ಡಾ. ಗುರುಪ್ರಸಾದ್ ಕಾಗಿನೆಲೆ ಹುಟ್ಟಿದ್ದು ಶಿವಮೊಗ್ಗ. ಬೆಳೆದದ್ದು ಮೈಸೂರು ಮತ್ತು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ. ಬಳ್ಳಾರಿಯ ಸರ್ಕಾರಿ ವೈದ್ಯಕೀಯ ವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್. ಮತ್ತು ಎಂ.ಡಿ. ಪದವಿ ಪಡೆದು ತುಮಕೂರಿನ ಸಿದ್ಧಾರ್ಥ ವೈದ್ಯಕೀಯ ವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕೆಲಸ. ಅನಂತರ ದೆಹಲಿಯ ಭತ್ರೆ ಆಸ್ಪತ್ರೆಯನೆಫ್ರಾಲಜಿ ವಿಭಾಗದಲ್ಲಿ ಸೀನಿಯರ್ ರೆಸಿಡೆನ್ಸಿ. ೧೯೯೫ರಲ್ಲಿ ಅಮೆರಿಕೆಗೆ ವಲಸೆ. ಡೆಟ್ರಾಯ್ಟ್ ನ ವೇಯ್ನ್ ಸ್ಟೇಟ್ ವಿಶ್ವವಿದ್ಯಾನಿಲಯ ಹಾಗೂ ವಿಸ್ಕಾನ್ಸಿನ್ ವಿಶ್ವವಿದ್ಯಾಲಯಗಳಲ್ಲಿ ತರಬೇತಿ. ಸದ್ಯಕ್ಕೆ ಮಿನೆಸೊಟಾ ರಾಜ್ಯದ ರಾಚೆಸ್ಟರ್ ನಲ್ಲಿ ಪತ್ನಿ ಪದ್ಮ ಮತ್ತು ಮಕ್ಕಳಾದ ಪ್ರಣೀತ ಮತ್ತು ಪ್ರಭವರೊಟ್ಟಿಗೆ ವಾಸ. ನಾರ್ಥ್ ಮೆಮೊರಿಯಲ್ ಆಸ್ಪತ್ರೆಯ
ಎಮರ್ಜೆನ್ಸಿ ಮೆದಿಸಿನ್ ವಿಭಾಗದಲ್ಲಿ ಎಮರ್ಜೆನ್ಸಿ ವೈದ್ಯನಾಗಿ ಕೆಲಸ.
ಈಗಾಗಲೇ ನಿರ್ಗುಣ, ಶಕುಂತಳಾ (ಕಥಾ ಸಂಗ್ರಹಗಳು), ಆಚೀಚೆಯ ಕಥೆಗಳು (ಸಂಪಾದಿತ ಕಥಾ ಸಂಕಲನ), ವೈದ್ಯ ಮತ್ತೊಬ್ಬ (ಲೇಖನ ಸಂಗ್ರಹ) ಪ್ರಕಟಿಸಿದ್ದಾರೆ. ಅವರ ಹೊಸ ಕೃತಿ “ಬಿಳಿಯ ಚಾದರ”. ಇದು ಕಾದಂಬರಿ. ಧಾರವಾಡದ ಮನೋಹರ ಗ್ರಂಥಮಾಲೆಯವರು ಪ್ರಕಟಿಸಿದ್ದಾರೆ.
ಈ ಹೊಸ ಕೃತಿಗಾಗಿ ಕಾಗಿನೆಲೆಯವರಿಗೆ ಅಭಿನಂದನೆಗಳು. “ಬಿಳಿಯ ಚಾದರ” ಕುರಿತು ಡಾ. ಯು ಆರ್ ಅನಂತಮೂರ್ತಿಯವರು ಓದು ಜನಮೇಜಯದಲ್ಲಿ ಬರೆದಿದ್ದಾರೆ. ಗಮನಿಸಬಹುದು.





kannadatige arpisuttiruva blogina!
avadhi embudu kannadatige arpisuttiruva blogina!