
ರಾಜಾರಾಂ ತಲ್ಲೂರು
ಭಾರತದಲ್ಲಿ ಫೈನಾನ್ಸ್ ಮಿನಿಸ್ಟರ್ ಗಳಿಗೆ ಅತಿ ಪ್ರೀತಿಯ ಶಬ್ದ “ವೈಡನಿಂಗ್ ದಿ ಟ್ಯಾಕ್ಸ್ ನೆಟ್!”
ಒಂದು ಕಾಲದಲ್ಲಿ “ಜನ ಅಂದ್ರೆ ಹೊರೆ” ಅಂತ ತಿಳ್ಕೊಂಡಿದ್ವು; “ಜನ ಅಂದ್ರೆ ಧನ” ಅಂತ ಬದಲಾಗಿದೆ ಈಗ.
ಮಾರ್ಕೆಟಿಂಗಿಗೆ ಸಂಬಂಧಪಟ್ಟ ಪುಸ್ತಕವೊಂದರಲ್ಲಿ ಓದಿದ ಲೆಕ್ಕಾಚಾರ ಇದು: ಚಾಕಲೇಟುಗಳ ರಾಜಧಾನಿ ಸ್ವಿಟ್ಜರ್ಲಾಂಡ್. ಅಲ್ಲಿ ಪ್ರತಿಯೊಬ್ಬ ವ್ಯಕ್ತಿ ವರ್ಷಕ್ಕೆ ಸರಾಸರಿ (ಪರ್ ಕ್ಯಾಪಿಟಾ) 8.8 ಕಿಲೋಗ್ರಾಂ ಚಾಕಲೇಟು ತಿನ್ನುತ್ತಾನಂತೆ. ಅಂದರೆ 80 ಲಕ್ಷ ಜನಸಂಖ್ಯೆ ಇರುವ ಆ ದೇಶದಲ್ಲಿ ವರ್ಷದ ಒಟ್ಟು ಅಂದಾಜು ಚಾಕಲೇಟು ಬಳಕೆ: 70ಸಾವಿರ ಟನ್. ಭಾರತದಲ್ಲಿ ವ್ಯಕ್ತಿಯೊಬ್ಬ ಒಂದು ವರ್ಷಕ್ಕೆ ಸರಾಸರಿ (ಪರ್ ಕ್ಯಾಪಿಟಾ) ನೂರು ಗ್ರಾಂ ಚಾಕಲೇಟು ತಿನ್ನುತ್ತಾನೆ. ಆದರೆ, ಭಾರತದ ಜನಸಂಖ್ಯೆ 133 ಕೋಟಿ. ಅಂದರೆ, ಈಗ ನೂರು ಗ್ರಾಂ ಚಾಕಲೇಟು ತಿನ್ನುತ್ತಿರುವ ಭಾರತೀಯನನ್ನು ವರ್ಷಕ್ಕೆ ಇನ್ನೂರು ಗ್ರಾಂ ಚಾಕಲೇಟು ತಿನ್ನಲು ಪ್ರೇರೇಪಿಸಿದರೂ, ಒಂದು ವರ್ಷಕ್ಕೆ ಅಂದಾಜು ಮೂರು ಲಕ್ಷ ಟನ್ ಚಾಕಲೇಟು ಭಾರತದಲ್ಲಿ ಖರ್ಚಾಗಲಿದೆ!

ನಾವು ಸರಕಾರಕ್ಕೆ ಕಟ್ಟುವ ಆದಾಯ ತೆರಿಗೆಗೆ ಕೂಡ ಇದೇ ಲೆಕ್ಕಾಚಾರ ಅನ್ವಯಿಸುತ್ತದೆ. ಭಾರತದಲ್ಲಿ ಈಗ 133 ಕೋಟಿ ಜನರಲ್ಲಿ ತೆರಿಗೆ ರಿಟರ್ನ್ಸ್ ಸಲ್ಲಿಸುತ್ತಿರುವವರು ಅಂದಾಜು ಮೂರು ಕೋಟಿ ಜನ ಮಾತ್ರ. ಅವರಲ್ಲಿ ತೆರಿಗೆ ಕಟ್ಟುತ್ತಿರುವವರು ಬರೀ ಒಂದೂಕಾಲು ಕೋಟಿ ಜನ.
ಲೆಕ್ಕಾಚಾರದ ಭಾಷೆ ಬರದವರ ಮಾತಿನಲ್ಲಿ ಹೇಳಬೇಕೆಂದರೆ, GST ಎಂಬುದು ಮೇಲ್ನೋಟಕ್ಕೆ ಪರೋಕ್ಷವಾದ ತೆರಿಗೆಯಾದರೂ, ಅದರ ಮೂಲ ಉದ್ದೇಶ, ತೆರಿಗೆ ಈಗಾಗಲೇ ಕಟ್ಟುತ್ತಿರುವವರಿಗೆ (ಅಂದರೆ ಸಿರಿವಂತರಿಗೆ) ಭಾರವನ್ನು ಸ್ವಲ್ಪ ತಗ್ಗಿಸಿ, ಹೆಚ್ಚು ಜನರನ್ನು ತೆರಿಗೆಯ ಬಲೆಯೊಳಗೆ ತರುವ ಮೂಲಕ ಬೊಕ್ಕಸಕ್ಕೆ ಹಾನಿ ಆಗದಂತೆ ನೋಡಿಕೊಳ್ಳುವುದು.
ಅಂದರೆ, ತಕ್ಷಣಕ್ಕೆ ಪರೋಕ್ಷ ತೆರಿಗೆಯ ಮೂಲಕ ಸಂಪನ್ಮೂಲ ಸಂಗ್ರಹಿಸಿ, ಆದಾಯ ತೆರಿಗೆಯಂತಹ ನೇರ ತೆರಿಗೆಗಳಲ್ಲಿ ಎದ್ದುಕಾಣುವ ವಿನಾಯಿತಿಗಳನ್ನು ಕೊಡುವುದು ಮತ್ತು ಕ್ರಮೇಣ ಆದಾಯ ತೆರಿಗೆ ಕಟ್ಟುವವರ ಸಂಖ್ಯೆಯನ್ನು ಹೆಚ್ಚಿಸುತ್ತಾ ಬರುವುದು!
ಇಡಿಯ ಜಗತ್ತು ಒಂದು ಹಳ್ಳಿ ಎಂದು ಒಪ್ಪಿಕೊಂಡ ಮೇಲೆ, ಅಲ್ಲಿರುವ 160 ದೇಶಗಳು ಈಗಾಗಲೇ GSTಯನ್ನು ಒಪ್ಪಿಕೊಂಡ ಮೇಲೆ, ಎಲ್ಲಕ್ಕಿಂತ ಮೇಲಾಗಿ ಎಪ್ರಿಲ್ 2016ಕ್ಕೆ ಮೊದಲು ಭಾರತದಲ್ಲಿ GST ತೆರಿಗೆ ವಿಧಾನ ಚಾಲ್ತಿಗೊಳಿಸುತ್ತೇವೆಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ ಭರವಸೆ ಕೊಟ್ಟಮೇಲೆ – ಈಗ ಗಡುದಾಟಿಯಾಗಿದೆ; ಅನುಷ್ಠಾನ ಅನಿವಾರ್ಯ ಎಂಬಂತಹ ಸ್ಥಿತಿ ತಲುಪಿದ್ದೇವೆ. ಈ ಇಡಿಯ ವ್ಯವಸ್ಥೆಯ ಹಿಂದಿರುವುದು IMF (ಅಂತಾರಾಷ್ಟ್ರೀಯ ಹಣಕಾಸು ನಿಧಿ) ಜೊತೆ ಭಾರತ ಮಾಡಿಕೊಂಡಿರುವ ಒಪ್ಪಂದಗಳು ಮತ್ತು ಒಪ್ಪಿಕೊಂಡಿರುವ ಷರತ್ತುಗಳು.
ಆರ್ಥಿಕ ಶಿಸ್ತು ಎಂದು ಹೆಸರಿಟ್ಟುಕೊಂಡಿರುವ ಈ ಷರತ್ತುಗಳ ತಳಪಾಯ ಇರುವುದೇ ನಾಲ್ಕು ಆಧಾರ ಕಂಬಗಳ ಮೇಲೆ:
1. ತೆರೆದ ಮಾರುಕಟ್ಟೆ
2. ತೆರಿಗೆಕಟ್ಟಲು ಅರ್ಹರಾಗುವವರ ಸಂಖ್ಯೆ ಹಿಗ್ಗಿಸುವುದು
3. ಆಂತರಿಕ ಪರೋಕ್ಷ ತೆರಿಗೆಗಳನ್ನು ಸುಧಾರಿಸುವುದು
4. ಸಂಪನ್ಮೂಲಗಳ ಸಮರ್ಪಕ ಹಂಚಿಕೆ (ಅಂದರೆ ಸಬ್ಸಿಡಿಗಳಲ್ಲಿ ಕಡಿತ).
ಈ ಹಿನ್ನೆಲೆಯಲ್ಲಿ, ಹಾಲೀ ಕೇಂದ್ರ ಸರಕಾರ ಹೊರತರುತ್ತಿರುವ ಹೊಸ ಹೊಸ ಯೋಜನೆಗಳು ಮತ್ತು ಸುಧಾರಣೆಗಳನ್ನು ಗಮನಿಸಿದರೆ, ನಾವೆತ್ತ ಹೋಗುತ್ತಿದ್ದೇವೆ ಎಂಬುದು ಸ್ಪಷ್ಟವಾಗುತ್ತವೆ.




ಹಾಲೀ ಕೇಂದ್ರ ಸರಕಾರ ಹೊರತರುತ್ತಿರುವ ಹೊಸ ಹೊಸ ಯೋಜನೆಗಳು ಮತ್ತು ಸುಧಾರಣೆಗಳನ್ನು ಗಮನಿಸಿದರೆ, ನಾವೆತ್ತ ಹೋಗುತ್ತಿದ್ದೇವೆ
ಫೆಬ್ರವರಿ6 13, 2015 ರಂದು ಭಾರತದ IMF ಪ್ರತಿನಿಧಿಗಳು – ಭಾರತದಲ್ಲಿ IMF ಹೇಳಿರುವುದನ್ನು ಹೇಗೆ ಪಾಲಿಸಲಾಗುತ್ತಿದೆ ಎಂಬ ಬಗ್ಗೆ ತಮ್ಮ ವರದಿಯಲ್ಲಿ ಹೀಗೆ ಹೇಳಿದ್ದಾರೆ!
Structural Reforms
19. To raise the long-term growth potential of the economy, our authorities have introduced
several structural reforms. FDI limits have been relaxed in several sectors such as railway
infrastructure, construction, defence and insurance sectors. Diesel prices have been deregulated,
which should facilitate new investments in this sector as well as promote efficiency. Gas prices
have been increased and linked transparently and automatically to international prices so as to
provide incentives for greater gas supply and thereby relieving the power sector bottlenecks. The
coal sector has been rationalized through disinvestment of Coal India Ltd (a public sector
enterprise) and reallocation of all the cancelled coal blocks through auction process. Progress has
also been made in the process to initiate legislative action relating to introduction of the goods
and services tax (GST). Some flexibility is also being introduced in labor laws. Several supply
side bottlenecks have also been addressed. Efforts are afoot to skill the youth with an emphasis
on employability and entrepreneurial skills. A pan India program ‘Digital India’ is being planned
to provide broad band connectivity up to the village level, improved access to services through
IT enabled platforms and greater transparency in government processes. The government is also
stepping up efforts to implement a program of disinvestments.
Medium-term Prospects
20. Recent policy initiatives in land acquisition, efforts underway to unlock mining activity,
liberalization of foreign direct investment limits and predictability of the tax regime should help
to improve the investment climate. India has announced a national strategy for ‘Make-in-India’
to boost manufacturing, complete work on industrial corridors, and build 100 smart cities. There
is a proposal to set up 10 coastal economic regions. Several structural constraints and supply
bottlenecks are also being addressed. Project appraisal and approval processes have been
liberalized. All these announcements have led to an improvement in business confidence, which
is reflected in new investment intentions. Several stalled projects cleared are expected to be off
the ground soon. Indian stock markets have outperformed many of its peers. This augurs well for
raising capital from the market to support investment. The moderation in inflation should also
encourage financial savings. It is the endeavor of our authorities to achieve a sustained growth of
8 per cent or above along with macro-economic stabilization in an environment of lower and
stable inflation, fiscal consolidation, a manageable external situation, and continued financial
deepening and development.
Conclusion
21. The Indian economy is in much better shape now than it was a year ago. External sector
vulnerability has been addressed and it has become much more resilient. Inflation and inflation
expectations have moderated significantly. The fiscal deficit has been contained and the process
of fiscal consolidation continues. The Indian economy is now clearly on a recovery path and is
the only major emerging economy whose growth rate has been revised upwards recently by the
Fund for 2014. The recovery should gather further momentum once the impact of various
measures initiated recently is felt fully. As such India is now also better prepared to deal with
global financial market volatility that could arise in the context of US monetary policy
normalization. As India’s underlying vulnerabilities have receded, there is some room for
countercyclical macroeconomic policies to respond to domestic and external shocks.
22. The challenge now is to maintain such overall macroeconomic conditions on a sustained
basis so that the Indian economy is able to achieve a high growth of 8 per cent and above over an
extended future timeframe spanning a couple of decades.