
-ಅನಿತಾ ನರೇಶ್ ಮಂಚಿ
ನಾಮಗಳು ಅಂದರೆ ಉದ್ದ ನಾಮ ಅಡ್ಡ ನಾಮ ಪಂಗನಾಮ ಅಂತೆಲ್ಲ ತಿಳಿದುಕೊಳ್ಳಬೇಡಿ ಸ್ವಾಮಿ, ನೀನ್ಯಾಕೋ ನಿನ್ನ ಹಂಗ್ಯಾಕೋ .. ನಿನ್ನ ನಾಮದ ಬಲ ಒಂದಿದ್ದರೆ ಸಾಕೋ.. ದಾಸರ ಪದವನ್ನು ನೀವುಗಳೆಲ್ಲರು ಕೇಳೇ ಇರುತ್ತೀರಿ ?ಅಂತೆಯೆ ನಾನೂ ಕೇಳಿದ್ದೇನೆ.ಆದರೆ ಇದರ ಜೊತೆಗೆ ಈ ನಾಮದ ಬಲವನ್ನು ಅನುಭವಿಸಿಯೂ ಇದ್ದೇನೆ ಅಂದರೆ ಅಚ್ಚರಿಪಡಬೇಡಿ. ಇತ್ತೀಚೆಗೆ ಒಬ್ಬರ ಮನೆಗೆ ಕರ್ಯಾರ್ಥ ಹೋಗಬೇಕಿತ್ತು. ಫೋನಿಸಿದರೆ, ಆತ್ಮೀಯತೆಯಿಂದ ಬನ್ನಿ ಬನ್ನಿ.. ಎಷ್ಟೊಂದು ದಿನ ಆಯಿತು ನಿಮ್ಮ ಮುಖ ಕಾಣದೆ.. ಈಗಲೇ ಬನ್ನಿ ನಮ್ಮ ಬೇಬಿಯನ್ನೂ ನೊಡಿದಂತಾಗುತ್ತದೆ ಎಂದರು. ನನ್ನಿಂದಲೂ ಹಿರಿ ತಲೆಗಳೆ ಇರುವ ಅಲ್ಲಿ ಇದ್ಯಾವುದಪ್ಪ ಹೊಸ ಬೇಬಿ ಎಂದು ಎಷ್ಟು ತಲೆ ಕೆರೆದುಕೊಂಡರೂ ಹೊಳೆಯದೆ,ಯಾವುದಕ್ಕೂ ಇರಲಿ ಎಂದುಕೊಂಡು ಅಂಗಡಿ ಬದಿಯಲ್ಲಿ ಕಾರ್ ನಿಲ್ಲಿಸಿ ಸ್ವಲ್ಪ ಚಾಕೋಲೇಟ್ಗಳನ್ನು ತೆಗೆದುಕೊಂಡೆ. ನನ್ನ ಬರುವಿಕೆಯನ್ನೇ ಕಾಯುತ್ತಿದ್ದ ಮನೆಯವರು ಪ್ರೀತಿಯಿಂದ ಬರ ಮಾಡಿಕೊಂಡು ಕುಶಲ ವಿಚಾರಿಸ ತೊಡಗಿದರು. ಮಾತಿನ ನಡುವೆ ನನ್ನ ಕಣ್ಣು ಬೇಬಿಗಾಗಿ ಹುಡುಕಾಟ ನಡೆಸಿತ್ತು. ಕೈಯಲ್ಲಿರುವ ಚಾಕೋಲೇಟ್ಗಳನ್ನು ಬೇಗ ಮಗುವಿನ ಕೈಯಲ್ಲಿಟ್ಟು ಕೃತಾರ್ಥಳಾಗುವ ಆಸೆ. ಸ್ವಲ್ಪ ಹೊತ್ತು ತಡೆದು ಬೇಬಿ ಎಲ್ಲಿ ಎಂದು ಕೇಳಿಯೆ ಬಿಟ್ಟೆ. ಅವರು, ಛೇ ! ಮಾತಿನ ಭರದಲ್ಲಿ ಮರೆತೇ ಬಿಟ್ಟೆ ನೋಡಿ ಅನ್ನುತ್ತಾ ಬೇಬೀ..ಬೇಬೀ ಎಂದು ಕರೆದರು. ಪರದೆ ಸರಿಸಿ ಕುತೂಹಲ ಬೆರೆತ ಮುಗುಳ್ನಗು ಬೀರುತ್ತಾ ಹೊರಗೆ ಬಂದ ಬೇಬಿಯನ್ನು ನೋಡಿ ನಾನು ಸುಸ್ತು. ಅವರೊಬ್ಬ ನಡು ವಯಸ್ಸು ಮೀರಿದ ಸಂಭಾವಿತ ವ್ಯಕ್ತಿಯಾಗಿದ್ದರು! ಮನೆಯವರು ಒಂದಿಷ್ಟೂ ಮಿಸುಕದೆ, ಇವರು ಚಿದಾನಂದ ಅಂತ ನಮ್ಮ ಆತ್ಮೀಯರು, ನಾವೆಲ್ಲಾ ಬೇಬಿ ಅಂತಾನೇ ಕರಿ0ೋದು ಅನ್ನಬೇಕೆ! ನಾನು ಪೆದ್ದು ಪೆದ್ದಾಗಿ ನಕ್ಕು ಚಾಕೋಲೇಟ್ ತೆಗೆಯಲು ಪಸರ್ಿನೊಳಗೆ ಇಳಿಬಿಟ್ಟಿದ್ದ ಕೈಯ್ಯನ್ನು ಅಲ್ಲೇ ನಿಲ್ಲಿಸಿದೆ. ಪರಸ್ಪರ ಸೌಜನ್ಯದ ವಿನಿಮಯದ ನಂತರ ಮನೆಯವರೊಂದಿಗೆ ಬಂದ ಕೆಲಸದ ಬಗ್ಗೆ ಮಾತಾಡಿ ಮೆಲ್ಲನೆ ಹೊರ ಜಾರಿದೆ.
ನೆರೆಕರೆ ಅಂದ ಮೇಲೆ ಅವರ ಮನೆಯಲ್ಲಿ ನಡೆವ ಕಾ0ರ್ುಕ್ರಮಗಳಿಗೆ ಹೋಗದಿರುವುದುಂಟೇ? ಹಾಗೆ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಸ್ವಲ್ಪ ಹೊತ್ತು ಅವರಿವರ ಜೊತೆ ಮಾತುಕತೆ ಮುಗಿಸಿ ಇನ್ಯಾರಾದಾರೂ ಪರಿಚಿತ ಮುಖಗಳಿವೆಯೆ ಎಂದು ಕೊರಳುದ್ದ ಮಾಡಿ ಕುಳಿತಲ್ಲಿಂದಲೇ ನೋಡತೊಡಗಿದೆ. ನನ್ನ ಬಾಲ್ಯದ ಒಡನಾಡಿ ಎಷ್ಟೋ ವರ್ಷಗಳ ನಂತರ ನನ್ನೆದುರಲ್ಲಿ.. ನನ್ನ ಕಣ್ಣನ್ನೇ ನನಗೆ ನಂಬಲು ಸಾಧ್ಯವಾಗಲಿಲ್ಲ. ಅವರು ಬೇರಾರೊಡನೆ0ೋ ಪಟ್ಟಾಂಗದಲ್ಲಿ ಮುಳುಗಿದ್ದರು. ಅವರನ್ನು ಕಂಡ ಸಂತಸದಲ್ಲಿ ಕುಳಿತಲ್ಲಿಂದ ಎದ್ದು ಅವರ ಬಳಿಗೆ ಹೋಗಿ ‘ಹಾಯ್ ಬಂಗಾರು’ ಅಂದೆ. ಅವರು ನನ್ನನ್ನು ಕಂಡು ಸಂತಸಗೊಂಡರೆ ಅವರ ಪಕ್ಕದಲ್ಲಿ ಉಲ್ಲಾಸದಲ್ಲಿ ಕುಳಿತಿದ್ದ ವನಿತೆಯ ಮುಖ ಸೊಟ್ಟಗಾಯಿತು. ನಾನು ಅದರ ಬಗ್ಗೆ ಹೆಚ್ಚು ಚಿಂತೆ ಮಾಡದೆ ಮಾತು ಮುಂದುವರಿಸಿದೆ. ಅವರು ಕೂಡಲೇ ಎಚ್ಚೆತ್ತುಕೊಂಡವರಂತೆ ಪಕ್ಕದಲ್ಲಿ ಅಸಹನೆಯಿಂದ ಕುಳಿತಿದ್ದಾಕೆಯನ್ನು ತಮ್ಮ ಹೆಂಡತಿ ಎಂದು ಪರಿಚಯಿಸಿದರು. ನಾನು ಹಾದರ್ಿಕವಾಗಿ ನಕ್ಕರೂ ಆಕೆ ಮುಖದ ಬಿಗುವು ಸಡಿಲಿಸಲಿಲ್ಲ. ಅವರು ಹೆಂಡತಿಯ ಕಡೆಗೆ ನೋಡಿ. ಅಯೋ ನನ್ನನ್ನು ಬಂಗಾರು ಅಂತ ಇವ್ಳು ಕರೆದಿದ್ದಕ್ಕೆ ತಲೆ ಹಾಳು ಮಾಡ್ಕೋಬೇಡ್ವೇ.. ಅದು ನಾನು ಚಿಕ್ಕೋನಿದ್ದಾಗ ನನಗಂಟಿದ್ದ ಅಡ್ಡ ಹೆಸರು ಅಂತ ನಕ್ಕು ನುಡಿದರು. ಈಗ ಮೆಲ್ಲನೆ ಅವರ ಶ್ರೀಮತಿಯ ಮುಖದಲ್ಲೂ ನಗು ಸುಳಿಯಿತು. ಪರಿಸ್ಠಿತಿ ತಿಳಿಯಾದ ಖುಶಿಗೆ ನಾನೂ ನಕ್ಕೆ.
ಪರವೂರು, ಯಾರದೋ ಮನೆಗೆ ಹೋಗಬೇಕಿತ್ತು. ವಿಳಾಸ ಕೈಯಲ್ಲೇ ಹಿಡಿದು ಅವರಿವರನ್ನು ಕೇಳಿದೆ. ಈ ಮಾರ್ಗದ ತುದಿಗೆ ಹೋಗಿ ಅಲ್ಲಿಂದ ಬಲಕ್ಕೆ ತಿರುಗಿ ನಾಲ್ಕೆಜ್ಜೆ ನೇರ ನಡೆದು ಮತ್ತೂ ಕೊಂಚ ಬಲಕ್ಕೆ ಹೊರಳಿ ಅಲ್ಲಿಂದ ಆರು ಹೆಜ್ಜೆ ನಡೆದು ಸ್ವಲ್ಪ ಎಡಕ್ಕೆ ತಿರುಗಿ.. ಹೀಗೆಲ್ಲ ಸಾಗಿದ ವಿವರಗಳಿಗೆ ತಲೆ ತಿರುಗಿದಂತಾಯಿತು. ಬಹುಷಃ ಬಂದ ದಾರಿಗೆ ಸುಂಕವಿಲ್ಲ ಅಂತ ವಾಪಾಸ್ ಹೋಗಬೇಕಾಗುತ್ತದೆ0ೆುನೋ ಎಂದು ಹೆದರಿದೆ. ಅಷ್ಟರಲ್ಲಿ ನನ್ನ ಪರದಾಟ ಕಂಡ ಗೃಹಿಣಿಯೊಬ್ಬರು ‘ ನಿಲ್ಲಿ ನಮ್ಮ ಪುಟ್ಟನ್ನ ಕಳಿಸ್ತೀನಿ ನಿಮ್ ಜೊತೆ , ಮನೆ ತೋರಿಸಿಕೊಡ್ತಾನೆ’ ಅಂದ್ರು. ಅವರ ಉಪಕಾರಕ್ಕೆ ವಂದನೆ ಸಲ್ಲಿಸಿ ನನ್ನ ದಾರಿದೀಪಕ ಪುಟ್ಟನಿಗಾಗಿ ಕಾದೆ. ಬರೋಬ್ಬರಿ ಆರಡಿ ಎತ್ತರ ಮೂರಡಿ ಅಗಲದ ‘ಪುಟ್ಟ’ ನನ್ನ ಜೊತೆ ಬಂದು ಮನೆ ತೋರಿಸಿಕೊಟ್ಟು ಹೋದ. ಇದೆಲ್ಲದರ ನಂತರ ನಾನಂತೂ ಹೆಸರುಗಳಿಗೂ ಮನುಷ್ಯರಿಗೂ ತಾಳೆ ಹಾಕುವ ಕೆಲಸವನ್ನೇ ಬಿಟ್ಟಿದ್ದೇನೆ. ಹ್ಹೋ.. ಯಾರೋ ಹೊರಗಿನಿಂದ ‘ಪಾಪು’ ಅಂತ ನನ್ನ ಕರೀತಾ ಇದ್ದಾರೆ.. ಬರ್ಲಾ ..






ಹಾ ಹಾ ! ಇತ್ತೀಚಿಗೆ ಹಿರಿಯ ನೆಂಟರ ಮನೆಗೆ ಭೇಟಿಯಿತ್ತು ವಾಪಸ್ ಹೊರಡುವಾಗ ತಡಿರಿ ನಮ್ಮ ಐಶ್ವರ್ಯನ್ನ ನೋಡಿಲ್ಲಲ್ವ ನೀವು. ಇಷ್ಟು ಹೊತ್ತು ಮಲಗಿತ್ತು ಅಂದಾಗ, ಅಪರೂಪಕ್ಕೆ ಅವರ ಮನೆಗೆ ಹೋದ ನನಗೆ ಬಹುಶ: ಅವರ ಮನೆಯಲ್ಲಿಯೇ ಇರುವ ಮೊಮ್ಮಗಳನ್ನು ತೋರಿಸುತ್ತಾರೇನೋ , ಛೆ! ಮಗುವಿಗೆ ಏನಾದರೂ ಉಡುಗೊರೆ ತರಬಹುದಿತ್ತು ಅಂದುಕೊಳ್ಳುತಿರುವಾಗ, ಅವರು ಎತ್ತಿಕೊಂಡು ಬಂದಿದ್ದು ಬೆಕ್ಕಿನ ಮರಿಯನ್ನ.
good one
🙂
malathi S
Good one!
ಚೆನ್ನಾಗಿದೆ. ನಗು ತುಳುಕಿಸಿತು. ನಮಗೂ ಅಂಥ ಅನುಭವ ಆದದ್ದು ನೆನಪಿಗೆ ಬಂತು.
ಮಾಲಾ
fantastic Anitha!
rasavattagittu!
ಈ ನಾಮಗಳಿಂದ ಕರೆಯುವುದು ಎಷ್ಟು ಅಭ್ಯಾಸವಾಗಿರುತ್ತದೆ..ಎಂದರೆ ನಿಜವಾದ ಹೆಸರು ಮರೆತುಹೋಗಿರುತ್ತದೆ …:):)Alva…A….:):)
Hahaha sogasada lekhana.E nama(deya)galu namge panga Nama hakodanthu nija.