ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅದು ‘ಪಲ್ಲವಿ ಅನುಪಲ್ಲವಿ’

dinakara rao

ದಿನಕರ ರಾವ್ 

ಮೊನ್ನೆ ‘ವೀಕೆಂಡ್ ವಿತ್ ರಮೇಶ್’ ಲಕ್ಷ್ಮೀ ಎಪಿಸೋಡ್ ನಲ್ಲಿ ‘ಪಲ್ಲವಿ ಅನುಪಲ್ಲವಿ’ ಚಿತ್ರದಲ್ಲಿ ಶ್ರೀನಾಥ್ ಮಗ ರೋಹಿತ್ ಜೊತೆ ಅಭಿನಯದ ಸನ್ನಿವೇಶದ ಉಲ್ಲೇಖವಿತ್ತು.. ಬಹುಶಃ ಅದು ‘ನಗು ಎಂದಿದೆ ಮಂಜಿನ ಬಿಂದು.. ನಲಿ ಎಂದಿದೆ ಗಾಳಿ ಇಂದು’ ಹಾಡಿನ ಊಟಿ ಚಿತ್ರೀಕರಣದ ಬಗ್ಗೆ.. ಎಪಿಸೋಡ್ ಉದ್ದಕ್ಕೂ ಆ ಚಿತ್ರದ ಹಾಡಿನ ಟ್ಯೂನ್..

pallavi anupallavi11983ರಲ್ಲಿ ಮೈಸೂರಿನ ಪ್ರಭಾ ಟಾಕೀಸ್ ನಲ್ಲಿ ಈ ಚಿತ್ರ ನೋಡಿದ ನೆನಪು ಮರಕಳಿಸಿತು.. ಹಾಗಾಗಿ ಆ ಚಿತ್ರದ ಸಿಡಿ ತೆಗೆದು ಮತ್ತೊಮ್ಮೆ ಆ ಚಿತ್ರ ನೋಡಿದೆ…..

ನಗುವ ನಯನ ಮಧುರ ಮೌನ.. ಮಿಡಿವಾ ಹೃದಯಾ ಇರೆ ಮಾತೇಕೆ?
ಹೊಸ ಭಾಷೆಯಿದು ರಸ ಕಾವ್ಯವಿದು.. ಇದ ಹಾಡಲು ಕವಿ ಬೇಕೇ?..

ಆರ್.ಎನ್. ಜಯಗೋಪಾಲ್ ರಚಿಸಿರುವ ಅತಿ ಸುಮಧುರ ಹಾಡು..
ಹಸಿರು ವನಸಿರಿಯಲ್ಲಿ ಇದರ ಚಿತ್ರಣವೂ ಅಷ್ಟೇ ಸುಂದರವಾಗಿತ್ತು…

ಪರಭಾಷೆಯ ಅನಿಲ್ ಕಪೂರ್, ವಿಕ್ರಂ, ಲಕ್ಷ್ಮೀ, ಕಿರಣ್ ವರೇಲ್ ಇವರೊಂದಿಗೆ ಕನ್ನಡದ ಸುರೇಶ್ ಹೆಬ್ಲೀಕರ್, ಶಿವಾನಂದ್, ವಾಸುದೇವ ರಾವ್, ಸುಂದರ ರಾಜ್, ಭಾರ್ಗವಿ ನಾರಾಯಣ, ಉಮಾ ಶಿವಕುಮಾರ್ ನಟಿಸಿರುವ ಈ ಚಿತ್ರಕ್ಕೆ ಮಣಿರತ್ನಂ ಅವರ ಸಮರ್ಥ ನಿರ್ದೇಶನ, ಬಾಲು ಮಹೇಂದ್ರ ಸುಂದರ ಹೊರಾಂಗಣ ಛಾಯಾಗ್ರಹಣ, ಇಳೆಯರಾಜಾ ಅವರ ರಾಗಸಂಯೋಜನೆ..

ಹೆಚ್ಚಾಗಿ ಅನ್ಯಭಾಷಿಕರೇ ಆಗಿದ್ರೂ ಇದು ಒಂದು ಸುಂದರ ಕನ್ನಡ ಚಿತ್ರ.. ಚಿತ್ರಕ್ಕೆ ಅಪ್ಪಟ ಕನ್ನಡದ ಹೆಸರು.. ಕಂಗ್ಲೀಷ್ ಸೋಂಕೂ ಇಲ್ಲದ ಹಾಡುಗಳು.. ಸಂಫೂರ್ಣವಾಗಿ ಭಾರತದಲ್ಲಿಯೇ ಚಿತ್ರೀಕರಣ….
ಇತ್ತೀಚಿನ ಕನ್ನಡ ಚಿತ್ರಗಳಲ್ಲಿ ಇದೆಲ್ಲವೂ ಬಹಳ ಅಪರೂಪ..

‍ಲೇಖಕರು admin

20 March, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading