ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅದು ನನ್ನ ಅಪ್ಪ

-ಆರತಿ ಎಚ್.ಎನ್ ಇಂದು ಹಂಪನಾ ಅವರಿಗೆ ೭೫ ರ ಸಂಭ್ರಮ. ಹಂಪನಾ ಅವರನ್ನ ಅವರ ಮಗಳು, ದೂರದರ್ಶನ kendeeಗಿರಿಗಿರಿ ಬುಗುರಿ ತಿರುಗುತ್ತಿತ್ತು. ತಿರುಗುತ್ತಿರುವ ಬುಗುರಿಗೆ ಸುತ್ತಲು ಜಗತ್ತು ಹೇಗೆ ಕಾಣಬಹುದೆಂಬ ಕುತೂಹಲ ನನಗೆ. ಅದನ್ನೇ ದಿಟ್ಟಿಸುತ್ತಾ ಅಲ್ಲಾಡದೆ ಕುಳಿತ ನನ್ನ ಪುಟ್ಟ ಕೈ ಹಿಡಿದು ವಿಚಾರಿಸಿ ನನ್ನ ಆಸೆ ತಿಳಿದ ಅಪ್ಪಾಜಿ, ತಕ್ಷಣವೇ ತಾನು ಕೆಳಗೆ ಕೂತು ತನ್ನೆರಡೂ ಕೈಗಳನ್ನು ಅವರದೇ ತಲೆಯ ಮೇಲೆ ಭದ್ರವಾಗಿ ಬೆಸೆದು (ಆಗ ಅವರ ತಲೆಯ ತುಂಬ ಸೊಂಪಾದ ಕೂದಲಿದ್ದು, ಕೈ ಜಾರುವ ಭಯವಿರಲಿಲ್ಲ!) ನನ್ನನ್ನೂ ನನ್ನಕ್ಕ ಶ್ರೀಯನ್ನೂ ತಮ್ಮ ಒಂದೊಂದು ಕೈಗೆ ಜೋತು ಬೀಳುವಂತೆ ಹೇಳಿ, ತಾವು ಗಿರಗಿರ ಸುತ್ತಿದ್ದೇ ಸುತ್ತಿದ್ದು, ಥೇಟ್ ಬುಗುರಿಯಂತೆ … ನಾನೇ ಆಗ ಬುಗುರಿಯಾದ ಸಂಭ್ರಮ… ಈಗ ಹಲವು ದಶಕಗಳಾದರೂ ಇಂದಿಗೂ ಕಾಡುವ ಬೆಚ್ಚನೆಯ ನೆನಪು. ಅಪ್ಪಾಜಿ; ನನಗೊಂದು ಬೆರಗು ! ಇಡೀ ಜಗತ್ತನ್ನು ಪ್ರೀತಿ, ನಂಬಿಕೆ, ಸೌಹಾರ್ದ, ವಿಶ್ವಾಸಗಳಿಂದ ಮಾತ್ರ ಗೆಲ್ಲಬಹುದೆಂದು ತೋರುವ, ಸಾರುವ ವಾತ್ಸಲ್ಯದ ಹಣತೆ . ಹಂಪನಾ ಅವರ ಸಾಹಿತ್ಯ ಸಾಧನೆ, ಕಠಿಣವೆನಿಸುವ ಗಂಟೆಗಟ್ಟಲೆ ಕೂತು ಬರೆಯುವ ಉಮೇದು, ಊಟ-ತಿಂಡಿ ಕೂಡ ಮರೆಯುವ ತನ್ಮಯತೆ, ಏಕಾಗ್ರತೆ, ಒಂದು ಕೆಲಸ ಹಿಡಿದರೆ ಅದನ್ನು ಸಾಧಿಸಿಯೇ ತೀರುವ ಉತ್ಕಟ ವಾಂಛೆ – ಹೀಗೆ ಹಂಪಸಂದ್ರದ ಶಾನುಭೋಗ ಪದ್ಮನಾಭಯ್ಯ ಅವರಿಗೆ ಮೊದಲ ಇಬ್ಬರು ಮಕ್ಕಳು ತೀರಿಕೊಂಡ ಮೇಲೆ ನಾಗಪ್ರತಿಷ್ಠೆ ಮಾಡಿಸಿದ ನಂತರ ಏಳು ತಿಂಗಳಿಗೆ ಜನಿಸಿದ ಪುತ್ರರತ್ನ ‘ ನಾಗರಾಜಯ್ಯ’ ಅವರನ್ನು ಮಡಿಪದ್ಮಕ್ಕ ಎಂದೇ ಖ್ಯಾತರಾಗಿದ್ದ ನಮ್ಮಜ್ಜಿ ಪದ್ಮಾವತಮ್ಮ ಕಣ್ಣುರೆಪ್ಪೆಯ ಮೇಲಿಟ್ಟು ಕಾಪಾಡಿದಂತೆಯೇ, ನಮ್ಮಮ್ಮ ಕಮಲಮ್ಮ, ಬಾಳೇಹಣ್ಣಿನ ಗುಡಾಣದಲ್ಲಿಟ್ಟಂತೆ ಸಾಕುತ್ತಿದ್ದಾರೆ. ನಮ್ಮ ತಂದೆಯ ಬಾಲ್ಯ, ವಿದ್ಯಾಭ್ಯಾಸ ಒಂದು ಕಾದಂಬರಿಗಾಗುವಷ್ಟು ಸರಕಿನದು. ಮನೆಯಲ್ಲಿ ಸಭೆ – ಸಮಾರಂಭಗಳಲ್ಲಿ ಅಪ್ಪಾಜಿ ಇದ್ದ ಕಡೆ ನಗು, ಸಂತಸದ ಅಲೆಗಳು. ಅವರಿಗಿರುವ ಹಾಸ್ಯ ಪ್ರಜ್ಞೆ ಅಪರಿಮಿತ. ಯಾವಾಗಲೋ ಸಣ್ಣ – ಪುಟ್ಟ ವಿಷಯಗಳಲ್ಲಿ ಅಸಮಾಧಾನ ಉಂಟಾದರೆ ಅದನ್ನು ವಿಪರೀತಕ್ಕೆ ಹೋಗಲು ಬಿಡದೆ, ಅಲ್ಲೇ ಚಾಣಾಕ್ಷತೆಯಿಂದ ಪರಿಹರಿಸುವ ಸಮಯ ಸ್ಫೂತರ್ಿ, ಅಪಾರ ತಾಳ್ಮೆ, ಮಗುವಿನ ಮುಗ್ಧತೆ, ಆಳವಾದ ವಿಷಯ ಜ್ಞಾನವ್ಯಾಪ್ತಿ, ಎಲ್ಲಕ್ಕಿಂತ ಹೆಚ್ಚಾಗಿ ಗರ್ವ, ಅಹಂಕಾರಗಳಿಂದ ದೂರವಾದ ಸರಳ, ನಿರ್ಮಲ ಅಂತಃಕರಣದ ಅಪರೂಪದ ಅರಿವಿನ ವಾರಿಧಿ ನನ್ನಪ್ಪಾಜಿ. ಲೋಕ ವ್ಯವಹಾರ, ದಿನ ನಿತ್ಯದ ದಿನಸಿ ವ್ಯಾಪಾರ ಅಪ್ಪಾಜಿಗೆ ಗೊತ್ತಿಲ್ಲದ ಲೋಕ. ಆದರೆ ಅವರು ವಹಿಸಿಕೊಂಡ ಕಾರ್ಯಗಳ ಬಗ್ಗೆ ತೀವ್ರ ನಿಗಾ ವಹಿಸುತ್ತಾರೆ. ನಾಡೋಜ ಹಂಪನಾ ಊಟ ಮಾಡುವುದನ್ನು ಹೇಳದೇ ಬಿಟ್ಟರೆ ಅಪಚಾರವಾದೀತು. ನಾಡೋಜ ಕಮಲಾ ಹಂಪನಾ ಅವರ ಸೊಗಸಾದ ಅಡುಗೆಯ ಬಗ್ಗೆ ಎಷ್ಟೋ ಜನ ಈಗಾಗಲೇ ಬರೆದಿದ್ದಾರೆ. ಆ ರಸಗವಳವಷ್ಟೇ ಅಲ್ಲ, ಹಸಿವಾದಾಗ ಅಪ್ಪಾಜಿಗೆ ಏನು ಬಡಿಸಿದರೂ, ಮೊದಲ ತುತ್ತು ಕಣ್ಣಿಗೆ ಒತ್ತಿಕೊಂಡು, ಬಡಿಸಿದ್ದನ್ನು ತಿಂದು ಏಳುತ್ತಾರೆ. ಇದಕ್ಕೆ ಅದು ಕಮ್ಮಿ, ಇದು ಹೆಚ್ಚು ಎಂದು ತಕರಾರು ತೆಗೆದದ್ದು ನಾನೆಂದೂ ಕಾಣೆ. ಮತ್ತೆ ಒಂದಗಳೂ ಚೆಲ್ಲದೇ, ತಾಟು ಖಾಲಿ ಮಾಡುತ್ತಾರೆ. ಬೇರೆ ಯಾರಾದರೂ ಗೊತ್ತಿಲ್ಲದೇ ಅವರ ತಟ್ಟೆಯಲ್ಲೇ ಬೇಕಾದರೆ ಊಟ ಮಾಡಿಬಿಡಬಹುದಾದಷ್ಟು ಅವರ ತಟ್ಟೆ ಚೊಕ್ಕಟವಾಗಿರುತ್ತದೆ! ಈ ನೆನಪಿನ ಕದಂಬ ಮಾಲೆ (ಎಲ್ಲೆಲ್ಲೋ, ಯಾವುದ್ಯಾವುದೋ ಬಣ್ಣ, ವಾಸನೆ, ಸ್ಪರ್ಶ, ನೋಟ ……. ಹೀಗೆ ಎಲ್ಲಾ ಬೇರೆ ಬೇರೆ ಹೆಕ್ಕಿರುವಂಥದ್ದು.)ಯಲ್ಲಿ ಅಪ್ಪಾಜಿಯ ಜೀವನೋತ್ಸಾಹದ ಬಗ್ಗೆ ಹೇಳಲೇ ಬೇಕು. ಒಂದು ಗುಂಪು ನಡೆಯುತ್ತಾ ಬರುತ್ತಿದ್ದರೆ, ನಾಲ್ಕು ಹೆಜ್ಜೆ ಯಾರಪ್ಪಾ ಅದು ಮುಂದಿರುವುದು ಎಂದು ನೋಡಿದರೆ ಅದು ಹಂಪನಾ ಆಗಿರುವುದು ದಿಟ. ಕನ್ನಡದ ಸೊಗಸು, ಸೊಗಡು, ಭಾಷೆಯ ನಯ – ನೇಯ್ಗೆ, ಇವೆಲ್ಲಾ ನಿಮಗೆ ತಿಳಿಯಬೇಕೆಂದರೆ ಪ್ರೊ|| ಹಂಪನಾ ಮಾತಾಡುವುದನ್ನು ಕೇಳಬೇಕು, ತಣಿಯಬೇಕು. ಕನ್ನಡದಷ್ಟೇ ಸೊಗಸಾಗಿ ಇಂಗ್ಲಿಷ್ ಭಾಷೆಯೂ ಅವರಿಗೆ ಮಣಿದಿದೆ. ಪ್ರಾಕೃತ ಕೈ ಹಿಡಿದಿದೆ. ಅವರ ಪ್ರೀತಿ ಸೋನೆಯಲ್ಲಿ ಮಿದ್ದು ಎದ್ದ ನಾನು ಒಂದು ಮಹಾಕಾವ್ಯ, 15 ಇಂಗ್ಲಿಷ್ ಕೃತಿ ಸೇರಿದಂತೆ 80 ಪುಸ್ತಕಗಳನ್ನು ಬರೆದವರು ಇವರೇನಾ? ಎಂದು ಯಾವಾಗಲೂ ಬೆರಗುಗಣ್ಣಿನಿಂದ ನೋಡುತ್ತೇನೆ ಇವರ ಕೋಶವೇ ಇವರು ದೇಶ ಸುತ್ತುವಂತೆಯೂ ಮಾಡಿದೆ.ಹಲವು ಬಾರಿ ಪ್ರಪಂಚ ಪರ್ಯಟನೆ ಮಾಡಿದ್ದಾರೆ. ಈಗ ಎಪ್ಪತ್ತೈದರ ಮೆರಗು ಅಪ್ಪಾಜಿಗೆ. ಅದು ಅವರಿಗೆ ಇಪ್ಪತ್ತೈದರಂತೆ. ಅವರು ಉತ್ಸಾಹದಿಂದ ಯಾವಾಗಲೂ ಹೇಳುವುದು ವಯಸ್ಸು ಕೇವಲ ಒಂದು ಸಂಖ್ಯೆ ” ಅಂತ. ಅವರೇ ಇತ್ತೀಚೆಗೆ ಹೇಳಿದ ಹಾಗೆ, ಅವರ ಅರಿವಿಗೆ ಬಂದ, ಜ್ಞಾನದ ವ್ಯಾಪ್ತಿಗೆ ದೊರಕಿರುವ ವಿಷಯಗಳ ಬಗ್ಗೆ ಬರೆಯುತ್ತಾ ಹೋದರೆ, ಇನ್ನೂ 25 ವರ್ಷಗಳಷ್ಟು ಬರವಣಿಗೆಯ ಸರಕು ಅವರಲ್ಲಿದೆ ಎಂದು. ಎಲ್ಲರ ಪ್ರೀತಿ – ಅಭಿಮಾನ – ಅಕ್ಕರೆ – ಮಮತೆಗಳು ಅವರಂದು – ಕೊಂಡದ್ದನ್ನು ಆಗು ಮಾಡಲಿ.]]>

‍ಲೇಖಕರು avadhi

7 October, 2010

1 Comment

  1. savitri

    Hampana avarige hrutpoorvaka Shubhashayagalu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading