ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂಬರದಿಂದ ಕ್ಯಾನ್ವಾಸ್ ಗೆ..

ಪ್ರತೀಕ್ಷಾ ಮರಕಿಣಿ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಎರಡನೇ ಪಿ ಯು ವಿದ್ಯಾರ್ಥಿನಿ. ದಕ್ಷಿಣ ಕನ್ನಡದ ತನ್ನ ಊರಿನ ಪ್ರಕೃತಿ ಮನಕ್ಕೆ ಇಳಿದದ್ದು ಹೇಗೆ ಕ್ಯಾನ್ವಾಸ್ ಗೂ ಇಳಿಯಿತು ಎನ್ನುವುದನ್ನು ಬರೆದಿದ್ದಾಳೆ. ವಿಶ್ವ ಪರಿಸರ ದಿನಕ್ಕಾಗಿ-

ಪ್ರತೀಕ್ಷಾ ಮರಕಿಣಿ

‘ವಿಶ್ವ ಪರಿಸರ ದಿನ’ದ ಬಗ್ಗೆ ಯೋಚಿಸಿದೊಡನೆ ಪ್ರಕೃತಿಯ ಬಗ್ಗೆ ಏನಾದರೂ ಚಿತ್ರ ಬರೆಯಬೇಕೆಂದು ಅನಿಸಿತು. ಪರಿಸರ ಅಂದೊಡನೆ ಮೊದಲು ನೆನಪಾಗುವುದು ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ನನ್ನ ಊರು.

ಚಿತ್ರ ಬರೆಯಲೆಂದೇ ನಾನು, ಊರಿಗೆ ಹೋಗಿದ್ದಾಗ ಸ್ವತಃ ತೆಗೆದ ಕೆಲವು ಫೊಟೋಗಳನ್ನು ಹುಡುಕಿದೆ. ನಮ್ಮ ಮನೆಯ ಅಡಿಕೆ ತೋಟದ ಈ ನಿರ್ಧಿಷ್ಟ ಚಿತ್ರ ನನ್ನ ಕಣ್ಸೆಳೆಯಿತು.

ದೂರದಿಂದ ಅಡಿಕೆ ತೋಟವನ್ನು ನೋಡುವುದು ಒಂದಾದರೆ, ತೋಟದ ಮಧ್ಯದಲ್ಲಿ ನಿಂತು ನೋಡುವುದರಲ್ಲಿ ಸಿಗುವ ರೋಮಾಂಚನವೇ ಬೇರೆ!

ಮರದ ಬುಡ, ಅಡಿಕೆ ಸೋಗೆ ಸೇರಿದಂತೆ ಆಕಾಶತ್ತರಕ್ಕೂ ದೃಷ್ಠಿ ಹೋಗುವುದು ಅಪರೂಪದ ಅನುಭವವೇ ಸರಿ!

ಹೀಗೆ ನಾನು ಈ ಚಿತ್ರದ Painting ಮಾಡಲು ಆರಂಭಿಸಿದೆ ( acrylic paint on paper) ನಾನು ಬರೆಯುವ ಚಿತ್ರ ಹೇಗೆ ಮೂಡಿ ಬರುತ್ತದೆಯೋ, ಜೊತೆಗೆ ನಾನು ಅದನ್ನು ‘ವಿಶ್ವ ಪರಿಸರ ದಿನ’, ಜೂನ್ 5ರ ಒಳಗೆ ಪೂರ್ಣಗೊಳಿಸಲು ಸಾಧ್ಯವೇ ಎಂಬ ಸಾಕಷ್ಟು ಗೊಂದಲಗಳು ನನ್ನೊಳಗಿದ್ದವು. Painting ಮುಗಿಸಿ ನೋಡಿದಾಗ ಅದು, ನಾನು ತೆಗೆದ ಫೋಟೊದಂತೆಯೇ ಮೂಡಿಬಂದಿರುವುದನ್ನು ನೋಡಿ ಬಹಳ ಸಂತೋಷಪಟ್ಟೆ. 

ಮಾನವನಿಗೆ ಆಕಾಶವೇ ಮಿತಿ. ಆದರೆ ಅವನ ಸ್ವಾರ್ಥಸ್ವಭಾವ ಸದಾ ಪರಿಸರವನ್ನು ಇಂದಿಗೂ ನಾಶಗೊಳಿಸುತ್ತಲೇ ಇದೆ. ನಮ್ಮ ಪೂರ್ವಜರಿಂದ ನಮಗೆ ದೊರಕಿದ ಪ್ರಕೃತಿ ಹಾಗೂ ಭೂಮಿಯನ್ನಾದರೂ ನಾವು ನಮ್ಮ ಮುಂದಿನ ಪೀಳಿಗೆಗಾಗಿ ಕಾಪಾಡಬೇಕಲ್ಲವೇ?

‍ಲೇಖಕರು Avadhi

5 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading