ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಜಯಂತ ಕಾಯ್ಕಿಣಿ ಮತ್ತು ’ಬೊಗಸೆಯಲ್ಲಿ ಮಳೆ'
- ಫಾಲ್ಗುಣ ಗೌಡ, ಅಚವೆ ಕನ್ನಡದ ವಿಶಿಷ್ಠ ಬರಹಗಾರರಾದ ಡಾ. ಜಯಂತ ಕಾಯ್ಕಿಣಿ ಕವಿಯಾಗಿ, ಕಥೆಗಾರರಾಗಿ, ನಾಟಕಕಾರರಾಗಿ, ಅಂಕಣಕಾರರಾಗಿ, ಟೆಲಿವಿಜನ್ ಸಂದರ್ಶಕರಾಗಿ ಸಾಹಿತ್ಯ ಮತ್ತು ಸಾಹಿತ್ಯ, ಕಿರುತೆರೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಚ್ಚುಕಡಿಮೆ ಯಾರಿಗೂ ಸಿಗದ ಜನಪ್ರಿಯತೆಯನ್ನು ಗಳಿಸಿಕೊಂಡವರು. ಸಿನಿಮಾ ಪ್ರಪಂಚದಲ್ಲಿಯಂತೂ...
‘ತಾರಾನಾಥರ ಸರೋದ್ ತಂತಿಗಳೆಲ್ಲ ತುಂಡು ತುಂಡಾಗಿ…’
ಇಂದು ರಾಜೀವ ತಾರಾನಾಥರ ಹುಟ್ಟುಹಬ್ಬ ಖ್ಯಾತ ಸಾಹಿತಿ ಬೊಳುವಾರು ಅವರ ಒಂದು ನೆನಪಿನ ತುಣುಕು ಇಲ್ಲಿದೆ- ಬೊಳುವಾರು ತುಂಡಾದ ತಂತಿ...! ದೆಹಲಿ ಕರ್ನಾಟಕ ಸಂಘದ ಸೆಕ್ರೆಟರಿ ಗೆಳೆಯ ಸರವು ಕೃಷ್ಣಭಟ್ಟರ ಕೃಪೆಯಿಂದ ಐದು ಪಾಸುಗಳು ಸಿಕ್ಕಿದ್ದವು. ರೋಷನ್ ಅಲೀ ಮತ್ತು ಚಾಂದಚ್ಚನವರು ಸಂಜೆ ಐದಕ್ಕೆ ಮುನಾವರ್ ಖಾನರ ಕಾರಿನಲ್ಲೇ...
ನೈಲ್ ನದಿಯ ಮಡಿಲಲ್ಲಿ – ಪಪಿರಸ್ ನ ಹಾಳೆಗಳು ತಯಾರಾಗಿದ್ದು ಹೀಗೆ…
(ಇಲ್ಲಿಯವರೆಗೆ...) ಹಾಪಿ ಇದು ಅರ್ಧಪುರುಷ, ಅರ್ಧ ಮಹಿಳೆಯ ದೇಹಾಕಾರವಿರುವ ದೇವತೆ (ಅರ್ಧನಾರೀಶ್ವರನಂತೆ). ನೈಲ್ ನದಿಯ ನೀರಿನ ದೇವತೆ ಇವನು. ನದಿಯ ನೀರನ್ನು ಮುಂದೆ ನೂಕುವುದರಿಂದ ನೈಲ್ ನಲ್ಲಿ ಪ್ರವಾಹ, ನೆರೆ ಬರುತ್ತದೆ ಎಂಬ ನಂಬಿಕೆ. ನೆರೆ ಎಂದರೆ ಫಲವತ್ತಾದ ಹೂಳು! ಭೂಮಿಯ ಸತ್ವ, ಫಲವತ್ತತೆ ಕಡಿಮೆಯಾದಾಗ ನೆರೆಗಾಗಿ ಈ...
’ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು….’ – ರಂಜಾನ್ ದರ್ಗಾ
’ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಒಂದಾಗಬೇಕು ಏಕೆ?’ - ಎಂದು ರಂಜಾನ್ ದರ್ಗಾ ಬರೆದಿದ್ದಾರೆ. ಈ ವಿಷಯ ಜುಗಾರಿ ಕ್ರಾಸಿನಲ್ಲಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ. ಆದರೆ ದಯವಿಟ್ಟು ಕ್ಷಮಿಸಿ, ಇದು ಚರ್ಚಾ ವೇದಿಕೆ. ವೈಯಕ್ತಿಕ ನಿಂದನೆ ಸಲ್ಲ. ರಂಜಾನ್ ದರ್ಗಾ ಭಾರತವು ಹಿಂದೆಂದಿಗಿಂತಲೂ ಹೆಚ್ಚಿನ ಸಂಕಷ್ಟದ...
’ಕಣ್ಣರೆಪ್ಪೆನೆರಳಲ್ಲಿ ಕಾಪಿಡುವೆ ನೀನು, ಅವರ ಕಾಡಿಗೆಗಣ್ಣ ನಡುವೆ..’
ವಾಸುದೇವ ನಾಡಿಗ್ ಸಖೀ ನೆಲಕೆ ಕಗ್ಗೊಲೆಗಳಾಗುವ ಈ ನೆಲದಲಿ ಎಲ್ಲಿ ಕಾಪಿಡಲಿ ತಿಳಿಸು ನವಿರು ಭಾವವ.. ರಕ್ತ ದಾಹಕೆ ಸುಖಾಸುಮ್ಮನೆ ಎಳೆತರುವ ಮಂದಿಯ ಮಧ್ಯೆ ನೀನು ಅಮೃತ. ಹಂಚಿಕೊಳ್ಳಲು ಎಷ್ಟೊಂದು ಬಗೆಗಳಿವೆ ಹೃದಯದಲಿ ಜೂಜಾಡುವ ಜನ ಪ್ರೀತಿಯನ್ನೂ ಪಣಕಿಟ್ಟಿದ್ದಾರೆ! ಅದೇಕೊ ಕಾಣೆ ಸಂಜೆ ಮೊನ್ನೆ ಮಥುರೆಯದಾರಿಯಲ್ಲಿ ಗೂಡುಸೇರುವ...
ರಂಗಶಂಕರದಲ್ಲಿ ಇಂದು ಪ್ರಸನ್ನರ ’ತದ್ರೂಪಿ’
ಡೈಲಿ ಬುಕ್ : 'ಕಲಾಂ ಮೇಷ್ಟ್ರು'
ಪ್ರೊ . ಎಚ್. ಆರ್. ರಾಮಕೃಷ್ಣ ರಾವ್ ಪುರಾಣ ಪುರುಷರ ಅಥವಾ ನಮ್ಮ ನಡುವೆ ಈಗಿಲ್ಲದ ಮಹಾಪುರುಷರ ಬಗ್ಗೆ ಕತೆ ಹೇಳುವುದು ಸುಲಭ ಮತ್ತು ನಿರಪಾಯಕಾರಿ. ಆದರೆ ನಮ್ಮ ನಡುವೆಯೇ ಇದ್ದು ನಮಗೆಲ್ಲ ಮಾದರಿಯಂತೆ ಬದುಕುತ್ತಿರುವ ಮನುಷ್ಯನೊಬ್ಬನ ಬಗ್ಗೆ ಬರೆಯುವುದು. ಕತ್ತಿಯ ಅಲಗಿನ ಮೇಲೆ ನಡೆಯುವಂತಹ ಸಾಹಸದ ಕೆಲಸ. ಅಂತಹ ಸಾಹಸದ ಕತೆಯನ್ನು...
ಜಿ ಎನ್ ಮೋಹನ್ ಮತ್ತು ಡಿ ಎಸ್ ಚೌಗಲೆ ಅವರಿಗೆ ಸಂಸ ರಂಗ ಪುರಸ್ಕಾರ
ಕಳೆದ ನಾಲ್ಕು ವರ್ಷಗಳಿಂದ ಕನ್ನಡ ರಂಗಭೂಮಿಯಲ್ಲಿ ಹೊಸತಿನ ಹುಡುಕಾಟದಲ್ಲಿ ತೊಡಗಿಸಿಕೊಂಡಿರುವ ಸಂಸ ರಂಗ ಬಳಗವು ಪ್ರತಿ ವರ್ಷ ಸಂಸ ರಂಗಪುರಸ್ಕಾರಗಳನ್ನು ನೀಡುತ್ತಾ ಬರುತ್ತಿದೆ. ಅದರಂತೆ ಈ ವರ್ಷವೂ ಈ ಟಿವಿ ಸುದ್ದಿವಾಹಿನಿಯ ಸಂಪಾದಕರೂ, ಹಿರಿಯ ಪತ್ರಕರ್ತರೂ ಆದ ಜಿ.ಎನ್.ಮೋಹನ್ ಅವರಿಗೆ ‘ಸಂಸ ರಂಗ-ಮಾಧ್ಯಮ ಪುರಸ್ಕಾರ-2014’ ಹಾಗೂ...
ರಾಜೇಂದ್ರ ಪ್ರಸಾದ್ ಅಂಕಣ ’ಬಿಸಿಲೆದೆಯ ಹುಡುಗನ ಪದ’
ಈ ಹುಡುಗನ ಕವನಗಳನ್ನು ಓದಿದಾಗ ಮನಸ್ಸು ಕಲ್ಲೆಸೆದ ಕೊಳ, ಬರೆಯುತ್ತಿದ್ದ ವಿಷಯಗಳನ್ನು ನೋಡಿದಾಗ ಇವನ ಓದಿನ ವಿಸ್ತಾರದ ಅರಿವಾಗುತ್ತಿತ್ತು. ಬರಹಗಳಲ್ಲಿದ್ದ ಪ್ರಾಮಾಣಿಕತೆ ಮನಸ್ಸನ್ನು ತಟ್ಟುತ್ತಿತ್ತು. ಇಂದು ಈ ಹುಡುಗನ ಜನುಮ ದಿನ, ಈ ಮಂಡ್ಯದ ಹುಡುಗನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಾ, ಈ ಅಂಕಣ ನಿಮ್ಮ ಓದಿಗೆ. ಇನ್ನು...
ಅಶೋಕ ಶೆಟ್ಟರ್ ಕಾಲಂ : ಮಧುಮಾಸ ಚಂದ್ರಮಾ, ನೈದಿಲೆಗೆ ಸಂಭ್ರಮಾ..
ಒಮ್ಮೊಮ್ಮೆ ನಾವು ಅತೀ ವೈಚಾರಿಕತೆಗೆ ಬೀಳುತ್ತೇವೆ, ನಮ್ಮ ಹಬ್ಬಗಳ ಸಂಕೇತಗಳಲ್ಲಿ ಕಾರ್ಯಕಾರಣ ಸಂಬಂಧ ಹುಡುಕತೊಡಗುತ್ತೇವೆ, ಅವುಗಳ ಆಚರಣೆಗಳ ವಿವರಗಳನ್ನು ಹಿಂಜಿ ಹಿಸುಕಿ ಅವುಗಳಲ್ಲಿ ನಮ್ಮ ಶ್ರೇಣೀಕೃತ ಸಮಾಜದ ವೈಕಲ್ಯಗಳನ್ನು ಹುಡುಕಿ ನಿಟ್ಟುಸಿರು ಬಿಡುತ್ತೇವೆ. ಹಬ್ಬದ ಆನಂದಕ್ಕೆ ಎರವಾಗುತ್ತೇವೆ, ಆದರೆ ಇಂಥ ವ್ಯಾಪಗಳಿಲ್ಲದ...
’ನಾಶ ಎನ್ನುವುದನ್ನು ನಾಷ ಎಂದು ಬರೆದರೆ ಯಾಕೆ ತಪ್ಪು?!’
ಕನ್ನಡವೆನ್ನಲು ಭಯವೇಕೆ? - ಗುರು ಬಾಳಿಗಾ ನನ್ನ ಮಾತೃಭಾಷೆ ಕೊಂಕಣಿ. ಆದರೂ ನಾನು ಹುಟ್ಟಿದ ಐದನೇ ವರ್ಷದಾರಭ್ಯ ಉಸಿರಾಡಿದ್ದೂ ಕನ್ನಡದಲ್ಲಿಯೇ. ಕೊಂಕಣಿ ಭಾಷೆಯಲ್ಲಿ ಸೀರಿಯಸ್ಸಾದ ಸಾಹಿತ್ಯವಿದೆ ಅನ್ನುವುದು ನನಗೆ ತಿಳಿದದ್ದೂ ಇತ್ತೀಚಿನ ಐದು ವರ್ಷಗಳಲ್ಲಿ. ನಮಗೆ ಭಾಷೆಯೆಂದರೆ ಒಳಗೆಲ್ಲಾ ಹಲವಾರು ಗೋಡೆಗಳು. ಜಾತಿ, ಲಿಪಿ, ಧರ್ಮ,...
ನೈಲ್ ನದಿಯ ಮಡಿಲಲ್ಲಿ : ’ಈಸಿಸ್’ ಮತ್ತು ’ರಾ’
(ಇಲ್ಲಿಯವರೆಗೆ...) [ಕಾರ್ನಾಕ್ ನ ಅಮೂನ್ ದೇವಾಲಯ] ಎಲ್ ಬಹಾರಿ ದೇವಾಲಯ ನೋಡಿ ಕಾರ್ನಾಕ್ ದೇವಾಲಯಕ್ಕೆ ಬಂದೆವು. ಇದು ಮಧ್ಯಯುಗೀನ ಕಾಲದಲ್ಲಿ ಆಳಿದ ದ್ವಿತೀಯ ಅಂಟೆಪ್ (Antef-II) ಕಾಲದ್ದು (ಕ್ರಿ.ಪೂ 2118-2069). ಈ ಬೃಹತ್ ಕಟ್ಟಡದ ಕಾರ್ಯ 11-12ನೇ ರಾಜವಂಶಗಳ ಕಾಲದವರೆಗೂ ಮುಂದುವರೆದಿದೆ. ಇದನ್ನು ಕಟ್ಟಿದ ರಾಜವಂಶಗಳೆಲ್ಲವೂ...
'ತುಂಟ ಚಂದಿರ ಎಂದು ಹುಸಿ ಮುನಿಸಲಿ ಪಿಸುಗುಟ್ಟಿದಾಗ…' – ಸುಚಿತ್ರಾ
ಸುಚಿತ್ರ ಕೆ ಮಂಗಳೂರು ಅದು ಮಂದಿರ... ಇದು ಮಸೀದಿ... ಚರ್ಚುಗಳೆಂಬ ಜಾತಿ-ಧರ್ಮದ ಹಂಗಿಲ್ಲದೆ ಬೆಳಕ ಬೀರುತ ಹಾಲುಗಲ್ಲದ ಮಗುವಿನಂತೆ ಮುಗ್ಧವಾಗಿ ಹುಣ್ಣಿಮೆ ಚಂದಿರ ನಗುತ್ತಿದ್ದಾನೆ... ಜಗವಿಡೀ ಬೆಳಗಿತು... ಕಗ್ಗತ್ತಲ್ಲಲ್ಲೂ ಬೆಳಕಿನ ಆಹ್ವಾನ.. ಅಮ್ಮ ಕಂದಗೆ ತುತ್ತನಿಡುತ್ತಿದ್ದಾಳೆ ಬೆಳದಿಂಗಳ ರಾತ್ರಿ ಚಂದಿರನ ತೋರಿ...
ಡೈಲಿ ಬುಕ್ : ಬಿಳುಮನೆ ರಾಮದಾಸ್ ಅವರ ’ಅನಾವರಣ’
ಬಿಳುಮನೆ ರಾಮದಾಸ್ 'ಅನಾವರಣ' ಸರ್ಕಾರಿ ಇಲಾಖೆಯೊಂದರ ಕಾರ್ಯ ವೈಖರಿ ಕುರಿತು ಬರೆದ ಕಾದಂಬರಿ. ಮೇಲುನೋಟಕ್ಕೆ ಇದು ವಾಣಿಜ್ಯ ತೆರಿಗೆ ಇಲಾಖೆಯ ಕತೆಯಾದರೂ ಎಲ್ಲಾ ಸರ್ಕಾರಿ ಇಲಾಖೆಗಳ ಕತೆ ಕೂಡ ಆಗಿದೆ. ಇಲ್ಲಿ ಭ್ರಷ್ಟಾಚಾರ ಒಂದೇ ಅಲ್ಲ; ವ್ಯಭಿಚಾರ, ಹಿರಿಯ ಅಧಿಕಾರಿಗಳಾಗಲು ಕಿರಿಯ ಅಧಿಕಾರಿಗಳು ನಡೆಸುವ ಷಡ್ಯಂತ್ರ, ಮೂಗರ್ಜಿ ಬರೆದು...
ರಂಗಶಂಕರದಲ್ಲಿ ಕೀಚಕನ Love Story
ಧಾರವಾಡದಲ್ಲಿ ಪಾಪು ಕಥಾ ಪುರಸ್ಕಾರ
ಧಾರವಾಡದಲ್ಲಿ ದಿನಾಂಕ 23-3-2014 ಭಾನುವಾರ ಬೆಳಗ್ಗೆ 10:30 ಕ್ಕೆ ಶ್ರೀ ರಾ ಹ ದೇಶಪಾಂಡೆ ಸಭಾಭವನ ಕ ವಿ ವ ಸಂಘದೊಳಗೆ ಡಾ ಪಾಪು ಕಥಾ ಪುರಸ್ಕಾರ 2013 ಮತ್ತು ಡಿಸೋಜ- ಎಚ್ಚೆಸ್ವಿ ಪುಟಾಣಿ ಸಾಹಿತ್ಯ ಪುರಸ್ಕಾರ 2013 ಹಾಗೂ 'ಭಾರತ ಭಾಗ್ಯವಿಧಾತ' ಪುಸ್ತಕ ಬಿಡುಗಡೆ ಕಾರ್ಯಕ್ರಮವಿದೆ. ಈ ಘಳಿಗೆಯ ಹೆಚ್ಚಿನ ಮಾಹಿತಿ ಮತ್ತು ಆತ್ಮೀಯ...
'ದಯೆಯಿಟ್ಟು ಕ್ಷಮಿಸಿ ಬಿಡಿ ಈ ಅವಿವೇಕಿ ಹೂಗಳನ್ನು…’ ರೂಪಾ ಹಾಸನ ಕವನ
ಅವಿವೇಕಿ ಹೂಗಳು ರೂಪ ಹಾಸನ ಅರಳಲು ಕಾದಿರುವ ನಮ್ಮ ತೋಟದ ಮೊಗ್ಗುಗಳ ದಳವರಳಬಾರದೆಂದು ಊರೊಡೆಯರು ಆಗ್ರಹಿಸುತ್ತಲೇ ಇದ್ದಾರೆ. ಜುಜುಬಿ ಹೂಗಳಿಗೇನು? ಅರಳುತ್ತಲೇ ಇರುತ್ತವೆ ಹೊತ್ತುಗೊತ್ತಿಲ್ಲದೇ. ನಮಗೋ ಒಡೆಯನೇ ದೇವರು! 'ರೆಕ್ಕೆ ಚಾಚಲು ಕಾತರಿಸಿರುವ ಮೊಗ್ಗುಗಳೆ, ದಮ್ಮಯ್ಯ ಕೈ ಮುಗಿದು ಬೇಡುತ್ತೇವೆ ದಳಗಳ...
ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ಚಿಟ್ಟಿಯ ಸೈಕಲ್ ಸವಾರಿ
(ಇಲ್ಲಿಯವರೆಗೆ) ಮನೆಯಲ್ಲಿ ಯಾರಿಗೂ ಮಾತಾಡುವುದು ಬೇಕಿರಲಿಲ್ಲ. ಅವಮಾನವೋ, ಸಿಟ್ಟೋ, ನಿರಾಸೆಯೋ ಒಂದೂ ಅರ್ಥವಾಗದ ಸ್ಥಿತಿ. ಚಿಟ್ಟಿ ಎಲ್ಲದಕ್ಕೂ ಕಾರಣವಾದರೂ -ಏನೂ ಆಗಿಲ್ಲ ಎನ್ನುವ ಹಾಗೇ ಇದ್ದುಬಿಟ್ಟಿದ್ದಳು. ಅವಳ ಒಳಗೆ ಯಾವುದೋ ದೃಢತೆ ಮನೆಮಾಡಿತ್ತು. ಮಾತಿಗೂ ಮೀರಿದ ವಿಶ್ವಾಸ ಕಣ್ಣುಗಳಲ್ಲಿತ್ತು. ತಾನು ಅಂದುಕೊಂಡಿದ್ದನ್ನು...
ಪರೀಕ್ಷೆ ಜ್ವರ ಮತ್ತು ಜಾತ್ರೆಗಳು – ಶ್ರೀದೇವಿ ಕೆರೆಮನೆ
ಶ್ರೀದೇವಿ ಕೆರೆಮನೆ ಪರೀಕ್ಷಾ ಸಮಯ ಎಂದರೆ ಅದು ನಿಜಕ್ಕೂ ವಿದ್ಯಾರ್ಥಿಗಳು ಜಾಗರೂಕರಾಗಿರ ಬೇಕಾದ ಸಮಯ. ತಮ್ಮ ಆರೋಗ್ಯವನ್ನು ತಾವು ಕಾಪಾಡಿಕೊಳ್ಳಲೇ ಬೇಕಾದಂತಹ ಸಮಯ. ಪರೀಕ್ಷಾ ಭಯ ಮಕ್ಕಳನ್ನು ಕಾಡದೇ ಬಿಟ್ಟದ್ದೆ ಇಲ್ಲ. ಪರೀಕ್ಷಾ ಭಯದಿಂದ ಮಕ್ಕಳು ಇಲ್ಲ ಸಲ್ಲದ ನೆಪ ಹೇಳಿ ಅನಾರೋಗ್ಯವನ್ನು ಸೃಷ್ಟಿಸಿಕೊಂಡಿದ್ದೂ ಇರುವಂತೆ,...
ನಮ್ಮೊಳಗೊಂದು ಕಾಡು ಮೂಡಬೇಕು…
ಏಕಾಂತದಲ್ಲಿ ನಮ್ಮೊಳಗಿನ ಗದ್ದಲ ಆಚೆ ಬರುತ್ತೆ ರಘುನಂದನ ಹೆಗಡೆ, ಗಿರಣೀಮನೆ ದೇವರನ್ನ ಒಲಿಸಿಕೊಳ್ಳಲು ಪೂಜೆ, ಪುನಸ್ಕಾರ, ವೃತ, ಉಪವಾಸ ಮಾಡಿದರಷ್ಟೆ ಸಾಕು ಎಂದು ಯಾರು ಹೇಳಿ ಬಿಟ್ಟಿದ್ದಾರೋ. ಒಂದೊಂದು ಬೇಡಿಕೆಗೆ ಒಬ್ಬೊಬ್ಬ ದೇವರು. ಶಕ್ತಿಗೆ, ಸಂಪತ್ತಿಗೆ, ವಿದ್ಯೆಗೆ, ಪಾಪ ಪರಿಹಾರಕ್ಕೆ, ಹರಕೆಗೆ ಎಲ್ಲದಕ್ಕೂ ದೇವರು. ಎಷ್ಟಾದರೂ...
ನೈಲ್ ನದಿಯ ಮಡಿಲಲ್ಲಿ : ಹಾಸಿಗೆ ಮೇಲೆರಡು ಬಾತುಕೋಳಿಗಳು!
(ಇಲ್ಲಿಯವರೆಗೆ...) ಬೆಳಗಾದೊಡನೆ ದೋಣಿ ಚಲಿಸತೊಡಗಿತು. ಬೆಳ್ಳಿಗೆ 5.30ಕ್ಕೆ ವೇಕ್ ಆಪ್ ಕಾಲ್. 6.30ಕ್ಕೆ ಟಿಫಿನ್. ಸಾಮಾನ್ಯವಾಗಿ, ಮಾಡುವ ಊಟ ಟಿಫಿನ್ ಗಳೆಲ್ಲ ಅದೇ ಡೈನಿಂಗ್ ಹಾಲ್ಲ್ಲೇ ನಡೆಯುತ್ತಿದ್ದವು. ಅಲ್ಲಿ ಬಳಸುವ ಚಮಚ, ಪೋರ್ಕ್ಗಳೆಲ್ಲ ಭಾರಿ ಭಾರ. ಎರಡು ಮೂರು ಸೇರಿಸಿ ಹಿಡಿದರೆ ಕಾಲು ಕೆಜಿಯಷ್ಟು ಭಾರ ಇರಬಹುದೇನೋ?...
