
ಮೇ ದಿನಾಚರಣೆ ಮೂಲತಃ ಶ್ರಮಿಕ ವರ್ಗಗಳ ಇತಿಹಾಸವನ್ನು ಸಾರುವ, ಕಾಮರ್ಿಕರ ಆಶೋತ್ತರಗಳನ್ನು ಬಿಂಬಿಸುವ, ಶೋಷಕ ವರ್ಗಗಳ ದಮನಕಾರಿ ನೀತಿಗಳ ವಿರುದ್ಧ ಹೋರಾಡುವ ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ದೇಶದ ದುಡಿಯುವ ವರ್ಗಗಳಲ್ಲಿ, ಸಂಘಟನಾತ್ಮಕ ಶಕ್ತಿ ಇಲ್ಲದ ಶ್ರಮಿಕ ವರ್ಗಗಳಲ್ಲಿ, ದೇಶದ ಆಳ್ವಿಕರ ಮತ್ತು ಹಣವಂತರ ದೃಷ್ಟಿಯಲ್ಲಿ ಅಗೋಚರ, ಅಲಕ್ಷಿತ, ಅನಪೇಕ್ಷಿತವಾಗಿರುವ ಕೋಟ್ಯಂತರ ಶ್ರಮಜೀವಿಗಳಲ್ಲಿ ರಾಜಕೀಯ ಪ್ರಜ್ಞೆ ಮತ್ತು ಸಾಮಾಜಿಕ ಅರಿವು ಮೂಡಿಸುವ ಒಂದು ದಿನ. ಇತಿಹಾಸ ಪ್ರತಿ ಹತ್ತು ವರ್ಷಕ್ಕೊಮ್ಮೆ ಮರುಕಳಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಚಾರಿತ್ರಿಕವಾಗಿ ನಿರೂಪಿತ ಸತ್ಯವೋ ಎಂಬುದು ಚಚರ್ಾಸ್ಪದ ವಿಚಾರ. ಆದರೆ ವಿಶ್ವದ ಶ್ರಮಿಕ ವರ್ಗಗಳ ದೃಷ್ಟಿಯಿಂದ ನೋಡಿದಾಗ ಇತಿಹಾಸ ಮರುಕಳಿಸುವುದಿರಲಿ ವಾಸ್ತವವಾಗಿ ಶ್ರಮಜೀವಿಗಳ ಇತಿಹಾಸ ಮತ್ತು ಸಮಕಾಲೀನ ಸಂದರ್ಭಗಳಲ್ಲಿ ಬದಲಾವಣೆಗಳೇ ಆಗಿಲ್ಲ ಎನ್ನಬಹುದು. ನಿಜ ಬದಲಾವಣೆಗಳು ಮೇಲ್ನೋಟಕ್ಕೆ ಕಂಡುಬರುತ್ತವೆ.
ವಿಶ್ವದ ವಿವಿಧ ನಗರಗಳು ಝಗಮಗಿಸುತ್ತಿವೆ. ಮುಗಿಲೆತ್ತರದ ಕಟ್ಟಡಗಳು , ಗಗನಚುಂಬಿಗಳು ರಾರಾಜಿಸುತ್ತಿವೆ. ರಸ್ತೆಗಳು ಗಾಜಿನ ಪದರಗಳಂತೆ ಹೊಳೆಯುತ್ತಿವೆ. ರಸ್ತೆಯ ಇಕ್ಕೆಲಗಳಲ್ಲಿ ಜೀವ ಉಳಿಸುವ ಮರಗಳು ಇಲ್ಲದಿದ್ದರೂ ಆಧುನಿಕತೆ ಮತ್ತು ಬಂಡವಾಳ ವ್ಯವಸ್ಥೆಗೆ ಜೀವ ತುಂಬುವ ರಂಗುರಂಗಿನ ದೀಪಗಳು ಕಂಗೊಳಿಸುತ್ತಿವೆ. ಗಲ್ಲಿಗಳು ಮಾಯವಾಗಿ ಚತುಷ್ಪಥ, ಷಟ್ಪಥ, ಅಷ್ಟಪಥ ರಸ್ತೆಗಳು ವ್ಯಾಪಕವಾಗಿ ಹರಡಿವೆ. ನೆಲದ ಮೇಲೆ ನಡೆಯಲಾಗದ ಶ್ರೀಮಂತರಿಗಾಗಿ ಮೇಲ್ಸೇತುವೆಗಳು ನಿಮರ್ಿತವಾಗಿವೆ. ಸಮಾಜವನ್ನು ಕಟ್ಟಿ ಬೆಳಸಿ ನೇಪಥ್ಯದಲ್ಲಿ ದಾರಿದ್ರ್ಯತೆಯನ್ನು ಮೌನವಾಗಿಯೇ ಅನುಭವಿಸುವ ಕೊಳೆಗೇರಿ ನಿವಾಸಿಗಳು ತಾವು ಬೆವರು ಸುರಿಸಿ ನಿಮರ್ಿಸಿದ ರಸ್ತೆಗಳಲ್ಲಿ ಕಾಲಿಡಲೂ ಸಂಕೋಚ ಪಟ್ಟುಕೊಂಡು ಗಗನಚುಂಬಿಗಳ ಹಿಂದೆ ತಮ್ಮ ಮೌನ ತಪಸ್ಸನ್ನು ಮುಂದುವರೆಸಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ವಿವಿಧ ರಾಜ್ಯಗಳಿಂದ ನೌಕರಿ ಅರಸಿ , ಅಲೆಮಾರಿ ಜನಾಂಗದವರಂತೆ ವಲಸೆ ಹೋಗುತ್ತಾ ತಮ್ಮ ದುಡಿಮೆಯ ನೆಲೆಗಳನ್ನು ಅರಸುತ್ತಾ ನಡೆಯುವ ಶ್ರಮಿಕರಿಗೆ ದೇಶ, ಭಾಷೆ, ಮತ ಧರ್ಮ, ಜಾತಿ ಅಸ್ಮಿತೆಗಳಿರುವುದಿಲ್ಲ.

ಆದರೂ ವಲಸಿಗರೆಂಬ ಒಂದು ವಿಶಿಷ್ಟ ಚೌಕಟ್ಟಿನಲ್ಲಿ ಬಂಧಿಸಲ್ಪಡುವ ಈ ಶ್ರಮಜೀವಿಗಳು ಸ್ಥಳೀಯ ಜನಸಮುದಾಯಗಳ ಅವಕೃಪೆಗೆ ಒಳಗಾಗುತ್ತಿರುತ್ತಾರೆ. ಕುತೂಹಲಕಾರಿ ಸಂಗತಿ ಎಂದರೆ ಉನ್ನತ ಹುದ್ದೆಗಳಲ್ಲಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ, ಸಕರ್ಾರಿ ನೌಕರಿಯಲ್ಲಿರುವ ಮೇಲ್ವರ್ಗದ ಶ್ರಮಜೀವಿಗಳು ಎಲ್ಲಿಂದೆಲ್ಲಿಗೆ ವಲಸೆ ಹೋದರೂ ತಮ್ಮೊಡನೆ ತಮ್ಮ ವಿಭಿನ್ನ ಅಸ್ಮಿತೆಗಳನ್ನೂ ಕೊಂಡೊಯ್ಯುತ್ತಾರೆ. ನಮ್ಮ ನಾಗರಿಕ ಸಮಾಜವೂ ಇವರ ಅಸ್ಮಿತೆಗಳನ್ನು ಮಾನ್ಯ ಮಾಡುತ್ತಾ ಈ ವಲಸಿಗರನ್ನು ಅಪ್ಪಿಕೊಂಡುಬಿಡುತ್ತದೆ. ಶ್ರೇಣಿಕೃತ ಜಾತಿ ವ್ಯವಸ್ಥೆಯ ಮೂಲ ಸ್ವರೂಪಗಳನ್ನು ಉಳಿಸಿಕೊಂಡೇ ಈ ವಲಸಿಗರಿಗೆ ಒಂದು ನೆಲೆ ಮಾಡಿಕೊಡುವಲ್ಲಿ ನಾಗರಿಕ ಸಮಾಜ ಸಕ್ರಿಯವಾಗಿರುತ್ತದೆ. ನಗರ ಪ್ರದೇಶಗಳಲ್ಲಿ ಬೆಳೆಯುತ್ತಿರುವ ಅಗ್ರಹಾರ ಸಂಸ್ಕೃತಿಯ ಹೊರತಾಗಿಯೂ ಮೇಲ್ವರ್ಗದ ವಲಸಿಗ ಕಾಮರ್ಿಕರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಚ್ಚು ಶ್ರಮ ಪಡುವ ಅಗತ್ಯ ಇರುವುದಿಲ್ಲ. ಏಕೆಂದರೆ ನವ ಉದಾರವಾದ, ಕಾಪರ್ೋರೇಟ್ ಜಗತ್ತು ಮತ್ತು ಬಂಡವಾಳ ವ್ಯವಸ್ಥೆ ಈ ವರ್ಗಗಳ ಹಿತರಕ್ಷಣೆಗೆ ಬದ್ಧವಾಗಿರುತ್ತವೆ.
ಈಗಾಗಲೇ ತಮ್ಮ ಸುಭದ್ರ ನೆಲೆ ಕಂಡುಕೊಂಡಿರುವ ಸಂಘಟಿತ ಕಾಮರ್ಿಕರೂ ಈ ವಲಸಿಗರೊಡನೆ ಸೌಹಾರ್ದಯುತ ಸಂಬಂಧಗಳನ್ನು ಹೊಸೆದು ಕೂಡಿ ಬಾಳುತ್ತಾರೆ. ಕಾಮರ್ಿಕರಿಗೆ ಯಾವುದೆ ಎಲ್ಲೆಗಳಿರುವುದಿಲ್ಲ ಎಂಬ ಒಂದು ನಂಬಿಕೆ ಈ ವರ್ಗಕ್ಕೆ ವರದಾನವಾಗಿ ಪರಿಣಮಿಸುತ್ತದೆ. ಈ ಒಂದು ವಿದ್ಯಮಾನ ಸ್ವಾಗತಾರ್ಹ, ಸ್ವೀಕಾರಾರ್ಹವೂ ಹೌದು. ಜಾಗತೀಕರಣ ಯುಗದಲ್ಲಿ ವಿಶ್ವವೇ ಒಂದು ಪುಟ್ಟ ಗ್ರಾಮದಂತಾಗುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆಗಳು ಎಷ್ಟೇ ಲೋಪಗಳಿದ್ದರೂ ಅಪೇಕ್ಷಣೀಯವೇ. ನವ ಉದಾರವಾದ ಯುಗದ ಆರಂಭದಲ್ಲಿ ಕಾಮರ್ಿಕ ವರ್ಗದಿಂದ ದೂರ ಉಳಿಯುವ ಧೋರಣೆ ಹೊಂದಿದ್ದ ಈ ವರ್ಗಗಳು ಇಂದು ತಮ್ಮ ಮೂಲ ನೆಲೆಯನ್ನು ಅರ್ಥಮಾಡಿಕೊಳ್ಳುತ್ತಿದ್ದು ಜಾಗತೀಕರಣದ ಸೂಕ್ಷ್ಮ ತರಂಗಗಳನ್ನು ಗ್ರಹಿಸುತ್ತಿದ್ದಾರೆ. ಹಾಗಾಗಿ ತಾವೂ ಕಾಮರ್ಿಕ ವರ್ಗಕ್ಕೆ ಸೇರಿದವರೆಂಬ ಪ್ರಜ್ಞೆ ಕೊಂಚ ಮಟ್ಟಿಗಾದರೂ ಬೆಳೆಯುತ್ತಿದೆ.
ಆದರೆ ಇಲ್ಲಿ ಪ್ರಶ್ನೆ ಉದ್ಭವಿಸುವುದು ಈ ಮೇಲ್ವರ್ಗಗಳಿಂದ ಭಿನ್ನ ನೆಲೆಯಲ್ಲಿ ವಲಸಿಗರಾಗಿ ಬರುವ ಶ್ರಮಜೀವಿಗಳ ಅಸ್ಮಿತೆ ಮತ್ತು ಅಸ್ತಿತ್ವವನ್ನು ಕುರಿತಾದದ್ದು. ಅದ್ಭುತವಾದ ಗಗನ ಚುಂಬಿ ಕಟ್ಟಡಗಳನ್ನು, ನವಿರಾದ ರಸ್ತೆಗಳನ್ನು, ಸುಸಜ್ಜಿತ ಮಾಲ್ಗಳನ್ನು, ಮೇಲ್ಸೇತುವೆಗಳನ್ನು ನೋಡಿ ಆನಂದಿತರಾಗಿ ಪುಳಕಿತರಾಗುವ ಮಧ್ಯಮ ವರ್ಗದ ಜನತೆಗೆ , ನವ ಉದಾರವಾದವನ್ನು ಎಷ್ಟೇ ವಿರೋಧಿಸಿದರೂ ಜಾಗತೀಕರಣದ ಜಾತಿ ಸೂಚಕಗಳಾದ ಈ ಸ್ಥಾವರಗಳನ್ನು ಅನುಭವಿಸುವಲ್ಲಿ ಆನಂದ ಪಡುವ ಮಧ್ಯಮ ವರ್ಗದ ಜನತೆಗೆ ಈ ನಿಮರ್ಿತ ಅದ್ಭುತ ಸ್ಥಾವರಗಳ ಹಿಂದೆ ನುಲಿಯುತ್ತಿರುವ ಜಂಗಮಗಳು ಗೋಚರಿಸದಿರುವುದು ಶೋಚನೀಯ. ಮತ್ತೂ ಶೋಚನೀಯವೆಂದರೆ ಈ ಮಧ್ಯಮ ವರ್ಗಗಳಲ್ಲಿ ಈ ದೇಶದ ಸಂಘಟಿತ ಕಾಮರ್ಿಕರೂ ಸೇರುತ್ತಾರೆ. ಬಿಹಾರ, ಒರಿಸ್ಸಾ, ಕಾಶ್ಮೀರ, ಈಶಾನ್ಯ ರಾಜ್ಯಗಳು, ಉತ್ತರ ಪ್ರದೇಶ ಹೀಗೆ ದೇಶದ ವಿವಿಧ ರಾಜ್ಯಗಳಿಂದ ಇಲ್ಲಿ ಬಂದು ನೆಲೆಸಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಲೇ ಸಮಾಜದ ಬದುಕಿಗೆ ಹೊಸ ಆಯಾಮವನ್ನು ನೀಡಲು ಯತ್ನಿಸುವ ಈ ಶ್ರಮಜೀವಿಗಳು ವಾಸಿಸುವ ನೆಲೆಗಳನ್ನು ನೋಡಿದರೆ ಇಡೀ ಶ್ರಮಜೀವಿ ಸಮುದಾಯವೇ ನಾಚಿ ತಲೆ ತಗ್ಗಿಸುವಂತಾಗುತ್ತದೆ.
ಜಾತಿ, ಮತ, ಭಾಷೆಗಳ ಎಲ್ಲೆ ಮೀರಿ ಸಮಾಜವನ್ನು ನಿಮರ್ಿಸುವತ್ತ ಮುಂದಾಗುತ್ತಿರುವ ನಾಗರಿಕ ಸಮಾಜ ಇದೇ ನೆಲೆಗಟ್ಟಿನಲ್ಲಿ ವಲಸಿಗ ಕಾಮರ್ಿಕರ ಸಾಮಾಜಿಕ ಅಸ್ತಿತ್ವವನ್ನು ಗುರುತಿಸಲು ಮುಂದಾಗದಿರುವುದು ಅಗೋಚರ ಸತ್ಯವಾಗಿದೆ. ಅಸಂಘಟಿತ ಕಾಮರ್ಿಕರನ್ನು ಸಂಘಟಿಸುವಲ್ಲಿ ಹಲವು ಕಾಮರ್ಿಕ ಸಂಘಟನೆಗಳು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರೂ ವಲಸಿಗರ ಸಮಸ್ಯೆಗಳನ್ನು, ನಗರಗಳ ನಿಮರ್ಾತೃಗಳ ಕುಂದು ಕೊರತೆಗಳನ್ನು ನಿರ್ಲಕ್ಷಿಸಿರುವುದು ಒಪ್ಪಲೇಬೇಕಾದ ಸತ್ಯ. ಸಂಘಟನೆ ಮತ್ತು ಹೋರಾಟಗಳು ಒಂದು ಸಮಾಜದ ಒಂದು ನಿದರ್ಿಷ್ಟ ವರ್ಗದ ಅಸ್ತಿತ್ವದ ಉಳಿಗೆ ಅಗತ್ಯವಾದ ಪರಿಕರಗಳು. ಆದರೆ ಈ ಪರಿಕರಗಳನ್ನು ಬಳಸುವ ಸಂದರ್ಭದಲ್ಲಿ ಸಂಘಟಿತ ಮತ್ತು ಅಸಂಘಟಿತ ಎಂಬ ವ್ಯಾಖ್ಯಾನಿತ ಗುಂಪುಗಳಿಂದ ಹೊರಗಿರುವ ವಲಸಿಗ ಶ್ರಮಜೀವಿಗಳ ಬವಣೆಯನ್ನು ನೆನೆಯದೆ ಹೋದರೆ ಶ್ರಮಜೀವಿಗಳ ಬಗ್ಗೆ ಇರುವ ಕಾಳಜಿ ಶುಷ್ಕ ಎನಿಸುತ್ತದೆ. ವರ್ಷಕ್ಕೊಮ್ಮೆ ದೇಶದಲ್ಲಿ ಕಾಮರ್ಿಕ ಸಂಘಟನೆಗಳು ನಡೆಸುವ ಮುಷ್ಕರದಲ್ಲಿ ಕೋಟ್ಯಂತರ ಕಾಮರ್ಿಕರು ಭಾಗವಹಿಸಿದರೂ ಈ ಹೋರಾಟದಿಂದ ಹೊರಗುಳಿಯುವ ಅಸ್ಪೃಶ್ಯ ಶ್ರಮಜೀವಿಗಳ ಕೂಗು ಭೂಗತವಾಗಿಯೇ ಇರುತ್ತದೆ.
ಇತ್ತೀಚೆಗೆ ಅಸ್ಸಾಂನ ವಲಸಿಗರ ವಿರುದ್ಧ ನಡೆದ ಆಕ್ರಮಣಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ತರ ಎನಿಸುತ್ತದೆ. ಇಂದು ತಮ್ಮ ಜೀವನಾಧಾರವನ್ನು ಅರಸಿ ಶ್ರಮಜೀವಿಗಳು ವಲಸೆ ಹೋಗುತ್ತಿದ್ದಾರೆ. ಆದರೆ ಮಾನವನ ವಲಸೆಯನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸಲಾರದೆ ನಾಗರಿಕ ಸಮಾಜ ಮಾನವೀಯತೆಯ ವಲಸೆಯನ್ನೂ ತಡೆಗಟ್ಟಲು ವಿಫಲವಾಗಿದೆ. ಮಾನವರ ವಲಸೆಯನ್ನು ತಡೆಗಟ್ಟಬಹುದು ಮಾವನೀಯತೆಯ ವಲಸೆಯನ್ನು ತಡೆಗಟ್ಟುವುದು ಹೇಗೆ ? ಮೇ ದಿನಾಚರಣೆಯಂದು ಪ್ರಜ್ಞಾವಂತ ಕಾಮರ್ಿಕರನ್ನು ಮತ್ತು ಜನಸಾಮಾನ್ಯರನ್ನು ಕಾಡಬೇಕಾದ ಪ್ರಶ್ನೆ ಇದು.





ವಲಸಿಗ ಶ್ರಮಜೀವಿಗಳ ಬವಣೆಯನ್ನು ಕುರಿತು ದಿವಾಕರ್ ಅವರು ಬರೆದ ಲೇಖನ ನಿಜಕ್ಕೂ ಮನ ಮುಟ್ಟುವಂತಿದೆ. ನಮ್ಮ ದಕ್ಷಿಣ ಕನ್ನಡದಲ್ಲಿ ನಡೆಯುವ ವಸತಿ ಸಮುಚ್ಚಯಗಳ ನಿರ್ಮಾಣ ಕಾರ್ಯದಲ್ಲಿ ವಲಸೆ ಬಂದ ಶ್ರಮಿಕರ ಸಂಖ್ಯೆಯೇ ಅಪರವಾಗಿದೆ. ಅವರ ಮುಖ್ಯ ಸಮಸ್ಯೆ ವಸತಿ ಮತ್ತು ಸ್ವಚ್ಛ ನೀರಿನ ವ್ಯವಸ್ಥೆ. ಬಹುಶಃ ಕಂತ್ರಾಕ್ತುದಾರರು ಆ ವ್ಯವಸ್ಥೆಯನ್ನು ಮಾಡುತ್ತಾರೆ. ಬೀದಿಬದಿಯ ಬದುಕನ್ನು ಬದುಕುವವರ ಸಂಖ್ಯೆಯೂ ಏನೂ ಕಡಿಮೆಯಿಲ್ಲ. ಆದರೆ ಅವರ ಈ ಸಮಸ್ಯೆಗಳಿಗೆ ನಿವಾರಣೆಯನ್ನು ಯಾರು ಕಂಡುಕೊಳ್ಳಬೇಕು? ವಿಜಾಪುರದಿಂದ ಬಂದ ಶ್ರಮಜೀವಿಗಳು ತಮ್ಮದೇ ಆದ ಕೋಲೊನಿಯನ್ನು ಮಾಡಿಕೊಂಡಿದ್ದಾರೆ. ಉದಯಕುಮಾರ ಹಬ್ಬು, ಕಿನ್ನಿಗೋಳಿ
ವಲಸಿಗರ ಕುರಿತು ಬರೆದಿರುವ ದಿವಾಕರ್ ರವರ ಲೇಖನ ಚಿಂತನಾಮುಖಿಯಾದುದು. ವಲಸಿಗರಿಗಿಂತ ವಲಸೆತನದ ಬಗ್ಗೆ ಎತ್ತಿದ ಪ್ರಶ್ನೆ ಅತ್ಯಂತ ಪ್ರಸ್ತುತವಾದುದು.ನಿತ್ಯ ದುದಿಯುವ ಕಾಮಿಕರ ಮಾನವೀಯತೆ ಪರಿಗಣನೆಯಾಗುತ್ತಿಲ್ಲ ಎಂಬುದು ಅತಂಕದ ಪ್ರಶ್ನೆಯಾಗಿದೆ.