ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬಳ್ಳಾರಿಯಲ್ಲಿ ಜಾನಪದ ರಂಗೋತ್ಸವ
ಕುಸುಮಬಾಲೆ ಕಾಲಂ, ’ಯ್ಯೋಳ್ತೀನ್ ಕೇಳಿ’ : ಮಣ್ಣು ಮಾಯೆಯೆಂಬರು, ಮಣ್ಣು ಮಾಯೆಯಲ್ಲ…
ಅಪ್ಪ ಹಾರ್ಟ್ ಆಪರೇಷನ್ ಆಗಿ ಮೈಸೂರಿನ ಮಾವನ ಮನೇಲಿ ಉಳಿದಿದ್ದರು. ನಾನೂ ಅಲ್ಲಿಂದಲೇ ನಮ್ಮ ಧಾರಾವಾಹಿ ಬರೆವ ಕಾಯಕಮಾಡುತ್ತಿದ್ದೆ. ಒಂದಿನ “ಅಕ್ಕಾ.. ಅಕ್ಕಾ..” ಯಾರೋ ಕೂಗಿ ಧನಿ. ಅಮ್ಮ ಇಣುಕಿ ನೋಡಿದರು. “ತರಕಾರಿ ಮೂಟ ಎಲ್ ಮಡುಗ್ಲಿ? “ ಇಲ್ಲೆ ಇಡಪ್ಪ” ಬತ್ತೀನಿ ಅಕ್ಕ, ಮಹೇಶಣ್ಣ ಬಂದ್ರ ಯೋಳ್ಬುಡಿ” ಅಂತ ಹೊರಟ, “ಬಪ್ಪ.ಟೀ ಕುಡಿ”...
'ಬಯಸಿದ್ದು ದಕ್ಕಲೇ ಬೇಕೆಂಬ ನಿಯಮವೆಲ್ಲಿದೆ?' – ಶ್ರೀದೇವಿ ಕೆರೆಮನೆ
ಶ್ರೀದೇವಿ ಕೆರೆಮನೆ ನಾನು ಹೈಸ್ಕೂಲ್ ಹೋಗುವ ಸಮಯ. ಅಣ್ಣ ಕಾಲೇಜಿನಲ್ಲಿದ್ದ. ಒಂದು ದಿನ ನಡುಗುತ್ತ ಬಂದವನೇ ತನ್ನ ಸ್ನೇಹಿತನೊಬ್ಬ ಕಾಲೇಜಿನ ಹುಡುಗಿಗೆ ಚಾಕುವಿನಿಂದ ಇರಿದ ಸುದ್ದಿ ಹೇಳಿದ್ದ. ನನಗೋ ಅಚ್ಚರಿ. ಆತ ಯಾಕೆ ಯಾವುದೋ ಹುಡುಗಿಗೆ ಚೂರಿ ಹಾಕಬೇಕು? ಕೇಳಿದರೆ ಆ ಸ್ನೇಹಿತ ಅವಳನ್ನು ಪ್ರೀತಿಸುತ್ತಿದ್ದನಂತೆ. ಆದರೆ ಆಕೆ ಆ...
'ರೇಷಿಮೆ ಮತ್ತು ಕಾಲ್ಗೆಜ್ಜೆ' – ಮಾಲತಿ ಭಟ್ ಕವನ
ಮಾಲತಿ ಭಟ್ ಹಿಂದೊಮ್ಮೆ ನನ್ನಪ್ಪ ಹೊಸ ಕೃಷಿ ಮಾಡುವ ಕನಸ ಕಂಡ. ಎಲ್ಲೆಲ್ಲೋ ಅಡ್ಡಾಡಿ ಹುಡುಕಾಡಿ ಹಿಪ್ಪ ನೇರಳೆ ಗಿಡ ತಂದು ಹಚ್ಚಿಯೇ ಬಿಟ್ಟ ಸಾಲುಗಟ್ಟಿ..! ರೇಷಿಮೆಯ ಮೊಟ್ಟೆಗಾಗಿ ಇಲಾಖೆಯೊಂದಿಗೇ ಖಾಸಾ ಗೆಳೆತನ; ಬಿಳಿ ಹಾಳೆಗೆ ಅಂಟಿಕೊಂಡಿದ್ದ ತತ್ತಿಗಳೂ ಅಟ್ಟಕ್ಕೇರಿ ಬಿಟ್ಟವು ಅಪ್ಪನೊಡನೆಯೇ ಜೋಪಾನವಾಗಿ..!...
’ಜ್ಯಾತಿ ಕುಲಿಮ್ಯಾಗ ಬೆಂದ ಪ್ರೀತಿ’
ತಿರುಪತಿ ಭಂಗಿ ಆಂದ ಊರ ಮಂದಿ ಬಾಯಾಗ ಕುರಬರ ಭೀಮನ ಮಾತೋ ಮಾತ. ಅಗಸಿ ಕಟ್ಟಿಗಿ ಕುಂತ ಗಣೇಶ ಬೀಡಿ ಸೇದಕೊಂಂತ ಕುಂತಿದ ದೇಸಾಯಾರ ರುದ್ರಪ್ಪಗೌಡ್ರು ಬಾಳ ಬಿರಸಾಗಿ ಮಾತಾಡ್ತಿದ್ರು, ರುದ್ರಪ್ಪಗೌಡ್ರ ಸುತ್ತ ಮುತ್ತ ಮಂದಿ ಕೈ ಕಟ್ಟಿ ನಿಂತ್ಕೋಂದಿದ್ರು.. ಅಶ್ವಮೇದ ಯಾಗಾ ಮಾಡಾಕ ಹೋದ ರಾಜಾ ಸೋತ ಹಣಿಗೆ ಕೈ ಹಚ್ಚಗೊಂಡ ಕುಂತಾಂಗ ಕೆಲವು...
ಎಂ ಎಸ್ ರುದ್ರೇಶ್ವರ ಸ್ವಾಮಿ ಹಂಚಿಕೊಂಡ ಒಂದು ಕವಿತೆ
ಎಂ ಎಸ್ ರುದ್ರೇಶ್ವರ ಸ್ವಾಮಿ ಕಳೆದ ವಾರ ಡಾ. ನಾ. ಮೊಗಸಾಲೆ ಅವರ ಹಸ್ತಾಕ್ಷರಗಳಿರುವ ಎರಡು ಗೌರವ ಪ್ರತಿಗಳು ಅಂಚೆ ಮೂಲಕ ತಲುಪಿದವು. ಪ್ರೀತಿಯಿಂದ ಕಳುಹಿಸಿರುವ ಈ ಪುಸ್ತಕಗಳನ್ನು ಓದಬೇಕು. ‘ಪೂರ್ವೋತ್ತರ’ ದಿಂದ ಈ ಕವನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ: ಮಳೆಗಾಲ ಮತ್ತು ಬೇಸಗೆಕಾಲ ಮಳೆಗಾಲ ಅಂದರೆ...
ಹುಚ್ಚರಾಯಪ್ಪನ ವಾಸ್ತುಶಾಸ್ತ್ರ!
ಎಚ್ ಜಿ ಮಳಗಿ ಸಂಜೆ ಮನೆಯ ವರಾಂಡಾದಲ್ಲಿ ಅಪರೂಪಕ್ಕೆಂಬಂತೆ ನನ್ನ ಪತ್ನಿಯೊಂದಿಗೆ ಮಾತನಾಡುತ್ತ ಕೂತಿದ್ದೆ. ಇಂದಿನ ಪೇಪರಿನಲ್ಲಿ ಸ್ವಯಂಘೋಷಿತ ಜ್ಯೋತಿಷಿ ಹಾಗೂ ವಾಸ್ತು ಪಂಡಿತನೊಬ್ಬ ತನ್ನ ಶಿಷ್ಯೆಯ ಬೆಡ್ರೂಂನಲ್ಲಿ ಮಂಚದ ದಿಕ್ಕನ್ನು ಬದಲಿಸುವ ಸಲಹೆ ನೀಡುವ ನೆಪದಲ್ಲಿ ಅವಳನ್ನು ಮಂಚಕ್ಕೆಳೆದು, ಅವಳ ಪತಿಯ ಕೈಗೆ 'ಬೆಡ್ಹ್ಯಾಂಡ್'...
'ಪ್ರೀತಿ ಪದಗಳ ಪಯಣ’ ಒಂದು ಆಹ್ವಾನ
‘ಪ್ರೀತಿ ಪದಗಳ ಪಯಣ’ ಒಂದು ಆಹ್ವಾನ
ಚಲನಚಿತ್ರಗಳಲ್ಲಿ ಧ್ವನಿ ಸಂಯೋಜನೆ ಬಗ್ಗೆ ಒಂದು ಕಾರ್ಯಾಗಾರ
ಅರಸು ಮುನಿದರೆ ನಾಡೊಳಗಿರಬಾರದು – ಜಿ ಪಿ ಬಸವರಾಜು
ಜಿ ಪಿ ಬಸವರಾಜು ಲೋಕಸಭಾ ಚುನಾವಣೆಗೆ ಮುನ್ನ ಚಿಂತಕ ಯು.ಆರ್.ಅನಂತಮೂರ್ತಿ ಅವರು ಆಡಿದ ಒಂದು ಮಾತು ತೀವ್ರ ಟೀಕೆಗೆ ಕಾರಣವಾಯಿತು. ಮೋದಿ ಪ್ರಧಾನಿಯಾದರೆ ನಾನು ಈ ದೇಶದಲ್ಲಿರುವುದಿಲ್ಲ ಎಂದು ಅನಂತಮೂರ್ತಿ ಹೇಳಿದ್ದರು. ಒಬ್ಬ ಲೇಖಕ ಇಂಥ ಮಾತುಗಳನ್ನು ಏಕಾಏಕಿ ಆಡುವುದಿಲ್ಲ. ಒಂದು ನಿರ್ದಿಷ್ಟ ಸಂದರ್ಭದಲ್ಲಿ ನಿಂತು, ಆ...
ಫೈಜ಼್ ನಟರಾಜ್ ಬರೆದ ಹನಿಗವನಗಳು
ಸಯದ್ ಫ಼ೈಜ಼ುಲ್ಲ 1 ಇರಿದ ಚಾಕುಗೂ ನಿರಾಸೆ ಒಡಲೊಳಗೆ ಎಲ್ಲಾ ಇದೆ;ಪ್ರೀತಿ ಬಿಟ್ಟು! 2 ತುಂಬಿದೆದೆ ಮೇಲೇ ಎಲ್ಲರ ಚಿತ್ತ ಮಗು ಕೂಡಾ ಹಸಿದಿದೆ! 3 ಪ್ರತೀ ಜನುಮಕೂ ನೀನೇ ಬೇಕೆಂಬುದು ಆಸೆಯಲ್ಲ;ಸೇಡು! 4 ಮನೆ ಮನೆಗೆ ಬಂದು ಬನ್ನಿ ನಮಾಝಿಗೆ ಎಂದು ಹೇಳುವ ಮುಲ್ಲಾಗಳಿಗೆ ನಾನು ಮುಖ ತೋರುವುದಿಲ್ಲ ಪ್ರೀತಿಸಲು ದ್ವೇಷಿಸಲು ಮತ್ತು...
ವಿದ್ಯಾಶಂಕರ್ ಬರೆದ ಸಣ್ಣಕಥೆ ’ವ್ಯಾಂಪರ್ಸ್ ಡೈರಿ’
- ವಿದ್ಯಾಶಂಕರ್ ಹರಪನಹಳ್ಳಿ Every man must decide whether he will walk in the light of creative altruism or in the darkness of destructive selfishness. - Martin Luther King, Jr. ಕಾಲದ ತಹತಹ, ಸುತ್ತಲಿನ ಪರಿಸರ ಹುಟ್ಟಿ ಹಾಕುವ ಹಿಂಸೆ ವ್ಯಾಂಪೈರ್-ಗಳನ್ನ, ರಕ್ತದಾಹಿಗಳನ್ನ ಹುಟ್ಟಿಹಾಕುತ್ತೆ....
ಹೊಲೆಯರು ದೇವಸ್ಥಾನಕ್ಕೆ ನುಗ್ಗಿದರೆ ನಿಜಕ್ಕೂ ಏನಾಗುತ್ತದೆ..?
ನಾಗರಾಜ್ ಹೆತ್ತೂರು, ಹಾಸನ 'ಕೇಳ್ರಪ್ಪೋ ಕೇಳಿ ಗ್ರಾಮದ ಹೊಲೆಯನೊಬ್ಬ ದೇವಸ್ಥಾನಕ್ಕೆ ನುಗ್ಗಿ ದೇವಾಲಯ ಮಲೀನ ಮಾಡಿದ್ದಾನೆ. ಎಲ್ಲರೂ ಪಂಚಾಯಿತಿ ಕಟ್ಟೆಯ ಹತ್ತಿರ ಬರಬೇಕು. ಬರದಿದ್ದರೆ ಅವರನ್ನು ಊರಿಂದ ಆಚೆ ಇಡಲಾಗುತ್ತದೆ', ಬೆಳ್ಳಂಬೆಳಗ್ಗೆ ಅವರು ಬಡಿದೆ ತಮಟೆಯ ಸದ್ದು ಅವರ ಕಿವಿಗೆ ಬಿದ್ದ ಕೂಡಲೇ ಅಕ್ಷರಶಃ ಅವರು ಪಾತಾಳಕ್ಕೆ...
ಮೌನ ತೊರೆದ ಊರು, ರಾಗ ಬದಲಿಸುತ್ತಲೇ ಇತ್ತು
- ಎಚ್ ಕೆ ಶರತ್ ಸೌಂದರ್ಯ ಸಕಲವೂ ಸುಂದರವಾದ ಊರಲ್ಲಿ, ಸೌಂದರ್ಯ ಪ್ರಜ್ಞೆಯ ಪರಿಚಯ ಸಾರ್ವಜನಿಕ ಶೌಚಾಲಯಕ್ಕೆ ಮಾತ್ರ ಇತ್ತು. ಅಮಲು ಎಲ್ಲವೂ ಸರಿ ಇಲ್ಲದ ಬಾರ್ನಲ್ಲಿ ಅಮಲು ದುರಸ್ಥಿ ಕಾರ್ಯ ಕೈಗೊಂಡಿತ್ತು. ಬದುಕು ಮೌನ ತೊರೆದ ಊರು ರಾಗ ಬದಲಿಸುತ್ತಲೇ ಇತ್ತು. ಹಾಡು ಮಾತ್ರ ಅದೇ. ಶುರುವಿನಲ್ಲಿ ಸಂಭ್ರಮ, ಕೊನೆ ಸಾಲಲ್ಲಿ...
ಛಾಯಾಗ್ರಹಣದಲ್ಲಿ ಆಸಕ್ತಿ ಇರುವವರಿಗಾಗಿ ಒಂದು ಆಹ್ವಾನ
ಬರ್ತಿದೆ ಎಂ ಎಂ ಶೇಕ್ ಅವರ ಗಜ಼ಲ್ಗಳ ಪುಸ್ತಕ
ಡಿಸೆಂಬರ್ – 1, ಚಿತ್ರ ಸಂವಾದ
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಶಸ್ತಿ
ಭಾರತಿ ಹೆಗಡೆ ಬರೆದ ಭಾನುವಾರದ ಸಣ್ಣಕಥೆ ’ಗಲ್ಲು’
- ಭಾರತಿ ಹೆಗಡೆ ಕತ್ತಲು ಎಲ್ಲೆಲ್ಲೂ ಮುಸುಕುತ್ತಿರುವ ಹೊತ್ತದು. ಮನೆ ಮನವನ್ನೆಲ್ಲ ಕತ್ತಲು ಆವರಿಸಿರುವಾಗ ಈ ಚಿಕ್ಕ ಸೊಡರಾದರೂ ಬೆಳಕು ಚೆಲ್ಲಬಹುದೆಂಬ ಒಂದು ಸಣ್ಣ ಆಸೆಯಿಂದ ದೇವರಿಗೆ ಇರುವ ಚೂರೇ ಚೂರು ಎಣ್ಣೆಯಿಂದ ದೀಪ ಹೊತ್ತಿಸಲು ಕಡ್ಡಿಗೀರುವ ಹತ್ತಿಗೂ ಸಂಜೆಯ 7 ಗಂಟೆಯ ಬಸ್ಸು ಬಸ್ನಿಲ್ದಾಣಕ್ಕೆ ಕಿರ್ ಎಂದು ಸದ್ದು ಮಾಡುತ್ತಾ...
’ನನ್ನ ಮನೆಯ ಹಸಿಕಸದ ಜವಾಬ್ದಾರಿ ನನ್ನದೇಅಲ್ಲವೇ?’ ಸುಮಂಗಲಾ ಕೇಳ್ತಾರೆ
ಸುಮಂಗಲಾ ಬೆಂಗಳೂರು ಮಹಾನಗರದ ಕಸದ ಡಂಪಿಂಗ್ ಯಾರ್ಡ್ ಮಂಡೂರು ಪ್ರತಿನಿತ್ಯ ಸುದ್ದಿಯಲ್ಲಿದೆ. ಸಿಲಿಕಾನ್ ಸಿಟಿ ಇತ್ಯಾದಿ ವಿಶೇಷಣಗಳಿರುವ, ನೂರಾರುರೀತಿಯ ಐಟಿ ಸಂಬಂಧಿತ ಕೆಲಸಗಳ ಹೊರಗುತ್ತಿಗೆ ನಗರವೊಂದುತನ್ನದೇಕಸವನ್ನು ವೈಜ್ಞಾನಿಕರೀತಿಯಲ್ಲಿ ನಿರ್ವಹಣೆ ಮಾಡಲಾಗದೇ, ಮಂಡೂರು ಮತ್ತುಇನ್ನಿತರಕಡೆ ಸುರಿದು, ಸಮಸ್ಯೆ ಬಗೆಹರಿಯಿತುಎಂದು...
