ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಣ್ಣಾ ಹೋರಾಟ- ವಿಭಿನ್ನ ಆಯಾಮ ಅಗತ್ಯ

-ನಾ ದಿವಾಕರ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುತ್ವ ಮತ್ತು ಪ್ರಜೆಗಳ ನಡುವೆ ಏರ್ಪಡುವ ಯಾವುದೇ ಸಂಘರ್ಷದ ಪರಿಹಾರ ಇರುವುದು ದೇಶದ ಸಾರ್ವಭೌಮ ಜನತೆಗೆ ಒಪ್ಪಿತವಾಗಿರುವ ಸಂವಿಧಾನದ ಚೌಕಟ್ಟಿನೊಳಗೆ ಮಾತ್ರ. ಭಾರತದ ಆರು ದಶಕಗಳ ಸ್ವತಂತ್ರ ಆಳ್ವಿಕೆಯಲ್ಲಿ ಆಳುವ ಸಕರ್ಾರಗಳು ಎಷ್ಟೇ ವೈಫಲ್ಯ ಎದುರಿಸಿದ್ದರೂ, ಈ ಅವಧಿಯಲ್ಲಿ ರೂಪುಗೊಂಡಿರುವ ಕಾಯ್ದೆ-ಕಾನೂನುಗಳು, ಶಾಸನಗಳು ಸಂವಿಧಾನಾತ್ಮಕ ಕ್ರಮಗಳ ಮೂಲಕವೇ ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸಿವೆ. ಭಾರತದ ಪ್ರಭುತ್ವ ಮತ್ತು ಚುನಾಯಿತ ಸಕರ್ಾರಗಳು ಸಾಂವಿಧಾನಿಕ ಮೌಲ್ಯ ಮತ್ತು ತತ್ವಗಳನ್ನು ಉಲ್ಲಂಘಿಸಿ ಜನವಿರೋಧಿ ನೀತಿಗಳನ್ನು ಅನುಸರಿಸಿದ ಪ್ರತಿಯೊಂದು ಸಂದರ್ಭದಲ್ಲೂ ಸಂವಿಧಾನದ ಪರಿಧಿಯಲ್ಲೇ, ನ್ಯಾಯಾಂಗದ ಮೂಲಕ, ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ 1967ರ ನಂತರದ ಪ್ರಕ್ಷುಬ್ಧ ಸನ್ನಿವೇಶ, ತುತರ್ುಪರಿಸ್ಥಿತಿ ಮತ್ತು ಇತ್ತೀಚಿನ ಸಲ್ವಾಜುಡಂ ಪ್ರಕರಣಗಳು ಉಲ್ಲೇಖನಾರ್ಹ. ಅಣ್ಣಾ ಹಜಾರೆ ತಂಡದ ಜನಲೋಕಪಾಲ್ ಮಸೂದೆಯ ಸುತ್ತ ದೇಶಾದ್ಯಂತ ಹರಡಿರುವ ಜನಾಂದೋಲನದ ಮೂಲಭೂತ ನ್ಯೂನತೆಯನ್ನೂ ಈ ನಿಟ್ಟಿನಲ್ಲೇ ಗ್ರಹಿಸಬೇಕಾಗಿದೆ. ನವ ಉದಾರವಾದದ ಎಲ್ಲ ಫಲಾನುಫಲಗಳನ್ನೂ ಅನುಭವಿಸಿರುವ ದೇಶದ ಮಧ್ಯಮವರ್ಗದ ಜನತೆಗೆ ಭ್ರಷ್ಟಾಚಾರದ ಮುಕ್ತ ಆಳ್ವಿಕೆ ಅನಿವಾರ್ಯವಾಗುವುದು ತಮ್ಮ ನಗರೀಕೃತ ಜೀವನ ಶೈಲಿಗೆ ಕುತ್ತು ಬಂದಾಗ ಮಾತ್ರ. ತಮ್ಮ ಸಾಮಾಜಿಕ-ಆಥರ್ಿಕ ಮೇಲ್ ಚಲನೆಗೆ ಅಡ್ಡಿ ಆತಂಕ ಉಂಟುಮಾಡುವ ಎಲ್ಲ ವಿದ್ಯಮಾನಗಳನ್ನೂ ತೊಡೆದುಹಾಕುವ ಈ ವರ್ಗದ ಹಿತಾಸಕ್ತಿಗಳು ಸದಾ ಆಳ್ವಿಕರ ಹಿತಾಸಕ್ತಿಗಳೊಡನೆ ರಾಜಿ ಮಾಡಿಕೊಳ್ಳುತ್ತಲೇ ಸಾಗುತ್ತವೆ. ಹಾಗಾಗಿಯೇ ಈ ಮಧ್ಯಮ ವರ್ಗಗಳ ಆಕ್ರೋಶ, ಹತಾಶೆಗಳು ಬಹಿರಂಗವಾಗಿ ವ್ಯಕ್ತವಾದಾಗಲೆಲ್ಲಾ ದೇಶದಲ್ಲಿ ಆಂದೋಲನದ ಹುರುಪು ಕಾಣಿಸಿಕೊಳ್ಳುತ್ತದೆ.  ಮಂಡಲ್ ವಿರೋಧಿ ಚಳುವಳಿ ಈ ನಿಟ್ಟಿನಲ್ಲಿ ಉತ್ತಮ ನಿದರ್ಶನ. 

ಸಮಾಜೋ-ಆಥರ್ಿಕ ಸಂದರ್ಭಗಳು- 1970 ಮತ್ತು 1990ರಲ್ಲಿ ಸಂಭವಿಸಿದ ಘಟನೆಗಳೂ ಇಲ್ಲಿ ಉಲ್ಲೇಖನಾರ್ಹ. ನಿರುದ್ಯೋಗ, ಬೆಲೆ ಏರಿಕೆ, ಹಣದುಬ್ಬರ ಮತ್ತು ಆಥರ್ಿಕ ಅಸ್ಥಿರತೆಯನ್ನು ಎದುರಿಸಿದ ಭಾರತದ ದುಡಿಯುವ ವರ್ಗಗಳು 70ರ ದಶಕದಲ್ಲಿ ದೇಶಾದ್ಯಂತ ಕ್ರಾಂತಿಕಾರಿ ಹೋರಾಟಕ್ಕೆ ಸಜ್ಜಾದಾಗ ಪ್ರಭುತ್ವ ಕ್ರಮಿಸಿದ ದಾರಿ, ಸವರ್ಾಧಿಕಾರಿ ಧೋರಣೆಯದು. ಪರಿಣಾಮ ತುತರ್ುಪರಿಸ್ಥಿತಿ ಮತ್ತು ಜನಾಂದೋಲನಗಳ ದಮನ. ಪ್ರಭುತ್ವದ ಈ ಕ್ರಮಕ್ಕೆ ಪಯರ್ಾಯವಾಗಿ ರೂಪುಗೊಂಡಿದ್ದು ಜೆಪಿಯವರ ಸಂಪೂರ್ಣ ಕ್ರಾಂತಿ. ನಿಜ, ಸಂಪೂರ್ಣ ಕ್ರಾಂತಿಯ ಧ್ಯೇಯೋದ್ದೇಶಗಳು ಪ್ರಜಾತಾಂತ್ರಿಕವಾಗಿಯೇ ಇತ್ತು. ಆದರೆ ಕಾಂಗ್ರೆಸ್ ವಿರೋಧಿ ಅಲೆಯಲ್ಲಿ ಕೊಚ್ಚಿ ಹೋದ ಜನತೆಯ ಆಕ್ರೋಶ ಕೊನೆಗೊಂಡದ್ದು ಮತ್ತೊಂದು ರೀತಿಯ ದಮನಕಾರಿ ಆಳ್ವಿಕೆಯ ಅಧಿಕಾರ ಗ್ರಹಣದಲ್ಲಿ. ಇಲ್ಲಿಯೂ ಮೇಲುಗೈ ಸಾಧಿಸಿದ್ದು ಮಧ್ಯಮವರ್ಗಗಳ ಹಿತಾಸಕ್ತಿಯೇ ಹೊರತು, ಶ್ರಮಜೀವಿಗಳದ್ದಲ್ಲ.  ಸಂವಿಧಾನದ ಆಡಳಿತಾತ್ಮಕ ನೀತಿಗಳನ್ನೇ ವೈಭವೀಕರಿಸುತ್ತಾ, ಅದರೊಳಗಿನ ಜನಪರ ಕಾಳಜಿಗಳನ್ನು ನಿರ್ಲಕ್ಷಿಸುತ್ತಾ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡ ಆಳುವ ವರ್ಗಕ್ಕೆ ಮತ್ತೆ ಸವಾಲು ಎದುರಾದದ್ದು 1990ರಲ್ಲಿ.1980ರ ದಶಕದಲ್ಲಿ ಸಂಭವಿಸಿದ ರಾಜಕೀಯ ಪಲ್ಲಟಗಳು ದೇಶದ ರಾಜಕಾರಣದ ರೂಪುರೇಷೆಗಳನ್ನು ಬದಲಾಯಿಸಿತ್ತೇ ಹೊರತು ಮೂಲಭೂತ ಪರಿವರ್ತನೆಗೆ ಸಹಕಾರಿಯಾಗಲಿಲ್ಲ.  ಹಿಂದುಳಿದ ವರ್ಗಗಳ ಹಕ್ಕೊತ್ತಾಯಗಳು ಹೆಚ್ಚಾಗುತ್ತಿರುವ ಸನ್ನಿವೇಶದಲ್ಲೇ, ಧಾಮರ್ಿಕ-ಮತೀಯ ಭಾವನೆಗಳನ್ನು ಬಡಿದೆಬ್ಬಿಸಿದ ಆಳುವ ವರ್ಗಗಳು ಮತ್ತೊಮ್ಮೆ ಮಧ್ಯಮ ವರ್ಗಗಳ ತುಷ್ಟೀಕರಣದಲ್ಲಿ ತೊಡಗಿದ್ದನ್ನು ಮಂಡಲ್ ವಿರೋಧಿ ಆಂದೋಲನ ಮತ್ತು ಜಾಗತೀಕರಣ ಪರವಾದ ಅಲೆಯಲ್ಲಿ ಕಾಣಬಹುದಾಗಿತ್ತು. ಭಾರತದ ಸಂವಿಧಾನದ ಮೂಲ ತತ್ವಗಳಿಗೆ ತದ್ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದ ನವ ಉದಾರವಾದಿ ಆಥರ್ಿಕ ನೀತಿಗಳನ್ನು ಅನುಷ್ಟಾನಗೊಳಿಸಿದ ಸಂದರ್ಭದಲ್ಲೂ ಲೈಸೆನ್ಸ್ ಪಮರ್ಿಟ್ ಆಳ್ವಿಕೆಯ ವಿರುದ್ಧ ಹುಯಿಲೆಬ್ಬಿಸಿದ್ದು ಇದೇ ಮಧ್ಯಮ ವರ್ಗಗಳೇ. ಪರಿಣಾಮ, ಮಂಡಲ್ ಸಮರ್ಥಕರು, ರಾಮಮಂದಿರ ವಿರೋಧಿಗಳು ಮತ್ತು ಜಾಗತೀಕರಣ ವಿರೋಧಿಗಳು ದೇಶದ್ರೋಹಿಗಳಂತೆ ಕಾಣಲ್ಪಟ್ಟರು. ಈ ಸಂದರ್ಭದಲ್ಲೂ ಸಂವಿಧಾನದ ಆಡಳಿತಾತ್ಮಕ ನೀತಿಗಳೇ ವೈಭವೀಕರಿಸಲ್ಪಟ್ಟಿದ್ದನ್ನು ಸ್ಮರಿಸಬಹುದು. ಈ ಎರಡೂ  ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕಂಡುಬರುವ ಅಂಶವೆಂದರೆ ಮಧ್ಯಮವರ್ಗ ಪ್ರೇರಿತ ಜನಾಂದೋಲನಗಳು ಭಾರತದ ಸಂವಿಧಾನದಲ್ಲಿ ಅಂತರ್ಗತವಾಗಿರುವ ದೇಶದ ಬಹುಸಂಖ್ಯಾತ ಜನತೆಯ ಪರವಾದ ಕಾಳಜಿಗಳನ್ನು ವ್ಯವಸ್ಥಿತವಾಗಿ ಮರೆಮಾಚಿದ್ದು. ನವ ಉದಾರವಾದ ತನ್ನ ಕಬಂಧ ಬಾಹುಗಳಿಂದ ದೇಶದ ಎಲ್ಲ ಕ್ಷೇತ್ರಗಳನ್ನೂ ಆವರಿಸುತ್ತಾ , ತನ್ನದೇ ಆದ ಪ್ರಭುತ್ವವನ್ನು ಪೋಷಿಸುತ್ತಾ, ಕಾಪರ್ೋರೇಟ್ ಆಳ್ವಿಕೆಗೆ ಭದ್ರ ಬುನಾದಿ ಒದಗಿಸುತ್ತಿರುವ ಸಂದರ್ಭದಲ್ಲಿ ಜಾಗತೀಕರಣದ ಫಲಾನುಭವಿಗಳಾದ ಮಧ್ಯಮವರ್ಗಗಳಿಗೆ ಕಂಟಕವಾಗಿ ಪರಿಣಮಿಸಿದ್ದು ಕಾಯರ್ಾಂಗ ಮತ್ತು ರಾಜಕೀಯ ಕ್ಷೇತ್ರದಲ್ಲಿನ ಭ್ರಷ್ಟಾಚಾರ. ಮೇಲ್ ಮಧ್ಯಮ ವರ್ಗಗಳಿಗೆ ಜಾಗತೀಕರಣಕ್ಕೆ ಮುನ್ನ ತೊಡಕಿನಂತೆ ಕಾಣುತ್ತಿದ್ದ ಲೈಸೆನ್ಸ್ ಪಮರ್ಿಟ್ ಆಳ್ವಿಕೆಯಷ್ಟೇ ಅಪಾಯಕಾರಿಯಾಗಿ ಇಂದಿನ ರಾಜಕೀಯ ಭ್ರಷ್ಟಾಚಾರವೂ ಕಾಣುತ್ತಿರುವುದು ಸ್ಪಷ್ಟ. ಹಾಗಾಗಿಯೇ ಅಣ್ಣಾ ಹಜಾರೆಯ ಹೋರಾಟಕ್ಕೆ ತಂಡೋಪತಂಡವಾಗಿ ಜನಸಾಗರ ಹರಿದುಬಂದಿದ್ದೂ ಹೌದು.

ಸಾಮಾಜಿಕ ಪ್ರತಿಕ್ರಿಯೆ ಆದರೆ ಭಾರತದ ಜನಸಂಖ್ಯೆಗನುಗುಣವಾಗಿ ನೋಡಿದಾಗ ಪ್ರಸ್ತುತ ಆಂದೋಲನದ ಹಿಂದಿರುವ ಜನಸಂಖ್ಯೆ ಗೌಣವೆಂದೇ ಹೇಳಬಹುದು. ಮಾಧ್ಯಮಗಳಲ್ಲಿ ಪದೇ ಪದೇ ಬಿತ್ತರಿಸಲಾಗುತ್ತಿರುವ ದೃಶ್ಯಗಳು ಪುನರಾವರ್ತನೆಯೆಂದು ಹೇಳಬೇಕಿಲ್ಲ. ದುರಂತವೆಂದರೆ ವಿದ್ಯುನ್ಮಾನ ಮಾಧ್ಯಮಗಳು ಇದಕ್ಕಿಂತಲೂ ಹೆಚ್ಚಿನ ಜನ ಧೃವೀಕರಣಗೊಂಡಿದ್ದ ಗ್ಯಾಟ್ ವಿರೋಧಿ ಅಂದೋಲನ, ಅಣ್ವಸ್ತ್ರ ವಿರೋಧಿ ಅಂದೋಲನ, ಜಾಗತೀಕರಣ ವಿರೋಧಿ ಅಂದೋಲನಗಳನ್ನು ತಮ್ಮ ರಂಜನೀಯ ಪರದೆಗಳ ಮೇಲೆ ಬಿಂಬಿಸಲೇ ಇಲ್ಲ. ಪೋಖ್ರಾನ್ ವಿರುದ್ಧ ನಡೆದ ಆಂದೋಲನದಲ್ಲಿ ಕಲ್ಕತ್ತಾದಲ್ಲೇ ನಾಲ್ಕು ಲಕ್ಷ ಜನ ಸೇರಿದ್ದರೂ ಮಾಧ್ಯಮಗಳಲ್ಲಿ ನಿರ್ಲಕ್ಷಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗ ಮಾಧ್ಯಮಗಳಿಗೆ ಹಜಾರೆ ಹೋರಾಟವನ್ನು ವೈಭವೀಕರಿಸುವ ಅವಶ್ಯಕತೆ ಹೆಚ್ಚಾಗಿದೆ. ಕಾರಣ, ಪ್ರಸಕ್ತ ಆಂದೋಲನ ನವ ಉದಾರವಾದದ ಹಿತಾಸಕ್ತಿಗಳನ್ನು ಎಲ್ಲಿಯೂ ಪ್ರಶ್ನಿಸುತ್ತಿಲ್ಲ. ಅಥವಾ ದೇಶದ ಬಹುಸಂಖ್ಯಾತ ಶ್ರಮಜೀವಿ ವರ್ಗಗಳನ್ನು, ದಲಿತ ಸಮುದಾಯಗಳನ್ನು, ಆದಿವಾಸಿಗಳನ್ನು ಕಾಡುತ್ತಿರುವ ಸಮಸ್ಯೆಗಳನ್ನು ಬಿಂಬಿಸುತ್ತಿಲ್ಲ. ನಿಜ, ಭ್ರಷ್ಟಾಚಾರ ದೇಶದ ಆಂತರಿಕ ವ್ಯವಸ್ಥೆಯನ್ನು ಶಿಥಿಲಗೊಳಿಸುತ್ತಿದೆ. ಆದರೆ ಇದು ಇಂದಿನ ವಿದ್ಯಮಾನವಲ್ಲ.  ಸ್ವಾತಂತ್ರ್ಯ ಬಂದಾಗಿನಿಂದಲೂ ದೇಶದ ದುಡಿಯುವ ವರ್ಗಗಳು ಭ್ರಷ್ಟಾಚಾರದ ಪಾಪಕೃತ್ಯಗಳನ್ನು ಸಹಿಸಿಕೊಳ್ಳುತ್ತಲೇ ಬಂದಿದ್ದಾರೆ. ಆದಿವಾಸಿಗಳು, ದಲಿತ ಸಮುದಾಯಗಳು, ಅಲ್ಪಸಂಖ್ಯಾತರು, ಮಹಿಳೆಯರು ಈ ಎಲ್ಲಾ ಶ್ರಮಜೀವಿ ವರ್ಗಗಳು ಆಳ್ವಿಕರ ಭ್ರಷ್ಟ ಆಡಳಿತದಲ್ಲಿ ರೂಪುಗೊಂಡ ಆಥರ್ಿಕ ನೀತಿಗಳಿಂದ ಸಂಕಷ್ಟಗಳನ್ನು ಎದುರಿಸುತ್ತಲೇ ಇದ್ದಾರೆ.  ಕಾಯರ್ಾಂಗದ ಅಧಿಕಾರಶಾಹಿಯಲ್ಲಿ ನಾಗರಿಕರಿಂದ ಪಡೆಯುವ ಲಂಚವನ್ನು ಮಾತ್ರ ಭ್ರಷ್ಟಾಚಾರ ಎಂದು ಪರಿಗಣಿಸುವ ಬದಲು, ಒಂದು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ದೇಶದ ಉತ್ಪಾದಕೀಯ ಶಕ್ತಿಗಳ ಹಿತಾಸಕ್ತಿಗಳ ವಿರುದ್ಧ ರೂಪಿಸಲಾದ ಯಾವುದೇ ನೀತಿಯಾದರೂ ಭ್ರಷ್ಟ ಪರಂಪರೆಯ ಸಂಕೇತ ಎಂದು ಪರಿಗಣಿಸುವುದಾದರೆ, ಭ್ರಷ್ಟಾಚಾರ ಎಂಬ ಪಿಡುಗು ಸ್ವತಂತ್ರ ಭಾರತದ ಇತಿಹಾಸದುದ್ದಕ್ಕೂ ಹರಡಿರುವುದು ಸ್ಪಷ್ಟವಾಗುತ್ತದೆ. ಆದರೆ ಈ ದೇಶದ ಮಧ್ಯಮವರ್ಗಗಳಿಗೆ, ಶ್ರೀಮಂತರಿಗೆ ಈ ಸಾಂಸ್ಥಿಕ ಭ್ರಷ್ಟಾಚಾರದ ಗ್ರಹಿಕೆಯೇ ಇಲ್ಲವಾಗಿದೆ.

ದೇಶಾದ್ಯಂತ ನಿರಂತರವಾಗಿ ನಡೆಯುತ್ತಿರುವ ಪರಿಸರ ಹೋರಾಟಗಳು, ಕೃಷಿ ಬಿಕ್ಕಟ್ಟು, ಭೂಸ್ವಾಧೀನ, ಅರಣ್ಯ ಅತಿಕ್ರಮಣ, ಬೃಹತ್ ಅಣೆಕಟ್ಟು ಯೋಜನೆಗಳ ವಿರುದ್ಧದ ಆಂದೋಲನಗಳು ಮಧ್ಯಮವರ್ಗಗಳ ತಾತ್ವಿಕ ಬೆಂಬಲವನ್ನೂ ಗಳಿಸದಿರುವುದು ಇದಕ್ಕೆ ಸ್ಪಷ್ಟ ನಿದರ್ಶನ. ಪೋಸ್ಕೋ, ವೇದಾಂತಗಳ ವಿರುದ್ಧ, ಮಿತ್ತಲ್ ವಿರುದ್ಧ, ನರ್ಮದಾ ವಿರುದ್ಧ ಹೋರಾಡುವವರನ್ನು ಪ್ರಗತಿ ವಿರೋಧಿಗಳೆಂದೇ ಬಿಂಬಿಸುವ ಸಮಾಜದಲ್ಲಿ, ಪ್ರಸ್ತುತ ಅಣ್ಣಾ ಹಜಾರೆ ಹೋರಾಟ ವ್ಯಾಪಕ ಬೆಂಬಲ ಗಳಿಸಿರುವುದು ಭಾರತದ ಸಮಾಜ ಮಧ್ಯಮವರ್ಗ ಕೇಂದ್ರಿತವಾಗುತ್ತಿರುವುದರ ಸಂಕೇತವಾಗಿದೆ. ಅದ್ದರಿಂದಲೇ ಆರಂಭದಲ್ಲಿ ತಮ್ಮ ಜನಲೋಕಪಾಲ್ ಮಸೂದೆ ಜಾರಿಯಾಗುವವರೆಗೂ ಉಪವಾಸ ನಿಲ್ಲಿಸುವುದಿಲ್ಲ ಎಂಬ ಷರತ್ತು ಒಡ್ಡಿದ್ದ ಅಣ್ಣಾ ಈಗ ಮೂರು ಸಂಕೀರ್ಣ ಬೇಡಿಕೆಗಳನ್ನು ಮುಂದಿಟ್ಟು ತಮ್ಮ ನಿರಶನ ಅಂತ್ಯಗೊಳಿಸುವ ಪ್ರಸ್ತಾವನೆ ಮಂಡಿಸಿದ್ದಾರೆ. ಮಧ್ಯಮವರ್ಗಗಳ ಯಾವುದೇ ಚಳುವಳಿ ರಾಜಿ-ಸಂಧಾನಗಳಲ್ಲಿ ಅಂತ್ಯಗೊಳ್ಳುವ ಚಾರಿತ್ರಿಕ ಪರಂಪರೆಯನ್ನು ಇಲ್ಲಿ ಸ್ಪಷ್ಟವಾಗಿ ಕಾಣಬಹುದು.  42 ವರ್ಷಗಳ ಕಾಲ ನೆನೆಗುದಿಗೆ ಬಿದ್ದಿದ್ದ ಮಸೂದೆ ಈಗ ಐದು ವಿಭಿನ್ನ ಆಯಾಮಗಳಿಂದ ಸಕರ್ಾರದ ಮುಂದಿದೆ. ಆಗಸ್ಟ್ 30ರ ಒಳಗಾಗಿ ಮಸೂದೆ ಜಾರಿಯಾಗಬೇಕೆಂದು ಪಟ್ಟು ಹಿಡಿದಿದ್ದ ಗಾಂಧಿವಾದಿ ಈಗ ಕೇವಲ ಸಂಸತ್ತಿನ ಮೂರು ನಿರ್ಣಯಗಳಿಗೆ ತಮ್ಮ ಷರತ್ತುಗಳನ್ನು ಸೀಮಿತಗೊಳಿಸಿರುವುದು, ಇಡೀ ಹೋರಾಟದ ವ್ಯಾಪ್ತಿ ಮತ್ತು ಸಮಗ್ರತೆಯಲ್ಲಿನ ಕೊರತೆಯ ಸಂಕೇತವಾಗಿದೆ. ರಾಜಕೀಯ ಪಕ್ಷಗಳು ಮುಂಬರುವ ಚುನಾವಣೆಯ ದೃಷ್ಟಿಯಿಂದ ತಮ್ಮ ನಿಲುವುಗಳನ್ನು ಬದಲಾಯಿಸಿದ್ದರೂ ಅಣ್ಣಾ ತಂಡದ ಬೇಡಿಕೆಗಳನ್ನು ಮಾನ್ಯ ಮಾಡಿದರೂ ಸಹ ಆಳುವ ವರ್ಗಗಳ ಮತ್ತು ಕಾಪರ್ೋರೇಟ್ ಆಳ್ವಿಕೆಯ ನವ ಉದಾರವಾದಿ ನೀತಿಗಳಿಗೆ ಯಾವುದೇ ಅಪಾಯವಿಲ್ಲದಿರುವುದನ್ನು ಸೂಕ್ಷ್ಮವಾಗಿ ಗಮನಿಸಿವೆ. ಹಾಗಾಗಿ ಮುಂಬರುವ ಅಧಿವೇಶನದಲ್ಲಿ ಸಂವಿಧಾನಬದ್ಧವಾದ ಒಂದು ಮಸೂದೆ ಜಾರಿಯಾದರೂ ಅಚ್ಚರಿಯೇನಿಲ್ಲ. ಆದರೆ ಭ್ರಷ್ಟಾಚಾರವನ್ನು ನಿಯಂತ್ರಿಸುವ ಒಂದು ಪ್ರತಿಬಂಧಕ ಕಾಯ್ದೆಯ ಇತಿಮಿತಿಗಳನ್ನು ಗಮನಿಸಿ ನೋಡಿದಾಗ, ಭಾರತದ ಆಡಳಿತ ವ್ಯವಸ್ಥೆ ಮತ್ತು ಸಾಮಾಜಿಕ ಚೌಕಟ್ಟಿನಲ್ಲಿ ಅಂತರ್ಗತವಾಗಿರುವ ಭ್ರಷ್ಟ ಪರಂಪರೆಯನ್ನು ಅಂತ್ಯಗೊಳಿಸಲು, ದೇಶದ ಬಹುಸಂಖ್ಯಾತ ಶ್ರಮಜೀವಿಗಳನ್ನು ಪ್ರತಿನಿಧಿಸುವ ಸಮಗ್ರ ಹೋರಾಟದ ಅವಶ್ಯಕತೆ ಎದ್ದುಕಾಣುತ್ತದೆ. ಅಣ್ಣಾ ಕ್ರಮಿಸಿದ ಹಾದಿಯಲ್ಲಿನ ಕೊರತೆ ಇರುವುದೇ ಇಲ್ಲಿ.

ನಾ ದಿವಾಕರ

‍ಲೇಖಕರು avadhi

29 August, 2011

3 Comments

  1. jagadishkoppa

    Realy Good Analysis

  2. vijayaraghavan

    ಭಾರತದ ಆಡಳಿತ ವ್ಯವಸ್ಥೆ ಮತ್ತು ಸಾಮಾಜಿಕ ಚೌಕಟ್ಟಿನಲ್ಲಿ ಅಂತರ್ಗತವಾಗಿರುವ ಭ್ರಷ್ಟ ಪರಂಪರೆಯನ್ನು ಅಂತ್ಯಗೊಳಿಸಲು, ದೇಶದ ಬಹುಸಂಖ್ಯಾತ ಶ್ರಮಜೀವಿಗಳನ್ನು ಪ್ರತಿನಿಧಿಸುವ ಸಮಗ್ರ ಹೋರಾಟದ ಅವಶ್ಯಕತೆ ಎದ್ದುಕಾಣುತ್ತದೆ ಎನ್ನುವ ದಿವಾಕರರ ಮಾತು ನಿಜವಾದದ್ದು. ಭ್ರಷ್ಟಾಚಾರ ಮತ್ತು ಹಣ ದುರುಪಯೋಗದ ಉದಾಹರಣೆ ಪೂರ್ಣವಾಗಬೇಕಾದರೆ ರಾಯಚೂರು ಜಿಲ್ಲೆಗೆ ಕಳೆದ ಐದು ವರ್ಷಗಳಲ್ಲಿ ಹರಿದಿರುವ ಹಣ ಮತ್ತು ಅದರ ಉಪಯೋಗವನ್ನು ಪರಿಶೀಲಿಸಬೇಕು. vijayaraghavan

  3. ಎಚ್. ಸುಂದರ ರಾವ್

    ಒಪ್ಪಿದೆ. ಪರಿಶೀಲನೆ ಮಾಡಬೇಕು. ಆದರೆ ಯಾರು? ಯಾರು? ನಾವೇ ಇರಬಹುದೆ? ಯಾಕಾಗಬಾರದು? ಮಾಹಿತಿ ಹಕ್ಕನ್ನು ಯಾಕೆ ಬಳಸಬಾರದು?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading