ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Breaking News: ಜಯಶ್ರೀ ಕಾಸರವಳ್ಳಿ, ರಜನಿ ನರಹಳ್ಳಿ, ಶಶಿಕಲಾ ವೀರಯ್ಯಸ್ವಾಮಿಗೆ `ಅಮ್ಮ ಪ್ರಶಸ್ತಿ'

amma-pras
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿರುವ `ಅಮ್ಮ ಪ್ರಶಸ್ತಿ’ಗೆ ಹಿರಿಯ ಲೇಖಕ ಡಾ.ಎಸ್.ಎಂ.ಹಿರೇಮಠ,  ಶಶಿಕಲಾ ವೀರಯ್ಯ ಸ್ವಾಮಿ, ಜಯಶ್ರೀ ಕಾಸರವಳ್ಳಿ, ರಜನಿ ನರಹಳ್ಳಿ ಹಾಗೂ ಮಹಾಂತಪ್ಪ ನಂದೂರ ಅವರ ಕೃತಿಗಳು ಆಯ್ಕೆಯಾಗಿವೆ ಎಂದು `ಅಮ್ಮ ಪ್ರಶಸ್ತಿ’ ಸಂಸ್ಥಾಪಕ ಸಂಚಾಲಕ ಮಹಿಪಾಲರೆಡ್ಡಿ ಮುನ್ನೂರು ತಿಳಿಸಿದ್ದಾರೆ.
rajani
jayshreeನಾಡಿನ ಸಾಹಿತ್ಯ ವಲಯದಲ್ಲಿ ಪ್ರತಿಷ್ಠಿತ ಪ್ರಶಸ್ತಿ ಎನಿಸಿಕೊಂಡಿರುವ `ಅಮ್ಮ ಪ್ರಶಸ್ತಿ’ಗೆ ಈ ಬಾರಿ 15 ನೇ ವರ್ಷದ ಸಂಭ್ರಮ. ಕಲಬುರಗಿಯ ಡಾ.ಎಸ್.ಎಂ.ಹಿರೇಮಠ ಅವರು ಸಂಶೋಧನೆ `ಶಾಸನಾನುಸಂಧಾನ’, ಶಶಿಕಲಾ ವೀರಯ್ಯ ಸ್ವಾಮಿ ಅವರ ಕಾದಂಬರಿ `ಇದ್ದೇನಯ್ಯ ಇಲ್ಲದಂತೆ’,  ಜಯಶ್ರೀ ಕಾಸರವಳ್ಳಿ ಅವರ ಕಥಾ ಸಂಕಲನ `ದಿನಚರಿಯ ಕಡೇ ಪುಟದಿಂದ’, ರಜನಿ ನರಹಳ್ಳಿ ಅವರ ` ಅಮ್ಮಮ್ಮ ಹೇಳಿದ ಕತೆಗಳು’ ಹಾಗೂ ಹುಬ್ಬಳ್ಳಿಯ ಕವಿ ಮಹಾಂತಪ್ಪ ನಂದೂರ ಅವರ ಶರಣರ ಕುರಿತ ಸುನೀತಗಳ ವಿಶಿಷ್ಟ ಸಂಕಲನ `ಕಲ್ಯಾಣವೆಂಬ ಪ್ರಣತಿ’ ಕೃತಿಗಳನ್ನು 15 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ತಲಾ 5000 ರೂ. ನಗದು ಪುರಸ್ಕಾರ, ನೆನಪಿನ ಕಾಣಿಕ, ಪ್ರಮಾಣ ಪತ್ರ ಮತ್ತು ಸತ್ಕಾರ ಒಳಗೊಂಡಿರುತ್ತದೆ. ಇದೇ ನವೆಂಬರ್ 26 ರಂದು ಸಂಜೆ 5.30ಕ್ಕೆ ಸೇಡಮ್ನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ ಅಮ್ಮ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪತ್ರಕರ್ತ-ಲೇಖಕ ಮಹಿಪಾಲರೆಡ್ಡಿ ಮುನ್ನೂರು ಅವರು ತಮ್ಮ ಅಮ್ಮನ ನೆನಪಿನಲ್ಲಿ ಸ್ಥಾಪಿಸಿದ `ಅಮ್ಮ ಪ್ರಶಸ್ತಿ’ಗೆ ಈ ಬಾರಿ 248 ಕೃತಿಗಳು ಬಂದಿದ್ದವು.

‍ಲೇಖಕರು admin

15 November, 2015

2 Comments

  1. Anonymous

    Abhinandanegalu – tumba kushiyaytu

  2. Anonymous

    Abhinandanegalu – tumba khushiyaytu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading