ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನೆಲದ ಮರೆಯ ನಿಧಾನ ಕೆ ಟಿ ಶಿವಪ್ರಸಾದ್ – ಎಂ ಎಸ್ ಪ್ರಕಾಶ್‌ಬಾಬು
ಕೆ ಟಿ ಶಿವಪ್ರಸಾದ್ ಬಗ್ಗೆ ಎಂ ಎಸ್ ಪ್ರಕಾಶ್‌ಬಾಬು ಬರೆದ ಲೇಖನವನ್ನು ಸುವರ್ಣ ಅವರು ಕಳಿಸಿದ್ದಾರೆ. ಲೇಖನ ನಿಮ್ಮ ಓದಿಗಾಗಿ *** ಅಂತರರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್ ಅವರ ಕುರಿತು ಒಂದಿಷ್ಟು ಲೇಖಕರು : ಕಲಾವಿದ ಎಂ ಎಸ್ ಪ್ರಕಾಶಬಾಬು, ಬೆಂಗಳೂರು ಎಪ್ಪತ್ತರ ದಶಕದಲ್ಲಿ ಈ ನೆಲದಲ್ಲಿ ನಡೆದ ಸಾಂಸ್ಕೃತಿಕ ಚಳವಳಿಗಳ...
ಗೋಡೆಯ ಮೇಲಿನ ಹಲ್ಲಿ ಲೊಚಗುಟ್ಟುತಿದೆ…
ಈ ಬಾರಿ ಜಾನ್ ಸುಂಟಿಕೊಪ್ಪ ಹಾಗಾಗಲಿಕ್ಕಿಲ್ಲ ... ಲೊಚಗುಟ್ಟುವ ಆ ಹಲ್ಲಿ ಕೆರಳಿ ಬಾಲವರಳಿಸುತಿದೆ ಮೂಲೆ ಸೇರಿದ ಜೇಡ ಹೊಚ್ಚ ಹೊಸ ಬಲೆ ಹೆಣೆದಿದೆ ಮತ್ತು ಅವಳು ತಣ್ಣಗೆ ಮಲಗಿದ್ದಾಳೆ, ಬಹುಶಃ ನನ್ನಂತೆಯೇ .... ಭುಗಿಲೇಳುವ ಜ್ವಾಲಾಮುಖಿಗಳ ಬೆಚ್ಚಗೆ ಹೊದ್ದು ತಣ್ಣಗೆ ಮಲಗುವುದೆಂದರೆ ಗಂಡಸುತನಕ್ಕೆ ಸುಲಭವಲ್ಲ ಮೊಗೆದು ಗೆಲ್ಲುವ...
"ಕನ್ನಡ ತಂತ್ರಾಂಶ ಅಭಿವೃದ್ಧಿ ಮಾಡಿ ಅದು ನನಗೆ ನೀಡಿದ ನಾಡೋಜವಾಗುತ್ತದೆ" – ಅಂದಿದ್ರು ಅವರು
ವೆಂಕಟಪ್ಪ ಎಂ ಕುಮಾರಸ್ವಾಮಿ ಗುರುಲಿಂಗ ಕಾಪಸೆಯವರೊಂದಿಗೆ ಮಾತನಾಡುತ್ತಿದ್ದ ಮರಾಠಿ ಸಾಹಿತಿ ವಿ.ಸಾ. ಖಾಂಡೇಕರರು 'ನಿಮ್ಮ ತೇಜಸ್ವಿ ಬೇರೆ ಭಾಷೆಯ ಲೇಖಕರಿಗಿಂತ ನೂರು ವರ್ಷ ಮುಂದಿದ್ದಾರೆ' ಎಂದಿದ್ದರಂತೆ. 'ಕಂಪ್ಯೂಟರ್ ಕೊಂಡ ಮೊದಲ ಕನ್ನಡ ಸಾಹಿತಿ' ಎಂದು ಕನ್ನಡಿಗರು ಗುರುತಿಸುವ ಮೊದಲೇ, ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ...
’ಚಳವಳಿ ಇಂದು ಮತ್ತೆ ಮರುಕಳಿಸಬೇಕಿದೆ…’ – ಅಪ್ಪಗೆರೆ ಸೋಮಶೇಖರ್
ಹೆಣ್ಣಿನ ಗೋಳಟ್ಟಿ ಬನ್ನಿಯ ಮರಬೆಂದೊ... - ಅಪ್ಪಗೆರೆ ಸೋಮಶೇಖರ್ 'ಹೆಣ್ಣಿನ ಗೋಳಟ್ಟಿ ಬನ್ನಿಯ ಮರಬೆಂದೊ ಅಲ್ಲಿ ಸನ್ಯಾಸಿ ಮಠಬೆಂದೊ ಹಾರುವರ ಪಂಚಾಂಗಕತ್ತಿ ಉರಿದಾವೊ' ನಮ್ಮ ದೇಶ ಕಂಡಂತಹ ಪ್ರಾಮಾಣಿಕ ಹಾಗೂ ಸ್ವಾಭಿಮಾನಿ ಘನತೆವೆತ್ತ ರಾಷ್ಟ್ರಪತಿಯಾಗಿದ್ದ ಶ್ರೀ ಕೆ. ಆರ್. ನಾರಾಯಣ್ ಅವರು ಬಾಬರಿ ಮಸೀದಿಯನ್ನು ಕೆಡವಿದ ಸಂದರ್ಭದಲ್ಲಿ...
ಡೈಲಿ ಬುಕ್ : ಶಾಂತಾ ನಾಗರಾಜ್ ಅವರ ’ಇಂಥಾ ಅಮ್ಮ ಬೇಕು’
ಈ ಸಂಕಲನದಲ್ಲಿರುವ ಹದಿನಾರು ಲೇಖನಗಳು ಸಮಕಾಲೀನ ಸಮಾಜದ ಪಲ್ಲಟಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ಹಾಗು ಅದರ ಬಗೆಗೆ ತೀವ್ರ ಕಾಳಜಿಯಿರುವ ಅನುಭವಿ ಹಿರಿಯರು ಬರೆದಂಥವು. ಈ ಲೇಖನಗಳ ಹರವು ಕೂಡ ವಿಶಾಲವಾದದ್ದೆ. ಮಕ್ಕಳಲ್ಲಿ ಕಾಣಬರುವ ಅತೀ ಚಟುವಟಿಕೆಯ ಸಮಸ್ಯೆ, ತಾಯ್ತನದ ಸವಾಲುಗಳು/ಜವಾಬ್ದಾರಿಗಳು, ದೇವರೆಂಬ ಬಯದ ಕೂಸು....
ಸಂಚಾರಿ ಸಡಗರದಲ್ಲಿ ಇಂದು
ಉದಯ್ ಇಟಗಿ ಅನುವಾದಿಸಿದ ವೈಕಂ ಮೊಹಮ್ಮದ್ ಬಶೀರ್ ಕಥೆ
ಆಗಂತುಕ ಉದಯ್ ಇಟಗಿ ನಿಮಗೆ ನಿರ್ಧಿಷ್ಟ ಯೋಜನೆಗಳಿಲ್ಲ. ನೀವು ಗೊತ್ತುಗುರಿಯಿಲ್ಲದೆ ಮನೆಯಿಂದ ದೂರದೆಲ್ಲೆಲ್ಲೋ ಅಂಡಲೆಯುತ್ತಿರುತ್ತೀರಿ. ನಿಮ್ಮ ಬಳಿ ಹಣವಿಲ್ಲ. ನಿಮಗೆ ಸ್ಥಳೀಯ ಭಾಷೆ ಗೊತ್ತಿಲ್ಲ. ನೀವು ಹಿಂದಿ ಮತ್ತು ಇಂಗ್ಲೀಷಿನಲ್ಲಿ ಮಾತ್ರ ಮಾತನಾಡಬಲ್ಲಿರಿ. ಆದರೆ ಅಲ್ಲಿನ ಜನಕ್ಕೆ ಈ ಭಾಷೆಗಳ್ಯಾವವು ಅರ್ಥವಾಗಲಾರವು. ಇಂಥ...
'ಕನಸುಗಳು ಬಿಕರಿಯಾಗುವ ಅ೦ಗಡಿಯತ್ತ…' – ಜಮುನಾರಾಣಿ ಕವನ
"ಬಿಕರಿಯಾಗದ ಕನಸುಗಳು" - ಜಮುನಾ ರಾಣಿ ಎಚ್ ಎಸ್ ಮಿನೆಸೊಟಾ, ಯುನೈಟೆಡ್ ಸ್ಟೇಟ್ಸ್ ಕೈಯಲಿ ಕಾಸಿಲ್ಲದೆ ಕರಗುತಿವೆ ಮನದಲಿ ಚಲವಿಲ್ಲದೆ ಮುದುಡುತಿವೆ ಸಾಯುತಿರುವ ಹೊಟ್ಟೆಯ ಹುಳುಗಳ ಮೇಲೆತ್ತುವ ಕಾರ್ಯದಲಿ ಕ೦ಡ ಕನಸುಗಳು ಸೊರಗುತಿವೆ ಅದೇ ಬೆಳಗಿನ ಕಣ್ಣ ಕುಕ್ಕುವ ಸೂರ್ಯ ಬೇಡವೆ೦ದರೂ ಮುತ್ತಿಕ್ಕುವ ನೊಣಗಳು ರಾತ್ರಿಯೆಲ್ಲಾ...
ಹಾಸನದಲ್ಲಿ ಇಂದು
ಕೆ ವಿ ಸುಬ್ಬಣ್ಣ ಆಪ್ತಮಂದಿರದಲ್ಲಿ ಚಿತ್ರ ಪ್ರದರ್ಶನ ಮತ್ತು ಸಂವಾದ
ಸಂಚಾರಿ ಸಡಗರದಲ್ಲಿ ಇಂದು
'ಅಧ್ಯಕ್ಷ'ರಿಗೆ ಜೈ… – ಚಿತ್ರಪ್ರಿಯ ಸಂಭ್ರಮ್
ಚಿತ್ರಪ್ರಿಯ ಸಂಭ್ರಮ್ ಥೇಟರ್ಗೆ ಹೋಗಿ ಕೂತ್ರೆ ಎರಡೂವರೆ ಗಂಟೆ ಕಳೆದಿದ್ದೇ ಗೊತ್ತಾಗಬಾರದು ಎನ್ನುವ ಪ್ರೇಕ್ಷಕ ವರ್ಗಕ್ಕೆ ಅಧ್ಯಕ್ಷ ರತ್ನಗಂಬಳಿ ಹಾಸಿ ಕರೆದಿದ್ದಾನೆ. ಸಮಯ ಹೋಗೋದಷ್ಟೇ ಅಲ್ಲ, ನಿಮ್ಮ ಹೊಟ್ಟೆ ಹಸಿವಾಗಿದ್ದರೂ ಸಿನಿಮಾದಲ್ಲಿರೋ ಕಾಮಿಡಿ ಅದನ್ನೂ ಮರೆಸುತ್ತೆ. ಕೆಲವು ಕಡೆ ನಗಿಸುವ ಡೈಲಾಗ್ಗಳು ಅತಿ ಎನಿಸಿದರೆ ಬಹಳಷ್ಟು...
'ನಾನು ದೇವರಿಗೆ ಎಲ್ಲಾ ಹೇಳ್ತೀನಿ..' – ಸಿರಾಜ್ ಬಿಸರಳ್ಳಿ ಬರೆದ ಕವನ
ನಾನು ದೇವರಿಗೆ ಎಲ್ಲಾ ಹೇಳ್ತೀನಿ ! ( ಬಾಂಬ್ ದಾಳಿಗೆ ಸಿಕ್ಕು ಗಂಭೀರವಾಗಿ ಗಾಯಗೊಂಡಿದ್ದ ಸಿರಿಯಾದ 3 ವರ್ಷದ ಪುಟ್ಟ ಬಾಲಕ ಸಾಯುವ ಮುನ್ನ ಹೇಳಿದ ಮಾತುಗಳಿವು) - ಸಿರಾಜ್ ಬಿಸರಳ್ಳಿ ನಿನ್ನ ಗುಲಾಬಿ ತುಟಿಗಳಲ್ಲಿ ಆ ಶಕ್ತಿ ಇರಲಿ ನಿನ್ನ ಪುಟ್ಟ ಕೈಗಳಿಗೆ ಬಲ ಬರಲಿ ನೀನು ಹೇಳಬೇಕಾಗಿರುವುದು ಬಹಳ ಇದೆ ನಿನ್ನ ಮುದ್ದು ಬಾಯಿಗೆ...
ನನ್ನನ್ನು ಕಾಡಿದ ’ನಾಕು ತಂತಿ’ – ರವೀಂದ್ರ ಗಂಗಲ್
ರವೀಂದ್ರ ಗಂಗಲ್ ಹಲವು ವರ್ಷಗಳಿಂದ ವಿಚಿತ್ರವಾದ ಅನುಭವದೊಂದಿಗೆ ಅಪೂರ್ಣವಾಗಿ ಅರ್ಥವಾಗುತ್ತಿದ್ದ ಈ ಹಾಡು ಇವತ್ತು ದಿವ್ಯ ಅನುಭೂತಿಯನ್ನು ನನಗೆ ಧಾರೆಯೆರೆಯುತ್ತಿದೆ. ವಿಶ್ವವೆಂಬ ವಿರಾಟ್ ವೀಣೆಗೆ ಬರಿ ನಾಕು ನಾಕೆ ತಂತಿ. ನಾನು, ನೀನು, ಆನು ಮತ್ತು ತಾನು. ನಾನು ಎಂದರೆ ಗಂಡು, ನೀನು ಎಂದರೆ ಹೆಣ್ಣು, ಆನು ಎಂದರೆ ಗಂಡುಹೆಣ್ಣಿನ...
ಹೊಸ ಆಯಾಮದ ಅರ್ಥಪೂರ್ಣ `ಕಸ್ತೂರ ಬಾ'
ವೈ ಕೆ ಸಂಧ್ಯಾಶರ್ಮ ಇತಿಹಾಸದಲ್ಲಿ ಮಹಾತ್ಮ ಗಾಂಧೀಜಿಯವರ ಸಾಧ್ವೀಮಣಿ ಪತ್ನಿಯಾಗಿ, `ಆದರ್ಶ ಮಹಿಳೆ'ಯಾಗಿ ಬಿಂಬಿತಳಾಗಿರುವ `ಕಸ್ತೂರ ಬಾ' ಅವರ ಅಂತರಂಗವನ್ನು ಅನಾವರಣಗೊಳಿಸುವ ಒಂದು ಗಂಭೀರ ಪ್ರಯತ್ನ, ಇತ್ತೀಚೆಗೆ ಕಲಾಸೌಧದಲ್ಲಿ ಸಂಚಾರೀ ಥಿಯೇಟರ್ ಅರ್ಪಿಸಿದ ನಾಟಕ `ಕಸ್ತೂರ ಬಾ'. ರಂಗಾಯಣ ಕಲಾವಿದೆ ಬಿ.ಎನ್. ಶಶಿಕಲಾ ಅವರ...
ಏನೆಲ್ಲಾ ಮಾಲಿನ್ಯ ಇಲ್ಲಿ….
ಮಹಾನಗರದ ಮಹಾಸಮಸ್ಯೆಗಳು ಶ್ರೀನಾಥ್ ಭಲ್ಲೆ ಮಹಾನಗರದ ಹೊರವಲಯವೊಂದರ ನೋಟ. ವಿಧವಿಧ ಜಾತಿಯ ಶ್ವಾನ(ಗಳ) ಪಿಡಿದು ವಾಕಿಂಗ್ ಹೊರಟ ದೊಡ್ಡ ಜನ. ಶ್ವಾನಗಳ ಬಹಿರ್ದೆಶೆಯ ಶುಭ ಸಮಯ. ಟಾಮಿಯ ಕುತ್ತಿಗೆಗೆ ಬಿಗಿದ್ದ ಬೆಲ್ಟಿನ ಮತ್ತೊಂದು ಬದಿಯನ್ನು ಹಿಡಿದ ಎಡಗೈಯಿನ ದೇಹದವರ ಬಲ ಹಸ್ತ ಬ್ಲ್ಯಾಕ್-ಬೆರ್ರಿಯೋ, ಸ್ಮಾರ್ಟ್ ಫೋನನ್ನೋ ಹಿಡಿದು...
ಹುಬ್ಬಳ್ಳಿಯಲ್ಲೂ ’ಗೊಜ್ಜವಲಕ್ಕಿ’
ಸಂಚಾರಿ ಸಡಗರದಲ್ಲಿ ಇಂದು
ಸಂಧ್ಯಾರಾಣಿ ಕಾಲಂ : ಜೀವ ಹಿಂಡಿ ಹಿಪ್ಪೆ ಮಾಡಿ ಒಳಗೊಳಗೆ ಕೊರೆಯುವವಳು…
‘Rest in Peace Robin, you brought dignity to male tears!!’ – ’ನೆಮ್ಮದಿಯಿಂದ ವಿಶ್ರಮಿಸು ರಾಬಿನ್, ಗಂಡಿನ ಕಂಬನಿಗೊಂದು ಘನತೆಯನ್ನು ತಂದು ಕೊಟ್ಟವ ನೀನು’, ಆಗಸ್ಟ್ ಹನ್ನೊಂದರಂದು ರಾಬಿನ್ ಜಗತ್ತಿಗೆ ವಿದಾಯ ಹೇಳಿದಾಗ ಕಮಲ್ ಹಾಸನ್ ಹೇಳಿದ ಮಾತುಗಳು ಇವು. ಒಬ್ಬ ಕಲಾವಿದನ ಬಗ್ಗೆ ಇನ್ನೊಬ್ಬ ಕಲಾವಿದ ಹೇಳಿದ ಮಾತುಗಳಷ್ಟೇ...
'ಅಂಧರ ಪ್ರೇಮಲೋಕದ ಕಂಪನಗಳ ಅನಾವರಣ' – ಕುಮಾರ ರೈತ
ಕುಮಾರ ರೈತ ವರದಿಗಾರ ಕಣ್ಣುಗಳ ದೃಷ್ಟಿ ಇರುವವರು ಹೆಣ್ಣು/ಗಂಡಿನ ಹೊರಚಹರೆ, ನಗು, ಬಣ್ಣ, ಬಟ್ಟೆ ಇತ್ಯಾದಿ ನೋಡಿ ಮೋಹಿಸಿ, ಪ್ರೀತಿಸುತ್ತಾರೆ. ಎಲ್ಲವೂ ಬಣ್ಣಗಳ ಮೇಲೆ ಆಧಾರಿತ. ಆದರೆ ಕಣ್ಣೇ ಇಲ್ಲದವರ ಪ್ರೇಮಲೋಕ ಹೇಗಿರಬಹುದು, ಅವರ ಅನುಭವ/ಅನುಭಾವಗಳೇನು... ಇಂಥ ಭಾವಗಳನ್ನು ತಮಿಳು ಸಿನಿಮಾ 'ಕುಕ್ಕೂ' ಬಹು ಸೊಗಸಾಗಿ...
ಜಗದೀಶ್ ಕೊಪ್ಪ ಅವರ ’ಪುತ್ರಶೋಕ’ ಪುಸ್ತಕ ಬಿಡುಗಡೆ ಫೋಟೋ ಆಲ್ಬಂ
ಇತ್ತೀಚಿಗೆ ಬಿಡುಗಡೆಯಾದ ಜಗದೀಶ್ ಕೊಪ್ಪ ಅವರ ’ಪುತ್ರಶೋಕ’ ದ ಕೆಲವು ದೃಶ್ಯಗಳು ನಿಮಗಾಗಿ ಚಿತ್ರಗಳು : ಶ್ರೀನಿವಾಸ್ ಪಾಲಹಳ್ಳಿ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery link="file" columns="4"...
