ರಾಜಾರಾಂ ತಲ್ಲೂರು ಅವರು ತಮ್ಮ ಅಂಕಣ ‘ನುಣ್ಣನ್ನ ಬೆಟ್ಟ’ದಲ್ಲಿ ಬರೆದ ಲೇಖನಕ್ಕೆ ತೀವ್ರ ಪ್ರತಿಕ್ರಿಯೆ ಬಂದಿವೆ.
ಅರ್ನಬ್ ನಡೆಸಿದ .ಸಂದರ್ಶನದ ಬಗ್ಗೆ ಓದುಗರ ಕಾಮೆಂಟ್ ಗಳು ಇಲ್ಲಿವೆ

ನಿಜ. ನಿನ್ನೆಯ ಮೋದೀಜೀ ಸಂದರ್ಶನ ಬಹು ಸುರಕ್ಷಿತ ಸಿದ್ಧತೆಯಲ್ಲಿ ನಡೆದದ್ದು ಎಂತಹವರಿಗಾದರೂ ಗೊತ್ತಾಗತಕ್ಕಂತದೇ. ಮೊದಲೇ ಪ್ರಶ್ನೆ ತಿಳಿಸಿ ನಡೆಸುವ ಪರೀಕ್ಷೆಯ ತರಹ ಅದು ಕಾಣಿಸುತ್ತಿತ್ತು. ಆದರೆ ನೆನಪಲ್ಲಿಡಬೇಕಾದ್ದು ಮೋದಿಯವರು ಅತ್ಯಂತ ಚಾಣಾಕ್ಷ ವಿದ್ಯಾರ್ಥಿಯೆಂಬುದನ್ನು! ಈ ”ಗೊತ್ತಿರುವ” ಪ್ರಶ್ನೆಗಳಲ್ಲದೆ ಲೇಖನದಲ್ಲಿ ಹೇಳಿರುವಂತೆ ಕಠಿಣ ಪ್ರಶ್ನೆ ಕೇಳಿದ್ದರೂ ಅದನ್ನು ನಿಭಾಯಿಸುವ ಛಾತಿ ಮತ್ತು ಮತ್ತುಬರಿಸುವ ಮಾತಿನ ಕಲೆಗಾರಿಕೆ ಅವರಿಗಿದೆ.
ಈ ರೀತಿಯ ಛಾತಿ ಬಹುಶಃ ನೆಹರೂಜೀಗಿತ್ತೆಂದು ನಮ್ಮಪ್ಪ ಹೇಳುತ್ತಿದ್ದುದು ನನಗೆ ನೆನಪಿದೆ. ಮಾತಿನ ಓಘ, ಸುಂದರ ರಮ್ಯತೆಯನ್ನು ಎಂತಹ ಸಬ್ಜೆಕ್ಟಿಗಾದರೂ ಆರೋಪಿಸುವ ಚಾಕಚಕ್ಯತೆ ಇರುವುವರನ್ನು ಮಾಸ್ ಮೆಚ್ಚುತ್ತದೆ. ಅವರಿಗೆ ಮರುಳಾಗುತ್ತದೆ. ಇದು ರಾಮರಸಪಾನ. ಮತ್ತಿಳಿದ ಮೇಲೆ ತಡವಿ ನೋಡಿಕೊಳ್ಳಬೇಕೆಂಬ ವಿವೇಕ ಬಂದರೇನು ಬರದಿದ್ದರೇನು.
ಇನ್ನೊಂದು ವಿಷಯ. ಭಾವೀ ಪ್ರಧಾನಿ ಎಂದು ಪಕ್ಷ ತೋರುಮನುಷ್ಯನನ್ನಾಗಿಸಿರುವ ರಾಹುಲ್ ಜಿ ಯುವಕರು. ಗೋಸ್ವಾಮಿಯಲ್ಲ ಯಾವ ಸ್ವಾಮಿಯನ್ನಾದರೂ ತಾರ್ಕಿಕವಾಗಿ ಮಾತನಾಡುವ ಮೂಲಕ ಬಾಯಿ ಕಟ್ಟಿಹಾಕುವ ಶಕ್ತಿ ಮತ್ತು ವಿಷಯಸಂಪತ್ತಿ ಅವರಲ್ಲಿರಬೇಕೆಂದು ದೇಶದ ಜನ ಅಂದುಕೊಂಡರೆ ಅದು ಸರಿ. ಹಾಗೆ ಅವರನ್ನು ತಯಾರು ಮಾಡುವ ಜವಾಬ್ದಾರಿಯನ್ನು ಹೊರದ ಪಕ್ಷನಾಯಕರು ಸುಮ್ಮನೆ ಮುಖಸ್ತುತಿ ಮಾಡುತ್ತಾ ಓಡಾಡಿದರೆ ಮೂರುಕಾಸಿಗೆ ಪಕ್ಷದ ಗಾಂಭೀರ್ಯ ಹರಾಜಿಟ್ಟಂತೆ ಅಷ್ಟೇ. ಪರೀಕ್ಷೆಯಲ್ಲಿ ನಾನು ಓದಿಕೊಂಡ ಪಾಠದ ಪ್ರಶ್ನೆಗಳೇ ಬರಲಿಲ್ಲ ಎಂದು ವಿದ್ಯಾರ್ಥಿಯೊಬ್ಬ ಅತ್ತರೆ ಸುತ್ತಿನ ಜನ ನಗುತಾರೆ ವಿನಾ ಅಯ್ಯೋ ಪಾಪ ಅನ್ನುವುದಿಲ್ಲ.
ಅರ್ನಾಬ್ ಬಾಯಿಬಡುಕ. ಆದರೆ ಫುಟ್ ಲಾಯರಿ ಎನ್ನುವುದು ಸದಭಿರುಚಿಯ ಶೀರ್ಷಿಕೆ ಎಂದು ನನಗೆ ಅನ್ನಿಸುತ್ತಿಲ್ಲ
-ಲಲಿತಾ ಸಿದ್ಧಬಸವಯ್ಯ

ಥ್ಯಾಂಕ್ಯೂ. ಫುಟ್ ಲಾಯಿರಿ ಎಂಬುದು ಬೈಗುಳ ಪದವಾಗಲೀ, ಕೀಳುಗೊಳಿಸುವ ಪದವಾಗಲೀ ಅಲ್ಲ. ಹಳ್ಳಿಗಳಲ್ಲಿ, ಮೊದಲೆಲ್ಲ ಕಾನೂನು ಪದವಿ ಪಡೆಯದ, ಆದರೆ ಹಳ್ಳಿಗರ ಕೇಸುಗಳನ್ನು ಪಡೆದು ತಾವೇ ಕೇಳಿ ಪಡೆದು, ವಕೀಲರನ್ನು ಹಿಡಿದು ನ್ಯಾಯಾಲಯದಲ್ಲಿ ಅವರಿಗೆ ನ್ಯಾಯ ದೊರಕಿಸುವ ಇಲ್ಲವೇ ಪಂಚಾತಿಕೆಗಳ ಮೂಲಕ ತೊಂದರೆಗಳನ್ನೆಲ್ಲ ಪರಿಹರಿಸುವ ಪರಿಣತರಿದ್ದರು. ಅವರನ್ನು ಫುಟ್ ಲಾಯರಿಗಳೆಂದು ಕರೆಯಲಾಗುತ್ತಿತ್ತು. ನಿನ್ನೆಯ ಸಂದರ್ಶನದಲ್ಲಿ ಅರ್ನವ್ ಪಾತ್ರ ನನಗೆ ಇಂತಹದೇ ಅನ್ನಿಸಿತು. ನಿಮಗೆ ಇದರಿಂದ ಹಿತವಾಗಿರದಿದ್ದರೆ ಕ್ಷಮೆಯಿರಲಿ.
-ರಾಜಾರಾಂ ತಲ್ಲೂರು

Scripted ಅಂತ ತಮಗೆ ಯಾಕೆ ಅನಿಸಿತು ಅರ್ಥವಾಗಲಿಲ್ಲ. ಮೋದಿಯ ಮಾತಿನ ಓಘ ತಿಳಿದವರಿಗೆ ಇದೇನು scripted ಅನಿಸುವುದಿಲ್ಲ. ಕೆಲವರಿಗೆ ಮಾತ್ರ ರಾಹುಲನಿಗೆ ಮೊದಲೇ most likely questions ಕೊಡದೇ ಇದ್ದುದಕ್ಕೆ, ಮತ್ತು ಮೋದಿ ಆರಾಮವಾಗಿ ಎಲ್ಲ ಪ್ರಶ್ನೆ ಗಳಿಗೆ ಉತ್ತರಿಸುತ್ತ ಹೋದದ್ದಕ್ಕೆ ಬಹಳ ಬೇಜಾರಾಗಿರುತ್ತದೆ. ಮೋದಿ ಚೆನ್ನಾಗಿ ಉತ್ತರಿಸುವುದಕ್ಕೆ ಕಾರಣ ಅವರಿಗಿರುವ ವಿಷಯ ಜ್ಞಾನ, ಮತ್ತು ರಾಹುಲ ಬಾಯಿಪಾಠ ಮಾಡಿದರೂ ಮಾತನಾಡಲು ಸಾಧ್ಯವಾಗದಿರುವುದು ಅವರ ಅಧ್ಯಯನ ಕೊರತೆಯ ಕಾರಣ. ಅದನ್ನು ಕಾಂಗ್ರೆಸ್ ಪಕ್ಷದವರೇ ಬಹಿರಂಗವಾಗಿ ಅಲ್ಲದಿದ್ದರೂ ಖಾಸಗಿಯಾಗಿ ಒಪ್ಪುತ್ತಿದ್ದಾರೆ. ಆದರೂ ಕೆಲವರು ಮಾತ್ರ ಇನ್ನೂ ಸತ್ಯವನ್ನು ನಿರಾಕರಿಸುತ್ತಿದ್ದಾರೆ. ಏನೂ ಮಾಡಲಿಕ್ಕಾಗದು.
-ನೀತಾ ರಾವ್

ಸಂದರ್ಶನಗಳು ನನ್ನ ಅನುಭವದಲ್ಲಿ, ಸಂವಾದ ಕಟ್ಟುತ್ತ ಹೋಗುವ ಕ್ರಿಯೆ. ರಾಹುಲ್ ಪೆದ್ದುಪೆದ್ದಾಗಿ ತಡವರಿಸಿದರೂ ಅರ್ನವ್ ಅವರ ಜೊತೆ ಮತ್ತೆ ಮತ್ತೆ ಮೂಲ ಪ್ರಶ್ನೆಗೆ ಎಳೆದು ಉತ್ತರಕ್ಕಾಗಿ ಕಾಡುತ್ತಾರೆ. ನಿನ್ನೆ ಹಾಗಾಗಲಿಲ್ಲ. ಎರಡು ಮೂರು ಬಾರಿ ಮೂಲ ಪ್ರಶ್ನೆಯಿಂದ ಪ್ರಧಾನಿ ದೂರ ಸರಿದೇ ಉತ್ತರ ಕೊಟ್ಟರೂ, ಅರ್ನವ್ ಅದನ್ನು ವಿಧೇಯರಾಗಿ ಒಪ್ಪಿಕೊಂಡು ಮುಂದುವರಿದರು. ಹಠಾತ್ ಪ್ರಶ್ನೆಗಳು ಮತ್ತು ಹಠಾತ್ ಸಮರ್ಪಕ ಉತ್ತರಗಳು ಗುಮಾನಿಗೆ ಕಾರಣ ಆಗುತ್ತವೆ. ಹತ್ತು ಮಕ್ಕಳು ಹೆತ್ತವರಿಗೆ ನಿಂತ ಮೆಟ್ಟಿಗೆ ಎಲ್ಲ ಮಕ್ಕಳ ಹೆಸರು-ಪ್ರಾಯ ಅನುಕ್ರಮಣಿಕೆಯಲ್ಲಿ ಹೇಳುವಂತೆ ಕೇಳಿ ನೋಡಿ. ಜೊತೆಗೆ, ಮೋದಿ ಅವರಿಗೆ ಇರುಸುಮುರುಸಾಗುವ ಒಂದೇ ಒಂದು ಪ್ರಶ್ನೆ ಇರಲಿಲ್ಲ. ನೀವು ಈ ಹಿಂದೆ ಎಂದಾದರೂ ಅರ್ನವ್ ಸಂದರ್ಶನ ಮಾಡುವುದನ್ನು ನೋಡಿದ್ದರೆ ನಿಮಗೆ ಇದು ಅರಿವಾಗುತ್ತದೆ.
-ರಾಜಾರಾಂ ತಲ್ಲೂರು

ರಾಹುಲ್, ಸೋನಿಯಾರೆಂದರೆ ಅನೇಕರಿಗೆ ಕೀಟಲೆ ಮಾಡಲು ಪ್ರಿಯವಸ್ತುಗಳು.
ಏಕೆಂದರೆ ಅವರು ಅನಾವಶ್ಯಕ ಕಲರ್ ಫುಲ್ ಮಾತನಾಡುವುದಿಲ್ಲ. ಬಾಯಿಪಾಠ, ಬರೆದುಕೊಟ್ಟದ್ದನ್ನು ಓದ್ತಾರೆ ಎಂಬಂಥವು ತುಂಬ ಲಘುವಾದ ಟೀಕೆಗಳು. ನಿರರ್ಗಳ ಮಾತುಗಳೇ ಉತ್ತಮ ಆಡಳಿತದ ಲಕ್ಷಣಗಳಲ್ಲ. ಗೋಸ್ವಾಮಿ ಮೇಲೆ ಈಗಾಗಲೇ ಸಾಕಷ್ಟು ಗುರುತರ ಆಪಾದನೆಗಳಿವೆ. ಅನೇಕ ಗಣ್ಯ ಅಧಿಕಾರಸ್ಥರಿಗೆ ಆತ ಫುಟ್ ಲಾಯರ್ ಗಿರಿ ಕೆಲಸ (ಅರ್ಥಾತ್ ಸಂದರ್ಶನ) ಮಾಡಿಕೊಟ್ಟಿದ್ದಾನೆ. ಇದು ಅದರಲ್ಲಿ ಮತ್ತೊಂದು ಅಷ್ಟೇ.
ತುಂಬಾ ಚೆನ್ನಾಗಿದೆ ತಲ್ಲೂರ್ ಸರ್ ಲೇಖನ,
and thanq for the links.
-ಸುಧಾ ಚಿದಾನಂದ ಗೌಡ





ಖಂಡಿತ, ಮಾತುಗಳೇ ಮುಖ್ಯವಲ್ಲ, ಕೆಲಸ ಮುಖ್ಯ. ಆದರೆ ತಮಗೆ ಸಿಕ್ಕ ಹತ್ತು ವರ್ಷದ ಸುದೀರ್ಘ ಅವಧಿಯಲ್ಲಿ ಸೋನಿಯಾ ಮತ್ತು ರಾಹುಲ ಗಾಂಧಿ ಸರಕಾರ ಮಾಡಿದ ಜನಹಿತ ಕೆಲಸಗಳನ್ನಾದರೂ ಪಟ್ಟಿ ಮಾಡಿ ಹೇಳಿ. ಜನ ಒಪ್ಪುತ್ತಾರೆ. ಭಾರತದ ಬೆಳವಣಿಗೆಯ ಬಗ್ಗೆ ಅವರ vision ಏನಿದೆ ಹೇಳಾಗದಿದ್ದರೆ ಬರೆದು ತಿಳಿಸಲು, ಜನರಿಗೆ ತಿಳಿಸುವುದಂತೂ ಅನಿವಾರ್ಯ ಅಲ್ಲವೇ? ಇನ್ನು ಮಾಡಿದ ಕರ್ಮಕಾಂಡಗಳ ದಾಯಿತ್ವದ ಭಾರವನ್ನಂತೂ ಅವರೇ ಹೊರಬೇಕು, ಅವರೇ ಉತ್ತರಿಸಬೇಕು.
ಸೋನಿಯಾ ಮತ್ತು ರಾಹುಲರ ಆಡಳಿತದ ಅವಧಿಯಲ್ಲಿ ವಿಶ್ವವಿದ್ಯಾಲಯಗಳು ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಸನಾತನಿ ಕೇಂದ್ರಗಳಾಗಿರಲಿಲ್ಲ.
ಪ್ರೀತಿಸಿ ಮದುವೆಯಾದವರು ಮರ್ಯಾದೆಗೇಡು ಹತ್ಯೆಗೀಡಾದರೆ ಅಂಥಾ ಕೇಸುಗಳಿಗೆ ಕುಮ್ಮಕ್ಕು ಸಿಕ್ಕಿರಲಿಲ್ಲ.
ಸೋನಿಯಾ- ರಾಹುಲ್ ಯಾವತ್ತೂ ವಿದೇಶಿಯಾತ್ರೆಯ ವ್ಯಾಮೋಹಕ್ಕೊಳಗಾದವರಲ್ಲ.
ಧರ್ಮವನ್ನೂ, ಜಾತೀಯತೆಯನ್ನೂ ವೈಜ್ಞಾನಿಕವಾಗಿ ನೋಡಿದವರು, ಸಾಮಾಜಿಕ ನ್ಯಾಯವನ್ನು ಜಾರಿಗೆ ತರಲು ಯತ್ನಿಸಿದವರು ಕಾಂಗ್ರೆಸ್ಸಿಗರೇನೇ.(ಎಡಪಂಥೀಯರೂ ಹೌದು)
ಇದೇ ಅವರ ವಿಷನ್. ಭ್ರಷ್ಟಾಚಾರದ ಕರ್ಮಕಾಂಡಗಳೇನಾದರೂ ಇದ್ದರೆ ನ್ಯಾಯಿಕ ವಿಚಾರಣೆಗಳು ಇದ್ದೇ ಇವೆ.
ಇಷ್ಟು ಸಾಕು ಪ್ರಗತಿಪರತೆ ಅರ್ಥಮಾಡಿಕೊಳ್ಳಲು.
ಇನ್ನು ಜನಹಿತ ಕೆಲಸಗಳೆಂದರೆ ಅರ್ಥವಾದರೂ ಏನು?
ನೀಟಾಗಿ ಡ್ರೆಸ್ ಮಾಡಿಕೊಂಡು ಫಾರಿನ್ ಗೆ ಹೋಗಿಬರೋದಾ..?
ಪ್ರಸಾರಭಾರತಿಯನ್ನು ಅತೀ ಹೆಚ್ಚು ಉಪಯೋಗಿಸಿಕೊಳ್ಳೊದಾ..?
ಒಂದು ಕೆಲಸವನ್ನು ಹತ್ತು ಬಾರಿ ಹೇಳಿಕೊಳ್ಳುವ ಹಿಂಬಾಲಕರನ್ನು ಹೊಂದಿರುವುದಾ..?
ಮೋದಿಯವರನ್ನು ಹೊಗಳುವುದಾದರೆ ಅಭ್ಯಂತರವಿಲ್ಲ.
ಆದರೆ ವಿನಾಕಾರಣ ಸೋನಿಯಾ- ರಾಹುಲರ ಕಾಲೆಳೆಯುವುದರಲ್ಲಿ ಅರ್ಥವಿಲ್ಲ.
ಜನರನ್ನು ಯಾರಾದರೂ ಏಕೆ ಒಪ್ಪಿಸಬೇಕು?
ಭಾರತ ಬೆಳೆದಿದೆ. ಬೇಕಾದಷ್ಟು. happy and proud about it.