ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸಂದೀಪ್ ಕಾಮತ್ ಸ್ಪೆಷಲ್: ಬೇಕಾ ಸೀಟ್?
ಸೀಟ್ ಬೇಕಾ ಸೀಟ್ -ಸಂದೀಪ್ ಕಾಮತ್ ಕಡಲತೀರ ಬೆಂಗಳೂರಿನ ಜನರಿಗೆ ಯಾವಾಗ ತುಂಬಾ ಖುಷಿಯಾಗುತ್ತೆ ಅಂತ ಒಮ್ಮೆ ಕೇಳಿ ನೋಡಿ.ಎಲ್ಲರ ಉತ್ತರ ಒಂದೇ ಆಗಿರುತ್ತೆ.’ ಬಿ.ಎಂ.ಟಿ.ಸಿ ಬಸ್ ನಲ್ಲಿ ಸೀಟ್ ಸಿಕ್ಕಾಗ !’ ನೀವು ಮಂಗಳೂರಿನವರೋ ಅಥವ ಗದಗದವರೋ ಆಗಿದ್ರೆ ಈ ಮಾತು ಕೇಳಿ ಒಮ್ಮೆ ಪುಸಕ್ಕನೆ ನಕ್ಕರೂ ನಗಬಹುದು.ಆದರೆ ಬೆಂಗಳೂರಿನ ಬಸ್...
ಮಣಿಕಾಂತ್ ಬರೆದಿದ್ದಾರೆ: ಹಾಡು ಬರೀತೀನಿ, ಹಾಡಲು ಬರಲ್ಲ…
ಎ ಆರ್ ಮಣಿಕಾಂತ್ ಚಿತ್ರ: ಪರಮೇಶಿ ಪ್ರೇಮ ಪ್ರಸಂಗ. ಗೀತೆರಚನೆ: ಎಂ.ಎನ್. ವ್ಯಾಸರಾವ್. ಸಂಗೀತ: ಜಿ.ಕೆ. ವೆಂಕಟೇಶ್. ಗಾಯನ: ಎಸ್ಪೀಬಿ-ಎಸ್. ಜಾನಕಿ. ಉಪ್ಪಿಲ್ಲ ಮೆಣಸಿಲ್ಲ, ತರಕಾರಿ ಏನಿಲ್ಲ ಎಣ್ಣಿಲ್ಲ ಬೆಣ್ಣಿಲ್ಲ, ಕಾಯನ್ನು ತಂದಿಲ್ಲ ಏನ್ಮಾಡಲಿ ನಾನು ಏನ್ಮಾಡಲಿ ||ಪ|| ಉಪ್ಪಿಲ್ಲ ಇಂಗಿಲ್ಲ, ಕರಿಬೇವು ಸೊಪ್ಪಿಲ್ಲ ಸೊಪ್ಪಿಲ್ಲ,...
ಗುಹಾಶೋಧದ ಸರಣಿ ಮುಗಿಸಿದ್ದೇನೆ
ಪ್ರಿಯರೇ ಗುಹೆಯ ನೆನಪಿನೊಡನೆ ‘ಹಳಸಿಹೋಗುತ್ತಿದ್ದೀರಿ’ ಎಂದು ಎಚ್ಚರಿಸಿದ ಮಿತ್ರರಿಗೆ ಅಭಾರಿ. ತೊಡಗಿದ ಮೇಲೆ ಒಂದು ತಾರ್ಕಿಕ ಕೊನೆ ಕಾಣಬೇಕಲ್ಲ ಎಂದು ಇಲ್ಲಿ ಕೌಂಡಿಕಾನದ ಕಥೆಯೊಡನೆ ನಿಜಕ್ಕೂ ಒಂದು ಘಟ್ಟದ ಗುಹಾಶೋಧದ ಸರಣಿ ಮುಗಿಸಿದ್ದೇನೆ. ನಾನು ಪತ್ನೀವ್ರತಸ್ಥ, ಸಸ್ಯಾಹಾರಿ. ಆದರೂ ನಿಮ್ಮ ಪ್ರತಿಕ್ರಿಯೆ ಎಂಬ ವಿಟ+ಮೀನು ಇಲ್ಲದೆ...
ಒಂದು ಹೆಸರಿಲ್ಲದ ಕಥೆ
ಕನ್ನಡಕ್ಕೆ: ಮಹಾಬಲ ಸೀತಾಳಭಾವಿ ಒಂಬತ್ತನೇ ಶತಮಾನದಲ್ಲೂ ಈಗಿನಂತೆ ಪ್ರತಿದಿನ ಬೆಳಗ್ಗೆ ಸೂರ್ಯ ಉದಯಿಸುತ್ತಿದ್ದ ಮತ್ತು ಪ್ರತಿ ಸಂಜೆ ವಿಶ್ರಾಂತಿಗೆ ತೆರಳುತ್ತಿದ್ದ. ಬೆಳಗ್ಗೆ ಅವನ ಮೊದಲ ಕಿರಣಗಳು ಮಂಚಿನ ಪರದೆಗೆ ಮುತ್ತಿಕ್ಕಿದಾಗ ಭೂಮಿ ಮೈಕೊಡವಿ ಏಳುತ್ತಿತ್ತು; ಗಾಳಿ ಸಂತೋಷ ಮತ್ತು ಭರವಸೆಗಳ ಧ್ವನಿಯಿಂದ ತುಂಬಿಕೊಳ್ಳುತ್ತಿತ್ತು;...
ನ್ಯೂಸ್ ಪೇಪರ್ ನಲ್ಲೊಂದು ಮನೆಯ ಮಾಡಿ…
ನ್ಯೂಸ್ ಪೇಪರ್ ನಲ್ಲಿಯೇ ಒಂದು ಮನೆ...! ಆಶ್ಚರ್ಯ ಆದರೂ ನಿಜ ಮನೆ ಕಟ್ಟಿದ ಪರಿ ನೋಡಲು ಭೇಟಿ ಕೊಡಿ- ಮೀಡಿಯಾ ಮೈಂಡ್
ಕ್ಲಿಕ್ ಮೈಸೂರು
ಒಂದು ರಾಗದ ಬೆನ್ನು ಹತ್ತಿ..
ಭಾರತೀಯ ವಿದ್ಯಾ ಭವನ ಸಭಾಂಗಣದಲ್ಲಿ 27 ರಂದು ಭಾನುವಾರ ಸಂಜೆ 6-30 ಕ್ಕೆ
ಮೈನೇ ಚೋರಿ ಕರ್ದಿಯಾ
ವಿ ಆರ್ ಕಾರ್ಪೆಂಟರ್ ನಮ್ಮ ನಡುವಿನ ಭರವಸೆಯ ಕವಿ. 'ನಾಲ್ಕನೇ ಗೋಡೆಯ ಚಿತ್ರಗಳು' 'ಸಿಗ್ನಲ್ ಟವರ್' ಇವರ ಕವನ ಸಂಕಲನಗಳು. ಕಾರ್ಪೆಂಟರ್ ವೃತ್ತಿಯ ಉಪಮೆಗಳನ್ನು ಬಳಸುತ್ತಲೇ ಎಲ್ಲರ ಗಮನ ಸೆಳೆದ ಹುಡುಗ ನಂತರ ಕನ್ನಡ ಕಾವ್ಯಕ್ಕೂ ಉಳಿಪೆಟ್ಟು ನೀಡಿದ್ದಾನೆ. ಕೇಂದ್ರ ಸಾಹಿತ್ಯ ಅಕಾಡೆಮಿ ಈತನ ಪ್ರತಿಭೆಯನ್ನು ಗುರುತಿಸಿ ಅಂತರ ರಾಜ್ಯ...
ಭವಿಷ್ಯದ ಪತ್ರಕರ್ತರಿಗೆ ತರಬೇತಿ
ಮೇಫ್ಲವರ್ ಮೀಡಿಯಾ ಹೌಸ್ ಎರಡು ತಿಂಗಳ ಕಾಲ ಭವಿಷ್ಯದ ಪತ್ರಕರ್ತರಿಗೆ ತರಬೇತಿ ನೀಡಿತು. ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ಹಾಗೂ ಎಲೆಕ್ಟ್ರಾನಿಕ್ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಗಳು ಮಾಧ್ಯಮದ ಬಗ್ಗೆ ಒಂದು ಕಣ್ಣೋಟ ಪಡೆದರು. ಸಮಾರೋಪದಲ್ಲಿ ಎರಡೂ ವಿಭಾಗಗಳಿಂದ ಪ್ರೊ. ಎನ್ ಎಸ್ ಅಶೋಕ್ ಕುಮಾರ್, ಬಿ ಕೆ ರವಿ...
ಶುದ್ಧ ತರ್ಲೆ…
ಹೀಗೊಂದು ಸ್ಪೆಷಲ್ ಆಹ್ವಾನ ಲೋಹಿತಾಶ್ವರಿಂದ..
ಪ್ರತಿಭಾ ನಂದಕುಮಾರ್ ತಲ್ಲಣಗಳು
ನನ್ನ ತಲ್ಲಣಗಳು- ಪ್ರತಿಭಾ ನಂದಕುಮಾರ್ 'ಶೂದ್ರ' ವಿಶೇಷಾಂಕದಲ್ಲಿ ಟಿವಿಯಲ್ಲಿ ಉತ್ತರ ಭಾರತದ ಒಂದು ಊರಿನಲ್ಲಿ ಪೊಲೀಸರು ಆರು ವರ್ಷದ ಹುಡುಗಿಯೊಬ್ಬಳ ಚಿಕ್ಕ ಕೂದಲು ಎರಡೂ ಕಡೆ ಹಿಡಿದು ಎತ್ತುತ್ತಿದ್ದಾರೆ. ಅವಳು ನೋವು ತಡೆಯಲಾರದೇ ಕಿರುಚುತ್ತಿದ್ದಾಳೆ. ಪೊಲೀಸರು ಅವಳನ್ನು ಇಳಿಸಿ ಮತ್ತೆ ಮತ್ತೆ ಎತ್ತುತ್ತಾರೆ. ಟಿವಿ ಅದನ್ನೇ...
‘ಮತ್ತದೇ ಬೇಸರ… ಅದೇ ಸಂಜೆ…’
ಎದುರುಗಡೆ ಕುಳಿತಿದ್ದ ಹುಡುಗನ ಮುಖ ನೋಡಿದೆ. ಅವನ ಕಣ್ಣಲ್ಲಿ ಫಳ ಫಳ ಅನ್ನೋ ಆತ್ಮವಿಶ್ವಾಸ ಮಿಂಚ್ತಿತ್ತು. ಇನ್ನು ಎರಡೇ ಎರಡು ತಿಂಗಳು. ಇದು ಮುಗಿದುಬಿಟ್ರೆ ನಾನೂ ಕೂಡಾ ‘ಜರ್ನಲಿಸ್ಟ್’ ಆಗಿಬಿಡ್ತೀನಿ ಅನ್ನೋ ಅವಸರ ಇಣುಕ್ತಾ ಇತ್ತು. ಎರಡೇ ತಿಂಗಳು- ನೂರೆಂಟು ರಾಜದೀಪ್ ಸರ್ದೇಸಾಯ್, ನೂರೆಂಟು ಬರ್ಖಾ ದತ್ ಸೃಷ್ಟಿ...
`ಕರಿಸಿರಿಯಾನ’ ಓದುವಷ್ಟರಲ್ಲಿ ಈ ಗಣೇಶಯ್ಯನವರು…
ಹಾಲ್ದೊಡ್ಡೇರಿ ಸುಧೀಂದ್ರ ಅವರು ವಿಜ್ಞಾನಿ ಅಷ್ಟೇ ಅಲ್ಲ, ವಿಜ್ಞಾನ ಬರಹಗಾರ ಕೂಡ. ನಾಗೇಶ ಹೆಗಡೆ ಅವರ ಸಹವಾಸಕ್ಕೆ ಸಿಕ್ಕವರು ಬರಹಗಾರರಾಗದೆ ತಪ್ಪಿಸಿಕೊಳ್ಳುವುದಾದರೂ ಹೇಗೆ? ಕೆ ಎನ್ ಗಣೇಶಯ್ಯ ಹಾಗೂ ಹಾಲ್ದೊಡ್ಡೇರಿ ಸುಧೀಂದ್ರ ಇಬ್ಬರೂ ಹಾಗೆ ಕನ್ನಡ ಬರವಣಿಗೆಯಲ್ಲಿ ಹೊಸ ಎತ್ತರ ಕಂಡವರು. ಕರಿಸಿರಿಯಾನವನ್ನ್ನು ಹಾಲ್ದೊಡ್ಡೇರಿ...
ಪೂರ್ಣ ಓದಿಗೆ: ಮೀಡಿಯಾ ಮೈಂಡ್
ಅಂದಿಗೂ ಇಂದಿಗೂ ಬಹುಶಃ ಎಂದಿಗೂ, ಕನ್ನಡ ಚಾನೆಲ್ ಗಳಲ್ಲಿ ನುಗ್ಗಲು ‘ಈ ಟಿವಿ’ ಲಾಂಚ್ ಪ್ಯಾಡ್ ಆಗಿರುವಂತೆ ಪ್ರಿಂಟ್ ಮೀಡಿಯಾದಲ್ಲಿ ನುಗ್ಗಲು ವಿಜಯ ಟೈಮ್ಸ್ ಅದ್ಭುತ ವೇದಿಕೆ ಒದಗಿಸಿಕೊಡುತ್ತಿದ್ದ ಸಂದರ್ಭ. ವಿಜಯ ಟೈಮ್ಸ್ ನಲ್ಲಿ ಪ್ರಕಟಿತ ಪ್ರತಿ ಪದಕ್ಕೆ ಎಂಟಾಣೆ ಲೆಕ್ಕದಲ್ಲಿ ಸ್ಟ್ರಿಂಗರ್ ಆಗಿ ಸೇರಿದ್ದೆ. (ಪ್ರತಿ ಪದಕ್ಕೆ ಎಂಟು...
ಮಣಿಕಾಂತ್ ಬರೆದಿದ್ದಾರೆ: ನೀನಾ ಭಗವಂತಾ..
ಚಿತ್ರ: ಎ ಆರ್ ಮಣಿಕಾಂತ್ ತ್ರಿವೇಣಿ. ಗೀತೆರಚನೆ: ಹಂಸಲೇಖ ಸಂಗೀತ: ಉಪೇಂದ್ರಕುಮಾರ್. ಗಾಯನ: ಜಿ. ಬಾಲಕೃಷ್ಣ. ಸಿರಿನಂದನಾ, ಏನ ಕೇಳಲಿ ನಾ ಓ ದಯಾಳು, ಬರಿದು ಬಾಳು ಕರುಣಿಸೋ ನಗುಜೀವನಾ, ಸಿರಿನಂದನಾ ಜನನ ಮರಣಾ ಬಾಳಪಥದಿ ಹರಿಸಿ ಸಾಗುವೆ ವಿನಾ ನೀನಾ ಭಗವಂತಾ ಜಗಕುಪಕರಿಸಿ ನನಗಪಕರಿಸೋ ಜಗದೋದ್ಧಾರಕ ನೀನೇನಾ, ನೀನೇನಾ ||ನೀನಾ||...
ಬ್ಯಾಚುಲರ್ ಕಿಚನ್ ನಲ್ಲಿ “ಬೆಳ್ಳುಳ್ಳಿ ಅನ್ನ”
-ಅರವಿಂದ ನಾವಡ ಪಾಕಚಂದ್ರಿಕೆ ಬೆಳ್ಳುಳ್ಳಿ ಎಂದ ಕೂಡಲೇ ಮೂಗು ಮುರಿಯಬೇಡಿ. ಅದರ ವಾಸನೆ ಅಥವಾ ಪರಿಮಳ ಸ್ವಲ್ಪ ಘಾಟಿರಬಹುದು. ಆದರೆ ಅದು ಬ್ರಹ್ಮಚಾರಿಗಳ ಗಡಿಬಿಡಿಗೆ ಅನುಕೂಲವಾದಷ್ಟು ಇನ್ಯಾವುದಕ್ಕೂ ಪ್ರಯೋಜನಕ್ಕೆ ಬಾರದು.ಸಾಮಾನ್ಯವಾಗಿ, ಬ್ರಹ್ಮಚಾರಿಗಳ ರೂಮುಗಳಲ್ಲಿ ಏನೆಂದರೆ…ಅನ್ನ ಮಾಡೋದೇ ಹೆಚ್ಚು. ಇನ್ನು ಅದಕ್ಕೆ ಸಾರು, ಹುಳಿ,...
ಆಳೆತ್ತರಕ್ಕೆ ನಿಂತಿದ್ದ ಅಪ್ಪನ ಕಣ್ಣಲ್ಲೂ ಅಂತದೇ ದುಃಖವಿತ್ತಾ?
ರವಿ ಅಜ್ಜೀಪುರ ನದಿಪ್ರೀತಿ ಅವನು ರಿಚ್ rich ಅಪ್ಪ.ಮೂರು ತಲೆಮಾರು ತಿಂದರೂ ಮುಗಿಯದ ಆಸ್ತಿ ಅವನ ಬಳಿಯಿತ್ತು. ಕಾರು, ಬಂಗಲೇ, ಎಸ್ಟೇಟ್. ಹೇಳಬೇಕೆಂದ್ರೆ ಯಾವುದೇ ಹೊಸ ಕಾರು ಬಂದರೂ ಅದರ ಮಾರನೇ ದಿನವೇ ಇವರ ಮನೆಯ ಮುಂದೆ ನಿಂತಿರುತ್ತಿತ್ತು, ಅಷ್ಟರಮಟ್ಟಿಗೆ ಈ ಅಪ್ಪ ಕರೋಡ್ಪತಿ.ಇಂಥ ಕರೋಡ್ಪತಿಗೆ ತೇಜ ಅನ್ನೋ ಒಬ್ಬನೇ ಸುಪುತ್ರ....
ಲಾಲ್ ಬಾಗ್ ನಲ್ಲಿ ಸಾವಯವ ಮೇಳ
ಆತ್ಮೀಯರೇ ವಾಕಿಂಗ್ ಸ್ಪಾಟ್, ಪ್ರೇಮಿಗಳ ತನ, ಸಸ್ಯ ಶಾಸ್ತ್ರೀಯ ತೋಟ ಕೆಂಪು ತೋಟ ಲಾಲ್ ಬಾಗ್ ನಲ್ಲಿ ಸೆಪ್ಟೆಂಬರ್ ೧೨ ಮತ್ತು ೧೩ ರಂದು 'ಸಾವಯವ ಮೇಳ' ನಡೆಯಲಿದೆ. ರಾಜ್ಯದ ವಿವಿಧ ಕಡೆಗಳಿಂದ ಸಾವಯವ ಕೃಷಿಕರು ತಾವು ಬೆಳೆದ ಉತ್ಪನ್ನಗಳನ್ನು ತಂದು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಿದ್ದಾರೆ. ಇಲ್ಲಿಯವರೆವಿಗೂ ರೈತರ ಮಟ್ಟದಲ್ಲಿ...
ಮೈಸೂರಿನಲ್ಲಿ ಫೋಟೋ, ಫೋಟೋ
ಮತ್ತೆ ಮತ್ತೆ ‘ಅಪಾರ’
