Exclusive: ಅರೆ! ಇದ್ಯಾರಿಲ್ಲಿ ಈ ಟ್ರೇನ್ ನಲ್ಲಿ..??

amitabh on pavementಅರೆ, ಇದ್ಯಾರಿದು? ಅಂತ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಂಡೇಬಿಟ್ಟರು. ಒಂದು ಕ್ಷಣ ತಮ್ಮ ಕಣ್ಣನ್ನು ತಾವೇ ನಂಬಲಿಲ್ಲ. ರೆಪ್ಪೆ ಬಡಿಯದೇ ತಾವು ನೋಡುತ್ತಿರುವುದು ನಿಜವಾ, ನಿಜವಾ.. ಎಂದು ನಂಬಲು ಪ್ರಯತ್ನಿಸುತ್ತಿದ್ದರು.
ಮುಂಬೈನ ಗಿಜಿಗುಡುವ ಲೋಕಲ್ ಟ್ರೇನ್ ಗೆ ಒಂದೇ ಸಮ ಜನ ಮುಕುರಿಕೊಂಡು ನುಗ್ಗಿದರು. ಹಾಗೆ ನುಗ್ಗುವವರ ಜೊತೆಗೆ ಇವರೂ ಒಳಸೇರಿಬಿಟ್ಟರು. ಅವರು ಅಮಿತಾಬ್ ಬಚನ್.
ಸೇರಿದ್ದು ಹೋಗಲಿ ಎಲ್ಲೋ ಒಂದೆಡೆ ಜಾಗ ಮಾಡಿ ಕುಳಿತವರೇ ಲೋಕಲ್ ಟ್ರೇನ್ ನಲ್ಲಿ ಹಾಡಿ ಹಣ ಬೇಡುತ್ತಾರಲ್ಲಾ ಹಾಗೆ ಹಾಡಲು ಶುರು ಮಾಡಿಯೇಬಿಟ್ಟರು. ಹಾಡಿದ ಮೇಲೆ ಸುಮ್ಮನಾಗಲಿಲ್ಲ. ಥೇಟ್ ಹಾಡುವವರು ಕೈ ಮುಂದೆ ಚಾಚುವಂತೆ ಚಾಚಿ ಹಣ ಸಂಗ್ರಹಿಸಲು ಆರಂಭಿಸಿದರು.
ಆಶ್ಚರ್ಯ ಆದರೂ ನಿಜ 
ಅಮಿತಾಬ್ ಬಚನ್ ತಮ್ಮದೇ ಬೆಸ್ಟ್ ಹಿಟ್ ಸಿನೆಮಾ ಸಿಲ್ ಸಿಲಾ”ದ ರಂಗ್ ಬರಸೇ ಹಾಡು ಹಾಡಿದ್ದು ಇನ್ನಾರಿಗಾಗಿಯೂ ಅಲ್ಲ ಕ್ಯಾನ್ಸರ್ ನಿಂದ ಜೀವನ ಮರಣದ ಮಧ್ಯೆ ತೂಗುತ್ತಿರುವವರಿಗಾಗಿ.
ಅಮಿತಾಬ್ ಹಾಗೆ ಟ್ರೇನ್ ಹತ್ತಿದ್ದರ ಹಿಂದೆ ಒಂದು ದೊಡ್ಡ ಕಥೆಯೇ ಇದೆ 
ಅಮಿತಾಬ್ ಆಜ್ ಕಿ ರಾಥ್ ಹೈ ಜಿಂದಗಿ ಅನ್ನುವ ಕಾರ್ಯಕ್ರಮ ಟಿ ವಿ ಗಾಗಿ ನಡೆಸಿಕೊಡುತ್ತಾರೆ. ಹಾಗೆ ಒಮ್ಮೆ ಆ ಕಾರ್ಯಕ್ರಮಕ್ಕೆ ಬಂದಿದ್ದ ಹುಡುಗ ಸೌರಬ್ ನಿಮ್ಬಕರ್. ಆ ಹುಡುಗ ಗಿಟಾರ್ ಹಿಡಿದು ಪ್ರತೀ ದಿನ ರೈಲ್ ನಲ್ಲಿ ಕ್ಯಾನ್ಸರ್ ಪೀಡಿತರಿಗಾಗಿ ಹಣ ಸಂಗ್ರಹಿಸಲು ಹಾಡುತ್ತಾನೆ.
ಆತನ ಕಥೆ ಅವರು ಕೇಳಿದ್ದು ಯಾವಾಗಲೋ ಹಿಂದೆ. ಆದರೆ ಅವರಿಗೆ ಏನನ್ನಿಸಿತೋ ಏನೋ ಮೊನ್ನೆ ದಿಡ್ಹೀರನೆ ವಿ ಟಿ ಸ್ಟೇಶನ್ ಗೆ ಬಂದರು.  ನಿಮ್ಬಕರ್ ಎಲ್ಲಿದ್ದಾರೆ ಹುಡುಕಿದರು. ಅವನ ಡಬ್ಬಿಯನ್ನೇ ಏರಿ ಅವನ ಜೊತೆ ಹಾಡುತ್ತಾ ಹಣ ಸಂಗ್ರಹಿಸುತ್ತಾ ಹೋದರು. ಅಮಿತಾಬ್ ಹಾಗೇ ಹೋಗಲಿಲ್ಲ. ಜನರ ಎದೆಯಾಳದಲ್ಲಿ ಒಂದು ಅನುಕಂಪದ ಅಲೆ ಎಬ್ಬಿಸಿಯೇ ಹೋದರು.
ಅಲ್ಲಿದ್ದವರೆಲ್ಲಾ ಸೆಲ್ಫಿ ಸುಗ್ಗಿ ನಡೆಸಿದರು ಸ್ವತಹ ಅಮಿತಾಬ್ ನಿಮ್ಬಕರ್ ಗೌರವಾರ್ಥ ಅವನೊಡನೆ ತಾವೇ ಸೆಲ್ಫಿ ಕ್ಲಿಕ್ಕಿಸಿಕೊಂಡರು.
ಅಮಿತಾಬ್ ದಾ- ತುಸ್ಸಿ ಗ್ರೇಟ್ ಹೋ 

amitabh train1

amitabh train2

amitabh train4

 

Amitabh Tweets

“Local from VT (Victoria Terminus) to Bhandup to support Saurabh, who sings in locals for charity to cancer… sang with him…”

“less fortunate cancer patients and their families in the city”

“The idea is not to create a splash among the media, or to create credible content for them, or for the subsequent promotion of the show #AKRHZ… the idea is to let him know that he is not alone…that he is appreciated… that our support runs even after he departs from the show,”

 

But who is Saurabh Nimbkar? :

23-year-old Saurabh Nimbkar is a B.Sc. in Biotech and M. Sc. in Bioanalytical science student. He has been singing and strumming his guitar with all his heart, day after day on the local trains of Mumbai, from Ambernath to Dadar and then travelling back to Dombivali. He uses his talent to collect donations for cancer patients. And the money he collects from the passengers goes to a small NGO in Thane.

nimbkarWhy he sings in train?

In 2013, when his mother was living her last few months, fighting a losing battle to cancer, he used to carry his guitar to the hospital. While playing the guitar, the mood of the patients undergoing long and extensive treatment lifted up.

Unfortunately, he lost his mother in 2014. But, the thought of doing something for the people suffering from cancer remained in his heart.

After his mother’s death, Saurabh found a job in the quality control department of a pharmaceutical company. But he wanted to impact the society. -Storypick

‍ಲೇಖಕರು admin

November 18, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: