ಉದಯ್ ಇಟಗಿ
ನಾನು ಈ ಹಿಂದೆ download ಮಾಡಿಟ್ಟುಕೊಂಡಿದ್ದ ಎಸ್.ಎನ್.ಸೇತುರಾಂ ಅವರ “ಅನಾವರಣ” ಧಾರಾವಾಹಿಯನ್ನು ಒಂದು ಸಾರಿ ನೋಡಿದ್ದೆ. ಈಗ ಮತ್ತೊಮ್ಮೆ ನೋಡುತ್ತಿದ್ದೇನೆ. ಈ ಧಾರಾವಾಹಿಯಲ್ಲಿ Metropolitan ಬದುಕನ್ನು ಮುಖಕ್ಕೆ ರಾಚುವಂತೆ ಹಿಡಿದಿಡುವ ಸೇತುರಾಂ ಅವರು ಈ ಬದುಕು ಹೀಗ್ಹೀಗೆ, ಈ ಸಂಬಂಧಗಳು ಇಷ್ಟಿಷ್ಟೇ ಎಂದು ನಮ್ಮನ್ನು ಒಪ್ಪಿಸಿಬಿಡುವದರ ಜೊತೆಗೆ ಅದರ ಹಿಂದಿನ ಕ್ರೌರ್ಯವನ್ನು ಅನಾವರಣಗೊಳಿಸಿಬಿಡುತ್ತಾರೆ.
ಅವರ ನಿರ್ದೇಶನದ ಮೊದಲ ಧಾರಾವಾಹಿ “ಮಂಥನ” ಕನ್ನಡ ಧಾರಾವಾಹಿಗಳ ಇತಿಹಾಸದಲ್ಲಿಯೇ ಒಂದು ವಿನೂತನ ಪ್ರಯೋಗ ಮತ್ತು ಒಂದು ಅಪರೂಪದ ಮೈಲಿಗಲ್ಲಾಗಿತ್ತು. ಅದೇ ರೀತಿ ಅವರ ಇನ್ನೊಂದು ಧಾರಾವಾಹಿ “ಅನಾವರಣ” ಕೂಡಾ. ಅಬ್ಬಬ್ಬಾ! ಪ್ರತಿಯೊಂದು ದೃಶ್ಯದಲ್ಲಿ ಅದೇನು ಶ್ರದ್ಧೆ! ಅದೇನು ಪರಿಶ್ರಮ! ಅದೇನು ಕುಸುರಿ ಕೆಲಸ! ಹ್ಯಾಟ್ಸಾಫ್ ಟು ಸೇತುರಾಂ ಸರ್! ಎಲ್ಲಕ್ಕಿಂತ ಹೆಚ್ಚಾಗಿ ನನಗೆ ತುಂಬಾ ಇಷ್ಟವಾಗಿದ್ದು ಅದರಲ್ಲಿನ ಡೈಲಾಗ್ಸ್ ಮತ್ತು ಅವನ್ನು ಸಮರ್ಥವಾಗಿ ಡೆಲಿವರಿ ಮಾಡಿದ ನಟರು. ಕನ್ನಡ ಭಾಷೆಯ ಸೊಗಡು ಅದರಲ್ಲಿ ಎದ್ದು ಕಾಣುತ್ತದೆ. ಸಂಭಾಷಣೆಗಳಲ್ಲಿ ಅಲ್ಲಲ್ಲಿ ಬರುವ ಕೆಲವು ಸಾಲುಗಳು ಅದ್ಭುತ. ಅಂಥವಗಳಲ್ಲಿ punch dialoguesನ್ನು ಆಯ್ದು ನಿಮ್ಮೊಂದಿಗೆ share ಮಾಡಿಕೊಳ್ಳುತ್ತಿದ್ದೇನೆ. ಸಧ್ಯಕ್ಕೆ ಇಷ್ಟನ್ನು ಮಾತ್ರ ಕೊಡುತ್ತಿದ್ದೇನೆ. ಮತ್ತಷ್ಟನ್ನು ಮುಂದೆ ಕೊಡುತ್ತೇನೆ.

1. ಗಂಡಸರು ಸುಖಕ್ಕೆ ಸಂಬಂಧ ಹುಡುಕುತ್ತಾರೆ. ಹೆಂಗಸರು ಅವಶ್ಯಕತೆಗೆ ಸಂಬಂಧ ಬೆಳಸ್ತಾರೆ.
2. ಮಕ್ಕಳಿಗೆ ತಂದೆ-ತಾಯಿ ಮನೆ ಯಾವತ್ತೂ ಸ್ವಂತ. ತಂದೆ-ತಾಯಿಗೆ ಮಕ್ಕಳ ಮನೆ ಅಲ್ಲ.
3. ತನ್ನನ್ನು ತಾನು ಬಯ್ದುಕೊಳ್ಳೊ ಗಂಡಿಗೆ ಹೆಂಗಸು ಬಹಳ ಬೇಗ ಮರಳಾಗ್ತಾಳೆ.
4. ನಮಗೆ ಹೆಂಗಸರಿಗೆ ನಮ್ಮ ಬಗ್ಗೆ ಜನ ವಿಚಾರಿಸೋದು ಅಭ್ಯಾಸವಾಗಿ ಹೋಗಿರುತ್ತೆ.
5. ಗಂಡು-ಹೆಣ್ಣಿನ ಸಂಬಂಧ ಭಾವನಾತ್ಮಕ ಹೌದು. ಆದರೆ ಅದು ಕಾಲವೂ ಊರ್ಜಿತವಾಗಬೇಕಾದರೆ ಅದಕ್ಕೊಂದು ವ್ಯವಾಹಾರಿಕ ನೆಲೆಗಟ್ಟಿರಬೇಕಾಗುತ್ತದೆ.
6. ಸಭ್ಯತೆ ಅಸಭ್ಯತೆ ಆಯಾಯ ವಿಷಯ ಅವತ್ತವತ್ತಿನ ಪರಿಸ್ಥಿತಿಯ ಭಾವದ ಮೇಲೆ ಅಲ್ವಾ?
7. ಹಾಗೆ ನೋಡಿದರೆ ಮದುವೆ ಆದ ಮೇಲೆ ಸ್ವಾತಂತ್ರ್ಯ ಹೋಗೋದು ಗಂಡಿಗೆ, ಹೆಣ್ಣಿಗಲ್ಲ,
8. ಗಂಡಸು ಅನ್ನೋ ಅಹಂಕಾರ ಬೇಕಿದ್ದರೆ ಗುಲಾಮಗಿರಿಗೆ ಈಡಾಗಬಾರದು.






ನಮಸ್ತೇ,
ನಿಮ್ಮತರಹ ನಾನು ಸೇತುರಾಂ ರ ಮೋಡಿಗೆ ಬಲಿಯಾದವನೆ.ಧಾರಾವಾಹಿಯ ಪಾತ್ರಗಳು ನಮ್ಮ ಪ್ರತಿನಿತ್ಯದ ಮರೆತುಹೋಗುತ್ತಿರುವ ಸಂಭಾಷಣೆಗಳನ್ನಾ ಮತ್ತೆ ನೆನಪಿಸುತ್ತವೆ.
ಮಂಥನ ಹಾಗೂ ಅನಾವರಣವನ್ನಾ ಬೇಜಾರಾದಾಗ ನೋಡುವ ಪರಿಪಾಠ ನನ್ನದಾಗಿಬಿಟ್ಟಿದೆ.
One of the best tele-serials in Kannada TV history.
Out of 1000s of non-sense very few stand out and this is one of them.
Where can I download it?