ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ರಂಗಶಂಕರದಲ್ಲಿ ’ಸಂಸಾರದಲ್ಲಿ ಸನಿದಪ’
ಮೈಸೂರಿನ ಜಿ.ಪಿ.ಐ.ಇ.ಆರ್ ತಂಡವು ಏಪ್ರಿಲ್ ತಿಂಗಳ 23 ನೇ ಬುಧವಾರ 7.30 ರಂಗಶಂಕರದಲ್ಲಿ ಕೆ ವಿ ಅಕ್ಷರ ಅವರ ಕನ್ನಡದಲ್ಲಿ ರೂಪಾಂತರಿಸಿದ(ಮೂಲ: ಇಟಲಿಯ ನಾಟಕಕಾರ ದಾರಿಯ ಫೋ ನ ದಿ ವರ್ಚುಯಸ್ ಬರ್ಗಲರ್) ಸಂಸಾರದಲ್ಲಿ ಸನಿದಪ ನಾಟಕ ವನ್ನು ಮೈಮ್ ರಮೇಶ್ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಅಭಿನಯಿಸಲಿದೆ...
ಸಂಪು ಕಾಲಂ : ’ಚೂಟಿ’ ಒಂದು ಅಮೂರ್ತ ಪ್ರೇಮದ ನಿಷಾನಿ
ಪಶು ಚಿಕಿತ್ಸಾಲಯದ ಪುಟ್ಟ ಹಾಸೊಂದರ ಮೇಲೆ ಸದ್ದಿಲ್ಲದೆ, ನಿಸ್ತೇಜವಾಗಿ, ನೋವುಂಡು ಮಲಗಿದ ಆ ಸಣ್ಣ ಜೀವಿಯನ್ನು ಕಂಡಾಕ್ಷಣ, ಸಮಾಜವಿಡೀ ಜಾತಿ-ಮತ, ವೋಟು-ಒಕ್ಕಣೆ, ರಾಜಕೀಯ-ಅರಾಜಕತೆ, ಸತ್ಯ-ಅಸತ್ಯ ಎಂಬ ತರ್ಕಗಳಲ್ಲಿ ಮುಳುಗಿದ್ದಾಗ, ಇವೆಲ್ಲದರಿಂದ ಹೊರತಾದ, ಇವೆಲ್ಲಕ್ಕೂ ಮಿಗಿಲಾದ, ಎಷ್ಟು ಕೆದಕಿದರೂ ಬರಿಯ ಒಳಿತೇ ಕಾಣುವ...
ಮಾರ್ಕ್ವೆಜ಼್ ನೆನಪಿನಲ್ಲಿ ರೋಸಿ ಡಿಸೋಜ಼ ಬರೆದ ಒಂದು ಕವಿತೆ
ರೋಸಿ ಡಿಸೋಜ (ಮಾರ್ಕ್ವೆಜ಼್ ನ 'Of Love and other Demons' ಓದುವಾಗ ಬರೆದದ್ದು) ದೆಲೌರಾನ ಕನಸು ಮಂಜು ಮುಸುಕಿದ ಬಯಲು, ವಿಸ್ತಾರಕ್ಕೆ ಗಾಜು ಕಿಟಕಿಯ ತಿಟ್ಟು, ಸಿಯಾರ್ವ ಮಾರಿಯಾ ಉಡಿಯ ತುಂಬಾ ಎಂದೂ ಖಾಲಿಯಾಗದ ದ್ರಾಕ್ಷಿ ಗೊಂಚಲು. ತಣ್ಣನೆ ಬೆರಳುಗಳಿಂದ ಮಿಡಿಯುತ್ತಾ ಕಿತ್ತು ಬಾಯಿಗಿಟ್ಟಂತೆಲ್ಲಾ ಅದೇ ತೊಟ್ಟಿನಲ್ಲಿ...
ವಿಜಯನಗರ ’ಬಿಂಬ’ ಚಿಣ್ಣರ ಚಾವಡಿ ೨೦೧೪ ಫೋಟೋ ಆಲ್ಬಂ
ಚಿಣ್ಣರ ಚಾವಡಿ ೨೦೧೪ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದವರು ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ. ಕಾರ್ಯಕ್ರಮದಲ್ಲಿ ಮಕ್ಕಳ ಕೂಟದ ಗೋಪಾಲ್ ಅಕ್ನೂರ್, ಚಿತ್ರಕೂಟ ಶಾಲೆಯ ಚೈತನ್ಯ ಹಾಗು ’ಅವಧಿ’ಯ ಉಪಸಂಪಾದಕಿ ಸಂಧ್ಯಾರಾಣಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಾಸ್ಟರ್ ಹಿರಣ್ಣಯ್ಯನವರಿಗೆ ರಂಗಸನ್ಮಾನ ಮಾಡಿದಾಗ, ಅವರದೇ...
’ಪ್ರಾದೇಶಿಕ ಪಕ್ಷಗಳು ಈ ಸಮಸ್ಯೆಗಳನ್ನು ಬಗೆಹರಿಸಬಹುದೆ?’ ಜಿ ಪಿ ಬಸವರಾಜು ಕೇಳ್ತಾರೆ
ಜಿ ಪಿ ಬಸವರಾಜು ನೂರಕ್ಕೆ ನೂರರಷ್ಟು ಅಕ್ಷರವಂತರನ್ನು ಪಡೆದ ಕೇರಳದಲ್ಲಿ ಯಾವುದೇ ಚುನಾವಣೆ ನಡೆದರೂ ಮತದಾನದ ಪ್ರಮಾಣ ಹೆಚ್ಚಾಗಿಯೇ ಇರುತ್ತದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಡೆದಿರುವ ಮತದಾನದ ಪ್ರಮಾಣ ಶೇ 74. ಕೇರಳದ ಉತ್ತರ ತುದಿಯಲ್ಲಿರುವ ಕಾಸರಗೋಡು ಜಿಲ್ಲೆಯಲ್ಲಿ ಈ ಪ್ರಮಾಣ ಇನ್ನೂ ಹೆಚ್ಚು. ಅಲ್ಲಿ ಶೇ 78 ರಷ್ಟು ಮತದಾನ...
ಜಯಶ್ರೀ ಬರೆದಿರುವ ನ್ಯಾನೋ ಕತೆಗಳು
ಜಯಶ್ರೀ ಬಿ ಕವಿತೆ ಈ ಕವಿತೆ ಯಾರ ಬಗ್ಗೆ? ಆ ಹಿರಿಯರು ಕೇಳಿದರು. ಕವಯಿತ್ರಿಗೆ ಗಲಿಬಿಲಿ. ಆಕೆ ಮುಜುಗರದಿಂದ, ಕಳವಳದಿಂದ ಹೇಳಿದಳು, ಯಾರ ಬಗ್ಗೆಯೂ ಇರಬಹುದು ಅಥವಾ ಎಲ್ಲರ ಬಗ್ಗೆಯೂ ಇರಬಹುದು. ಅವರು ಆಕೆಯನ್ನೇ ಚೂಪಾಗಿ ನೋಡುತ್ತ ಹೇಳಿದರು, ಹಾಗಲ್ಲ, ನಿಖರವಾಗಿ ಯಾರ ಬಗ್ಗೆ? ಕವಯಿತ್ರಿ ಯೋಚಿಸಿದಳು. ಹೌದಲ್ಲ ಇದು ಯಾರ ಬಗ್ಗೆ?...
ಡೈಲಿ ಬುಕ್ : ಎ ಕೆ ರಾಮಾನುಜಂ ಸಂಗ್ರಹಿಸಿದ ’ಭಾರತೀಯ ಜನಪದ ಕತೆಗಳು’
ಇಪ್ಪತ್ತೆರಡು ಭಾಷೆಗಳಿಂದ ಆಯ್ದ ಬಾಯ್ಮಾತಿನ ಕತೆಗಳು ಸಂಗ್ರಹ ಮತ್ತು ಸಂಪಾದನೆ ಎ ಕೆ ರಾಮಾನುಜನ್ ಅನುವಾದ ಮಹಾಬಲೇಶ್ವರ ರಾವ್ ಶತಶತಮಾನಗಳಿಂದ ಭಾರತದ ಜನವರ್ಗದ ಕಲ್ಪನಾ ಶಕ್ತಿಯನ್ನು ಪ್ರಚೋದಿಸಿದ ಬಾಯ್ಮಾತಿನ ಕತೆಗಳ ಸಂಕಲನವೇ ಭಾರತೀಯ ಜನಪದ ಕತೆಗಳು. ಈ ಉಪಖಂಡದ ಇಪ್ಪತ್ತೆರಡು ಭಾಷೆಗಳಿಂದ ಆಯ್ದ ಕತೆಗಳನ್ನು ವಿವಿಧ ಮೂಲಗಳಿಂದ...
ಯುವಶ್ರೀ ತಂಡದಿಂದ ’ಹರಕೆಯ ಕುರಿ’
ರಂಗಶಂಕರದಲ್ಲಿ ಇದೇ ತಿಂಗಳ ೨೪ ರಂದು ಸಂಜೆ ೭.೩೦ ಗೆ ಯುವಶ್ರೀ ತಂಡದಿಂಡ ನಾಟಕ ’ಹರಕೆಯ ಕುರಿ’. ನಾಟಕದ ಕೆಲವು ದೃಶ್ಯಗಳು ಇಲ್ಲಿವೆ : ನಿರ್ದೇಶನ : ಪ್ರದೀಪ್ ಎನ್ ಆರ್ ...
ಕೃಷಿ ತರಬೇತಿಗೆ ಅರ್ಜಿ ಆಹ್ವಾನ
ಸಂವಾದ ಬದುಕು ಕಮ್ಯುನಿಟಿ ಕಾಲೇಜು 2014-15 ಸಾಲಿನ 'ಯುವಜನರ ಸ್ವಾವಲಂಬಿ ಬದುಕಿಗಾಗಿ ಸುಸ್ಥಿರ ಕೃಷಿ' ತರಬೇತಿಯನ್ನು ಪ್ರಾರಂಭಿಸುತ್ತಿದೆ ಆಸಕ್ತರು ಅರ್ಜಿಯನ್ನು ಕೂಡಲೆ...
'ಅವಧಿ’ ಅಂಗಳದಲ್ಲಿ ಅನಲೆ : ನಿನ್ನ ಮಗಳಲ್ತು, ಇವಳ್ ಎನ್ನ ಮಗಳ್!
(ಇಲ್ಲಿಯವರೆಗೆ...) ರಾವಣನನ್ನು ಸಂತೈಸುವ, ಸೀತೆಯನ್ನು ಸಂತೈಸುವ, ಕಾರ್ಯಸಿದ್ಧಿಗಾಗಿ ಅಪ್ಪನ ಬಳಿಗೆ ಚಾರರನ್ನಟ್ಟುವ ಚತುರೆಯಾಗಿ ಅನಲೆ ಕಾರ್ಯಶೀಲಳಾಗಿದ್ದಾಳೆ. ಇಂದ್ರಜಿತುವಿನ ಮರಣದಿಂದ ರಾವಣನಿಗೆ ಯುದ್ಧದಲ್ಲಿ ಹಿನ್ನೆಡೆಯಾಗಿದೆ. ಮಂಡೋದರಿಯ ಮಾತಿಗೆ, ಬೇಡಿಕೆಗೆ ಮಣಿದುಕೊಲ್ಲೆನವಳಂ(ಸೀತೆಯನ್ನು) ಎಂದು ಮಾತು ಕೊಟ್ಟಿದ್ದಾನೆ....
ವಿವಾದಾತ್ಮಕ ನಾಟಕ `ಸಖಾರಾಮ್ ಬೈಂಡರ್'
ವೈ ಕೆ ಸಂಧ್ಯಾಶರ್ಮ ಎಪ್ಪತ್ತರ ದಶಕದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿತವಾಗಿದ್ದ ನಾಟಕ `ಸಖಾರಾಮ್ ಬೈಂಡರ್' ಆಗಲೇ ಸಂಪ್ರದಾಯಸ್ಥರ ಹುಬ್ಬೇರುವಂತೆ ಮಾಡಿತ್ತು. ಅನಂತರ ಅದನ್ನು ಕನ್ನಡಕ್ಕೆ ತರುವ ಪ್ರಯತ್ನ ಹುಬ್ಬಳ್ಳಿಯಲ್ಲಿ ನಡೆದು ಅದು ವಿವಾದಕ್ಕೀಡಾಗಿ ಅರ್ಧದಲ್ಲೇ ನಿಂತುಹೋದ ಬಗ್ಗೆ ಅಸ್ಪಷ್ಟ ನೆನಪು. 1972 ರಲ್ಲಿ...
'ಸಂವಿಧಾನ ಅಪಾಯದಲ್ಲಿ, ಅಂಬೇಡ್ಕರ್ ಪಲ್ಲಕ್ಕಿಯಲ್ಲಿ' – ನಾ ದಿವಾಕರ್
ನಾ ದಿವಾಕರ ಡಾ. ಬಿ ಆರ್ ಅಂಬೇಡ್ಕರ್ ಭಾರತದ ಆಧುನಿಕ ಸಂವಿಧಾನ ಶಿಲ್ಪಿ. ಸಂವಿಧಾನದ ರಚನೆಯಲ್ಲಿ ಅಂಬೇಡ್ಕರ್ ಅವರ ಪೂರ್ಣ ಪ್ರಮಾಣದ ಪಾತ್ರವೇನು ಎಂದು ಶುಷ್ಕ ಚರ್ಚೆ ನಡೆಸುವುದಕ್ಕಿಂತಲೂ ತಮ್ಮ ಸಾಮಾಜಿಕ ಕಳಕಳಿ, ಜಾತಿ ವ್ಯವಸ್ಥೆಯನ್ನು ತೊಡೆದುಹಾಕುವ ತಮ್ಮ ದೃಢ ಸಂಕಲ್ಪ, ದೇಶದ ಶೋಷಿತ ಸಮುದಾಯಗಳಿಗೆ ಸೂಕ್ತ ಸಾಮಾಜಿಕ ನ್ಯಾಯ ಮತ್ತು...
Daily Book : Modern Astronomy
Pioneers of Modern Astronomy c. Sivaram Kenath Arun Kiren O. V C. Sivaram was a senior professor at Indian Institute of Astrophysics, Bangalore. He is the recipient of prestigious international awards like Martin Foster Gold Medal and the Ettore Majorana fellowship....
’ನಯನ’ದಲ್ಲಿ ಇಂದು ಸಂಜೆ
’ಮಾರ್ಕ್ವೆಜ಼್ ಸಾವು ನನಗೊಂದು ವೈಯಕ್ತಿಕ ನೋವು’ – ಜಿ ಎನ್ ನಾಗರಾಜ್
ಜಿ ಎನ್ ನಾಗರಾಜ್ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್-ವಿಶ್ವದ ಅಪ್ರತಿಮ ಕಾದಂಬರಿಕಾರರಲ್ಲೊಬ್ಬ ತಮ್ಮ 87ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ .ಅವರ ಕಾದಂಬರಿಗಳು ಕುವೆಂಪುರವರ ಕಾದಂಬರಿಗಳು , ದೇವನೂರವರ ಕಾದಂಬರಿಗಳಂತೆಯೇ ನನಗೆ ಸಮಾಜವನ್ನು , ನನ್ನನ್ನು ಅರ್ಥ ಮಾಡಿಕೊಳ್ಳಲು ನೀಡಿದ ನೆರವನ್ನು, ಖುಷಿಯನ್ನು ಬಣ್ಣಿಸಲಾಗದು. ತಮ್ಮ...
ಬಡವನಾದರೆ ಏನು ಪ್ರಿಯೆ, ಕೈ ತುತ್ತು ತಿನಿಸುವೆ…
http://youtu.be/mmZ719O1b2E
ಹಾಲು ಕೊಡುವ ಎಮ್ಮೆಗೆ ದೆವ್ವದ ಸ್ಥಾನ ಕಲ್ಪಿಸುತ್ತೇವೆ..
ನಮ್ಮೊಳಗಿನ ವಿಲಕ್ಷಣ ಭಯ... ವೈ ಬಿ ಹಾಲಬಾವಿ ನಮ್ಮೊಂದಿಗೆ ವಾಸಿಸುವ ಎಲ್ಲವೂ ನಮ್ಮೊಳಗಿವೆ ಒಂದೊಂದು ಆಕಾರ ಹೆಸರಿಸುತ್ತೇವೆ ಒಂದೊಂದಕ್ಕೆ ಅತ್ತಿತ್ತ ಸುಳಿದಾಡಿದರೆ ಬೆಕ್ಕಿಗೆ ಅಪಶಕುನದ ಪಟ್ಟ ಕಟ್ಟುತ್ತೇವೆ ನಮ್ಮೊಳಗಿನ ಸಂಶಯಕ್ಕೆ ಮೂರ್ತ ರೂಪ ಕೊಟ್ಟು... ಮುಕ್ಕೋಟಿ ದೇವತೆಗಳನ್ನು ಹಸುವಿನಲ್ಲಿ ಅವತರಿಸಿ ಪೂಜಿಸುವ...
'ಮಾರ್ಕ್ವೆಜ಼್ ನೆನಪುಗಳ ಪೇರಳೆ ಪರಿಮಳ' – ಉಮಾ ರಾವ್ ಬರೆದಿದ್ದಾರೆ
ಹೆಣ್ಣು, ಲೈಂಗಿಕತೆ, ದಾಂಪತ್ಯ ನಿಷ್ಠೆ ಉಮಾ ರಾವ್ ತನ್ನ ಬರವಣಿಗೆಯ ಬಗ್ಗೆ, ಬದುಕಿನ ಬಗ್ಗೆ, ಹೆಚ್ಚಾಗಿ ಮಾತನಾಡಲು ಇಷ್ಟಪಡದವ ಈ ಶತಮಾನದ ಅದ್ಭುತ ಕಾದಂಬರಿಕಾರ, ನೊಬೆಲ್ ಬಹುಮಾನ ವಿಜೇತ ಗಾಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ಼್. ಆದರೆ, ಅಪರೂಪದ ಈ ಸಂದರ್ಶನದಲ್ಲಿ ಮಾರ್ಕ್ವೆಜ಼್ ತನ್ನ ಆತ್ಮೀಯ ಗೆಳೆಯ, ಪತ್ರಕರ್ತ ಹಾಗೂ ಕಾದಂಬರಿಕಾರ,...
’ಅವಧಿ’ ಅಂಗಳದಲ್ಲಿ ಅನಲೆ : ರಾಮ-ರಾವಣರ ಯುದ್ಧ ಅವರಿಬ್ಬರ ನಡುವೆ ಮಾತ್ರವೆ ನಡೆಯಲಿಲ್ಲ
(ಇಲ್ಲಿಯವರೆಗೆ...) ಆದುದಾದುದು, ದೇವಿ, ಆದುದಕೆ ನೂರ್ಮಡಿಯ ಘೋರಮಂ ಇನ್ನು ಆಗಲುರ್ಕುಮ್. ಅದನ್, ನೀನಿಚ್ಛಿಸಲ್, ನಿಲಿಸಲ್ ಅಸದಳಮಲ್ತು. ಕೇಳ್, ತಾಯಿ, ಮುನ್ನಡೆದುದು ಪೇಳ್ವೆನ್ ಅರಮನೆಯ ಕಥನಮಂ. ತಮ್ಮನ ಕಳೇಬರಕೆ ಕೊನೆಯ ಸಂಸ್ಕಾರಮಂ ಕಡಲ ತೀರದೊಳೆಸಗಿ, ಭಸ್ಮಾವಶೇಷಮಂ ರತ್ನಪಾತ್ರೆಯೊಳಿಟ್ಟು ತಂದು ಗೋಳಿಡುತಿರ್ದ ದೊಡ್ಡಯ್ಯನಂ ಕಂಡು...
ಡೈಲಿ ಬುಕ್ : ಕೆ ವಿ ಸುಬ್ಬಣ್ಣ ಅನುವಾದಿಸಿದ ’ಬೈಸಿಕಲ್ ಥೀವ್ಸ್’
ವಿಟ್ಟೊರಿಯೋ ಡಿ ಸಿಕಾ ನಿರ್ಮಿಸಿದ ಪ್ರಸಿದ್ಧ ಇಟಾಲಿಯನ್ ಚಿತ್ರದ ಚಿತ್ರಕಥೆ ಕೆ ವಿ ಸುಬ್ಬಣ್ಣ ವಿಟ್ಟೊರಿಯೋ ಡಿ ಸಿಕಾ ನಿರ್ಮಿಸಿದ (೧೯೦೨- ೧೯೭೫) 'ಬೈಸಿಕಲ್ ಥೀವ್ಸ್' ಜಗತ್ತಿನ ಚಲನಚಿತ್ರದ ಇತಿಹಾಸಕ್ಕೇ ಒಂದು ಚಿಕ್ಕ ತಿರುವು ತಂದುಕೊಟ್ಟಿತು. 'ಬೈಸಿಕಲ್ ಥೀವ್ಸ್' ನಲ್ಲಿ ಹಸಿ ವಾಸ್ತವತೆಯಿದ್ದರೂ ಈ ಚಿತ್ರ ವಾಸ್ತವದ ಚಿತ್ರ...
ಶುರುವಾಗಲಿದೆ ಸಿಜಿಕೆ ಹುಡುಕಾಟ
