ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಅಂಗಿ'….

-ಡಿ.ಎಸ್.ರಾಮಸ್ವಾಮಿ ಅವರಿಗೆ ವಿಭಾ ಸಾಹಿತ್ಯ ಪ್ರಶಸ್ತಿ ಸಂದಿದೆ. ಸಮಾರಂಭದ ದಿನ ಅವರ ಕವನ ಸಂಕಲನವೂ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಕವಿತೆಯ ಒಂದು ಜ್ಹಲಕ್ ಇಲ್ಲಿದೆ- ಬೆಂಕಿ ಕಡ್ಡಿ ಅಂಗಿ ಇಷ್ಟೂ ದಿನ ತೊಟ್ಟು, ಬಣ್ಣ ಮಾಸಿರುವ ಮೇಲಂಗಿಯನ್ನು ಕಳಚಿ ಹ್ಯಾಂಗರಿಗೆ ಹಾಕುವಾಗ ಅಥವ ಹಾಗೇ ಅಲ್ಲಿಂದ ತೆಗೆದು ತೊಟ್ಟುಕೊಳ್ಳುವಾಗ ಮೂಗಿಗಡರುವ ಬೆವರ ವಾಸನೆ ಮತ್ಯಾವುದೋ ಸ್ಮೃತಿಗೆ ದಬ್ಬುತ್ತದೆ ಯಾವ ಯಾವುದೋ ಘಟನೆಗಳನ್ನು ತಬ್ಬುತ್ತದೆ. ಹಾಗೆ ನೋಡಿದರೆ ಹೊಸ ಅಂಗಿಗಳಿಗೆ ವಾಸನೆ ಅಷ್ಟು ಸುಲಭಕ್ಕೆ ಹತ್ತಿಕೊಳ್ಳುವುದಿಲ್ಲ ವಾದರೂ, ತೊಟ್ಟು, ಕೊಳೆಯಾಗಿ ಮಡಿಮಾಡುವ ಹೊತ್ತಲ್ಲಿ ಎಲ್ಲಿ ಬಣ್ಣ ಬಿಡುತ್ತದೋ ಎಂಬ ಜಿಜ್ಞಾಸೆ ಯ ಜೊತೆ ಜೊತೆಗೇ ತೊಳೆಯುವ ಕಾಲಕ್ಕೆಲ್ಲಿ ಉಳಿದ ಬಟ್ಟೆಗಳಿಗೂ ಬಣ್ಣವಂಟಿಸಿಬಿಡುತ್ತದೋ ಎಂಬ ಆತಂಕ. ಅಜ್ಜನ ಕಾಲವೇ ವಾಸಿ, ಅಂಗಿ ತೊಡದೇ ಹಾಗೇ ತೆರೆದೆದೆಯಲ್ಲಿ ದ್ದರೂ, ಅಂಗವಸ್ತ್ರದ ಮರೆ ನೆಪಕ್ಕೆ, ಕೂತಾಗಲೂ ಜಪಕ್ಕೆ. ವಾರ್ಡ್‌ರೋಬಿನ ತುಂಬ ಲೆಕ್ಕಕ್ಕೆ ಸಿಕ್ಕದ ಅಷ್ಟೊಂದು ಅಂಗಿಗಳಿರುವಾಗಲೂ ತೊಟ್ಟು ಮೆರದದ್ದಕ್ಕಿಂತ ಅನ್ಯರ ಮೈಮೇಲಿರುವ ಅಂಗಿಗಳ ರಂಗು, ವಿನ್ಯಾಸ ಕಾಡುತ್ತಲೇ ಇರುತ್ತವೆ- ಬೆನ್ನಿಗಂಟಿದ ಬೇತಾಳದಂತೆ]]>

‍ಲೇಖಕರು avadhi

15 October, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading