಾನ ಬಲು ಶ್ರೇಷ್ಠವೆಂದು’ ಹಿರಿಯರು ಹೇಳುತ್ತಾರೆ. ಅಂತಹ ಉನ್ನತ ಹುದ್ದೆಯಲ್ಲಿರು ನೀವುಗಳೇ ಹೀಗೆ ಮಾಡಿದರೆ, ಕಲಿಕೆ ಹೇಗೆ ಸಾಧ್ಯ? ಉತ್ತಮ ಪ್ರಜೆ ಮತ್ತು ಉತ್ತಮ ಸಮಾಜದ ನಿಮರ್ಾಣ ಹೇಗೆ ಸಾಧ್ಯ? ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ, ಧ್ವನಿ ಎತ್ತಲು ಹೇಳಿಕೊಡಬೇಕಾದ ಶಿಕ್ಷಕನೇ, ಇಂದು ಅತ್ಯಾಚಾರಕ್ಕೆ ಮುಂದಾದರೆ ವಿದ್ಯಾಥರ್ಿಗಳ ಪಾಡೇನು? ನಮಗಂತೂ ಇಂತಹ ಘಟನೆಗಳೂ, ಬಹಳ ಬೇಸರ ತರಿಸುತ್ತಿವೆ ಅಸಹ್ಯ ಹುಟ್ಟಿಸುತ್ತಿವೆ. ಮಕ್ಕಳನ್ನು ಶಾಲೆಗೆ ಕಳುಹಿಸುವುದೋ ಬೇಡವೋ ಎಂಬ ಗೊಂದಲ, ಪೋಷಕರಲ್ಲಿ ಮನೆ ಮಾಡಿದೆ. ಯಾಕಿಷ್ಟು ಕ್ರೂರವಾಗುತ್ತಿದೆ ಈ ಶಿಕ್ಷಣ ಕ್ಷೇತ್ರ, ಗುರುಕುಲವಿಂದು ಯಾವ ದಿಕ್ಕಿನತ್ತ ಸಾಗುತ್ತಿದೆ, ಎಂಬ ಭಯ ನಮ್ಮಲ್ಲಿ ಕಾಡುತ್ತಿದೆ. ಇಲ್ಲಿ ಎಲ್ಲರಿಗಿಂತಲೂ ಶಿಕ್ಷಕನ ಪಾತ್ರ ಬಹಳ ದೊಡ್ಡದು. ಮಕ್ಕಳು ಶಿಕ್ಷಕರ ಮಾತನ್ನು ಬೇಗ ಆಲಿಸುತ್ತಾರೆ. ತಂದೆ-ತಾಯಿಗಿಂತಲೂ ಶಿಕ್ಷಕರ ಮಾತೆಂದರೆ ಮಕ್ಕಳಿಗೆ ವೇದ ವಾಕ್ಯದಂತೆ. ಆದ ಕಾರಣ ನಿಮ್ಮ ಮೇಲಿರುವ ಜವಾಬ್ದಾರಿಯನ್ನು ಹರಿತು ಈ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡುವಲ್ಲಿ ಮುಂದಾಗಿ. ಮಕ್ಕಳಿಗೆ ಒಳ್ಳೆಯ ಮೌಲ್ಯಗಳ ಬಗ್ಗೆ ಜಾಗೃತಿಯನ್ನು ಮೂಡಿಸುವಲ್ಲಿ ಮುಂದಾಗಿ…
ಒಟ್ಟಾರೆ ಅದೆಷ್ಟೋ ಮುಗ್ದ ಹೆಣ್ಣು ಮಕ್ಕಳು, ಇಂಥಾ ಅತ್ಯಾಚಾರಕ್ಕೆ ಬಲಿಯಾಗಿ, ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾ ಕತ್ತಲು ಕೋಣೆಗಳಲ್ಲಿ ಕುಳಿತ್ತಿದ್ದಾರೆ. ಇನ್ನು ಮುಂದೆ ಇಂತಹ ಸ್ಥಿತಿ ಇರಬಾರದು, ನಿಮಗಾದ ಅನ್ಯಾಯದ ವಿರುದ್ಧ ದನಿ ಎತ್ತಲು ಮುಂದಾಗಿ. ಇಲ್ಲಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರು ಹೆಣ್ಣನ್ನು ಗೌರವಿಸಿ, ಅವಳಿಗಾದ ಅನ್ಯಾಯದ ವಿರುದ್ಧ ದೂರು ದಾಖಲಿಸಲು ಬಂದಾಗ ಅವಳಿಗೆ ಗೌರವ ಕೊಟ್ಟು ಮಾತನಾಡಿ, ಆಗಲೇ ಹೆಣ್ಣು ಮಕ್ಕಳು ತಮಗಾದ ಅನ್ಯಾಯದ ವಿರುದ್ಧ ಹೋರಾಡುವ ಮನಸ್ಥಿತಿಗೆ ಬರುತ್ತಾರೆ. ಇಲ್ಲಿ ಪ್ರತಿಯೊಬ್ಬರ ಜಾಗ್ರತೆಯೂ ಮುಖ್ಯವಾಗಿದೆ. ಸಾರ್ವಜನಿಕರು, ಪೊಲೀಸ್ ಇಲಾಖೆಗಳು, ಹೆಣ್ಣು ಮತ್ತು ಗಂಡಿನ ತಂದೆ-ತಾಯಿಗಳು ಎಲ್ಲರೂ ಜಾಗರೂಕರಾದಾಗ ಮಾತ್ರ ಇಂಥ ಘಟನೆಗಳನ್ನು ನಿಯಂತ್ರಣಕ್ಕೆ ತರಲು ಸಾಧ್ಯ. ಹೆಣ್ಣು ಯಾವುದೋ ಸಮಯದಲ್ಲಿ, ಯಾವುದೋ ಕಾರಣದಿಂದ ತಮ್ಮ ಮನೆಯವರ ಜೊತೆಯಲ್ಲಿ ಹೋಗುತ್ತಿರುವಾಗಲಿ ಇಂತಹ ಘಟನೆಗಳ ನಡೆಯುತ್ತಿವೆ. ಹೆಣ್ಣು ಮಕ್ಕಳು ರಾತ್ರಿಯ ವೇಳೆಯಲ್ಲಿ ಓಡಾಡಬಾರದೆಂದು ಹೇಳುವುದು ತಪ್ಪು. ಕಾರಣವಿಲ್ಲದೆ ಹೆಣ್ಣು ಮಕ್ಕಳು ಮನೆಯಿಂದ ಹೊರ ಬರಬೇಡಿ ಎಂದು ಕೇಳಿಕೊಳ್ಳುತ್ತಿದ್ದೇನೆ. ಈ ಘಟನೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಮುಂದೆ ಸಾಗೋಣ ಆಗ ಮಾತ್ರ ಉತ್ತಮ ಸಮಾಜದ ನಿರ್ಮಾಣ ಸಾಧ್ಯವೆಂಬ ಭಾವನೆ ನನ್ನದು…ಆದರೆ ಇಂಥಾ ಕೆಟ್ಟ ಘಟನೆಗಳು ನಡೆದಾಗ ಮಾತ್ರ ಸುತ್ತ-ಮುತ್ತಲಿರುವವರೆಲ್ಲರೂ ಖಂಡಿಸಿ, ಆ ವಿಕೃತ ಮನಸ್ಸಿನ ಕ್ರೂರ ಮೃಗಕ್ಕೆ ಶಿಕ್ಷೆ ಕೊಡಿ…






nimma salahegalu chennagive, olle lekhana