ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪಾರ ಎಂಬ ಗಂಭೀರ ತುಂಟ

“ಅಪಾರ” ಎಂಬುದು ಅಪಾರ ಅವರ ಪೆನ್ ನೇಮ್.

 ಹತ್ತಿರದ ಮಿತ್ರರಿಗೂ “ರಘು” ಎಂದರೆ ಗೊತ್ತಾಗದಷ್ಟು ರಘುವಿನ ಪೆನ್ ನೇಮ್ ಫೇಮಸ್ಸು. ಗೆಳೆಯರಿಗೆಲ್ಲ ಅಪಾರ ಇಷ್ಟವಾಗುವುದು ಮಹಾ ತುಂಟತನದಿಂದ. ಹೊಟ್ಟೆ ಹುಣ್ಣಾಗಿಸಬಲ್ಲಷ್ಟು ನಗಿಸುವಂಥ ಜೋಕು ಹೇಳಿಯೂ, ಏನೂ ತಿಳಿಯದ ಪರಮ ಮುಗ್ಧನಂತೆ ನಗುವವರನ್ನು ನೋಡುತ್ತ ಗಲ್ಲಕ್ಕೆ ಕೈ ಹಚ್ಚಿ ಕೂತುಬಿಡುವ ಗಾಂಭೀರ್ಯವೇ ಅಪಾರ ಹೆಗ್ಗಳಿಕೆ.

 ತುಂಬಾ ಚೆನ್ನಾಗಿ ಕಥೆ ಬರೆಯುವ ಅಪಾರ, ಬಣ್ಣ ಮತ್ತು ರೇಖೆಗಳ ಅಪೂರ್ವ ಕ್ಷಣಗಳನ್ನೂ ಒಲಿಸಿಕೊಂಡವರು. ಪುಸ್ತಕಗಳಿಗೆ ಮುಖಪುಟ ರಚಿಸುವಲ್ಲಿ ಅವರದು ಪಳಗಿದ ಕೈ. ಕಲಾವಿದ ಮತ್ತು ಸ್ವತಃ ಸೃಜನಶೀಲ ಲೇಖಕ ಜೊತೆಯಾಗಿ ಕೂತು ನೀಡುವ ಸ್ಪರ್ಶದ ಹೊಳಹುಗಳು ಅವರ ವಿನ್ಯಾಸಗಳಲ್ಲಿರುತ್ತವೆ. ಇಷ್ಟಾಗಿಯೂ ಅಪಾರ ಬಲು ಸಂಕೋಚ ಸ್ವಭಾವದವರು. ಇಲ್ಲಿ ಕೊಟ್ಟಿರುವ ಅವರ ವಿನ್ಯಾಸಗಳು ಸ್ಯಾಂಪಲ್ ಮಾತ್ರ. ಈ ಸಂಕೋಚ ಜೀವಿಯ ಪೂರ್ವಾಪರ ತಿಳಿಯಲು ಇಲ್ಲಿ ಲಿಂಕ್ಸ್ ಅಡಿಯಲ್ಲಿನ “ಅಪಾರ” ಕ್ಲಿಕ್ಕಿಸಿ. ಅದು ಅವರ ಬ್ಲಾಗ್. ಅವರ ಮನದಂಗಳ.

‍ಲೇಖಕರು avadhi

12 June, 2007

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading