
ಹಿರಿಯ ಪತ್ರಕರ್ತ, ಸಾಹಿತಿ ಜಿ. ಪಿ. ಬಸವರಾಜು ಅವರಿಗೆ ಈ ಸಾಲಿನ ಡಾ ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿ ಘೋಷಿಸಲಾಗಿದೆ.
ಡಾ ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ನೀಡುವ ಈ ಪ್ರಶಸ್ತಿಗೆ ಬಸವರಾಜು ಅವರ ‘ಬೆತ್ತಲೆಯ ಬೆಳಕನುಟ್ಟು’ ಕಥಾಸಂಕಲನ ಆಯ್ಕೆಯಾಗಿದೆ.
ಡಾ. ವಿಕ್ರಮ್ ವಿಸಾಜಿ, ಡಾ. ತಾರಿಣಿ ಶುಭದಾಯಿನಿ ಮತ್ತು ಡಾ. ಕೆ. ವೈ ನಾರಾಯಣಸ್ವಾಮಿ ಅವರು ತೀರ್ಪು ಮಂಡಳಿಯಲ್ಲಿದ್ದರು.
ಪ್ರಶಸ್ತಿಯು ಇಪ್ಪತ್ತೈದು ಸಾವಿರ ರೂಪಾಯಿ ನಗದು, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.
ಪ್ರಶಸ್ತಿಯನ್ನು 2016 ಜೂನ್ 11 ರಂದು ಮಂಡ್ಯದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.
ಹಿರಿಯ ಸಂಶೋಧಕ ಪ್ರೊ. ಷಟ್ಟರ್ ಮತ್ತು ಸಾಹಿತಿ ದೇವನೂರ ಮಹಾದೇವ ಅವರು ಸಮಾರಂಭದ ಮುಖ್ಯ ಅತಿಥಿಗಳಾಗಿರುವರು.





AbhinandanegaLu, Dr. G.P.Basavaraju avarige.
ಸರಳ ಮಾತುಗಳಲ್ಲಿ ಮಾರ್ಮಿಕ ವಿಚಾರಗಳನ್ನು ಹೇಳುವ ನಿಮಗೆ ತುಂಬು ಮನದ ಅಭಿನಂದನೆಗಳು ಸರ್. ಸುದ್ದಿಯನ್ನು ಶೀಘ್ರದಲ್ಲಿ ಬಿತ್ತರಿಸಿದ ಅವಧಿಗೆ ಧನ್ಯವಾದಗಳು.
Hearty congrats, Basavaraju!
kvtirumalesh
ಅಭೀನಂದನೆಗಳು ಸರ್…
ಕಲ್ಲೇಶ್ ಕುಂಬಾರ್
ಹಾರೂಗೇರಿ
thanks to you all friends- G P Basavaraju
haardika abhinandanegalu..sir
ಪ್ರಿಯ ಬಸವರಾಜು ಅವರಿಗೆ:
ತುಂಬಾ ಅರ್ಹನಾದ ವ್ಯಕ್ತಿಗೆ ಈ ಪ್ರತಿಷ್ಠಿತ ಪ್ರಶಸ್ತಿ ದೊರಕಿರುವುದು ನನಗೆ ತುಂಬಾ ಸಂತೋಷವನ್ನು ಕೊಟ್ಟಿದೆ. ಹಾರ್ದಿಕ
ಅಭಿನಂದನೆಗಳು. ಇನ್ನೂ ಹೆಚ್ಚಿನ ಪ್ರಶಸ್ತಿಗಳು ಮುಂದೆ ಬರುತ್ತಿರಲಿ. ಸಿ. ಎನ್. ರಾಮಚಂದ್ರನ್