ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮನ ಜೊತೆ ‘ಫಟಾ ಫಟ್‌’

೭ನೇ ತರಗತಿಯಲ್ಲಿ ಓದುತ್ತಿರುವ ಅಮನ ಲಾಕ್‌ ಡೌನ್‌ ಸಮಯದಲ್ಲಿ ಸುಮಾರು 68 ಇಂಗ್ಲೀಷ್ ಕವಿತೆಗಳನ್ನ ರಚಿಸಿದ್ದಾರೆ.

‘ಸಪ್ನ ಬುಕ್ ಹೌಸ್’ ಈ ಕವಿತೆಗಳನ್ನು ʼಇಕೊಸ್ ಆಫ್‌ ಸೋಲ್‌ ಫುಲ್‌ ಪೊಯಮ್ಸ್‌ʼ ಎಂಬ ಹೆಸರಿನಲ್ಲಿ ಪ್ರಕಟಿಸುತ್ತಿದೆ.

ಪುಸ್ತಕಗಳನ್ನು ಓದುವ ಹವ್ಯಾಸವನ್ನು ಇಟ್ಟುಕೊಂಡ ಅಮನ ಸುಮಾರು 300 ಕ್ಕೂ ಹೆಚ್ಚು ಪುಸ್ತಕಗಳನ್ನು ಕಲೆಹಾಕಿದ್ದಾರೆ. ಆಟವಾಡುವ ಈ ವಯಸ್ಸಿನಲ್ಲಿ ಸಂಕಲನದ ಪ್ರಕಟಣೆಗೆ ಮನಗೊಟ್ಟಿರುವುದು ಆಕೆಗೂ ಅವರ ಕುಟುಂಬಕ್ಕೂ ಸಂಭ್ರಮ ತಂದಿದೆ.

ಈ ಹಿನ್ನೆಲೆಯಲ್ಲಿ ಅಮನ ಜೊತೆ ‘ಅವಧಿ’ ನಡೆಸಿದ ಫಟಾಫಟ್ ಇಲ್ಲಿದೆ-

ಇಷ್ಟು ಚಿಕ್ಕ ವಯಸ್ಸಿಗೆ ಕವಿತೆಗಳನ್ನು ರಚಿಸಲು ಸ್ಪೂರ್ತಿ ಯಾರು ?

> ನನ್ನ ಅಮ್ಮ.

ಅಮನ ಮನ ಕವಿತೆಗಳತ್ತ ವಾಲಿದ್ದು ಹೇಗೆ?

> ಮೊದಲಿನಿಂದ ಪುಸ್ತಕಗಳನ್ನ ಓದುತಿದ್ದೆ, ಹಾಗಾಗಿ ಕವಿತೆಗಳನ್ನ ಬರೆದೆ.

ನಿಮಗೆ ಇಷ್ಟವಾದ ಕವಿ ಯಾರು ?

> ರಸ್ಕಿನ್‌ ಬಾಂಡ್‌

ಲಾಕ್‌ಡೌನ್‌ ನಲ್ಲಿ ಕವಿತೆ ಬರೆಯುವದ ಬಿಟ್ಟು ಬೇರೆ ಏನು ಮಾಡಿದಿರಿ ?

> ತುಂಬಾ ಬುಕ್ಸ್‌ ಓದಿದೆ ಅದನ್ನ ಬಿಟ್ರೆ ಸಂಗೀತ ಕೇಳ್ತಿದ್ದೆ.

ಮೊದಲ ಪುಸ್ತಕದ ಅನುಭವ ಹೇಗಿದೆ ?

> ತುಂಬಾ ಖುಷಿಯಾಗ್ತಿದೆ.

‍ಲೇಖಕರು Avadhi

3 October, 2020

1 Comment

  1. D.M.NADAF.

    ಕಾವ್ಯ ಕ್ರಿಯೆಯ ಆಶಾಕಿರಣ ಅಮನ.
    ಮೊದಲ ಪುಸ್ತಕ ಲೋಕಾರ್ಪಣೆ ಗೆ ಅಭಿನಂದನೆಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading