ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅಕ್ಷರ, ಅಕ್ಷರವೇ ಯಾಕಿಂಗೇ ಕುಣಿತಿದ್ದೀ?’

k b siddaiah

ಕೆ.ಬಿ. ಸಿದ್ದಯ್ಯ

ಇಂಡಿಯಾದ ಶೋಷಿತ ಮೊಟ್ಟಮೊದಲ ಬಾರಿಗೆ ಪುಸ್ತಕ ತೆರೆದು ಓದಲು ಕುಂತಾಗ…
ಅಕ್ಷರಗಳೆಲ್ಲ ಪುಸ್ತಕದಿಂದ ಹೊರ ಜಿಗಿದು ಕುಣಿದಾಡಲು ಶುರುಮಾಡಿದವಂತೆ.

ಈ ಶೋಷಿತನಿಗೆ ಕಕ್ಕಾಬಿಕ್ಕಿಯಾಗಿ ಒಂದು ಕ್ಷಣ ಮಾತುನಿಂತು, ಕೇಳಿದ: ‘ಅಕ್ಷರ, ಅಕ್ಷರವೇ ಯಾಕಿಂಗೇ ಕುಣಿತಿದ್ದೀ, ಏನಾಯ್ತು ನಿನಗೇ?’

ಅಕ್ಷರ: ನನ್ನ ಸಾವಿರಾರು ವರ್ಷದಿಂದ ಬಿಗಿಕಟ್ಟುಹಾಕಿ ಕತ್ತಲೆ ಕೋಣೆಯಲ್ಲಿ ಕೂಡಿಹಾಕಿದ್ದರು. ಇವತ್ತು ನೀನು ನನ್ನ ಬಿಡುಗಡೆ ಮಾಡಿದೆ. ಆ ಖುಷಿ ತಡೆದುಕೊಳ್ಳಲಾಗದೇ ಕುಣಿಯುತ್ತಿರುವೆ. ಇಂಥ ಖುಷಿ ಇದೇ ಮೊದಲು ಕಂಡದ್ದು. ನಾನು ಕುಣಿಯೋದನ್ನು ಮಾತ್ರ ತಡಿಬೇಡ ಕಣಪ್ಪಾ…

(ದಿನಾಂಕ 21 ಮತ್ತು 22 ನವೆಂಬರ್ 2015ರಂದು ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆದ ‘ದಲಿತ ಸಂವೇದನೆಯ ಸಾಂಸ್ಕೃತಿಕ ಆಯಾಮಗಳು’ ಎಂಬ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಹೇಳಿದ ಮಾತು)

ಚಂದ್ರಶೇಖರ ಐಜೂರು ಮೂಲಕ

‍ಲೇಖಕರು admin

27 December, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading