ಸಂಬೋಗ ಗಂಡು ಹೆಣ್ಣು ಇಬ್ಬರೂ ಇಷ್ಟಪಟ್ಟು ಅನುಭವಿಸುವ ಸಹಜ ದೈಹಿಕ ಮತ್ತು ಮಾನಸಿಕ ಕ್ರಿಯೆಯಾದರೂ ಇಬ್ಬರ ದೃಷ್ಟಿಕೋನದಲ್ಲಿ ಇರುವ ವ್ಯತ್ಯಾಸಗಳು ಬಹುಶಃ ಹೆಣ್ಣಿನ ಮೇಲೆ ನಡೆಯುತ್ತಿರುವ ಅತ್ಯಾಚಾರದ ಬಗ್ಗೆ ಕೆಲವು ಸತ್ಯಗಳನ್ನು ಕಂಡುಕೊಳ್ಳಬಹುದಾಗಿದೆ. ಸಂಬೋಗದ ಬಗ್ಗೆ ಹೆಣ್ಣಿನ ಮೊದಲ ಕಂಡಿಶನ್ ಮನಸ್ಸು ಕೊಡುವುದು ಹಾಗಾಗಿ ಯಾರಿಗೆ ಮನಸ್ಸು ಕೊಡುತ್ತೀನೊ ಅವರೊಂದಿಗೆ ಬೋಗ. ಗಂಡಸರೂ ಇದಕ್ಕೆ ಹೊರತಲ್ಲವಾದರೂ ಸುಖದ ಪರಿಕಲ್ಪನೆಯಲ್ಲಿ ಗಂಡು ಬೋಗದ ಆ ಸಮಯಕ್ಕೇ ಹೆಚ್ಚು ಪ್ರಾಶಸ್ತ್ಯ ಕೊಡುತ್ತಾನೆನ್ನಬಹುದು. ಅವನಿಗೆ ದೈಹಿಕ ಆಕರ್ಷಣೆ ಮೊದಲು ನಂತರ ಮನಸ್ಸಿನ ಮಿಲನಕ್ಕೆ ಪ್ರಾಶಸ್ತ್ಯ ಕೊಡುತ್ತಾನೆ. ಹೆಣ್ಣು ಗಂಡಿನ ಮೇಲೆ ಅತ್ಯಾಚಾರ ನಡೆಸಿದ ಘಟನೆ ಯಾಕಿಲ್ಲವೆಂಬುದಕ್ಕೆ ಇದು ಕಾರಣವಿರಬಹುದು. ಗಂಡಿನ ಮನಸ್ಸಿನಲ್ಲಿನ ಹೆಣ್ಣಿನ ಮೇಲಿನ ಅಧಿಕಾರಯುಕ್ತವಾದ ಮೃಗೀಯ ಮನೋಸ್ಥಿತಿ ಮತ್ತು ಅತ್ಯಾಚಾರಕ್ಕೆ ಒಂದು ಪೂರ್ವ ನಿಯೋಜಕ ಸುಪ್ತ ಮನಸ್ಸಿನ ಸಿದ್ದತೆಯಾಗಿರುತ್ತದೆ. ಅತ್ಯಾಚಾರಿ ಮನಸ್ಸು ಯಾವಾಗಲೂ ಸಂದರ್ಭಕ್ಕೆ ಕಾಯುತ್ತಿರುತ್ತದೆ. ಗಂಡಿನ ಅತ್ಯಾಚಾರಿ ಮನಸ್ಸು ಹೆಣ್ಣಿನ ಮೇಲಿನ ವಿಕೃತ ಅಹಂ ಮತ್ತು ಅದರ ತೃಪ್ತಿಗೆ ಹೊಂಚು ಹಾಕುತ್ತಿರುತ್ತದೆ. ಮೇಲ್ನೋಟಕ್ಕೆ ಕಾಮದ ಅತೃಪ್ತ ಮನಸ್ಸು ಎಂದು ಅಂದುಕೊಂಡರೂ ಇತ್ತಿಚಿನ ಕಾನೂನಿನ ತಿದ್ದುಪಡಿಯಂತೆ ಪ್ರತಿ ಲೈಂಗಿಕ ದೌರ್ಜನ್ಯವನ್ನೊ ಅತ್ಯಾಚಾರ ಎಂದೇ ಪರಿಗಣಿಸಲ್ಪಡುತ್ತಿದೆ.

ಒಂದಂತೂ ನಿಜ ಅತ್ಯಾಚಾರದಲ್ಲಿ ಸಂಬೋಗ ಒಂದು ನೆಪಮಾತ್ರ ಆಗ ನಡೆಯುವ ಮತ್ತು ಆನಂತರ ಆಕೆಯ ದೇಹದ ಮೇಲೆ ನಡೆಸುವ ಬೀಕರ ದಾಳಿ ಗಂಡಿನ ಅಹಂ ಮತ್ತು ಮಾನಸಿಕ ಬರ್ಭರತೆಯನ್ನು ತೋರಿಸುತ್ತದೆ. ದೈಹಿಕವಾಗಿ ಪ್ರಬಲವಾಗಿರುವ ಗಂಡಸು ಮತ್ತು ಸಾಮೂಹಿಕ ಅತ್ಯಾಚಾರಗಳಲ್ಲಂತೂ ಇದು ಕೇವಲ ಲೈಂಗಿಕ ಸುಖಕ್ಕಾಗಿ ನಡೆದ ಕೃತ್ಯವೇ ಎಂದು ಅಚ್ಚರಿಗೊಳಿಸುವಷ್ಟು ಬೀಕರವಾಗಿರುತ್ತದೆ.ದೆಹಲಿ ಅತ್ಯಾಚಾರ ಪ್ರಕರಣದಲ್ಲಿನ ಬರ್ಬರತೆ ಮತ್ತು ಅಮಾನುಷ ಕೃತ್ಯಗಳಿಂದ ಇದು ಸಾಬೀತಾಗುತ್ತದೆ.
ಹೆಣ್ಣು ಗಂಡಿನ ಮಿಲನದ ಕ್ರಿಯೆಯಲ್ಲಿ ಹೆಣ್ಣು ಮಾನಸಿಕವಾಗಿ ಸಿದ್ದವಾಗದಿದ್ದಾಗ ನಡೆಸಲೆತ್ನಿಸುವ ಸಂಬೋಗದ ಪ್ರಯತ್ನ ಗಂಡಿಗೂ ಹಿಂಸೆಯನ್ನಿಸುವ ವಾಸ್ತವದ ನೆಲೆಗಟ್ಟಿನಲ್ಲಿ ನೋಡುವಾಗ ಅತ್ಯಾಚಾರ ಮಾಡಿದ ಗಂಡಿಗೆ ಲೈಂಗಿಕ ತೃಪ್ತಿ ಸಿಕ್ಕಿದೆ ಎನ್ನುವುದು ಅನುಮಾನಾಸ್ಪದ ಮತ್ತು ಆ ಕಾರಣಕ್ಕಾಗೇ ಅವನೂ ಮತ್ತೊ ಅತ್ಯಾಚಾರಗಳನ್ನು ಮಾಡಲೆತ್ನಿಸುವುದೂ ಇರಬಹುದು.
ಹೆಣ್ಣು ಯಾಕೆ ಗಂಡಿನ ಮೇಲೆ ಅತ್ಯಾಚಾರ ಮಾಡುವುದಿಲ್ಲ ಎಂದು ಪ್ರಶ್ನಿಸಿ ನೋಡಿ ನೂರಾರು ತರಲೆ ಉತ್ತರಗಳು ಬರಬಹುದು. ಮಾಡಲಿ ನಾವು ರೆಡಿ ಎಂದು ಹೇಳುತ್ತಾರೆ. ಯಾಕೆಂದರೆ ಸಂಬೋಗವನ್ನು ಬರಿ ಸುಖದ ದೃಷ್ಟಿಯಿಂದ ನೋಡುವ ಗಂಡಿಗೆ ಅದು ಖುಷಿ ಕೊಡುವ ವಿಚಾರ ಆದರೆ ಹೆಣ್ಣು ಸಂಬೋಗಕ್ಕೆ ಮನಸ್ಸಿನ ಪ್ರಾಮುಖ್ಯತೆಯ ಬಗ್ಗೆ ತಲೆ ಕೆಡಿಸಿಕೊಳ್ಳುವಷ್ಟು ಗಂಡು ಕೆಡಿಸಿಕೊಳ್ಳುವುದಿಲ್ಲ. ಹೊನ್ನು ಮತ್ತು ಮಣ್ಣಿನೊಡನೆ ಹೆಣ್ಣನ್ನು ಬೋಗದ ಲಿಸ್ಟ್ ನಲ್ಲಿ ಸೇರಿಸಿ ಅಲ್ಲೂ ಆಕೆ ಬಿಕರಿಗಿರುವ ಬೋಗ ಎಂದು ಪರಿಗಣಿಸುತ್ತೇವೆ. ಇನ್ನೊಂದು ಕಡೆ ಇದೆಲ್ಲಾ ಮಾಯೆ ಕೆಟ್ಟದ್ದು ಎಂದೂ ಹೇಳುತ್ತೇವೆ. ಇನ್ನೊಂದು ಬಗೆಯ ಗೊಂದಲದ ನಿರ್ಮಾಣ.
ಹೆಣ್ಣು ಮನಸ್ಸು ಮತ್ತು ದೈಹಿಕ ಸುಖವನ್ನು ಒಂದುಗೂಡಿಸಿ ನೋಡಿದರೆ ಗಂಡು ಎರಡನ್ನೂ ಬೇರೆ ಬೇರೆಯಾಗಿ ನೋಡುವುದರ ಪರಿಣಾಮ ಅತ್ಯಾಚಾರ. ಚಿಕ್ಕ ಚಿಕ್ಕ ಮಕ್ಕಳ ಮೇಲೆ ನಡೆಯುವ ಅತ್ಯಾಚಾರಗಳಿಗೆ ಇದು ಸಂಬಂದಿಸುವುದಿಲ್ಲ. ಅಲ್ಲಿ ಗಂಡಿನ ಅದುಮಿಟ್ಟ ದೈಹಿಕ ಲಾಲಸೆ ಮತ್ತು ಅತೃಪ್ತ ದೈಹಿಕ ಆಕ್ರೋಶ.. ಬಲವಂತವಾಗಿ ಹೆಣ್ಣನ್ನು ಪಡೆಯುವುದು ನನ್ನ ಹಕ್ಕು ಎಂದು ತಿಳಿದಿಕೊಳ್ಳುದು ಮತ್ತು ಅದನ್ನು ಅವಳ ಮೇಲೆ ಸ್ಥಾಪನೆಮಾಡಲೆತ್ನಿಸುವುದು ಗಂಡಿನ ಅಹಂ. ಇದು ಗಂಡ ಹೆಂಡತಿಯರ ನಡುವೆ ನಡೆಯುವ ಲೈಂಗಿಕ ದೌರ್ಜನ್ಯವೇ ಆಗಿದೆ.
ಇಲ್ಲಿ ಗಂಡು ಮತ್ತು ಹೆಣ್ಣು ಎಂದು ಹೇಳುವಾಗ ಸಾಮನ್ಯ ಮನಸ್ಥಿತಿಯನ್ನು ನೋಡಿ ಹೇಳಿರುತ್ತೇನೆ.. ಇದಕ್ಕೂ ಹೊರತಾಗಿ ಗಂಡು ಹೆಣ್ಣಾಗಿ ಹೆಣ್ಣು ಗಂಡಾಗಿ ಪರಸ್ಪರ ಪ್ರೇಮಕ್ಕೆ ಅರ್ಪಣೆ ಮಾಡಿಕೊಂಡು ಇದೆಲ್ಲಕ್ಕೂ ಅತೀತವಾಗಿರುವವರೂ ಸಹ ಇರುತ್ತಾರೆ. ಹಾಗಾಗಿ ಗಂಡಿನ ಮತ್ತು ಹೆಣ್ಣಿನ ಲೈಂಗಿಕ ವಿಷಯಗಳ ಸಾಮಾನ್ಯ ಮನೋಸ್ಥಿತಿ ಮತ್ತು ಅದು ಅತ್ಯಾಚಾರದಂತ ಬರ್ಬರತೆಗೆ ಕಾರಣವಾಗಬಹುದೆಂದು ಮಾತ್ರ ಚರ್ಚಿಸಿದ್ದೇನೆ
’ಅತ್ಯಾಚಾರ’ ಹೆಣ್ಣು ಮತ್ತು ಗಂಡಿನ ನೆಲೆಯಲ್ಲಿ..
ನಿಮಗೆ ಇವೂ ಇಷ್ಟವಾಗಬಹುದು…





Good analysis.
ಚೆನ್ನಾಗಿದೆ ಸರ್, ಅನಾಲಿಸಿಸ್….ಆದರೆ ಟಿ.ಕೆ.ರಾಮರಾವ್ ರವರ ಕಾದಂಬರಿಯ ಕಥಾನಾಯಕ ಬೈರ(ಬೈರನ್) ಅಮೇರಿಕದಲ್ಲಿ ನಾಲ್ಕು ಜನ ಹುಡುಗಿಯರಿಂದ ಅತ್ಯಾಚಾರಕ್ಕೊಳಗಾಗುತ್ತಾನೆ…!