ಬಿ ಎಂ ಬಷೀರ್ ಲೇಖನಗಳು
ಬಿ ಎಂ ಬಷೀರ್ ಬರೆದ ಕಥೆ ‘ಬಾಗಿಲು’
ಬಾಗಿಲು ಬಿ ಎಂ ಬಷೀರ್ ಒಬ್ಬ ಫಕೀರ ಶ್ರೀಮಂತನ ಮಹಲಿಗೆ ಬಂದವನು ಅಂಗಳದಲ್ಲಿ ನಿಂತು ಆ ಮನೆಯನ್ನೇ ನೋಡುತ್ತಿದ್ದ. ಶ್ರೀಮಂತ ಅಚ್ಚರಿಯಿಂದ ಕೇಳಿದ ‘‘ಏನು ನೋಡುತ್ತಿರುವೆ?’’ ‘‘ನಿನ್ನ ಮನೆಯ ಹೆಬ್ಬಾಗಿಲನ್ನು’’ ಶ್ರೀಮಂತ ಹೆಮ್ಮೆಯಿಂದ ಹೇಳಿದ ‘‘ಅದು ತೇಗದ ಮರದಿಂದ ಮಾಡಿದ ಬಲಿಷ್ಠ […]
ಬಿ ಎಂ ಬಷೀರ್ ಬರೆದ ಮತ್ತೊಂದಿಷ್ಟು ಸಂತನ ಕತೆಗಳು
ಕೊಲೆಗಾರ ಅಲ್ಲೊಂದು ಕೊಲೆ ನಡೆದಿತ್ತು. ಎಲ್ಲರೂ ಕೊಲೆಗಾರನನ್ನು ಶಪಿಸುತ್ತಿದ್ದರು. ಸಂತ ಆ ದಾರಿಯಾಗಿ ಹೋಗುತ್ತಿದ್ದ. ಆ ಬರ್ಬರ ಕೊಲೆಯನ್ನು ನೋಡಿ ದಂಗು ಬಡಿದ ಆತ ಹೇಳಿದ ‘‘ಕೊಲೆಗೀಡಾದವನ ಸ್ಥಿತಿಯೇ ಇಷ್ಟು ಭೀಕರವಾಗಿದೆ. ಇನ್ನು ಪಾಪ ಕೊಂದ ಆ ಕೊಲೆಗಾರನ ಸ್ಥಿತಿ ಅದೆಷ್ಟು […]
ಬಿ ಎಂ ಬಷೀರ್ ಕಥೆ: ಪಯಣ
ರೈಲುಗಾಡಿ ವೇಗವನ್ನು ಪಡೆಯುತ್ತಿದ್ದಂತೆಯೇ ಅವರ ಮಾತಿನ ತಿಕ್ಕಾಟವೂ ತೀವ್ರ ರೂಪವನ್ನು ಪಡೆಯತೊಡಗಿತ್ತು. ಓರ್ವ ವೃದ್ದ ಮತ್ತು ಇನ್ನೊಬ್ಬ ಮಧ್ಯಮ ವಯಸ್ಸಿನ ಸಣಕಲ ಕುಳಿತುಕೊಳ್ಳುವ ಆಸನದ ವಿಷಯದಲ್ಲಿ ಕಿತ್ತಾಡಿಕೊಳ್ಳುತ್ತಿದ್ದರು. ಅದು ಫಸ್ಟ್‌ಕ್ಲಾಸ್ ಬೋಗಿ. ಯಾವುದೋ ತಾಂತ್ರಿಕ ಸಮಸ್ಯೆಯಿಂದ ಅವರಿಬ್ಬರ ಆಸನ ಅದಲು ಬದಲಾಗಿತ್ತು. […]
ಚಪ್ಪರ ಕಳಚುವ ಹೊತ್ತು
ಬಿ ಎಂ ಬಷೀರ್ ಗುಜರಿ ಅಂಗಡಿ ನನ್ನ ‘ಪ್ರವಾದಿಯ ಕನಸು’ ಸಂಕಲನದಿಂದ ಆಯ್ದ ಇನ್ನೊಂದು ಕವಿತೆ ನಿಮ್ಮ ಮುಂದಿದೆ. ಹಸಿದ ಹೊಟ್ಟೆ ತೆರೆದ ಬಾಯಿ ಕಸದ ಬುಟ್ಟಿಗೆ ಗೊತ್ತು ಇದು ಚಪ್ಪರ ಕಳಚುವ ಹೊತ್ತು! ಹಳಸಿದ ಅನ್ನ ಮಾಸಿದ ಬಣ್ಣ-ಸುಣ್ಣ […]
ಬಿ ಎಂ ಬಷೀರ್ ಕಥೆಗಳು
ಬಿ ಎಂ ಬಷೀರ್ ಗುಜರಿ ಅಂಗಡಿ ರಸ್ತೆ ಸಂತ ಆ ರಸ್ತೆಯಲ್ಲಿ ಸಾಗುತ್ತಿದ್ದ. ಸುಂಕದವ ತಡೆದು ಕೇಳಿದ ‘‘ರಸ್ತೆಯ ಸುಂಕವನ್ನು ಕಟ್ಟಿದ್ದೀಯ?’’ ‘‘ರಸ್ತೆಗೆ ಸುಂಕವನ್ನೇಕೆ ಕಟ್ಟಬೇಕು?’’ಸಂತ ಅಚ್ಚರಿಯಿಂದ ಕೇಳಿದ. ಸುಂಕದವ ಹೇಳಿದ ‘‘ನಮ್ಮ ಅರಸರು ಕಟ್ಟಿದ ರಸ್ತೆಯಲ್ಲಿ ನಡೆಯುತ್ತಿದ್ದೀಯ. ಅದಕ್ಕೆ’’ […]
ಬಿ ಎಂ ಬಷೀರ್ ಕಥೆ: ಪಾಸು-ಫೇಲು
ಶಾಲೆಯಲ್ಲಿ ಫಲಿತಾಂಶ ಹೊರಬಿತ್ತು. ಮೇಷ್ಟ್ರು ಹೇಳಿದರು ‘‘ನೀನು ಪಾಸು’’ ಹುಡುಗ ಕುಣಿಯುತ್ತಾ ಶಾಲೆಯಿಂದ ಹೊರ ಬಿದ್ದ. ದಾರಿಯಲ್ಲಿ ಹೀಗೆ ನಡೆಯುತ್ತಾ ಹೋಗುವಾಗ ಒಂದು ಮರ ಕೇಳಿತು… ‘‘ನನ್ನನ್ನು ನೀನು ಹತ್ತ ಬಲ್ಲೆಯಾ?’’ ಹುಡುಗ ‘‘ಇಲ್ಲ’’ ಎಂದ. ತಲೆ ಕುಣಿಸುತ್ತಿದ್ದ ಹೂವಿನ ಗಿಡ […]
ಬಿ ಎಂ ಬಷೀರ್ ಕಥೆ: ಧೂಳು ಮುಚ್ಚಿದ ಫೈಲು
ಹಳೆಯ ಧೂಳುಮುಚ್ಚಿದ ಫೈಲನ್ನು ಕೊಡವಿ ಬಿಡಿಸಿದಾಗ ನನ್ನ ಈ ಕತೆ ಸಿಕ್ಕಿತು. -ಬಿ ಎಂ ಬಷೀರ್ ಗುಜರಿ ಅಂಗಡಿ ನಮ್ಮೂರಿನ ಸಹಕಾರಿ ಸಂಘ ‘ಬ್ಯಾಂಕ್’ ಆಗಿ ಪರಿವರ್ತನೆಗೊಂಡ ಬಳಿಕವೂ ಬಾಳೆಗೊನೆ ವ್ಯಾಪಾರಿ ಅಂದು ಬ್ಯಾರಿ, ಅಡಿಕೆತೋಟದ ಅಂತಪ್ಪ ಶೆಟ್ರು, ಗ್ರಾಮ ಪಂಚಾಯತ್ […]
ಬಿ ಎಂ ಬಷೀರ್ ಬರೆದ ಕಥೆ: ಆಟ
ಕಲಾಕೃತಿ: ಜಿ ಎಸ್ ಬಿ ಅಗ್ನಿಹೋತ್ರಿ ಸೋಲು ನಿಶ್ಚಿತವಾಗಿತ್ತು. ಆದರೂ ಆಟಗಾರರು ಆಡಲೇ ಬೇಕಾಗಿತ್ತು. ಬದುಕೇ ಹೀಗೆ. ಕೆಲವೊಮ್ಮೆ ಸೋಲು ಘೋಷಣೆಯಾಗಿ ಬಿಡುತ್ತದೆ. ಆದರೆ ಆಟದ ಬಯಲಿನಿಂದ ಹೊರಗೆ ಹೋಗುವಂತಿಲ್ಲ. ಆಡಲೇ ಬೇಕು. ಇಂತಹ ಆಟ ತುಂಬ ಕಷ್ಟ. ಆದರೆ ಆಟಗಾರನ […]
ಬಿ ಎಂ ಬಷೀರ್ ಕೇಳುತ್ತಾರೆ: ಎಲ್ಲಿದ್ದೀಯೆ ನೀನು?
ಹಾಯ್…!ಎಲ್ಲಿದ್ದೀಯ? ಹೇಗಿದ್ದೀಯ? ಯಾವುದಾದರೊಂದು ಕತೆಯ ಮೂಲಕ ನೀನು ನಿನ್ನ ಇರವನ್ನು ತಿಳಿಸಬಹುದೆಂದು ಕಳೆದ ನಾಲ್ಕುವರ್ಷಗಳಿಂದ ಕನ್ನಡದ ಎಲ್ಲ ಮ್ಯಾಗಜಿನ್ಗಳ ಪುಟಗಳನ್ನು ತಿರುಗಿಸುತ್ತಿದ್ದೇನೆ. ಆದರೆ ಕಳೆದ ಮೂರು ನಾಲ್ಕು ವರ್ಷಗಳಿಂದ ಯಾವಮ್ಯಾಗಜಿನ್ನಲ್ಲೂ ನಿನ್ನ ಕತೆಯನ್ನು ನೋಡುತ್ತಿಲ್ಲ. ಏನಿದರ ಅರ್ಥ? ಏನಿದರ ಸಂದೇಶ? ನಿನ್ನ […]
ಬಿ ಎಂ ಬಷೀರ್ ಕವಿತೆ: ಅನಿ ಮತ್ತು ದೇವರು
ಅನಿ ನನ್ನ ಆತ್ಮೀಯರೊಬ್ಬರ ಮಗ. ಮೊನ್ನೆ ಫೇಸ್‌ಬುಕ್‌ನಲ್ಲಿ ಅಚಾನಕ್ಕಾಗಿ ಸಿಕ್ಕಿ ‘ಹಾಯ್ ಬಶೀರ್ ಮಾಮ’ ಅಂದ. ಚೆಂದವಾಗಿ ಚಿತ್ರ ಬಿಡಿಸುವ, ಡ್ಯಾನ್ಸ್ ಕಲಿತಿರುವ ಅನಿ ಈಗ ದೂರದ ಸಿಂಗಾಪುರದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾನೆ. ಫೇಸ್‌ಬುಕ್‌ನಲ್ಲೇ ಒಂದಿಷ್ಟು ಮಾತನಾಡಿದೆವು. ತಾನೇ ಬರೆದ ಒಂದು […]
ಬಿ ಎಂ ಬಷೀರ್ ಕಥೆ: ಭಾರ ಮತ್ತು ತಾಯಿ
ಇಬ್ಬರೂ ಬೆಟ್ಟವನ್ನು ಏರುತ್ತಿದ್ದರು. ಬೆಟ್ಟದ ತುದಿಯಲ್ಲಿ ಅವರು ಸೇರಬೇಕಾದ ಪುಣ್ಯ ಸ್ಥಳವಿತ್ತು. ಇವನು ಹೆಗಲಲ್ಲಿ ಮಹಿಳೆಯೊಬ್ಬಳನ್ನು ಹೊತ್ತುಕೊಂಡಿದ್ದ. ಆದರೂ ಸರಾಗವಾಗಿ ಬೆಟ್ಟ ಏರುತ್ತಿದ್ದ. ಅವನೋ ಹೆಗಲಲ್ಲಿ ಯಾರೂ ಇಲ್ಲದಿದ್ದರೂ, ಬೆಟ್ಟ ಏರುವುದಕ್ಕೆ ಕಷ್ಟಪಡುತ್ತಿದ್ದ. ಒಂದೆಡೆ ಸುಸ್ತಾಗಿ ಕುಳಿತ ಅವನು ಕೇಳಿದ ‘‘ನಿನ್ನ […]
ಬಿ ಎಂ ಬಷೀರ್ ಕಥೆ: ಆಸೆ
ತಾಯಿ ಸಾಯುವ ಹಂತದಲ್ಲಿದ್ದಳು. ಏನನ್ನೋ ಹೇಳುವುದಕ್ಕಾಗಿ ತವಕಿಸುತ್ತಿದ್ದರು. ಮಗ ತಾಯಿಯ ಕಿವಿ ಪಕ್ಕ ಬಾಗಿ ಕೇಳಿದ ‘‘ಏನಮ್ಮ ಹೇಳು…ನಿನ್ನ ಆಸೆಯೇನಾದರೂ ಇದ್ದರೆ ಹೇಳು…’’ ತಾಯಿ ಕಷ್ಟಪಟ್ಟು ತೊದಲಿದಳು ‘‘ಇನ್ನೂ ಊಟ ಮಾಡಿಲ್ಲ ನೀನು…ಹೋಗು…ಊಟ ಮಾಡಿ ಬಾ…’’ ಎಂದು ಹೇಳಿ ಕಣ್ಮುಚ್ಚಿದಳು.
ಬಿ ಎಂ ಬಷೀರ್ ಕಥೆ: ರಾಂಗ್ ನಂಬರ್
ಫೋನ್ ರಿಂಗನಿಸತೊಡಗಿತು. ಫೋನ್ ಎತ್ತಿದೆ ‘‘ಹಲೋ…ಹೇಗಿದ್ದೀಯ?’’ ಯಾರು ಎಂದು ಕೇಳುವುದಕ್ಕೆ ಮೊದಲೇ ಆ ಕಡೆಯ ವ್ಯಕ್ತಿ ಮಾತನಾಡ ತೊಡಗಿದ. ‘‘ಇವತ್ತು ಆಸ್ಪತ್ರೆಗೆ ಅಡ್ಮಿಟ್ ಆಗ್ತಾ ಇದ್ದೇನೆ…ಹೆಚ್ಚೆಂದರೆ ಇನ್ನು ನಾಲ್ಕೈದು ದಿನ ಬದುಕಬಹುದು. ನಿನ್ನ ಜೊತೆಗೊಮ್ಮೆ ಕೊನೆಯ ಬಾರಿ ಮಾತಾಡೋಣ ಅನ್ನಿಸಿ ಫೋನ್ […]
ಬಿ ಎಂ ಬಷೀರ್ ಕಥೆ: ಮಳೆ
ಮಹಡಿ ಮನೆಯ ಹುಡುಗ ಟಿ.ವಿ. ನೋಡುತ್ತಿದ್ದ. ಇದ್ದಕ್ಕಿದ್ದಂತೆಯೇ ಹೊರಗೆ, ಗಾಳಿ ಮಳೆ ಸುರಿಯ ತೊಡಗಿತು. ಟಿ.ವಿ. ಬ್ಲರ್ರ್ ಆಗಿ, ಆಫ್ ಆಗಿ ಹೋಯಿತು. ಹುಡುಗ ಸಿಟ್ಟಿನಿಂದ ‘‘ಥತ್ ದರಿದ್ರ ಮಳೆ…’’ ಎಂದು ಶಪಿಸಿದ. ಅವನ ಶಾಪದ ಫಲವೋ ಏನೋ…ಮಳೆ ನಿಂತಿತು. ಟಿ.ವಿ. […]
ಬಿ ಎಂ ಬಷೀರ್ ಬರೆದ ‘ಬಡವರು!’
ಬಿ ಎಂ ಬಷೀರ್ ಗುಜರಿ ಅಂಗಡಿ ಆತ ರೈತ. ವರ್ಷವಿಡೀ ದುಡಿದು ಭತ್ತ ಬೆಳೆಸಿದ. ಗೋಣಿ ತುಂಬಾ ಅಕ್ಕಿ ಹೊತ್ತುಕೊಂಡು ಸಂತೆಗೆ ನಡೆದ ಯಾಕೋ ಅಕ್ಕಿಗೆ ಬೆಲೆಯೇ ಇಲ್ಲ. ಮಾರಿದ. ಮನೆಗೆ ಮರಳಿದ. ‘‘ಹಸಿವಾಗುತ್ತಿದೆ, ಅನ್ನ ಬಡಿಸು’’ ಎಂದು ಪತ್ನಿಗೆ ಕೂಗಿದ. […]
ಬಿ ಎಂ ಬಷೀರ್ ಬರೆದ 'ಬಡವರು!'
ಬಷೀರ್ ಕವಿತೆ: ಕ್ಷಮೆಗೆ ಕ್ಷಮೆಯಿಲ್ಲ
ಬಿ ಎಂ ಬಷೀರ್ ೧ ದಾರಿ ತಪ್ಪಿದ ಅನಾಥ ಮಕ್ಕಳಂತೆ ತಿಳಿದೋ ತಿಳಿಯದೆಯೋ ಮಾಡಿದ ಸಾವಿರ ತಪ್ಪುಗಳು! ಕ್ಷಮೆಯೋ… ಎದೆಯೊಳಗೆ ಕುದಿ ಕುದಿವ ಹಾಲಿಟ್ಟು ಕಳೆದುಹೋದ ಮಕ್ಕಳಿಗೆ ತುಡಿವ ತಾಯಿಯಂತೆ! ೨ ರಕ್ತದ ಕಲೆಗಳ ಕುರುಹುಗಳೇ ಇಲ್ಲ ಆದರೂ […]
ಬಿ ಎಂ ಬಷೀರ್ ಲೋಕ : ಹೀಗೊಬ್ಬ ಗುರು
ಅವರ ಹೆಸರು ಪ್ರಾಣೇಶ ಕುಲಕರ್ಣಿ. ಗೆಳೆಯರು ಪ್ರೀತಿ ಹೆಚ್ಚಾದರೆ ‘ಕುಲ್ಕಾ’ ಎಂದು ಕರೆಯುತ್ತಿದ್ದರು. ನನಗೆ ಪ್ರೀತಿ ಉಕ್ಕಿದರೆ ‘ಗುರುಗಳೇ’ ಎಂದು ಕರೆಯುತ್ತಿದ್ದೆ. ಮುಂಬೈಯ ‘ಕರ್ನಾಟಕ ಮಲ್ಲ’ ದೈನಿಕದಲ್ಲಿ ಅವರು ಹಿರಿಯ ಉಪಸಂಪಾದಕರಾಗಿದ್ದರು. ಈ ಮೊದಲು ಅವರು ‘ಸಂಯುಕ್ತ ಕರ್ನಾಟಕ’ದಲ್ಲಿ ಉಪಸಂಪಾದಕರಾಗಿದ್ದರು. ಅಲ್ಲಿಯ […]



















