“ಪಂಪನಿಂದ ಹಂಪ” ನವರೆಗೆ!

ಎಚ್ ಎನ್ ಆರತಿ
ಹೃದಯ ತುಂಬಿ ಬರುವುದು ಎಂದರೆ, ಖಂಡಿತಾ ಇದೇ,
ಈ ಘಳಿಗೆ.
ಸದಾ ಏನಾದರೊಂದು ಯೋಚಿಸುವ ಮಥಿಸುವ,
ದಿನದ 8ರಿಂದ 10 ಗಂಟೆಗಳಷ್ಟು ಕಾಲ ಪುಸ್ತಕಗಳಲ್ಲೇ ಕಳೆದುಹೋಗುವ,
ಶಾಸನ, ಸಂಶೋಧನೆಯಂದರೆ ಸಾಕು, ಅಪಾರ ಹುಮ್ಮಸ್ಸಿನಲ್ಲಿ ಅದರಲ್ಲೇ ಮುಳುಗುವ,
ಪಂಪನ ಆದಿಪುರಾಣದಿಂದ ಹಿಡಿದು ನವೋದಯದವರೆಗೂ, ಪುಟಗಟ್ಟಲೇ ಕಂಠಸ್ತವಾದ ಚಂಪೂ, ಮಹಾಕಾವ್ಯಗಳನ್ನು ಲೀಲಾಜಾಲವಾಗಿ ಉದ್ಧರಿಸುವ,
ನಿಜ ಅರ್ಥದಲ್ಲಿ ವಿಶ್ವಮಾನವರಾಗಿರುವ,
ಅನಿರ್ಬಂಧಿತ ಪ್ರೀತಿ, ಜೀವನೋತ್ಸಾಹಗಳಿಂದ ಪುಟಿಯುವ,
81ರಲ್ಲೂ 18ರ ಹರೆಯದ ಬಿಚ್ಚುಮನಸ್ಸಿನ,
ಜ್ಞಾನ ಕೊಡುವ ಮಾಗುವಿಕೆಯಿಂದ ಹದವಾದ ಅಂತಃಕರಣದ,
ಮಗುವಿನ ಬೆರಗನ್ನು ಇನ್ನೂ ಜತನ ಮಾಡಿ ಕಾಪಿಟ್ಟುಕೊಂಡಿರುವ,
ನನ್ನಪ್ಪ, ಅಪ್ಪಾಜಿ, ನನ್ನ ಆತ್ಮೀಯ ಸ್ನೇಹಿತ ಎಂದರೆ ನೀವೇ!!!
ಪಂಪ ಪ್ರಶಸ್ತಿಯ ಮುಕುಟ ಹೊತ್ತ ಹಂಪನಾ,
ಶೃತದೇವಿಯ ಕೃಪೆಯ ಮೆರುಗಿನಿಂದ ಮತ್ತಷ್ಟು ಕಂಗೊಳಿಸಲಿ…!
ನಿಮಗೆ ಅಭಿನಂದನೆ ಹೇಳುವ,
ಈ ಕಟ್ಟೆಹೊಡೆದಂತಾ ಖುಷಿ ನನಗೆ ಪದೇಪದೇ ಸಿಗಲಿ…!!!





ಅಭಿನಂದನೆಗಳುಸರ್
ಆ ಂತೋಶ ಇಲ್ಲೂ ತುಂಬಿ ಬಂದಿದೆ,ಪ್ರಿಯ ಆರತೀ! ನಿಮಗೂ ಅಭಿನಂದನೆ.
ಪ್ರೀತಿಯಿಂದ,
ಶ್ಯಾಮಲಾ.
ರಾಜ್ಯ ಸರಕಾರದ ಪ್ರತಿಷ್ಠಿತ ಪಂಪ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಸಂಶೋಧಕ ಪ್ರೊ. ಹಂಪ ನಾಗರಾಜಯ್ಯ ಅವರಿಗೆ ಹಾರ್ದಿಕ ಅಭಿನಂದನೆಗಳು.
ವಿಜಯೇಂದ್ರ ಕುಲಕರ್ಣಿ. ಮಳ್ಳಿ ( ಕಲಬುರಗಿ)
ಪಂಪ ಪ್ರಶಸ್ತಿಗೂ ಗೌರವ ಬಂದಿದೆ. ಅಭಿನಂದನೆಗಳು.