‘ಅಕ್ಷರ ಆರೋಗ್ಯ’ಅಭಿಯಾನ…

ಕುಶ್ವಂತ್‌ ಕೋಳಿಬೈಲು

ಪುಸ್ತಕವೆಂಬ ಕಿಂಡಿಯಿಂದ ನಾವೆಲ್ಲರೂ ಪ್ರಪಂಚವನ್ನು ನೋಡುತ್ತೇವೆ. ಓದು ನಮ್ಮ ಬದುಕನ್ನು ಮತ್ತು ವಿಚಾರಗಳನ್ನು ವಿಸ್ತರಿಸುತ್ತದೆ. ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸವಿರುವವರು ಬಹಳಷ್ಟು ಜನರಿದ್ದಾರೆ. ಕೆಲವರಂತೂ ಒಂದು ವಿಮಾನ ಪ್ರಯಾಣದಲ್ಲಿ ಅಸಕ್ತಿಯಿರುವ ಒಂದು ಸಣ್ಣ ಪುಸ್ತಕವನ್ನು ಸಲೀಸಾಗಿ ತಿರುವಿಹಾಕಬಲ್ಲರು. ಆದರೂ ನಿತ್ಯ ಜೀವನದ ಜಂಜಾಟದಲ್ಲಿ ಅನೇಕರಿಗೆ ಕೂತು ಓದಲು ಸಮಯ ಸಿಗುವುದಿಲ್ಲ.

ನನ್ನ ಅನುಭವದ ಪ್ರಕಾರ ನನಗೆ ಚನ್ನಾಗಿ ಓದಲು ಬಹಳಷ್ಟು ಸಮಯ ಮತ್ತು ನಿರಾಳತೆ ಸಿಕ್ಕಿದ್ದು, ನಾನು ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ. ನಾನು ಕೋವಿಡ್ ಕ್ವಾರಂಟೈನಿನಲ್ಲಿದ್ದಾಗ ನಾಲ್ಕು ಪುಸ್ತಕಗಳನ್ನು ಓದಿದ್ದೆ. ನನ್ನ ಅಮ್ಮ ಸರ್ಜರಿಗೆಂದು ಫಾದರ್ ಮುಲ್ಲರ್ಸ್ನಲ್ಲಿ ನಾಲ್ಕು ದಿನಗಳ ಕಾಲ ದಾಖಲಾಗಿದ್ದ ಸಂದರ್ಭದಲ್ಲಿ ಅವರ ಜೊತೆ ಪಕ್ಕದ ಬೆಡ್ಡಿನಲ್ಲಿದ್ದ ನಾನು ಸುಮಾರು ಮೂರು ನಾಲ್ಕು ಪುಸ್ತಕಗಳನ್ನು ಓದಿದೆ. ಬಹಳ ಸಮಯದಿಂದ ಪೆಂಡಿಗ್ ಲಿಸ್ಟಿನಲ್ಲಿದ್ದ ಓದಲೇ ಬೇಕೆಂದಿದ್ದ ಪುಸ್ತಕಗಳನ್ನು ಮುಗಿಸಿಕೊಂಡೆ.

ಈಗ ಈ ಅನುಭವಗಳನ್ನು ಅವಲೋಕಿಸಿದಾಗ ನನಗೆ ಗ್ರಂಥಾಲಯಗಳಿಗಿಂತ ಹೆಚ್ಚು ಪುಸ್ತಕಗಳನ್ನು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜೈಲಿನಲ್ಲಿ ಓದಲಾಗಿರಬಹುದೆಂದು ಅನಿಸುತ್ತದೆ. ಆಸ್ಪತ್ರೆಯಲ್ಲಿ ಕ್ವಾರಂಟೈನ್ ಆಗಿರುವವರು. ಚಿಕ್ಕ ಪುಟ್ಟ ಸಮಸ್ಯೆಗಳಿಗೆ ದಾಖಲಾಗಿರುವವರು ಮತ್ತು ರೋಗಿಗಳ ಜೊತೆಗಿರಲು ಬಂದವರಿಗೆ ಪುಸ್ತಕಗಳನ್ನು ಓದಲು ವಿಪುಲವಾದ ಸಮಯಾವಕಾಶ ಮತ್ತು ವಾತಾವರಣ ಆಸ್ಪತ್ರೆಯಲ್ಲಿ ಸಿಗುಬಹುದು.

ನಮ್ಮ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡಿಗೆ ಶನಿವಾರ ಸಂಜೆ ಕೋವಿಡ್ ಮಕ್ಕಳ ತಪಾಸಣೆಗೆ ಹೋಗಿದ್ದಾಗ ಕೋವಿಡ್ ಸೋಂಕಿನಿಂದಾಗಿ ನಮ್ಮ ಅಸ್ಪತ್ರೆಯಲ್ಲಿ ದಾಖಲಾಗಿರುವ ಜಿಲ್ಲೆಯ ಖ್ಯಾತ ಉದ್ಯಮಿ ಮಿತ್ರರೊಬ್ಬರು ಸಿಕ್ಕಿದರು. ಮೊನ್ನೆಯ ದಿನ ನನಗವರು ಕರೆ ಮಾಡಿ ಓದಲು ನನ್ನ ಕೂರ್ಗ್ ರೆಜಿಮೆಂಟ್ ಪುಸ್ತಕವನ್ನು ಕಳುಹಿಸಿಕೊಡಲು ಹೇಳಿದರು. ಅದನ್ನು ಅಂದೇ ಓದಿ ಮುಗಿಸಿದ ಅವರಿಗೆ, ನಿನ್ನೆ ಮತ್ತೊಂದು ಸದಭಿರುಚಿಯ , ಓದಿಸಿಕೊಂಡು ಹೋಗುವ, ಡಾ ಸೂರ್ಯಕುಮಾರ್ ಬರೆದ ‘ವೈದ್ಯ ಕಂಡ ವಿಸ್ಮಯ’ ಪುಸ್ತಕವನ್ನು ಕಳುಹಿಸಿಕೊಟ್ಟೆ. ನಿತ್ಯ ರೌಂಡ್ಸ್ ಮಾಡುವಾಗ ಕ್ವಾರಂಟೈನ್ ಸಮಯವನ್ನು ಬಳಸಿಕೊಳ್ಳದೆ ವ್ಯರ್ಥ ಮಾಡುವವರನ್ನೂ ನೋಡುತ್ತಿದ್ದೇನೆ.

ಕ್ವಾರಂಟೈನ್ ಆಗಿರುವ ಅನೇಕರಿಗೆ ಓದಲು ಸಣ್ಣ ಗ್ರಂಥಾಲಯವನ್ನು ನಾವು ಆಸ್ಪತ್ರೆಯಲ್ಲಿ ಸ್ಥಾಪಿಸಿದರೆ, ಹತ್ತು ದಿನದಲ್ಲಿ ಪ್ರತಿಯೊಬ್ಬರೂ ಒಂದೊಂದು ಪುಸ್ತಕಗಳನ್ನು ಓದಿದರೆ ಒಂದು ಉತ್ತಮ ಸಂಪ್ರದಾಯವನ್ನು ಸ್ಥಾಪಿಸಬಹುದಾಗ ಅವಕಾಶ ನನಗಿಲ್ಲಿ ಕಾಣುತ್ತಿದೆ. ಚಿಣ್ಣರ ಪುಸ್ತಕಗಳನ್ನು ತಾಯಿ ಮಗುವನ್ನು ಮಡಿಲಿನಲ್ಲಿ ಕೂರಿಸಿಕೊಂಡು ಓದಿ ಹೇಳಬಹುದು. ಮನೆಯಲ್ಲಿ ಇಷ್ಟು ವರ್ಷಗಳಲ್ಲಿ ಕೆಲಸಗಳಿಂದ ಬಿಡುವು ಸಿಕ್ಕದ ಅನೇಕ ಹೆಣ್ಣು ಮಕ್ಕಳಿಗೆ ಕ್ವಾರಂಟೈನಿನಲ್ಲಿ ಓದಲು ಸಮಯಾವಕಾಶ ಸಿಕ್ಕಿದಂತ್ತಿದೆ‌.

ನಾನು ನನ್ನ ಸಾಹಿತಿ ಮಿತ್ರರಲ್ಲಿ / ಪ್ರಕಾಶಕ ಸ್ನೇಹಿತರಲ್ಲಿ ನಿಮ್ಮ ಕಡೆಯಿಂದ ಒಂದು ಪುಸ್ತಕವನ್ನು ನಾವು ಸ್ಥಾಪಿಸಲು ಉದ್ದೇಶಿಸಿರುವ ಈ ಪುಟ್ಟ ಗ್ರಂಥಾಲಯಕ್ಕೆ #ಅಕ್ಷರಆರೋಗ್ಯಅಭಿಯಾನದಡಿಯಲ್ಲಿ ಕೊಡುಗೆಯಾಗಿ ನೀಡಲು ಕೋರುತ್ತಿದ್ದೇನೆ. ನಾವು ಹೊಸಾ ಓದುಗರನ್ನು ಸೃಷ್ಟಿಸಿದಂತೆ, In the long run ಇದರ ಹೆಚ್ಚಿನ ಲಾಭ ನಿಮಗೇ ಅಗುತ್ತದೆ. ನಿಮ್ಮ ಒಂದು ಪುಸ್ತಕ ಓದಿದ ಅವರಿಗೆ ನಿಮ್ಮ ಬರಹದ ಶೈಲಿ ಇಷ್ಟವಾದಲ್ಲಿ, ನಿಮ್ಮ ಇತರ ಪುಸ್ತಕಗಳನ್ನು ಅವರು ಕೊಂಡು ಓದಬಹುದು. ನೀವು ಕನ್ನಡ, ಇಂಗ್ಲಿಷ್, ಅರೆಭಾಷೆ, ಕೊಡವ, ತುಳು ಪುಸ್ತಕಗಳನ್ನೂ ಕಳುಹಿಸಬಹುದು.

ನಾನು ಕೊಂಡ ಅನೇಕ ಪುಸ್ತಕವನ್ನು ಓದಿ ಮುಗಿದ ನಂತರ ಇತರರಿಗೆ ಓದಲು ಕೊಟ್ಟು ಮರೆತು ಬಿಡುತ್ತೇನೆ ಮತ್ತು ಹಿಂದಿರುಗಿಸಲು ಅವರೂ ಮರೆತು ಬಿಡುತ್ತಾರೆ. ನನ್ನ ಬಳಿ ಏನಿಲ್ಲವೆಂದರೂ ಓದಿ ಮುಗಿಸಿದ ಕನಿಷ್ಠ ಐವತ್ತು ಪುಸ್ತಕಗಳಿರಬಹುದು. ಈ ಅಕ್ಷರಆರೋಗ್ಯ ಅಭಿಯಾನಕ್ಕೆ ಅದನ್ನು ನೀಡುವ ಮೂಲಕ ಶುಭಾರಂಭ ಮಾಡುತ್ತಿದ್ದೇನೆ. ನನ್ನ ಓದುಗ ಮಿತ್ರರು ಅವರಿಗೆ ಅತೀ ಹೆಚ್ಚು ಇಷ್ಟವಾದ ಒಂದು ಪುಸ್ತಕವನ್ನು ಕೊಂಡು ನಮಗೆ ಕಳುಹಿಸಬಹುದು. ನೀವು ಓದಿ ಮುಗಿಸಿರುವ ಪುಸ್ತಕವಾದರೂ ನಾವು ಸಂತೋಷದಿಂದ ಸ್ವೀಕರಿಸುತ್ತೇವೆ. ಆದರೆ ಪುಸ್ತಕಗಳು ಸದಭಿರುಚಿಯದ್ದಾಗಿರಬೇಕು, ಅದು ಮತ್ತೊಬ್ಬ ಹೊಸಾ ಓದುಗನನ್ನು ಸೃಷ್ಟಿಸುವ ರೀತಿಯದ್ದಾಗಿರುವಂತೆ ಕಾಳಜಿ ವಹಿಸಿ.

ನೀವು ಕಳುಹಿಸುವ ಪುಸ್ತಕದ ಮೊದಲನೆಯ ಪುಟದಲ್ಲಿ ‘ಅಕ್ಷರ ಆರೋಗ್ಯ ಅಭಿಯಾನಕ್ಕೆ’ ಎಂದು ಬರೆದು ನಿಮ್ಮ ರುಜು ಮತ್ತು ವಿಳಾಸವಿರಲಿ.

ಪುಸ್ತಕ ಕಳುಹಿಸುತ್ತಿರುವ ಹಿತೈಷಿಗಳು ಆ ಪುಸ್ತಕದೊಂದಿಗಿನ ತಮ್ಮ ಪೋಟೊವನ್ನು ಅಕ್ಷರ ಆರೋಗ್ಯಅಭಿಯಾನ ಅಡಿಯಲ್ಲಿ ಪೋಸ್ಟ್ ಮಾಡಿ ಅಭಿಯಾನಕ್ಕೆ ಬೆಂಬಲ ನೀಡಬಹುದು..

ನಮ್ಮ ವಿಳಾಸ –
Dr kushvanth Kolibailu
Assistant professor
Dept of Paediatrics
Mother and Child block
District hospital
Madikeri
Kodagu -571201
9483213831


‍ಲೇಖಕರು Admin

September 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: