ʼಓಡು ಮಂಜಣ್ಣೋ ಓಡುʼ

‘ಕಲಾವಿಲಾಸಿ’ ತಂಡ ರೂಪಿಸಿರುವ ಕಿರುಚಿತ್ರ – ʼಓಡು ಮಂಜಣ್ಣೋ ಓಡುʼ.

ಕೃಷಿಯ ಇಂದಿನ ತಲ್ಲಣಗಳನ್ನು ಯುವಕರ ತಂಡವೊಂದು ಸಮರ್ಥವಾಗಿ ಕಟ್ಟಿಕೊಟ್ಟಿದೆ.

ಬಸವರಾಜ ಎಮ್ಮಿಯವರ ನಿರ್ದೇಶಿಸಿರುವ ಈ ಕಿರುಚಿತ್ರ ಯು ಟ್ಯೂಬ್ ನಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.

ಈ ಕಿರುಚಿತ್ರ ಹಾಗೂ ಅದಕ್ಕೆ ತಂಡ ಬರೆದ ಮುನ್ನುಡಿ ಇಲ್ಲಿದೆ-

ಸ್ವಾತಂತ್ರ ಬಂದಾಗ ನಮ್ಮ ದೇಶದಲ್ಲಿ ಇಲ್ಲದೇ ಇದ್ದ ಕ್ಷೇತ್ರಗಳೆಲ್ಲಾ ಹುಟ್ಟಿ ಕೆಲವೇ ವರ್ಷಗಳಲ್ಲಿ ದೈತ್ಯವಾಗಿ ಬೆಳೆದು ಇಂದು ಶಾಶ್ವತ ಅನ್ನುವಷ್ಟರ ಮಟ್ಟಿಗೆ ಉಳಿದು ಬಿಟ್ಟಿವೆ. ಅಷ್ಟರ ಮಟ್ಟಿಗೆ ಪ್ರತಿ ಸರ್ಕಾರಗಳು, ಜನಸಾಮಾನ್ಯರು ಅವರನ್ನು ಬೆಳೆಸಿದ್ದಾರೆ. ಆದರೆ ಸಾವಿರಾರು ವರ್ಷಗಳಿಂದ ಈ ನೆಲದಲ್ಲಿ ಇದ್ದ ಕೃಷಿಕರ ಜೀವನ ಮಾತ್ರ ಯಾವ ಸುಧಾರಣೆಯನ್ನೂ ಕಾಣಲು ಸಾಧ್ಯವಾಗಿಲ್ಲ.

ಹಾಗಾದರೆ ಪ್ರತಿ ಆಡಳಿತರೂಡ ಸರಕಾರಗಳ ಮುಖ್ಯ ಉದ್ದೇಶ ಕೃಷಿಕರ ಜೀವನ ಸುಧಾರಣೆಯೇ ಆಗಿರುತ್ತದಲ್ಲ, ಆದರೂ ಯಾಕೆ ಕನಿಷ್ಟ ನೆಮ್ಮದಿಯಿಂದ ಕೂಡಿದ ಒಂದು ಸಧೃಡ ಬದುಕನ್ನೂ ಕಟ್ಟಿಕೊಳ್ಳುವುದು ನಮ್ಮ ದೇಶದ ಬಹುಪಾಲು ಕೃಷಿಕರಿಗೇ ಸಾಧ್ಯವೇ ಆಗಿಲ್ಲ? ಆಗಿದ್ದರೆ ಈ ವ್ಯವಸ್ಥೆಗಳೆಲ್ಲಾ ಕೇವಲ ಒಳಗಿನ ಉಳುಕುಗಳನ್ನು ಹಾಗೆಯೇ ಬಿಟ್ಟು ಕೇವಲ ತಿಪ್ಪೆ ಸಾರಿಸುವ ಕೆಲಸ ಮಾಡುತ್ತಿವೆಯೇ!

ಇತ್ತೀಚಿಗೆ ಕೇಂದ್ರ ಸರಕಾರ ಜಾರಿಗೆ ತರಲು ನಿರ್ಧರಿಸಿರುವ ಕೃಷಿ ಕಾಯ್ದೆಗಳು, ಸ್ವಂತ ಪಕ್ಷದ ರಾಜಕೀಯ ಪಕ್ಷಪಾತಿಗಳನ್ನು ಹೊರತುಪಡಿಸಿ ಬೇರೆ ಯಾರಿಗೂ ಒಪ್ಪಿಗೆ ಆಗುತ್ತಿಲ್ಲ. ಆಗಿದ್ದರೂ ಸರಕಾರ ಏಕೆ ಹಟಕ್ಕೆ ಬಿದ್ದು ಜಾರಿಗೆ ತರಲು ಹವಣಿಸುತ್ತಿದೆ? ಇದು ಜರ್ಮನಿಯಲ್ಲಿ ಫೇಲಾಗಿರುವ ಒಂದು ವ್ಯವಸ್ಥೆ. ಆಡಳಿತ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಉತ್ತುಂಗದಲ್ಲಿರುವ ದೇಶದಲ್ಲೇ ಈ ರೀತಿಯ ಕಾಯ್ದೆಗಳು ಯಶಸ್ಸು ಕಂಡಿಲ್ಲ.

ಇದನ್ನು ವಿರೋಧಿಸಿ 2020ರ ಮೊದಲ ಭಾಗದಲ್ಲಿ ಬರ್ಲಿನ್‌ನಲ್ಲಿ ರೈತರಿಂದ ದೊಡ್ಡ ಹೋರಾಟಗಳೇ ನಡೆದಿವೆ. ಇನ್ನು ಅವ್ಯವಸ್ಥೆಗಳೇ ತುಂಬಿರುವ ಭಾರತದಂತ ದೇಶದಲ್ಲಿ, ಸಾಮಾನ್ಯ ಜನರ ಬದುಕಿನ ಸುಧಾರಣೆಗೆ ಮಾಡಬೇಕಿರುವ ಸಾವಿರಾರು ಕೆಲಸಗಳಿರುವ ದೇಶದಲ್ಲಿ ಇದೇ ಕೆಲಸ ಮಾಡಬೇಕು ಎನ್ನುವ ಹಟವೇಕೆ ನಮ್ಮ ಸರಕಾರಕ್ಕೆ?

ಈ ಸಂದರ್ಭದಲ್ಲಿ ಪ್ರೋಫೆಸರ್‌ ಎಂ.ಡಿ. ನಂಜುಂಡಸ್ವಾಮಿ ಅವರು ಸಂದರ್ಶನದಲ್ಲಿ ಹೇಳಿದ್ದ ಮಾತೊಂದನ್ನು ನೆನಪಿಸಿಕೊಳ್ಳಬಹುದು –“WTC ಕಟ್ಟಡದ ಒಳಗೆ ಕೂತು ಜಗತ್ತಿನ ಯಾವ ದೇಶದ ಯಾವ ಮೂಲೆಯ ರೈತ ಯಾವ ಬೆಳೆಯನ್ನು ಹೇಗೆ ಬೆಳೆಯಬೇಕು ಅನ್ನುವ ಕಾನೂನನ್ನು ತರಲು ಸಾಧ್ಯವೇ ಇಲ್ಲ. ಕೃಷಿ ಯಾವತ್ತಿದ್ದರೂ ಸಾಂಪ್ರದಾಯಿಕ ನೆಲಗಟ್ಟಿನಲ್ಲಿಯೇ ಬೆಳೆಯಬೇಕು. ಕಾನೂನುಗಳು ಅದಕ್ಕೆ ಪೂರಕವಾಗಿ ಇರಬೇಕು. ಜಾಗತೀಕರಣವನ್ನು ಎಲ್ಲಿಗೆ ಬೇಕಾದರೂ ತನ್ನಿ, ಆದರೆ ಕೃಷಿಗೆ ಮಾತ್ರ ಬೇಡ.

ಅಷ್ಟಾಗಿಯೂ ಬಲವಂತವಾಗಿ ನೀವು ಕೃಷಿಯನ್ನು ಜಾಗತೀಕರಣದ ಒಳಗೆ ತರಲು ನಿರ್ಧರಿಸಿದ್ದರೆ ಬಹುಪಾಲು ಕೃಷಿಕರನ್ನು ಒಕ್ಕಲೆಬ್ಬಿಸುತ್ತೀರ. ಅಮೇರಿಕಾದ ಕೃಷಿ ಕ್ಷೇತ್ರದಲ್ಲಿ ಆದ ಬದಲಾವಣೆಗಳೇ ಇದಕ್ಕೆ ಉದಾಹರಣೆ. ಆ ದೇಶದಲ್ಲಿ ಜನರು ಕೃಷಿಯನ್ನು ಬಿಟ್ಟು ಬೇರೆ ಯಾವುದೋ ಕೆಲಸ ಮಾಡಲು ತೊಡಗಿದರು. ಆದರೆ ಭಾರತದಂತಹ ದೇಶದಲ್ಲಿ ಕೋಟ್ಯಾಂತರ ಜನ ರೈತರಿಗೆ ಯಾವ ಪರ್ಯಾಯ ಉದ್ಯೋಗವನ್ನು ಕೊಡಲು ಸಾಧ್ಯವಿದೆ?”

‍ಲೇಖಕರು Avadhi

December 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: